Prashnottara - VNP114

ಈಗಿನ ಕಾಲದಲ್ಲಿ ದೇವಸ್ಥಾನದ ಹುಂಡಿಗೆ ಹಣ ಹಾಕಬಹುದೇ?


					 	

ಗುರುಗಳೇ, ಮನೆಯ ದೇವರಿಗೆ ಕಾಣಿಕೆ ಹಾಗೂ ನೈವೇದ್ಯ ಮಾಡಿಸಲು ಹೋದಾಗ ಅಲ್ಲಿ ಪೂಜೆ ಮಾಡುವ ಅರ್ಹತೆ ಇಲ್ಲದವರು (ಬ್ರಾಹ್ಮಣೇತರರಾಗಿರಬಹುದು, ಬ್ರಾಹ್ಮಣರಾಗಿದ್ದೂ ಬ್ರಾಹ್ಮಣರಂತೆ ಬದುಕುತ್ತಿಲ್ಲದವರಾಗಿರಬಹುದು) ಪೂಜೆ ಮಾಡುತ್ತಿದ್ದರೆ ನಾವು ಏನು ಮಾಡಬೇಕು ಕಾಣಿಕೆ ಡಬ್ಬಿಗೆ ಹಾಕಿದರೂ ಅದು ಕೂಡ ಕಮಿಟಿಗೆ ಹೊಗುತ್ತದೆ ಇಂತಹ ಸಂದರ್ಭಗಳಲ್ಲಿ ಶಾಸ್ತ್ರ ಏನು ಹೇಳುತ್ತದೆ? — ವಿಜಯೀಂದ್ರ ಪೂಜ್ಯ ಆಚಾರ್ಯರೇ, ನಾನು ಒಂದು ದೇವಸ್ಥಾನದಲ್ಲಿಯೇ ಹಿಂದೆ ಕೆಲಸ ಮಾಡುತ್ತಿದ್ದೆ. ಅಲ್ಲಿ ನಡೆಯುವ ಹಣದ ದುರುಪಯೋಗವನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನಗಳಿಗೆ ಸಾಮಾನ್ಯಜನರು ಹಣ ನೀಡುವದು ಎಷ್ಟು ಸಮಂಜಸ? ಈ ರೀತಿ ನೀಡುವದರಿಂದ ಪುಣ್ಯ ಬರುತ್ತದೆಯೇ? — ಉಮಾ ನಾಗರಾಜ್


Download Article Share to facebook View Comments
8983 Views

Comments

(You can only view comments here. If you want to write a comment please download the app.)
 • Ramesha Beejady Upadhya,Bengaluru

  9:45 PM , 27/12/2019

  ಶ್ರೀ ಕೃಷ್ಣಾಯ ನಮಃ. ಎಷ್ಟೋ ವರ್ಷಗಳಿಂದ ಕಾಡುತ್ತಿದ್ದ ಸಂಧಿಗ್ಧತೆ. ಉತ್ತಮರು ಕೇಳಿದ ಪ್ರಶ್ನೆ ಸಮಂಜಸವಾದ ಉತ್ತರ. ಜೀವನ ಚರ್ಯೆಯನ್ನೇ ಬದಲಿಸುತ್ತಿರುವ ಅನುಭವವಾಯಿತು. ಪ್ರಣಾಮಗಳು.

  Vishnudasa Nagendracharya

  ತುಂಬ ಸಂತೋಷ.
 • Sarvamangala,

  2:31 PM , 07/03/2018

  Not able to download the articles.
 • Vadiraj,Gadag

  11:44 AM, 21/02/2018

  B
 • H.K.Gururajarao,KAMALAPUR

  7:11 PM , 29/01/2018

  C5
  
   C
 • Sangeetha prasanna,

  8:16 PM , 13/12/2017

  ಧನ್ಯವಾದಗಳು .👏👏👏👏👏
 • Sangeetha prasanna,

  7:10 PM , 13/12/2017

  ಹರೇ ಶ್ರೀನಿವಾಸ .ಗುರುಗಳಿಗೆ ನಮಸ್ಕಾರಗಳು .ಹಾಗಾದರೇ ಬ್ರಾಹ್ಮಣೆತರರು ಪೂಜೆ ಮಾಡುವ ಗುಡಿಗ ಳಿಗೆ ಹೋಗಬಾರದೆ ?ಅಥವಾ ಹೋಗಬಹುದೆ ?ಏನೇನು ಕ್ರಮಗಳಿವೆ .ದಯವಿಟ್ಟು ತಿಳಿಸಿಕೊಡಿ .ತಿಳಿಯದೆ ಕೇಳುತ್ತಿದ್ದೇನೆ .ತಪ್ಪಿದ್ದರೆ ಕ್ಷಮಿಸಿ .ಹರಿ ಸರ್ವೋತ್ತಮ .ವಾಯು ಜೀವೋತ್ತಮ 👏👏👏👏👏

  Vishnudasa Nagendracharya

  ಶಾಸ್ತ್ರದ ದೃಷ್ಟಿಯಲ್ಲಿ ಎರಡು ಉತ್ತರಗಳಿವೆ. 
  
  ಒಂದು — ಎಲ್ಲಿ ಶಾಸ್ತ್ರವಿಹಿತವಾದ ಪೂಜೆ ನಡೆಯುವದಿಲ್ಲವೋ (ಬ್ರಾಹ್ಮಣರೇ ಮಾಡಲಿ ಬ್ರಾಹ್ಮಣೇತರರೇ ಮಾಡಲಿ) ಅದರಿಂದ ದೇಶಕ್ಷೋಭ ಉಂಟಾಗುತ್ತದೆ ಎಂದು ಆಚಾರ್ಯರು ತಂತ್ರಸಾರಸಂಗ್ರಹದಲ್ಲಿ ತಿಳಿಸುತ್ತಾರೆ. ಹೀಗಾಗಿ ಭಕ್ತಿ ಶ್ರದ್ಧೆಗಳಿಂದ ಪೂಜೆ ನಡೆಯದ ಸಾಮಾನ್ಯ ದೇಗುಲಗಳಿಗೆ ಹೋಗದಿರುವದೇ ಉತ್ತಮ. ಉದಾಹರಣೆಗೆ ಶ್ರೀಮಚ್ಚಂದ್ರಿಕಾಚಾರ್ಯರು ಪ್ರತಿಷ್ಠಾಪಿಸಿದ ಅನೇಕ ಪ್ರಾಣದೇವರ ಗುಡಿಗಳು ಈಗ ಅಜ್ಞಾನಿಗಳ ಕೈಯಲ್ಲಿ ಸೇರಿವೆ. ಏಕಾದಶಿಯ ದಿವಸವೂ ವಡೆ ಹಾರ ಹಾಕುವ, ಮಲಮೂತ್ರ ವಿಸರ್ಜನೆ ಮಾಡಿದರೂ ಕೈ ಕಾಲು ತೊಳೆಯದ ಜನರಿಂದ ಪೂಜೆ ನಡೆಯುತ್ತದೆ. ಅಂತಹ ಕಡೆಗೆ ಹೋಗದಿರುವದೇ ಲೇಸು. 
  
  ಎರಡು — ದೇವರ ನಿತ್ಯಸನ್ನಿಧಾನಯುಕ್ತವಾದ ಕೆಲವು ಕ್ಷೇತ್ರಗಳಿವೆ. ಬದರೀ, ಉಡುಪಿ, ತಿರುಪತಿ ಮುಂತಾದವು. ಇಂತಹ ಕಡೆಯಲ್ಲಿ ಅದೆಂತಹ ವ್ಯಕ್ತಿ ಬಂದು ಪೂಜೆ ಮಾಡಿದರೂ ಸನ್ನಿಧಾನ ಹೋಗುವದಿಲ್ಲ. ಮೈ ಮನಸ್ಸುಗಳನ್ನು ಶುದ್ಧಿ ಇಟ್ಟುಕೊಳ್ಳದೇ, ಶಾಸ್ತ್ರೋಕ್ತ ಕ್ರಮಗಳನ್ನು ತಿಳಿಯದೇ, ತಿಳಿದೂ ಅನುಸರಿಸದೇ ಯಾರು ಪೂಜೆ ಮಾಡುತ್ತಾರೆಯೋ ಅವರಿಗೆ ಪಾಪವನ್ನು ನೀಡಲಿಕ್ಕಾಗಿಯೇ ಸ್ವಾಮಿ ಅಲ್ಲಿ ನೆಲೆಸಿರುತ್ತಾನೆ. ಅಂತಹ ಕಡೆಗೆ ಹೋಗಿ ನಮಸ್ಕಾರಾದಿಗಳನ್ನು ಮಾಡಿ ಹಿಂತಿರುಗಿ ಬರಬೇಕು. 
  
  ಎಷ್ಟೋ ಬಾರಿ ಬಹಳ ಭಕ್ತಿ ಗೌರವಗಳಿಂದ ನಾವು ತೀರ್ಥಕ್ಷೇತ್ರಗಳಿಗೆ ಹೋಗುತ್ತೇವೆ. ಅಲ್ಲಿನ ಪಂಡಾಗಳು, ಪೂಜಾರಿಗಳು, ದೇವಸ್ಥಾನವನ್ನು ನಡೆಸುವವರು ಮುಂತಾದವರು ಮಾಡುವ ಪಿಶುನತನದಿಂದ, ಅಲ್ಲಿ ನಡೆಯುವ ಅವ್ಯವಹಾರಗಳಿಂದ ಮನಸ್ಸು ರೋಸಿ ಹೋಗುತ್ತದೆ. ಮನಸ್ಸನ್ನು ವ್ಯಗ್ರವಾಗಿ ಮಾಡಿಕೊಳ್ಳುವ ಯಾವ ಕೆಲಸವನ್ನೂ ಮಾಡಿಕೊಳ್ಳಬಾರದಾದ್ದರಿಂದ, ಮನೆಯಲ್ಲಿಯೇ ಕುಳಿತು ಸಾಧನೆಯನ್ನು ಮಾಡುವದು ಉತ್ತಮ ಪಕ್ಷ. 
  
  ಶ್ರೀಮದಾಚಾರ್ಯರೇ ಸೂತ್ರಭಾಷ್ಯದಲ್ಲಿ ಆದೇಶಿಸಿದ್ದಾರೆ. ದುಷ್ಟಬುದ್ಧಿಯ ಜನ ಎಲ್ಲಿದ್ದಾರೋ ಅಲ್ಲಿಗೆ ಹೋಗತಕ್ಕದ್ದಲ್ಲ ಮತ್ತು ನಿನ್ನ ಮನಸ್ಸು ಯಾವ ಪ್ರದೇಶದಲ್ಲಿ ಪ್ರಶಾಂತವಾಗಿದ್ದು ಶ್ರೀಹರಿಯಲ್ಲಿ ನೆಲೆಗೊಳ್ಳುತ್ತದೆಯೋ ಅಲ್ಲಿದ್ದು ಸಾಧನೆಯನ್ನು ಮಾಡತಕ್ಕದ್ದು ಎಂದು. 
  
  ಕಲಿಯ ತಾಂಡವ ಆರಂಭವಾಗಿದೆ. ಎಲ್ಲ ನದಿಗಳು, ಕ್ಷೇತ್ರಗಳು, ದೇವಸ್ಥಾನಗಳು, ಮಠಗಳು ಬಹುತೇಕ ಕಲುಷಗೊಂಡುಬಿಟ್ಟಿವೆ. ಗೂಡು ಸೇರಿಕೊಂಡು ಸಾಧನೆ ಮಾಡಬೇಕು ನಾವು. ಮಂದಿಯ ಮಧ್ಯದಲ್ಲಿದ್ದರೆ ಸಾಧನೆಯಾಗುವದಿಲ್ಲ. 
 • H. Suvarna kulkarni,

  4:06 PM , 13/12/2017

  ಗುರುಗಳಿಗೆ ಪ್ರಣಾಮಗಳು ನೀವುಿ ತಿಳಿಸಿದಂತೆ ನಡೆದುಕೊಳ್ಳುತ್ತದ್ದೆ ಈಗಅದುಸರಿಎಂದು ಸಮಾಧಾನವಾಯಿತು ನನ್ನದೊಂದು ಪ್ರಶ್ನೆ ನಮ್ಮ ಮನೆ ದೇವರು ಮೈಲಾರಲಿಂಗ (ಯಾದಗಿರಿ ಜಿಲ್ಲೆಯಲ್ಲಿ ಬರುವ ಮೈಲಾಪುರ) ಅಲ್ಲಿಪೂಜೊ ಮಾಡುವವರುಬ್ರಾಹ್ಮಣೇತರರುುಹೀಗಿರುವಾಗಾಈಮೈಲಾರಲಿಂಗೇಶ್ವರ ಹೇಗೆ ಬ್ರಾಹ್ಮಣ ಕುಟುಂಬಗಳ ಮನೆದೇವರು ಆಗಲು ಸಾಧ್ಯ

  Vishnudasa Nagendracharya

  ಮೈಲಾರ ಲಿಂಗ, ಎಲ್ಲಮ್ಮ ಮುಂತಾದವುಗಳ ಕುರಿತು ದಾಸಸಾಹಿತ್ಯ ವಿಭಿನ್ನವಾದ ನಿಲುವನ್ನು ನೀಡುತ್ತದೆ. 
  
  ಶ್ರೀ ಪುರಂದರದಾಸಾರ್ಯರು ತಮ್ಮ ಅನೇಕ ಕೃತಿಗಳಲ್ಲಿ ಈ ದೇವತೆಗಳನ್ನು ಪೂಜೆ ಮಾಡತಕ್ಕದ್ದಲ್ಲ ಎಂದು ಹೇಳಿದ್ದಾರೆ. ಅಲ್ಲಿನ ಕೆಲವು ಪೂಜಾ ಪದ್ಧತಿಗಳೂ ಸಹ ವೈದಿಕ ಸಂಸ್ಕೃತಿಗೆ ವಿರುದ್ದವಾಗಿದೆ. (ಎಲೆಗಳನ್ನು ಮೈಗೆ ಸುತ್ತಿಕೊಂಡು ‘ಗೊಂದಲ’ ಮಾಡುವದು, ಬೆತ್ತಲೆ ಪೂಜೆ ಇತ್ಯಾದಿಗಳು ಶಾಸ್ತ್ರವಿರುದ್ಧವಾದ ಆಚರಣೆಗಳು) 
  
  ಈ ರೀತಿಯ ಮನೆದೇವರನ್ನು ಹೊಂದಿರುವ ಜನರು ತಮ್ಮ ಕುಲದ ಹಿರಿಯರೊಂದಿಗೆ ಚರ್ಚಿಸಿ, ಉತ್ತಮ ವಿದ್ವಾಂಸರನ್ನು ಸಂಪರ್ಕಿಸಿ ಉತ್ತಮ ಕ್ರಮವನ್ನು ಅನುಸರಿಸುವದು ಒಳಿತು. 
  
  ಉದಾಹರಣೆಗೆ ಮೈಲಾರಲಿಂಗನನ್ನು ಮನೆದೇವರಾಗಿ ಹೊಂದಿರುವವರು ಶ್ರೀಶೈಲದ ಮಲ್ಲಿಕಾರ್ಜುನ ಮುಂತಾದ ರುದ್ರದೇವರ ಜಾಗೃತಸನ್ನಿಧಾನದ ಪೌರಾಣಿಕ ದೇಗುಲಗಳಲ್ಲಿ ಮನೆದೇವರ ಪೂಜೆಯನ್ನು ಮುಂದುವರೆಸುವದು ಉತ್ತಮ. 
  
  ಹಾಗೆಯೇ ಎಲ್ಲಮ್ಮ ಮುಂತಾದ ಹೆಣ್ಣು ದೇವತೆಗಳನ್ನು ಮನೆದೇವರಾಗಿ ಹೊಂದಿರುವವರು ಕೊಲ್ಹಾಪುರದ ಲಕ್ಷ್ಮೀದೇವಿ ಮುಂತಾದ ಪೌರಾಣಿಕ ದೇಗುಲಗಳಲ್ಲಿ ಮನೆದೇವರ ಪೂಜೆಯನ್ನು ಮುಂದುವರೆಸುವದು ಉತ್ತಮ. 
  
  ಇದು ಸುಮ್ಮನೇ ಸಹಜವಾಗಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಮನೆಯ ಹಿರಿಯರು, ಗುರುಗಳು ಕೂಡಿ ನಿರ್ಧರಿಸಿ ನಂತರ ನಿರ್ಣಯ ತೆಗೆದುಕೊಳ್ಳತಕ್ಕದ್ದು. 
  
   
 • H. Suvarna kulkarni,

  4:15 PM , 13/12/2017

  ನನ್ನ ಪ್ರಶ್ನೆ ಏನೆಂದರೆ ನಮ್ಮ ಪೂರ್ವಜರು ನಡೆದುಕೊಂಡು ಬಂದಿರುವ ಹಿನ್ನೆಲೆಯಲ್ಲಿ ನಾವು ಹಾಗೆ ಮೈಲಾಪುರ ಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುತ್ತೇವೆ ಎಂದು ಆದರೆ ಅಲ್ಲಿಯ ವಾತಾವರಣ ಭಕ್ತಿ ಹುಟ್ಟಿಸುವುದಿಲ್ಲ ನನ್ನ ಅನಿಸಿಕೆ ತಪ್ಪಾಗಿದ್ದರೆ ಕ್ಷಮಿಸಿ
 • Pranesh ಪ್ರಾಣೇಶ,Bangalore

  11:45 AM, 13/12/2017

  ಆಚಾರ್ಯ ತಾವು ತಿಳಿಸಿದ ಬಗೆ ಅತ್ಯಂತ ಉತ್ತಮ ತಿಳಿಸುವ ಕಾರ್ಯ ನಿಮ್ಮದು ತಲುಪಿಸುವ ಕಾರ್ಯ ನಮ್ಮದು ಅದನ್ನು ಖಂಡಿತ ತಪ್ಪದೆ ಮಾಡುತ್ತೆವೆ 
  ಇದರ ಮಧ್ಯೆ ಒಂದು ಪ್ರಶ್ನೆ ನಿತ್ಯದಲ್ಲಿ ದೇವಸ್ಥಾನಕ್ಕೆ ಹೋಗುವ ಪದ್ದತಿ ನಮ್ಮದು ಹೀಗಿರುವಾಗ ನಿತ್ಯದಲ್ಲಿ ಬರಿ ಕೈಯ್ಯಲ್ಲಿ ಹೋಗುತ್ತೇವೇ ಇದು ತಪ್ಪೇ?
  ತಪ್ಪಾಗಿದ್ದಲ್ಲಿ ನಿತ್ಯ ಏನನ್ನು ಕೊಂಡುಹೋಗಬೇಕು

  Vishnudasa Nagendracharya

  ಪರಿಶುದ್ಧ ತುಲಸೀ, ಹೂಗಳು ಮುಂತಾದ ಬಾಹ್ಯಸಮರ್ಪಣೆ. 
  
  ಕಲಿತ ಒಂದು ಶ್ಲೋಕದ, ಸ್ತೋತ್ರದ ಪಠಣೆ. 
  
  ತಿಳಿದ ಒಂದು ಪ್ರಮೇಯದ ಸಮರ್ಪಣೆ. 
  
  ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡಿ ಕಣ್ಗಳನ್ನು ಮುಚ್ಚಿ ಹೊಸದಾಗಿ ತಿಳಿದ ತತ್ವವೊಂದನ್ನು ಚಿಂತನೆ ಮಾಡಿ, ಇಷ್ಟು ಜ್ಞಾನ ಬಂದಿದೆ ಸ್ವಾಮಿ ಎಂದು ಹರಿ ವಾಯು ದೇವತಾ ಗುರುಗಳಿಗೆ ಒಪ್ಪಿಸಿದಲ್ಲಿ ಅವರು ಪರಮಪ್ರೀತರಾಗುತ್ತಾರೆ. 
 • Shridhar Patil,

  7:09 PM , 12/12/2017

  ಈ ಸಂದೇಶ ಮನೆ ಮನೆಗೂ ತಲುಪಬೇಕು.

  Vishnudasa Nagendracharya

  ತಿಳಿಸುವ ಜವಾಬ್ದಾರಿ ನನ್ನದು. 
  
  ತಲುಪಿಸುವ ಜವಾಬ್ದಾರಿ ನಿಮ್ಮೆಲ್ಲರದು. 
 • ವಿಲಾಸ ವಸಂತ ಜೋಶಿ,

  10:23 PM, 12/12/2017

  ತಮ್ಮ ಈ ಮಾರ್ಗದರ್ಶನಕ್ಕೆ ತುಂಬಾ ಧನ್ಯವಾದಗಳು
 • Shridhar Patil,

  7:22 PM , 12/12/2017

  ಕೇವಲ ಶೋಕಿಗಾಗಿ, ಕೀರ್ತಿಗಾಗಿ, ಪತ್ರಿಕೆ ಗಳಲ್ಲಿ ತಮ್ಮ ಹೆಸರು ಮತ್ತು ಫೋಟೋ ಪ್ರಕಟವಾಗಲಿ ಎಂಬ ಉದ್ದೇಶದಿಂದ ಹಣವನ್ನು ಕೊಡುವ ಜನ ಇದನ್ನೋದಿ ಬದಲಾಗಲಿ ಎಂದು ಶ್ರೀ ಹರಿ ವಾಯು ಗುರುಗಳಲ್ಲಿ ಪ್ರಾಥ್ರಿಸೋಣ.
 • Gopalakrishna,

  7:03 PM , 12/12/2017

  ಅತ್ಯಂತ ಸಮಂಜಸ ಉತ್ತರ ಹಾಗು ಉತ್ತಮ ಪರಿಹಾರ ಮಾರ್ಗ ತೋರಿಸಿದ ಗುರುಗಳಿಗೆ ನಮೋ ನಮಃ