(You can only view comments here. If you want to write a comment please download the app.)
ರಾಘವೇಂದ್ರ ಆಚಾರ್ಯ,ಉಡುಪಿ
1:26 PM , 08/04/2020
ಆಚಾರ್ಯರಿಗೆ ಪ್ರಣಾಮಗಳು. ಇದೆ ತರಹ ನನ್ನದು ಇನ್ನೊಂದು ಪ್ರಶ್ನೆ ಇದೆ. ಕರಾವಳಿ ಭಾಗದಲ್ಲಿ ವ್ಯಾಪಕವಾಗಿರುವ " ಗೌಡ್ ಸಾರಸ್ವತ ಬ್ರಾಹ್ಮಣ" ರೊಂದಿಗೆ ವಿವಾಹ ಸಂಬಂಧ ಮಾಡಬಹುದಾ? ಮೂಲತಹ ಈ ಜನಾಂಗ ಉತ್ತರ ಭಾರತದವರು ಸರಸ್ವತಿ ನದಿಯ ದಡದಲ್ಲಿ ವಾಸಿಸುತ್ತಿದ್ದರು ಎಂದು ಸರಸ್ವತಿ ನದಿಯು ಬತ್ತಿ ಹೊದ ಮೇಲೆ ದಕ್ಷಿಣಕ್ಕೆ ವಲಸೆ ಬಂದರೆಂದು ಇತಿಹಾಸ ಇದೆಯಂತೆ. ಮೂಲತಹ ಸ್ಮಾರ್ತರು ಶಂಕರಾಚಾರ್ಯರ ಗುರುಗಳ ಗುರು ( ಗೌಡಪಾದಾಚಾರ್ಯ ರು) ಇವರ ಮೂಲ ಗುರುಗಳು ಆದರೆ ನಂತರ ಆಚಾರ್ಯ ಮದ್ವರ ಸಿದ್ಧಾಂತಕ್ಕೆ ಮನಸೋತು ಶೇ 80% ಬ್ರಾಹ್ಮಣರು ವೈಷ್ಣವರಾದರು ಅಂತೆ . 2 ಮಠಗಳು ಇವೆ ಈಗ ಅವರಿಗೆ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮತ್ತು ವಿಜಯಿಂದ್ರತಿರ್ಥರಿಂದ ಸ್ಥಾಪನೆ ಆದ ಕಾಶಿ ಮಠ. ಆದರೆ ಇವರ ಭಾಷೆ ಕೊಂಕಣಿ . ಕನ್ನಡವನ್ನು ಮಾತನಾಡುತ್ತಾರೆ ಕರ್ನಾಟಕದಲ್ಲಿ. ಇನ್ನೂಳಿದ ಶೇ 75% ಭಾಗ ಆಚಾರ ವಿಚಾರ ಸಂಪ್ರದಾಯಗಳು ನಮ್ಮ ಆಚಾರ್ಯ ಮದ್ವರ ಸಂಪ್ರದಾಯಗಳೇ..
ದಯವಿಟ್ಟು ಇವರ ಜೊತೆ ವಿವಾಹ ಸಂಬಂಧ ಮಾಡಬಹುದಾ ದಯವಿಟ್ಟು ಅತಿ ಶೀಘ್ರದಲ್ಲಿ ತಿಳಿಸಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ ಆಚಾರ್ಯ ರೆ.
Vishnudasa Nagendracharya
ಶ್ರೀಮದಾಚಾರ್ಯರು ಶಂಕರ ಎಂಬ ಹೆಸರಿನಕೊಂಕಣ ಬ್ರಾಹ್ಮಣರ ಮೇಲೆ ಮಾಡಿದ ಅನುಗ್ರಹವನ್ನು ಸ್ವಯಂ ಮಧ್ವವಿಜಯ ಹತ್ತನೆಯ ಸರ್ಗದಲ್ಲಿ ದಾಖಲಿಸಿದೆ. ಆಚಾರ್ಯರು ಕೊಂಕಣಾಭ್ಯುದಯ ಎಂಬ ಗ್ರಂಥ ಅತ್ಯಂತ ಸ್ಪಷ್ಟವಾಗಿ ಅವರು ಮಾಧ್ವಪರಂಪರೆಯವರು ಎನ್ನುವದನ್ನು ತಿಳಿಸುತ್ತದೆ.
ಶಾಸ್ತ್ರೀಯ ದೃಷ್ಟಿಯಿಂದ ಗೌಡ ಸಾರಸ್ವತ ಬ್ರಾಹ್ಮಣರ ಜೊತೆಯಲ್ಲಿ ವಿವಾಹ ಸಂಬಂಧ ಸರ್ವಥಾ ನಿಷಿದ್ಧವಲ್ಲ.
ಆದರೆ, ಹೇಗೆ ಪರಿಶುದ್ಧ ಮಾಧ್ವರೇ ಆದ ಅರವತ್ತೊಕ್ಕಲು, ಬಡಗನಾಡು, ಶಿವಳ್ಳಿ ಮುಂತಾದ ಕುಲಗಳಲ್ಲಿ ಕುಲಾಚಾರಗಳು ವಿಭಿನ್ನವೋ ಹಾಗೆ ಗೌಡ ಸಾರಸ್ವತರಲ್ಲಿಯೂ ವಿಭಿನ್ನ.
ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ಮದುವೆಯಾದಾಗ ಎರಡೂ ಕುಟುಂಬಕ್ಕೆ ಹೊಂದಾಣಿಕೆ ಕೆಲವು ಸಂದರ್ಭಗಳಲ್ಲಿ ಕಷ್ಟವಾಗುತ್ತದೆ. ಆ ಹೊಂದಾಣಿಕೆಗೆ ಸಿದ್ಧರಾಗಿದ್ದರೆ ಅವಶ್ಯವಾಗಿ ಮದುವೆಯಾಗಬಹುದು.
H. Suvarna kulkarni,
7:13 PM , 17/11/2017
ಈ ಸಮಸ್ಯೆ ಎದುರಿಸಿದ್ದೆ ಕಾಣ್ವರು ಬೇಡ ಕಾಣ್ವರು ಬೇಡ ಎಂದು ಬರೆದಿರುವುದನ್ನು ನೋಡಿ ಕಾರಣ ಏನಿರಬಹುದು ಎನಿಸುತ್ತಿತ್ತು. ವಧು ವರಾನ್ವೇಪಣ ಕೇಂದ್ರಗಳು ನಿಜ ದಾರಿ ಇನ್ನಾದರೂ ತಿದ್ದುಪಡಿ ಮಾಡಲಿ ಇಂಥ ಉತ್ತಮ ಪ್ರಶ್ನೆ ಕೇಳಿದ ಶ್ರೀಯುತ ಬಿಂದು ಮಾಧವ ಅವರಿಗೂ ಧನ್ಯವಾದಗಳು
H. Suvarna kulkarni,
7:02 PM , 17/11/2017
ಗುರುಗಳಿಗೆ ಪ್ರಣಾಮಗಳು ಆಚಾಯ೯ರೇ ನಿಮ್ಮ ಉತ್ತರ ಸಮಾಜದ ಕಣ್ಣು ತೆರೆಸಲಿ ಕ್ಷುಲ್ಲಕ ಕಾರಣಕ್ಕಾಗಿ,ಅರೆಬರೆ ತಿಳುವಳಿಕೆ ತಪ್ಪು. ಯಾರೇ ಆಗಲಿ ಸಮಸ್ಯೆ ಎದುರಾದಾಗ ಸರಿಯಾದ ಮಾಹಿತಿ ಪಡೆಯುವ ಹಂಬಲವಿರಬೇಕು. ನಾನು ಕಾಣ್ವಶಾಖೆಗೆ ಸೇರಿದವಳು ನನ್ನ ಸೋದರಿ ಸೋದರರಿಗೆ ವರ ಕನ್ೆಹುಡುಕುವಾಗ ಗ
ಶ್ರೀ ಗುರುಭ್ಯೋನಮಃ
ಹೆಸರಿಗೆ ಮಾತ್ರ ಮಾಧ್ವರಾಗಿ, ಅನೇಕ ದುರಾಗ್ರಹಗಳಿಂದ ಕೂಡಿ, ಇತರರನ್ನೂ ಸಹ ತಪ್ಪು ದಾರಿಗೆ ಎಳೆದು ಢಂಭಾಚಾರದಿಂದ ಬದುಕುವಂಥವರು ನಮ್ಮ ಮಧ್ಯೆ ಇರುವುದು ನಮ್ಮ ದುರಾದೃಷ್ಟ ಮತ್ತು ಮಾಧ್ವ ಸಮಾಜದ ದೊಡ್ಡ ದುರಂತವೇ ಸರಿ.
ಗುರುಗಳ detailed ಉತ್ತರ ಕಣ್ಣು ತೆರೆಸುವಂತಿದೆ.
ಅನಂತಾನಂತ ವಂದನೆಗಳು
ಇಂತಿ ತಮ್ಮ ವಿಧೇಯ ಶಿಷ್ಯ
Subramanya Bhardwaj,Kolar
5:00 PM , 24/10/2017
Acharayare I have raised the same question at your lotus feet questioning why shukla yajurveda follwers were treated as untouchable in Madhava community.? But you have not considered my questions to answer.at least by this answer I tried to understand something about it.further light is required on the same.thanks
Vishnudasa Nagendracharya
As I have clearly said in a comment below, I dont ever hurry to answer, and never publish my answer without doing proper research. ಸಮಾಜದಲ್ಲಿ ಹಿರಿಯರು ಎಂದನಿಸಿಕೊಂಡಿರುವ ಜನ ಹೇಳಿದ್ದು ಸತ್ಯವೇ ಆಗಿರುತ್ತದೆ ಎಂದು ನಂಬಿದ್ದವನು ನಾನು. ಶ್ರೀಮದ್ವಾದಿರಾಜಗುರುಸಾರ್ವಭೌಮರ ಋಜುತ್ವದ ವಿಷಯದಲ್ಲಿ, ಪಾದೋದಕ ಹಸ್ತೋದಕಗಳ ವಿಷಯದಲ್ಲಿ ಈ ರೀತಿಯಾಗಿ ಒಂದು ಗುಂಪಿನವರು ಹೇಳುತ್ತಿದ್ದದ್ದು ಸರಿ ಎಂದು ನಂಬಿದ್ದೆ. ಆದರೆ ಆಳವಾದ ಅಧ್ಯಯನಕ್ಕಿಳಿದಾಗ ದೊರೆಯುವದು ಸತ್ಯ. ಎಷ್ಟೇ ದೊಡ್ಡವರಾದರೂ ದುರಾಗ್ರಹಕ್ಕೆ ಒಳಗಾದಾಗ ಸತ್ಯ ಮರೆಯಾಗುತ್ತದೆ ಎನ್ನುವದು ಪರಮಸತ್ಯ. ಹೀಗಾಗಿ ಯಾವುದನ್ನೇ ಆದರೂ ನಾನೇ ಸ್ವಯಂ ಅಧ್ಯಯನ ಮಾಡದೇ, ಸಂಶೋಧಿಸದೇ, ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳದೇ ಮತ್ತೊಬ್ಬರಿಗೆ ಉತ್ತರ ನೀಡಬಾರದು ಎಂಬ ನಿಯಮ ಪಾಲಿಸುತ್ತಿದ್ದೇನೆ.
ಅದರಲ್ಲಿಯೂ ಈ ರೀತಿಯಾದ ವಿವಾದಾಸ್ಪದ ವಿಷಯಗಳ ಕುರಿತು ಮಾತನಾಡಬೇಕಾದರೆ ಮುಂದೆ ಬರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿದ್ಧವಿರಬೇಕು. ಹೀಗಾಗಿ ಆಳವಾದ ಅಧ್ಯಯನ ನಡೆಯಬೇಕು. ಅಧ್ಯಯನ ಸಂಶೋಧನೆಗಳಿಗೆ ಸಮಯ ಬೇಕಾಗುತ್ತದೆಯಾದ್ದರಿಂದ ಉತ್ತರ ನೀಡಲೂ ಸಮಯ ಬೇಕು.
ಅಲ್ಲವೇ?
ಆಚಾರ್ಯರಿಗೆ ಧನ್ಯವಾದಪೂರ್ವಕ ನಮನಗಳು.ನಿತ್ಯವೂ ಭಾಗವತದ ಅಮೃತ ಸರೋವರದಲ್ಲಿ ಮಿಂದು ,ಮೀಯುಸಿತ್ತಿರುವ ತಾವು , ಬಹಳದಿನಗಳನಂತರ ಪ್ರಶ್ನೋತ್ತರದಲ್ಲಿ ಜನೋಪಯೋಗಿಯಾಗಿರುವಂತಹ ಒಂದು ಪ್ರಶ್ನೆಗೆ ಅದ್ಭುತರೀತಿಯಲ್ಲಿ ಉತ್ತರಿಸಿದ್ದೀರಿ.ಇದರಿಂದ ಬಹಳಷ್ಟು ವಿವಾಹಾಕಾಂಕ್ಷಿ ಬ್ರಾಹ್ಮಣ ಯುವಕ ಯುವತಿಯರಿಗೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.ಈ ವಿಷಯದ ಬಗ್ಗೆ ಮತ್ತಷ್ಟು ಬೆಳಕನ್ನು ಚೆಲ್ಲಬೇಕೆಂಬ ತಮ್ಮ ಬಯಕೆ ಆದಷ್ಟು ಬೇಗ ಈಡೇರಲಿ.ಸುಮಾರು ತಿಂಗಳ ಹಿಂದೆ ಕೇಳಿದ ಈ ಪ್ರಶ್ನೆಗೆ ಭಗವಂತನ ಪ್ರೇರಣೆಯಿಂದಲೇ ತಮ್ಮ ಮೂಲಕ ಸಂದೇಹಕ್ಕಾಸ್ಪದವಿಲ್ಲದಂತೆ , ಸ್ಪಷ್ಟ ಉತ್ತರ ಸಿಕ್ಕಿದೆಯೆಂದು ಧನ್ಯತಾಪೂರ್ವ ಹೇಳುತ್ತಿದ್ದೇನೆ.ವಂದನೆಗಳೊಂದಿಗೆ --ಬಿಂದು ಮಾಧವ.
Vishnudasa Nagendracharya
ಹೌದು. ನೀವು ಪ್ರಶ್ನೆ ಕೇಳಿ ಸುಮಾರು ಮೂರು ತಿಂಗಳಾಗಿದ್ದವು.
ಕಾಣ್ವರ ಕುರಿತು ತುಂಬಾ ತಪ್ಪು ಕಲ್ಪನೆಗಳನ್ನು ಒಂದು ಗುಂಪಿನವರು ಸಮಾಜದಲ್ಲಿ ಹರಡಿದದ್ದರಿಂದ ಆ ವಿಷಯದ ಕುರಿತು ಕೂಲಂಕಷವಾಗಿ ಸಂಶೋಧನೆ ಮತ್ತು ಅಧ್ಯಯನಗಳನ್ನು ನಡೆಸಿಯೇ ನಾನು ಉತ್ತರವನ್ನು ನೀಡಬೇಕಾಗಿತ್ತು. ಮಹಾನುಭಾವರನ್ನು ದ್ವೇಷ ಮಾಡುವದನ್ನು, ಅವರ ಬಗ್ಗೆ ಅಪಪ್ರಚಾರ ಮಾಡುವದನ್ನೇ ಸಂಪ್ರದಾಯವನ್ನಾಗಿ ಮಾಡಿಕೊಂಡಿರುವ ಆ ಗುಂಪಿಗೆ ಉತ್ತರ ನೀಡಬೇಕಾದರೆ ಮೊದಲು ಎಲ್ಲ ಪ್ರಶ್ನೆಗಳನ್ನೂ ನಾವೇ ಮಾಡಿಕೊಂಡು ಉತ್ತರ ಪಡೆದಿರಬೇಕಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಎಲ್ಲ ಕೃತಿಗಳನ್ನು ತರಿಸಿ ಅಧ್ಯಯನ ಮಾಡಿ ಮೊದಲು ನಾನು ಉತ್ತರ ಪಡೆದು ಆ ನಂತರ ನಿಮಗೆ ನೀಡಲು ಇಷ್ಟು ಸಮಯವಾಯಿತು.
ಉತ್ತಮ ಅಧ್ಯಯನಕ್ಕೆ ಪ್ರೇರಿಸಿದ ಪ್ರಶ್ನೆಯನ್ನು ಕೇಳಿದ ನಿಮಗೂ ಧನ್ಯವಾದಗಳು.
ಶುಭವಾಗಲಿ.
Hari govind,
4:03 PM , 23/10/2017
ಆಚಾರ್ಯರಿಗೆ ನಮಸ್ಕಾರಗಳು
ಬಹಳ ಉತ್ತಮ ಲೇಖನ.
ನನ್ನ ಪ್ರಶ್ನೆ:
ಕರಾವಳಿ ಭಾಗದಲ್ಲಿ ಕೆಲವು ಭ್ರಾಮ್ಹಣರು ಮೀನು ತಿನ್ನುತ್ತಾರೆ. ಅದು ನಿಷಿದ್ಧ. ಆದ್ರೆ ಅವರಲ್ಲಿ ಮಾಧ್ವರು ಇದ್ದಾರೆ. ಆಚಾರ್ಯರ ತತ್ವ ಒಪ್ಪಿದ್ದಾರೆ . ಅವರು ತಮ್ಮ ತಪ್ಪಿನ ಅರಿವಾದರೆ ಅದಕ್ಕೆ ಪ್ರಾಯಸ್ಛಿತ್ತ ಏನು?
ಮತ್ತೂ ಇವತ್ತಿನ ಪರಿಸ್ಥಿತಿಯಲ್ಲಿ ಅವರನ್ನು ನಿಷೆದಿಸಬೆಕೇ (ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡ ಮೇಲೂ)?
ಸಾಸ್ಟಾ0ಗ ನಮಸ್ಕಾರಗಳು.
Vishnudasa Nagendracharya
ಮಾಂಸ ತಿನ್ನುವ, ಸುರಾಪಾನ ಮಾಡುವ ವ್ಯಕ್ತಿಯ ಜೊತೆಯಲ್ಲಿ ಸಹಪಂಕ್ತಿಯನ್ನು ಮಾಡತಕ್ಕದ್ದಲ್ಲ.
ಮಾಂಸಾಹಾರ ಮತ್ತು ಸುರಾಪಾನಗಳಿಗೆ ಹೇಳಿರುವ ಪ್ರಾಯಶ್ಚಿತ್ತವನ್ನು ಇವತ್ತಿನ ಜನರು ಮಾಡಿಕೊಳ್ಳಲು ಸಾಧ್ಯವಿಲ್ಲ, ಮಾಡಿಕೊಳ್ಳುವದಿಲ್ಲ.
ಹೀಗಾಗಿ ಅವರಿಂದ ದೂರವಿರುವದು ಅನಿವಾರ್ಯ.
ಇನ್ನು ಮಾಂಸ ತಿಂದು, ಹೆಂಡ ಕುಡಿದವರ ದೃಷ್ಟಿಯಿಂದ ವಿಚಾರ ಮಾಡೋಣ-
ಮಾಡಿದ ತಪ್ಪಿನ ಅರಿವಾಗಿದೆಯಾದರೆ ಎಷ್ಟು ಸಾಧ್ಯವೋ ಅಷ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಆ ತಪ್ಪನ್ನು ಮತ್ತೆ ಸರ್ವಥಾ ಮಾಡಬಾರದು. ಮತ್ತು ತಮ್ಮಿಂದ ಮತ್ತೊಬ್ಬರಿಗೆ ಹಿಂಸೆಯಾಗದಂತೆ ನೋಡಿಕೊಳ್ಳಬೇಕು.ನಿರಂತರ ಭಗವತ್ಸ್ಮರಣೆಯಲ್ಲಿ ಆಸಕ್ತರಾಗತಕ್ಕದ್ದು. ತನಗೆ ಆಯೋಗ್ಯವಾದ ಕಾರ್ಯಗಳನ್ನು ಮಾಡತಕ್ಕದ್ದಲ್ಲ.
ಈ ರೀತಿಯ ನಿಯಮಗಳಡಿಯಲ್ಲಿ ಬದುಕತಕ್ಕದ್ದು.
ಜಯರಾಮಾಚಾರ್ಯ ಬೆಣಕಲ್,
1:18 PM , 23/10/2017
ತುಂಬಾ ಸರಿಯಾದ ಸಲಹೆ.
ಗುರುರಾಜಾಚಾರ್ಯ ಕೃ. ಪುಣ್ಯವಂತ.,
1:00 PM , 23/10/2017
ಉತ್ತಮೋತ್ತಮ ಲೇಖನ. ಪ್ರಶ್ನೆ ಕೇಳಿದ ಶ್ರೀ ಬಿಂಧುಮಾಧವ ಅವರಿಗೂ, ಜನರ ತಲೆಯಲ್ಲಿರುವ ತಪ್ಪು ಕಲ್ಪನೆಗಳನ್ನು ದೂರು ಮಾಡಿದ ಪೂಜ್ಯ ಆಚಾರ್ಯರಿಗೂ ಅನಂತಾನಂತ ಪ್ರಣಾಮಗಳು.
ಇನ್ನಾದರೂ ಸುಳ್ಳು ಪ್ರಚಾರದಿಂದ ಮುಕ್ತಿಸಿಗಲಿ ಎಂದು ಆಶಿಸುವೆ.
T venkatesh,
12:47 PM, 23/10/2017
As always very comprehensively analysed article.
ಸುದರ್ಶನ್,
12:25 PM, 23/10/2017
The best article acharyare. Nowadays namma madhva people smartha janarondige hagu bere jathiyavarondige madve agtidare. Namma madhva shaksheyada kanvarondige y this problem. Hope your article may change the foolish people with andh vishvas
Jayashree Karunakar,
11:37 AM, 23/10/2017
ಗುರಗಳೆ
ಯೋಗ್ಯತೆಯಲ್ಲಿ ದೊಡ್ಡವರಾದವರಿಗೆ ಮಾಡುವ ದ್ರೋಹವು ಬರಿಯ ಪುಣ್ಯದ ಹ್ರಾಸಮಾತ್ರವೆ ? ಅದು ಪಾಪಕಮ೯ವಾಗುವುದಿಲ್ಲವೆ ?
ಆದರೆ ಅದರ ಪರಿಣಾಮ ದೊಡ್ಡವರಿಗೆ ಆಗುವುದಿಲಲ್ಲವೆ ?
ಮತ್ತು ನಮಗಿಂತ ಯೋಗ್ಯತೆಯಲ್ಲಿ ಚಿಕ್ಕವರಿಗೆ ಮಾಡಿದ ದ್ರೋಹವು ಮಾತ್ರ ಪಾಪಕಮ೯ವಾಗುತ್ತದೆಯೆ ?
Vishnudasa Nagendracharya
ಕೇವಲ ಪುಣ್ಯದ ಹ್ರಾಸವಾಗುತ್ತದೆ ಎಂದು ಇಲ್ಲಿ ಹೇಳಿಲ್ಲ.
ದೊಡ್ಡವರಿಗೆ ದ್ರೋಹ ಮಾಡುವದರಿಂದ ಹಿಂದೆ ಮಾಡಿದ ಮಹತ್ತರ ಪುಣ್ಯವೂ ನಾಶವಾಗುತ್ತದೆ. ಅಪಾರವಾದ ಪಾಪವೂ ಬರುತ್ತದೆ.
ದೇವರ ಎದೆಗೆ ಭೃಗುಋಷಿಗಳು ಒದ್ದದ್ದರಿಂದ ಕೇವಲ ಪುಣ್ಯಹ್ರಾಸವಷ್ಟೇ ಅಲ್ಲ, ಪಾಪವು ಬಂದಿತು. ಬಂದ ಪಾಪದಿಂದ ಪ್ರಾಣಿಗಳನ್ನು ಕೊಲ್ಲುವ ವ್ಯಾಧರಾಗಿ ಹುಟ್ಟಿಬಂದರು. ಯಾರು ಸ್ವರೂಪತಃ ವ್ಯಾಧರೋ ಅವರಿಗೆ ವ್ಯಾಧಜನ್ಮ ಶ್ರೇಷ್ಠ. ಅದರಿಂದಲೇ ಅವರ ಸಾಧನೆ. ಧರ್ಮವ್ಯಾಧನಂತೆ. ಆದರೆ ವ್ಯಾಧರಲ್ಲದವರು ವ್ಯಾಧರಾಗಿ ಹುಟ್ಟಿಬರುವದು, ಅದರಲ್ಲಿ ವಸಿಷ್ಠರ ಯೋಗ್ಯತೆಗಿಂತಲೂ ಮಿಗಿಲಾದ ಭೃಗುಋಷಿಗಳು ವ್ಯಾಧರಾಗಿ ಹುಟ್ಟಿಬಂದದ್ದು ಅವರು ಮಾಡಿದ ತಪ್ಪಿಗೆ ಶಿಕ್ಷೆ.
ARVIND ACHARYA SANGAM,
11:43 AM, 23/10/2017
Adbutha gurugale nimma article kanvarannu namma Jana take tirskara madthare antha gotiralilla and tirskaramadabaradu annodu kooda gothaythu tumba danyavada gurugale