Prashnottara - VNP123

ಅಪಮೃತ್ಯು


					 	

ಅಪಮೃತ್ಯು ಎಂದರೇನು, ಆಯುಷ್ಯ ಮುಗಿಯದೇ ಮರಣ ಹೇಗೆ ಉಂಟಾಗಲು ಸಾಧ್ಯ, ಅಯುಷ್ಯ ಮುಗಿದು ಮರಣವಾದರೆ ಅದು ಅಪಮೃತ್ಯು ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ ಶಾಸ್ತ್ರೀಯವಾದ ಉತ್ತರ ನೀಡುವದರೊಂದಿಗೆ ಅಪಮೃತ್ಯು ಪರಿಹಾರಕ್ಕಾಗಿ ಏನು ಮಾಡಬೇಕು ಎನ್ನುವದರ ವಿವರಣೆ ಇಲ್ಲಿದೆ.


Download Article Share to facebook View Comments
11000 Views

Comments

(You can only view comments here. If you want to write a comment please download the app.)
 • suresh b,Koppal

  7:28 PM , 17/10/2020

  ಗುರುಗಳೇ 4ವರ್ಷದ ನನ್ನ ಮಗಳನ್ನ ಕಳ್ಕೊಂಡಿದೀನಿ ಹೆರಿಡಿಟಿ ಸಮಸ್ಯೆ ಇತ್ತು ಚಿಕಿತ್ಸೆ ಮಾಡಿಸೋಕೆ ಹೋದೆ ಚಿಕಿತ್ಸೆ ಫಲಿಸಲಿಲ್ಲ ತುಂಬಾ ನೋವು ಪಟ್ಟು ಪ್ರಾಣ ಬಿಟ್ಲು ಗುರುಗಳೇ
  ನಾಳೆ ಅವಳ ಹುಟ್ಟುಹಬ್ಬ ಈ ದಿನ ಮಕ್ಕಳಿಗೆ ಹಾಲು ಹಣ್ಣು ಕೊಡೊಬೇಕೋ ಅಥವಾ ಮುಂದಿನ ತಿಂಗಳು ನವಂಬರ 22 ಅವಳು ತೀರಿಕೊಂಡ ದಿನ ಯಾವ್ ದಿನ ಕೊಡಬೇಕು ದಯವಿಟ್ಟು ತಿಳಿಸಿ
  ನೀವು ಹೇಳಿದಾಗೆ ತುಳಸಿ ದಳ ಅಥವಾ ಹೂ ವನ್ನ ಅವಳ ಫೋಟೋಗೆ ಅರ್ಪಣೆ ಮಾಡ್ಬೇಕಾ ಇಲ್ಲ ದೇವರಿಗೆ ಅರ್ಪಣೆ ಮಾಡ್ಬೇಕಾ ದಯವಿಟ್ಟು ತಿಳಿಸಿ ಗುರೂಜಿ

  Vishnudasa Nagendracharya

  ತುಂಬ ದುಃಖದ ಸಂಗತಿ. 
  
  ಶ್ರೀಹರಿ ವಾಯು ದೇವತಾ ಗುರುಗಳು ನಿಮಗೆ ನೋವನ್ನು ಭರಿಸುವ ಸಾಮರ್ಥ್ಯ ನೀಡಲಿ ಹಾಗೂ ನಿಮ್ಮ ಕೂಸಿಗೆ ಉತ್ತಮ ಜನ್ಮವನ್ನು ಅನುಗ್ರಹಿಸಲಿ ಎಂದು ಅವರನ್ನು ಪ್ರಾರ್ಥಿಸುತ್ತೇನೆ. 
  
  ನಿಮ್ಮ ಪ್ರಶ್ನೆಗೆ ಉತ್ತರ — 
  
  ಹುಟ್ಟಿದ ಹಬ್ಬವಾಗಲೀ, ಸಾವಿನ ದಿವಸದ ಆಚರಣೆಯಾಗಲಿ, ಪಂಚಾಂಗದಲ್ಲಿ ನೀಡಿರುವ ತಿಥಿಯ ಆಧಾರದ ಮೇಲೆ ಮಾಡಬೇಕೇ ಹೊರತು, ಪಾಶ್ಚಾತ್ಯರ ಕ್ಯಾಲೆಂಡರಿನ ಆಧಾರದ ಮೇಲೆ ಮಾಡಬಾರದು. 
  
  ಮೃತ ಜೀವಕ್ಕೆ ಸದ್ಗತಿ ಸಿಗಬೇಕಾದರೆ ಮೃತತಿಥಿಯಂದು ದಾನ ಧರ್ಮಗಳ ಆಚರಣೆ ಮಾಡಬೇಕು. 
  
  ಮೃತರ ಹುಟ್ಟಿದ ದಿವಸದಂದು ಅಥವಾ ಬೇರೆಯ ದಿವಸದಂದು ಮಾಡಬಾರದು ಎಂದಲ್ಲ, ಮೃತತಿಥಿಯಂದು ಮಾಡಲಬೇಕು. ಇತರ ದಿವಸಗಳಲ್ಲಿ ಸಹ ಅವರ ಸದ್ಗತಿಯನ್ನು ಪ್ರಾರ್ಥಿಸಿ ಮಾಡುವ ಸತ್ಕರ್ಮಗಳು ಅವರಿಗೆ ಮುಟ್ಟಿಯೇ ಮುಟ್ಟುತ್ತವೆ. 
  
  ನಿಮ್ಮ ಮಗಳ ಹೆಸರು ಗೋತ್ರವನ್ನು ಹೇಳಿ, ಆ ಕೂಸಿಗೆ ಪರಲೋಕದಲ್ಲಿ ಸೌಖ್ಯ ಸಿಗಲಿ, ಮುಂದೆ ದೊರೆಯುವ ಜನ್ಮಗಳು ದೀರ್ಘಾಯುಷ್ಯದಿಂದ, ದೃಢ ಆರೋಗ್ಯದಿಂದ ಮತ್ತು ಪರಿಪೂರ್ಣಸೌಖ್ಯದಿಂದ ಕೂಡಿರಲಿ ಎಂದು ದೇವರನ್ನು ಪ್ರಾರ್ಥಿಸಿ, ಸಂಕಲ್ಪಪುರಸ್ಸರವಾಗಿ ದಾನ ಧರ್ಮಗಳನ್ನು ಮಾಡಿ. 
  
  ಶ್ರೀಹರಿ ಆ ಕೂಸಿಗೆ ಸಕಲ ಸೌಖ್ಯಗಳನ್ನೂ ಅನುಗ್ರಹಿಸಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ. 
 • Raghavendra Prasad,Hosapete

  4:40 PM , 11/03/2020

  B
 • Prakash Honniganur,Dharwad

  2:11 PM , 10/02/2020

  ಗುರುಗಳಿಗೆ ಭಕ್ತಿ ಪೂರ್ವಕ ಶಿ. ಸಾ. ನಮಸ್ಕಾರಗಳು ನನ್ನ ಪ್ರಶ್ನೆಗೆ ತಾವು ಸಲಹೆ ಕೊಟ್ಟಿದ್ದು ನನಗೆ ಮಹದುಪಕಾರವಾಗಿದೆ. ತಮಗೆ ಅನೇಕ ಧನ್ಯವಾದಗಳು. ಜೈ ಗುರುದೇವ.
 • Prakash Honniganur,Dharwad

  11:53 AM, 04/02/2020

  ಗುರುಗಳಿಗೆ ನಮಸ್ಕಾರ ನಮ್ಮ ಕಿರಿಯ ಸಹೋದರ 28.05.2019 ರಂದು ಸಂಜೆ 5 ಘಂಟೆಗೆ ದೈವಾಧೀನರಾದರು ಅಂದು ಸೂರ್ಯೋದಯ ತಿಥಿ ನವಮಿ ಇದ್ದು ಶ್ರಾದ್ಧ ತಿಥಿ ದಶಮಿ ಇತ್ತು ಯಾವ ತಿಥಿಯ ದಿನ ನನ್ನ ಸಹೋದರನ ವರ್ಷಾಂತಿಕವನ್ನು ಮಾಡಿಕೊಳ್ಳಬೇಕು ವೈಶಾಖ ಕೃಷ್ಣ ಪಕ್ಷದ ನವಮಿ ಅಥವಾ ದಶಮಿ ದಯವಿಟ್ಟು ತಿಳಿಸಿ ಮಾರ್ಗದರ್ಶನ ನೀಡಿ. ಶಿ. ಸಾ. ನಮಸ್ಕಾರಗಳು

  Vishnudasa Nagendracharya

  ಮೃತತಿಥಿಯನ್ನು ನಿರ್ಣಯ ಮಾಡಲು ಸೂರ್ಯೋದಯದ ತಿಥಿ, ಶ್ರಾದ್ಧ ತಿಥಿ ಆವಶ್ಯಕತೆ ಇಲ್ಲ. “ಜನನೇ ಮರಣೇ ಚೈವ ತಿಥಿಸ್ತಾತ್ಕಾಲಿಕೀ ಸ್ಮೃತಾ” ಜನನ, ಮರಣಗಳಾದಾಗ ಯಾವ ತಿಥಿ ಇರುತ್ತದೆಯೋ ಅದೇ ತಿಥಿ ಗ್ರಾಹ್ಯ. 
  
  ನಿಮ್ಮ ತಮ್ಮನವರು ಮೃತರಾಗಿರುವದು ವೈಶಾಖ ಕೃಷ್ಣ ದಶಮಿಯಂದು. ಪ್ರತೀತಿಂಗಳ ಕೃಷ್ಣಪಕ್ಷದ ದಶಮಿಯಂದು ಅವರ ಮಾಸಿಕವನ್ನೂ ಮತ್ತು ಪ್ರತೀವರ್ಷ ವೈಶಾಖ ಕೃಷ್ಣ ದಶಮಿಯಂದು ಅವರ ಶ್ರಾದ್ಧವನ್ನಾಚರಿಸಬೇಕು. 
 • Chandrika prasad,Bangalore

  8:50 PM , 01/02/2020

  ನನ್ನ ಪ್ರಣಾಮಗಳು. ಅಪಮೃತ್ಯು ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ. ಏನೆ ಆಗಲಿ ಮನುಷ್ಯ ಯಾವ ದಾರಿಗೆ ಹೋಗಬೇಕೋ ಆ ದಾರಿಗೆ ಹೋಗಲು ಭಗವಂತ ಪ್ರೇರೇ ಪಿಸುತ್ತಾನೆ. ಸಜ್ಜನರ ಸಂಗದಿಂದ ಮನಸ್ಸು ಶುದ್ಧಿಯಾಗಿ ಪಾಗಳನ್ನು ಮಾಡದಂತೆ ತಡೆಯುತ್ತದೆ. ಆದ್ದರಿಂದ ಸದಾ ಒಳ್ಳೆಯದನ್ನೇ ಯೋಚನೆ ಮಾಡಬೇಕು ಅಲ್ಲವೇ ಆಚಾರ್ಯರೇ 🙏👌
 • Sudha,Chennai

  1:47 PM , 29/11/2019

  Sir, I need to copy and paste it for my own reference... But there is no option for that
 • Ashok,Bangalore

  10:16 AM, 07/07/2018

  ಗುರುಗಳೇ, ಆಯುಷ್ಯವು ಹಣೇ ಬರಹದ ಪ್ರಧಾನ ಭಾಗ ಅಲ್ಲವೇ ? ನಮ್ಮ ಪುಣ್ಯದಿಂದ ಆಯುಷ್ಯ ವ್ರುಧ್ಹೀ ಆಗುವುದು, ಪಾಪಗಳಿಂದ ಕ್ಷೀಣವಾಗೂವದು ಎಂದರೇ ಹಣೇ ಬರಹ ಬದಲಾಯಿಸಿದಂತೇ ಅಲ್ಲವೇ ? ಇದು ಹೇಗೇ ಕೂಡುತದೇ ? ದಯವಿಟ್ಟು ತಿಳಿಸಿ
 • Sheela M,Mysore

  12:32 AM, 06/07/2018

  Maduve modalu hennu makkalu aatmahatte maadikondare avrige gotta eruvudilla antaare antavarige keshtra vidhi maaduvudu heege gurugale tilisi

  Vishnudasa Nagendracharya

  ಮದುವೆ ಆಗುವವರೆಗೆ ಹೆಣ್ಣುಮಕ್ಕಳಿಗೆ ತನ್ನ ತಂದೆಯ ಮನೆಯ ಗೋತ್ರವಿರುತ್ತದೆ. ಮದುವೆಯಲ್ಲಿ ತಂದೆಯ ಗೋತ್ರವನ್ನು ತ್ಯಜಿಸಿ, ಗಂಡನ ಮನೆಯ ಗೋತ್ರವನ್ನು ಪಡೆಯುತ್ತಾಳೆ. 
  
  ತುಂಬ ವಯಸ್ಸಾದರೂ ಮದುವೆಯಾಗದೇ ಸತ್ತ ಹೆಣ್ಣುಮಕ್ಕಳಿಗೆ ಏಕೋದ್ದಿಷ್ಟ ಶ್ರಾದ್ಧವನ್ನು ಮಾಡಬಹುದು. ತಂದೆಯ ಮನೆಯ ಗೋತ್ರವೇ ಇರುತ್ತದೆ. ಕ್ಷೇತ್ರಗಳಲ್ಲಿ ಮಾಡುವದು ಸರ್ವಪಿತೃಶ್ರಾದ್ಧ. ಅದರಲ್ಲಿಯೂ ಸಹ ಪಿಂಡವನ್ನು ಅವರಿಗೆ ನೀಡಬೇಕು. 
 • Ashok,Bangalore

  12:28 AM, 06/07/2018

  ಗುರುಗಳೇ , ದಯವಿಟ್ಟು ಈ 2 ಪ್ರಶ್ನಗಳಿಗೇ ಉತ್ತರ ತಿಳಿಸಿ 
  
  1. ಆಯುಷ್ಯವು ಪ್ರಾರಬ್ಧ ಕರ್ಮದ ಫಲ ಅಲ್ಲವೇ ? ಹಾಗದರೇ ಪುಣ್ಯಗಳಿಂದ ಅದರ ವ್ರುದ್ಢಿಯೂ ಪಾಪಗಳಿಂದ ಅದರ ಕ್ಷೀಣವೂ ಹೇಗೇ ಆಗಲು ಸಾಧ್ಯ ? ಪ್ರಾರಬ್ಧ ಕರ್ಮದ ಫಲ ಕಟ್ಟಿಟ್ಟ ಬುತ್ತಿ ಅಲ್ಲವೇ ? ಅದನ್ನು ಬದಲಾಯಿಸಲು ಸಾಧ್ಯವೇ ? 
  
  2. ಆತ್ಮಹತ್ಯೇ ಆಯುಷ್ಯ ಇರುವಾಗಲೇ ನಡಯುವ ಪ್ರಕ್ರಿಯವೇ ? ಅಥವಾ ಹಿಂದೇ ಹೇಳಿದಂತೇ ಪಾಪ ಕರ್ಮಗಳಿಂದ ಆಯುಷ್ಯ ನಾಶವಾದ ಮೇಲೇ ಆತ್ಮಹತ್ಯೇ ಘಟಿಸುವದೇ ? 
  
  🙏🙏🙏🙏🙏

  Vishnudasa Nagendracharya

  ವಸ್ತುಸ್ಥಿತಿಯಲ್ಲಿ ಇಲ್ಲಿ ಪ್ರಾರಬ್ಧಕರ್ಮ ಎನ್ನುವ ಶಬ್ದದ ಪ್ರಯೋಗ ಅಷ್ಟು ಸೂಕ್ತವಲ್ಲ. ಪ್ರಾರಬ್ಧಕರ್ಮ ಎಂಬ ಪದದ ಬಳಕೆ ಅಪರೋಕ್ಷ ಜ್ಞಾನಿಗಳ ವಿಷಯದಲ್ಲಿ ಸೂಕ್ತ. 
  
  1. ಹಿಂದಿನ ಪಾಪಕರ್ಮವನ್ನು ಇಂದಿನ ಮಹತ್ತರ ಪುಣ್ಯಕರ್ಮದಿಂದ ನಾಶ ಮಾಡಿಕೊಳ್ಳಬಹುದು. ಗುರುಗಳ ಸೇವೆಯಿಂದ ಬರುವ ಪುಣ್ಯದಿಂದ, ಪಾಪಕ್ಕೆ ಕಾರಣವಾದ ಕಷ್ಟವನ್ನು ಕಳೆದುಕೊಳ್ಳುವಂತೆ. 
  
  2. ಲೇಖನದಲ್ಲಿ ತಿಳಿಸಿರುವಂತೆ, ಪಾಪದಿಂದ ಆಯುಷ್ಯ ಕ್ಷೀಣವಾದಾಗ, ದುಷ್ಟವಾದ ಯೋನಿಗಳನ್ನು ಪಡೆಯುವ ಪ್ರಬಲ ಪಾಪವಿದ್ದಾಗ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
  
  
 • Jasyashree Karunakar,

  8:28 PM , 05/07/2018

  ಗುರುಗಳೆ
  
  ನೀವೇ ತಿಳಿಸಿದಂತೆ ನಾವು ಹುಟ್ಟುವಾಗಲೇ ಭಗವಂತ ನಮಗೆ ಪೂಣ೯ವಾದ ೧೦೦ ವಷ೯ದ ಆಯುಷ್ಯವನ್ನು ಕರುಣ್ಸಿದ್ದಾನೆ.
  
  ಆದರೆ ನಾವು ಸತ್ಕಮಾ೯ಚರಣೆಯಿಂದ ಆಯುಷ್ಯವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂದರೆ, ಭಗವಂತ ತನ್ನ ಸ್ವಾತಂತ್ರ್ಯವನ್ನು (ಅವನು ಕೊಟ್ಟ ೧೦೦ವಷ೯ದ ಆಯುಷ್ಯವನ್ನು ನಾವು ಹೆಚ್ಚಿಸಿಕೊಂಡಾಗ) 
  ಕಳೆದುಕೊಂಡಂತಾಯಿತಲ್ಲವೆ ?
  ಹಾಗಾದರೆ ನಮ್ಮ ಆಯುಷ್ಯದ ಸ್ವಾತಂತ್ರ್ಯ ನಮ್ಮ ಕೆೃಯಲ್ಲಿದೆ ಅಂತಾಯಿತಲ್ಲವೆ ?

  Vishnudasa Nagendracharya

  ಇದು ಜೀವಕರ್ತೃತ್ವದ ವಿಷಯದಲ್ಲಿ ಚರ್ಚೆಯಾಗುವ ವಿಷಯ. 
  
  ಈಗಾಗಲೇ ಎರಡು ಲೇಖನಗಳಲ್ಲಿ ಉತ್ತರಿಸಿದ್ದೇನೆ. 
  
  ಸ್ವಾತಂತ್ರ್ಯ ಎರಡು ವಿಧ. 
  
  ಒಂದು ಭಗವಂತನ ಸ್ವಾತಂತ್ರ್ಯ. ಯಾರ ಅಧೀನವೂ ಅಲ್ಲದ್ದು. 
  
  ಎರಡನೆಯದು ಪರಿಮಿತವಾದ ಸ್ವಾತಂತ್ರ್ಯ. 
  
  ಭಾರತೀಯರು ಸ್ವತಂತ್ರರು ಎಂದರೆ ತಮ್ಮ ಕಾನೂನನ್ನು ತಾವು ನಿರ್ಮಿಸಿಕೊಳ್ಳಬಲ್ಲರು ಎಂದು ಅರ್ಥವೇ ಹೊರತು, ದೇವರಲ್ಲಿರುವ ಸ್ವಾತಂತ್ರ್ಯದಂತೆ ಸ್ವಾತಂತ್ರ್ಯವಿದೆ ಎಂದು ಅರ್ಥವಲ್ಲ. 
  
  ಅಣ್ಣ ತಮ್ಮಂದಿರಲ್ಲಿ ಆಸ್ತಿ ವಿಭಾಗವಾಗುತ್ತದೆ. ಗಂಡ ಹೆಂಡತಿಯರಿಗೆ ವಿಚ್ಛೇದನವಾಗುತ್ತದೆ. ಆಗ ಕಾನೂನು ಹೇಳುತ್ತದೆ, ನೀವಿಬ್ಬರೂ ಇನ್ನು ಸ್ವತಂತ್ರರು, ನಿಮ್ಮಿಚ್ಛೆಯಂತೆ ನೀವಿರಬಹುದು ಎಂದು. 
  
  ಅದರರ್ಥ ಅವರೆಲ್ಲರೂ ದೇವರಾದರು ಎಂದಲ್ಲ. 
  
  ಆಸ್ತಿ ವಿಭಾಗವಾದ ಬಳಿಕ ಅವರವರ ಆಸ್ತಿಯನ್ನು ಉಪಯೋಗಿಸಲು ಮತ್ತೊಬ್ಬರ ಅಪ್ಪಣೆ ಪಡೆಯಬೇಕಾಗಿಲ್ಲ ಎಂದಷ್ಟೇ ಅರ್ಥ. ಹೊರತು ಯಾರ ಅಪ್ಪಣೆಯನ್ನೂ ಪಡೆಯಬೇಕಾಗಿಲ್ಲ ಎಂದಲ್ಲ. ತಮ್ಮ ಸ್ಥಳದಲ್ಲಿ ಅವರು ಮನೆ ಕಟ್ಟಿಕೊಳ್ಳಬೇಕಾದರೂ ಅವರು ಸರಕಾರದ ಅಪ್ಪಣೆಯನ್ನು ಪಡೆಯಲೇ ಬೇಕು. 
  
  ವಿಚ್ಛೇದನವಾದ ಬಳಿಕ, ಒಬ್ಬರ ಜೀವನದಲ್ಲಿ ಮತ್ತೊಬ್ಬರಿಗೆ ಹಕ್ಕಿಲ್ಲ ಎಂದಷ್ಟೇ ಅರ್ಥ. ಹೊರತು, ಅವರು ದೇವರಂತೆ ಸ್ವತಂತ್ರರಾದರು ಎಂದರ್ಥವಲ್ಲ. 
  
  ಹಾಗೆ, ಇಷ್ಟು ಆಯುಷ್ಯ ಎಂದು ನೀಡಿ ಅದನ್ನು ಹೆಚ್ಚು ಮಾಡಿಕೊಳ್ಳುವ ಅವಕಾಶವನ್ನೂ ಕಡಿಮೆ ಮಾಡಿಕೊಳ್ಳುವ ಪರಿಸ್ಥಿತಿಯನ್ನೂ ದೇವರು ಕೊಟ್ಟಿದ್ದಾನೆ. ಅದನ್ನು ಬಳಸುವದರಿಂದ ದೇವರ ಸ್ವಾತಂತ್ರ್ಯಕ್ಕೆ ಹಾನಿಯಿಲ್ಲ. ನಾವು ದೇವರಾಗುವದಿಲ್ಲ. 
  
  ಆಟವಾಡಬೇಕಾದರೆ ಆಟದಲ್ಲಿ ಪಾಯಿಂಟ್ಸಗಳನ್ನು ಗಳಿಸಲೂ ಅವಕಾಶವಿದೆ, ಕಳೆದುಕೊಳ್ಳುವ ಪರಿಸ್ಥಿತಿಗಳೂ ಇರುತ್ತವೆ. ಎರಡೂ ಪ್ರಸಂಗಗಳಲ್ಲಿ ಆ ಆಟವನ್ನು ರೂಪಿಸಿದವನ ಇಚ್ಛೆಗೆ ತಕ್ಕಂತೆಯೇ ಆಟಗಾರ ಇರುತ್ತಾನೆ. 
  
  
 • Jasyashree Karunakar,Bangalore

  7:31 PM , 05/07/2018

  ಗುರುಗಳೆ
  
  ಭಗವಂತ ನಮಗೆ ಲೆಕ್ಕ ಮಾಡಿಕೊಟ್ಟ ನಮ್ಮ ಆಯುಷ್ಯವನ್ನು, ನಾವು ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಂದ ಹೆಚ್ಚು ಅಥವಾ ಕಮ್ಮಿ ಮಾಡಿಕೊಳ್ಳಬಹುದು ಎಂದರೆ , ಭಗವಂತನ ಸಂಕಲ್ಪಕ್ಕೆ ವಿಘ್ನ ತಂದುಕೊಂಡಂತಾಯಿತಲ್ಲವೆ ?

  Vishnudasa Nagendracharya

  ದೇವರು ನಮಗೆ ಸಂಸಾರ ನೀಡಿದ್ದಾನೆ ಎಂದು ಸಂಸಾರ ಪರಿಹಾರಕ್ಕಾಗಿ ಪ್ರಯತ್ನ ಮಾಡಿದರೆ ಭಗವಂತನಿಗೆ ವಿರುದ್ಧವಾಗಿ ನಡೆದಂತೆಯೇ? ಸರ್ವಥಾ ಅಲ್ಲ. 
  
  ದೇವರು ನಮಗೆ ಮನುಷ್ಯ ಜನ್ಮ ನೀಡುವದೇ ಸರಿಯಾದ ದಾರಿಯಲ್ಲಿ ನಡೆದು ನಾವು ಉದ್ಧಾರವಾಗಬೇಕು ಎಂಬ ಕಾರಣಕ್ಕೆ. 
  
  ಹಿಂದಿನ ಪಾಪಗಳ ಲೆಕ್ಕಾಚಾರದಂತೆ ಆಯುಷ್ಯವನ್ನೂ ನೀಡುತ್ತಾನೆ. ಇಂದು ನಾವು ಮಾಡಿದ ಸತ್ಕರ್ಮಗಳ ಅನುಸಾರವಾಗಿ ಅದನ್ನು ಹೆಚ್ಚು ಮಾಡುತ್ತಾನೆ. ಪಾಪಗಳಿಗೆ ಅನುಸಾರವಾಗಿ ಅದನ್ನು ಕಡಿಮೆಯೂ ಮಾಡುತ್ತಾನೆ. 
  
  ಮನುಷ್ಯ ಜನ್ಮ ಪಡೆದು ಸತ್ಕರ್ಮಗಳನ್ನು ಮಾಡಿ, ಪಾಪಗಳನ್ನು ಕಳೆದುಕೊಂಡು ದೀರ್ಘಾಯುಷ್ಯ, ಸಾತ್ವಿಕ ಸಂಪತ್ತನ್ನು ಗಳಿಸಿ ಜ್ಞಾನ ಭಕ್ತಿ ವೈರಾಗ್ಯಗಳನ್ನು ಪಡೆದು ಸಾಧನೆ ಮಾಡಬೇಕೆನ್ನುವದೇ ಹರಿಯ ಸಂಕಲ್ಪ. ಅದನ್ನು ಮಾಡದೇ ಇದ್ದರೆ ದೇವರ ಅವಗ್ರಹಕ್ಕೆ ಪಾತ್ರರಾಗುತ್ತೇವೆ. 
 • ಪ್ರಮೋದ,ಬೆಂಗಳೂರು

  6:54 PM , 05/07/2018

  ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಆಚಾರ್ಯರೇ 🙏🙏🙏
  
  ಆದರೆ, ಒಂದು ಸಂಶಯ -
    ಕಾರ್ತಿವೀರ್ಯಾರ್ಜುನನ ಮಕ್ಕಳಿಂದ ಸಾವನ್ನು ಪಡೆದ ಜಮದಗ್ನಿ ಋಷಿಗಳು, ವಿಶ್ವಾಮಿತ್ರರು ಕಳಿಸಿದ ಕ್ಷುದ್ರ ಶಕ್ತಿಯ ಪ್ರಭಾವದಿಂದ ಹಾಗು ವಸಿಷ್ಠರಿಂದ ಶಾಪ ಪಡೆದ ಕಲ್ಮಾಷಪಾದನಿಂದ ಸಾವನ್ನಪ್ಪಿದ ಶಕ್ತಿ ಋಷಿಗಳು, ಇಂಥಾ ತಪೋನಿಧಿಗಳಾದ, ಮಹನೀಯರಿಗೂ ಅಪಮೃತ್ಯು ಬರುವುದು ಹೇಗೆ? ಅವರು ತಮ್ಮ ತಪಸ್ಸಿನಿಂದಲೇ ಅತಿಶಯವಾಗಿ ಅಯುಷ್ಯಾಭಿವೃದ್ಧಿಯಾಗಿರುತ್ತದೆಯಲ್ಲವೇ? ಅವರ ತಪೋಶಕ್ತಿ ಅವರ ಅಪಮೃತ್ಯುವನ್ನು ಪರಿಹರಿಸಲು ಸಾಧ್ಯವಿಲ್ಲವೇ? ದಯಮಾಡಿ ತಿಳಿಸಿ ಆಚಾರ್ಯರೇ 🙏🙏

  Vishnudasa Nagendracharya

  ಅತ್ಯುತ್ತಮ ಪ್ರಶ್ನೆ. 
  
  ಈ ಪ್ರಶ್ನೆಗೆ ಎರಡು ಉತ್ತರಗಳಿವೆ. 
  
  ಶ್ರೀಮದಾಚಾರ್ಯರು ತಾತ್ಪರ್ಯನಿರ್ಣಯದಲ್ಲಿ ಹೇಳುತ್ತಾರೆ. 
  
  “ತಸ್ಮಿನ್ ಕಾಲೇ ತ್ಯಜ್ಯತೇ ಹಿ ಬಲವದ್ಭಿರ್ವಧಂ ವಿನಾ
  ಅತಿಸಕ್ತಾಸ್ತಪೋಹೀನಾಃ ಕಥಂಚಿನ್ಮೃತಿಮಾಪ್ನುಯುಃ” ಎಂದು. 
  
  ತಪಸ್ಸು ಇಲ್ಲದವರಿಗೆ ಈ ರೀತಿ ಅಪಮೃತ್ಯು ಉಂಟಾಗುತ್ತದೆ, ಸತ್ಯ. ಆದರೆ, ತಪಸ್ಸಿದ್ದ ಮಹಾತ್ಮರೂ ಸಹ ತಮಗಿಂತ ಬಲಿಷ್ಠರಿಂದ ಮರಣವನ್ನು ಹೊಂದುತ್ತಿದ್ದರು. 
  
  ಶಕ್ತಿ ಸಾವನ್ನಪ್ಪಿದ್ದು ವಿಶ್ವಾಮಿತ್ರರ ನಿಮಿತ್ತದಿಂದ. ವಿಶ್ವಾಮಿತ್ರರು ಯೋಗ್ಯತೆಯಲ್ಲಿ ಶಕ್ತಿಋಷಿಗಳಿಗಿಂತ ಅತ್ಯಂತ ಹಿರಿಯರಾದ್ದರಿಂದ ಅವರ ಪ್ರಯತ್ನದಿಂದ ಕಲ್ಮಾಷಪಾದನ ಮುಖಾಂತರ ಅವರಿಗೆ ಸಾವುಂಟಾಯಿತು. 
  
  ಹಾಗೆಯೇ ಜಮದಗ್ನಿಗಳ ಯೋಗ್ಯತೆಗಿಂತ ಕಾರ್ತವೀರ್ಯಾರ್ಜುನರು ತುಂಬ ದೊಡ್ಡವರು. ಪ್ರಹ್ಲಾದರಾಜರ ಸಮಾನ ಯೋಗ್ಯತೆ ಕಾರ್ತವೀರ್ಯಾರ್ಜುನರದು. ಹೀಗಾಗಿ ಬಲವಂತರಿಂದ ದುರ್ಬಲರಿಗೆ ಸಾವುಂಟಾಯಿತು. 
  
  ಎರಡನೆಯ ಕಾರಣ, ಈ ರೀತಿಯಾಗಿ ಸಾವನ್ನಪ್ಪಲೂ ಶಕ್ತಿ, ಜಮದಗ್ನಿಗಳಿಗೆ ಪಾಪವಿರಲೇ ಬೇಕು. ಈ ಜನ್ಮದಲ್ಲಿ ಆ ರೀತಿಯ ಕರ್ಮ ಕಂಡಿಲ್ಲವಾದ್ದರಿಂದ ಹಿಂದಿನ ಜನ್ಮದ ಯಾವುದೋ ಒಂದು ಕರ್ಮ ಅದಕ್ಕೆ ಕಾರಣವಾಗಿರುತ್ತದೆ. 
  
  ಆ ಕರ್ಮ ತಪಸ್ಸಿನಿಂದ ನಾಶವಾಗುವದಿಲ್ಲವೇ ಎಂಬ ಪ್ರಶ್ನೆಗೆ ಮಹಾಭಾರತ ಉತ್ತರ ನೀಡುತ್ತದೆ. 
  
  ಯಾವ ತಪ್ಪನ್ನು ಕುಕರ್ಮವನ್ನು ಮನುಷ್ಯ ಪೂರ್ಣ ದ್ವೇಷ ಅಸೂಯಾಪೂರ್ವಕವಾಗಿ, ಬುದ್ಧಿಪೂರ್ವಕವಾಗಿ ಮಾಡಿರುತ್ತಾನೆಯೋ, ಆ ಕರ್ಮಗಳು ಪ್ರಾಯಶ್ಚಿತ್ತದಿಂದ ನಾಶವಾಗುವದಿಲ್ಲ. ಅನುಭವಿಸಲೇ ಬೇಕು. 
  
  ಉದಾಹರಣೆಗೆ, ನಾವು ದ್ರೌಪದೀ ನಿರ್ಣಯದಲ್ಲಿ ತಿಳಿದಿರುವಂತೆ ಪಾರ್ವತೀ ಮುಂತಾದ ಸ್ತ್ರೀಯರು ಬುದ್ಧಿಪೂರ್ವಕವಾಗಿ ಅನೇಕ ಬಾರಿ ತಪ್ಪು ಮಾಡುತ್ತಾರೆ. ಬ್ರಹ್ಮದೇವರಿಂದ ಶಾಪ ಬಂದ ಬಳಿಕ ಮಾಡಿದ ತಪ್ಪಿನ ಎಚ್ಚರವಾಗುತ್ತದೆ. ಅವರು ಒಂದು ಸಾವಿರ ವರ್ಷ ತಪಸ್ಸು ಮಾಡಿ ಭಾರತೀ ದೇವಿಯನ್ನು ತಮ್ಮೊಳಗೆ ನಿಂತು ಅವತರಿಸುವಂತೆ ಪ್ರಾರ್ಥಿಸುತ್ತಾರೆ. ಆ ತಪಸ್ಸಿಗೆ ಅಷ್ಟೇ ಫಲ. ಪಾರ್ವತಿ ಮುಂತಾದವರು ಮಾಡಿದ ಒಂದು ಸಾವಿರ ವರ್ಷದ ತಪಸ್ಸೂ ಕೂಡ ಆ ಪಾಪವನ್ನು ಪರಿಹಾರ ಮಾಡಲಿಲ್ಲ. 
  
  ಹೀಗೆ ಜಮದಗ್ನಿ, ಶಕ್ತಿ ಮುಂತಾದವರು ಪ್ರಾಚೀನ ಜನ್ಮಗಳಲ್ಲಿ ಮಾಡಿದ ಯಾವುದೋ ಒಂದು ಪಾಪದಿಂದ ಈ ರೀತಿಯಾಗಿ ಅಪಮೃತ್ಯುವನ್ನು ಪಡೆಯಬೇಕಾಯಿತು. (ಋಜುದೇವತೆಗಳನ್ನು ಬಿಟ್ಟು ಎಲ್ಲರೂ ಪಾಪಗಳನ್ನು ಮಾಡಿದವರೆ ಎನ್ನುವದು ಮಧ್ವಸಿದ್ಧಾಂತ)