Prashnottara - VNP120

ಕ್ಷೇತ್ರಗಳಲ್ಲಿ ಮೃತರಾದರೆ ಅಂತ್ಯಸಂಸ್ಕಾರ ಹೇಗೆ?


					 	

ಪವಿತ್ರ ಕ್ಷೇತ್ರ ದರ್ಶನಕ್ಕೆ ಹೋಗಿ ಮೃತರಾದರವರಿಗೆ ವಿಧಿಗಳು ಏನಾಗಿರುತ್ತದೆ. ಮೃತಶರೀರ ದಾಹಾದಿಗಳು ಬೇಕಿಲ್ಲವೇ? ದಯವಿಟ್ಟು ತಿಳಿಸಿ — ಎನ್. ವಿ. ಪದ್ಮನಾಭ ಮರಣ ಕ್ಷೇತ್ರದಲ್ಲಾಗಲಿ, ಅಥವಾ ಮನೆಯಲ್ಲಿಯೇ ಆಗಲಿ ದಾಹಾದಿ ಸಂಸ್ಕಾರಗಳು ಒಂದೇ ರೀತಿಯಲ್ಲಿರುತ್ತವೆ. ವ್ಯತ್ಯಾಸವಿಲ್ಲ. ಕ್ಷೇತ್ರದಲ್ಲಿ ಮರಣ ಹೊಂದುವದರಿಂದ, ಮರಣ ಹೊಂದಿದ ವ್ಯಕ್ತಿಗೆ ಅಪಾರ ಪುಣ್ಯ ಲಭಿಸುತ್ತದೆ, ಶ್ರೇಷ್ಠ ವೈಷ್ಣವ ಜನ್ಮಗಳು ದೊರೆಯುತ್ತವೆ. ಆದರೆ, ಸಂಸ್ಕಾರಗಳ ದೃಷ್ಟಿಯಿಂದ ಯಾವ ವ್ಯತ್ಯಾಸವೂ ಇಲ್ಲ. ನೀರಿನಲ್ಲಿ ಬಿದ್ದು, ಅಥವಾ ಪರ್ವತಗಳಿಂದ ಬಿದ್ದು, ದೇಹ ಸಿಗದೇ ಹೋದರೂ ದೇಹದ ಪರವಾಗಿ ದರ್ಭೆಗಳನ್ನಿಟ್ಟು ಸಂಸ್ಕಾರ ಮಾಡಲೇಬೇಕು. ಸಂಸ್ಕಾರ ಮಾಡದೇ ಇದ್ದರೆ ಮರಣ ಹೊಂದಿದವರಿಗೂ ದುಃಖವುಂಟಾಗುತ್ತದೆ, ಸಂಸ್ಕಾರ ಮಾಡಬೇಕಾದ ಅಧಿಕಾರವುಳ್ಳವರಿಗೆ ಕಷ್ಟಗಳ ಪರಂಪರೆಯೇ ಆರಂಭವಾಗುತ್ತದೆ. ಇನ್ನು, ದೇವಸ್ಥಾನಗಳಲ್ಲಿ, ಮಠಗಳಲ್ಲಿ ಮರಣವಾದಾಗ ಆ ಪ್ರದೇಶವನ್ನು ಶುದ್ಧಿ ಮಾಡಬೇಕು. ಆಯಾ ಕ್ಷೇತ್ರಗಳ ಧಾರ್ಮಿಕ ಕಾರ್ಯಗಳಿಗೆ ತೊಂದರೆಯಾಗದಂತೆ ಅಂತ್ಯಸಂಸ್ಕಾರಗಳನ್ನು ನೆರವೇರಿಸಬೇಕು. ಕ್ಷೇತ್ರಗಳಲ್ಲಿ ಮರಣ ದೊರೆಯುವದು ಮಹಾಪುಣ್ಯಪ್ರದ. ಹೀಗಾಗಿ ಅಲ್ಲಿ ಮೃತರಾದಾಗ ದೇಹವನ್ನು ಅಲ್ಲಿಂದ ಊರಿಗೆ ತಂದು ಸಂಸ್ಕಾರ ಮಾಡಬಾರದು. ಆ ಕ್ಷೇತ್ರದಲ್ಲಿನ ಶ್ಮಶಾನದಲ್ಲಿಯೇ ಸಂಸ್ಕಾರವನ್ನು ಮಾಡಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
2807 Views

Comments

(You can only view comments here. If you want to write a comment please download the app.)
 • MAHADI SETHU RAO.,BENGALURU

  6:04 PM , 05/08/2018

  Very Good Information.
  Vandanegalu.
  HARE KRISHNA.
 • M Sreenath,

  8:05 PM , 15/06/2018

  🙏🙏🙏
 • B. Suresh Kumar,

  9:44 PM , 24/05/2018

  🙏
 • Gopalachar Hanjakki,

  9:29 PM , 24/05/2018

  🙏