Prashnottara - VNP115

ದೈತ್ಯರಲ್ಲಿ ದೇವರ ಭಕ್ತರಿದ್ದಾರೆಯೇ?


					 	

ಹರೇ ಶ್ರೀನಿವಾಸ ನಮಸ್ಕಾರಗಳು ಆಚಾರ್ಯರೇ, ದೈತ್ಯರಲ್ಲೂ ಭಗವದ್ಭಕ್ತರುಂಟೇ, ಇಲ್ಲವಾದಲ್ಲಿ ಅವರು by default ಶ್ರೀಹರಿ ವಾಯು ಗುರುಗಳ ಪ್ರತಿಯಾಗಿ ದ್ವೇಷ ಉಳ್ಳವರೇ ಅದಕ್ಕೇನಾದರೂ ಪುರಾಣಗಳ ಪ್ರಕಾರ ನಿರ್ದಿಷ್ಟವಾದ ಕಾರಣವುಂಟೇ? ದಯೆಯಿಂದ ತಿಳಿಸಿ ಆಚಾರ್ಯರೇ. ಧನ್ಯವಾದಗಳು — ನಾಗರಾಜ ಶರ್ಮ


Download Article Share to facebook View Comments
2223 Views

Comments

(You can only view comments here. If you want to write a comment please download the app.)
 • Jayashree Karunakar,

  5:29 PM , 15/12/2017

  ಆದರೆ ತಮಸ್ಸಿಗೆ ಹೋದವರು ಪ್ರಳಯಕಾಲದಲ್ಲಿ ಭಗವಂತನ ಉದರವನ್ನು ಸೇರುತ್ತಾರಲ್ಲ ಗುರುಗಳೆ ಅಲ್ಲಿಯೂ ದುಃಖವಿರುತ್ತದೆಯಾ ?
  
  ಮತ್ತೆ ಸೃಷ್ಟಿಕಾಲದಲ್ಲಿ ಭಗವಂತನು ಅವರನ್ನು ತಮಸ್ಸಿಗೆ ಕಳುಹಿಸುತ್ತಾನೆಯೆ ?
 • Jayashree Karunakar,

  11:16 AM, 15/12/2017

  ಗುರುಗಳೆ
  
  ತಾವು "ಅಧಮ ಜೀವರಲ್ಲಿ ಭಗವದ್ಭಕ್ತರಿಲ್ಲ, ಒಂದುವೇಳೆ ಭಗವದ್ಭಕ್ತರಾದರೆ ಅವರು ಅಧಮಜೀವರಲ್ಲ " ಮತ್ತು "ದೇವರಲ್ಲಿ ದ್ವೇಶವನ್ನು ಮಾಡಿ ಅವನ ಅನುಗೃಹವನ್ನು ಪಡೆದು ಅನಂತ ದುಃಖ ರೂಪವಾದ ತಮಸ್ಸನ್ನು ಪಡೆಯುವವರು ಅಧಮರು, ಅವರ ಸ್ವಭಾವದಲ್ಲಿಯೆ ದ್ವೇಶವಿರುತ್ತದೆ" ಎಂದಿರಿ .
  
  ೧.ಹಿರಣ್ಯಕಶಿಪುವಿಗೆ ಸ್ವಭಾವದಲ್ಲಿಯೆ ದೇವರಲ್ಲಿ ದ್ವೇಶವಿದ್ದರೆ, ಅವನು ಪೂವ೯ಜನ್ಮದಲ್ಲಿ ಭಗವಂತನ ಭಕ್ತನಾಗಿ ದ್ವಾರಪಾಲಕನಾಗಲು ಹೇಗೆಸಾಧ್ಯ ?
  ೨.ಒಮ್ಮೆ ದುಃಖರೂಪವಾದ ತಮಸ್ಸನ್ನು ಪಡೆದರೆ, ನಂತರ ಸಾಧನೆ ಮಾಡಿ ಯೋಗ್ಯಜನ್ಮ ಪಡೆಯಬಹುದೆ ?
  
  ೩.ಹಿರಣ್ಯಕಶಿಪು ಶಾಪ ವಿಮೋಚನೆಯಾಗಿ ಮತ್ತೆ ದ್ವಾರಪಾಲಕನಾಗಿ ಭಗವಂತನ ಸೇವೆ ಮಾಡಿದನಲ್ಲವೆ, ಅವನ ಸ್ವಭಾವದಲ್ಲಿಯೆ ದ್ವೇಶವಿದ್ದಿದ್ದರೆ ಹೀಗಾಗಲು ಸಾಧ್ಯವೆ ?

  Vishnudasa Nagendracharya

  ಹಿರಣ್ಯಕಶಿಪು ಕೇವಲ ಅಧಮ ಜೀವನಲ್ಲ. 
  
  ಅವನಲ್ಲಿ ಇಬ್ಬರು ಜೀವರು. 
  
  ಒಬ್ಬನು ಜಯ. ಉತ್ತಮ ಜೀವ. ಅವನು ಶಾಪಗ್ರಸ್ತನಾಗಿ ಹಿರಣ್ಯಕಶಿಪು, ರಾವಣ, ಶಿಶುಪಾಲನಾಗಿ ಜನಿಸಿ ಮತ್ತೆ ದ್ವಾರಪಾಲಕನಾದ. 
  
  ಎರಡನೆಯವನು ಹಿರಣ್ಯಕಶಿಪು ಎಂಬ ದೈತ್ಯ. ಅವನು ಜಯನ ಜೊತೆಯಲ್ಲಿ ಆ ಹಿರಣ್ಯಕಶಿಪು ಶರೀರದಲ್ಲಿದ್ದ. ದೇವರ ದ್ವೇಷವನ್ನು ಮಾಡಿ ತಮಸ್ಸಿಗೆ ಹೋದ. 
  
  ೨. ತಮಸ್ಸೂ ಸಹ ಮುಕ್ತಿಯೇ. ಅಧಮ ಮುಕ್ತಿ. ಕೇವಲ ದುಃಖವಿರುವ ಮುಕ್ತಿ. ಅಲ್ಲಿಗೆ ಹೋದವರು ಮತ್ತೆ ಹಿಂತಿರುಗಿ ಎಂದಿಗೂ ಸಂಸಾರಕ್ಕೆ ಬರುವದಿಲ್ಲ.