ರಾತ್ರಿಯಲ್ಲಿ ರಜಸ್ವಲೆಯಾದರೆ, ಜನನ-ಮರಣಗಳಾದರೆ ಯಾವ ದಿವಸಕ್ಕೆ ಲೆಕ್ಕ ಹಾಕುವದು?
ಪೂಜ್ಯ ಆಚಾರ್ಯರಿಗೆ ಭಕ್ತಿಯಿಂದ ನಮಸ್ಕಾರಗಳನ್ನು ಮಾಡುತ್ತಿದ್ದೇನೆ. ನಿಮ್ಮ ಭಾಗವತ ಉಪನ್ಯಾಸಗಳು ನಮ್ಮನ್ನು ಧನ್ಯಗೊಳಿಸುತ್ತಿವೆ. ಇದುವರೆಗೂ ತಿಳಿಯದ ತುಂಬ ವಿಷಯಗಳನ್ನು ತಿಳಿಯುತ್ತಿದ್ದೇವೆ. ನನ್ನ ಒಂದು ಪ್ರಶ್ನೆಯಿದೆ. ಅನೇಕ ಜನರನ್ನು ಕೇಳಿದರೂ ಸರಿಯಾದ ಉತ್ತರ ದೊರೆಯಲಿಲ್ಲ. ದಯವಿಟ್ಟು ತಪ್ಪು ತಿಳಿಯದೇ ಉತ್ತರಿಸಬೇಕಾಗಿ ವಿನಂತಿ. ರಾತ್ರಿಯ ಹೊತ್ತು ರಜಸ್ವಲೆಯಾದಾಗ ಕೆಲವು ಬಾರಿ ಆ ದಿವಸಕ್ಕೂ ಕೆಲವು ಬಾರಿ ಮಾರನೆಯ ದಿವಸಕ್ಕೂ ಲೆಕ್ಕ ಹಿಡಿಯುತ್ತಾರೆ. ಇದರ ಲೆಕ್ಕ ಹೇಗೆ ಹಾಕುವದು ತಿಳಿಸಿ. — ಪೂರ್ಣಪ್ರಜ್ಞ. ಬೆಂಗಳೂರು.