Prashnottara - VNP124

ಬದುಕಿರುವಾಗಲೇ ಗೋದಾನ ಮಾಡಬಹುದೇ?


					 	

ಮಾತಾ ಪಿತೃಗಳ ಜೀವಿತಾವಧಿಯಲ್ಲಿ ಅವರ ಶ್ರೇಯಸ್ಸಿಗಿಗಾಗಿ ಗೋದಾನ ಮಾಡಬಹುದೇ? — ಶಾಮಸುಂದರ್ ಕಟ್ಟಿ


Play Time: 03:02, Size: 2.24 MB


Download Upanyasa Share to facebook View Comments
13105 Views

Comments

(You can only view comments here. If you want to write a comment please download the app.)
 • Praveen,Manipal

  10:31 PM, 11/07/2021

  Eega gowu siguwudu kasta and brahmanru sakuwu kasta allawe.. haagagi gowina Moulya needidare adu godana da phala niduttadeye? Athawa bere yenu upaya or krama ide dayawittu tilisi
 • Naveen,Bangalore

  2:57 AM , 05/11/2019

  Namasakara gurugalla as u have explained about guodana if father is expired can mother can give guodana
 • Raghu.k,

  3:44 PM , 06/10/2018

  Thande mathu athee iruvaraiyum maavu nama godhanavanu mada bahude

  Vishnudasa Nagendracharya

  Avashyavagi maaDabahudu
 • Vk Venkatesh Babu,Bangalore

  8:05 PM , 27/09/2018

  Is godana to Brahmins or any poor people

  Vishnudasa Nagendracharya

  Go Dana is only to brahmanas. You can get poor peoople cows for their living. that is also shreshtha dharma. But it comes under paropakara not daana.
 • Panduranga,Bangalore

  8:08 AM , 10/08/2018

  CG
 • Prasannasimharao,Bengaluru

  6:05 PM , 12/07/2018

  Naave, (parents ) swatha godana madabahude. Not with d help of children

  Vishnudasa Nagendracharya

  ಅವಶ್ಯವಾಗಿ ಮಾಡಬಹುದು. 
  
  ಮಕ್ಕಳು ಮಾಡುವದಕ್ಕಿಂತ, ನಾವೇ ನಮಗಾಗಿ ಗೋದಾನ ಮಾಡಿಕೊಳ್ಳುವದು ಸಾವಿರ ಪಟ್ಟು ಅಧಿಕ ಪುಣ್ಯ ನೀಡುತ್ತದೆ. 
 • Raghavendra Uppunda,

  4:58 PM , 12/07/2018

  ಧನ್ಯವಾದಗಳು ಆಚಾರ್ಯರೇ, ಸವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ. ನನ್ನ ಅನುಮಾನಗಳೆಲ್ಲ ಪರಿಹಾರವಾಯಿತು.
 • Raghavendra Uppunda,Bangalore

  9:33 PM , 11/07/2018

  ಅಚಾರ್ಯರೇ, ಗೋದಾನ ಮಾಡಲು ಯಾವುದಾದರೂ ನಿಯಮ, ಶಾಸ್ತ್ರ ಅಥವಾ ಆಚರಣೆಯ ಪಾಲನೆ ಮಾಡಬೇಕೆ? ಅಥವಾ ನೇರವಾಗಿ ಯಾರಿಗೆ ಬೇಕಾದರೂ ಗೋದಾನ ಮಾಡಬಹುದೇ? ಉದಾ: ಗೋವಿನ ಸಂತೆಯಲ್ಲಿ ಖರೀದಿಸಿ ಯಾವುದಾದರೂ ಗೋಶಾಲೆಗೆ ಅಥವಾ ರೈತರಿಗೆ ನೇರವಾಗಿ ಕೊಡಬಹುದೇ?

  Vishnudasa Nagendracharya

  ದಾನ ಎನ್ನುವದು ಒಂದು ಪಾರಿಭಾಷಿಕ ಶಬ್ದ. ಶಾಸ್ತ್ರದ ಆದೇಶದ ಅನುಸಾರವಾಗಿ, ಅಥವಾ ಪ್ರಾಯಶ್ಚಿತ್ತ ರೂಪವಾಗಿ, ಅಥವಾ ಕೇವಲ ಪುಣ್ಯ ಸಂಪಾದನೆಗಾಗಿ ನೀಡುವಂತದ್ದು. ಇದಕ್ಕೆ ದೇಶ-ಕಾಲ-ಪಾತ್ರ-ವಸ್ತುಗಳ ನಿಯಮವಿದೆ. 
  
  ದಾನವನ್ನು ಸ್ವೀಕರಿಸುವದನ್ನು ಶಾಸ್ತ್ರ ಬ್ರಾಹ್ಮಣನಿಗೆ ಮಾತ್ರ ಸೀಮಿತಗೊಳಿಸಿದೆ. ಕಾರಣ, ಬ್ರಾಹ್ಮಣ ಹಣ ಸಂಪಾದನೆಯಲ್ಲಿ ತೊಡಗದೆ ಶಾಸ್ತ್ರದ ಅಧ್ಯಯನ ಅಧ್ಯಾಪನಗಳಲ್ಲಿ ತೊಡಗಿಕೊಳ್ಳಬೇಕು. ಉಳಿದವರು ದಾನದ ರೂಪದಲ್ಲಿ ನೀಡುವದನ್ನು ಸ್ವೀಕರಿಸಿ ಜೀವನ ನಡೆಸಬೇಕು. 
  
  ಕನ್ಯಾದಾನ, ಅನ್ನದಾನ, ವಿದ್ಯಾದಾನ, ಅಭಯದಾನ ಇಂತಹುವಗಳಿಗೆ ಕ್ಷತ್ರಿಯ, ವೈಶ್ಯ, ಶೂದ್ರರೂ ಯೋಗ್ಯರು. 
  
  ಗೋದಾನ ಎನ್ನುವದು ಬ್ರಾಹ್ಮಣನಿಗೆ ಮಾತ್ರ. 
  
  ಹಾಗಾದರೆ ಕಷ್ಟದಲ್ಲಿರುವ ಶೂದ್ರನೊಬ್ಬನಿಗೆ ಹಸುವನ್ನು ನೀಡಬಾರದೇ, ಎಂದರೆ ಅವಶ್ಯವಾಗಿ ನೀಡಬೇಕು. ಅದು ಪರೋಪಕಾರ ಮತ್ತು ಸಹಾಯ ಎಂಬ ಧರ್ಮದ ವರ್ಗದಲ್ಲಿ ಸೇರುತ್ತದೆ. ದಾನದ ವರ್ಗದಲ್ಲಿ ಸೇರುವದಿಲ್ಲ. 
  
  ವೈತರಣಿ ನದಿಯನ್ನು ದಾಟಬೇಕು ಎಂಬ ಅಪೇಕ್ಷೆ ಉಳ್ಳ ವ್ಯಕ್ತಿ, ವಿಷ್ಣುಭಕ್ತನಾದ ಬ್ರಾಹ್ಮಣನಿಗೆ ಗೋದಾನವನ್ನು ಮಾಡತಕ್ಕದ್ದು. 
  
  ಒಬ್ಬ ಬಡ ವ್ಯಕ್ತಿಯ ಜೀವನವನ್ನು ನಡೆಸಲು ಒಂದು ಗೋವನ್ನು ಕೊಂಡು ನೀಡಿದರೆ ಮಹತ್ತರವಾದ ಪುಣ್ಯ ಲಭಿಸುತ್ತದೆ, ಸಂಶಯವಿಲ್ಲ. ಆದರೆ ಅದು ದಾನವಾಗುವದಿಲ್ಲ. 
  
  ಉದಾಹರಣೆ ಮೂಲಕ ಸ್ಪಷ್ಟಪಡಿಸುತ್ತೇನೆ. 
  
  ಒಬ್ಬ ವ್ಯಕ್ತಿ ತುಂಬ ಹಸಿದಿದ್ದಾನೆ. ಅವನ, ಕುಲ ಗೋತ್ರ ಯಾವುದನ್ನೂ ನೋಡದೆ ಅವನಿಗೆ ಅನ್ನವನ್ನು ನೀಡಿದರೆ ಅದು ಅನ್ನದಾನವಾಗುತ್ತದೆ. 
  
  ಆದರೆ, ಆ ಅನ್ನ ಪರಿಶುದ್ದವಾಗಿ ತಯಾರಾಗಿರಬೇಕು. 
  
  ಹೋಟೆಲಿನಲ್ಲಿ ಊಟ ಮಾಡಿ ಉಳಿದದ್ದನ್ನು ತೆಗೆದುಕೊಂಡು ಹೋಗಿ ಆವಶ್ಯಕವಿರುವವರಿಗೆ ನೀಡುವದು ಪರೋಪಕಾರ. ದಾನವಲ್ಲ. 
  
  ದಾನದಿಂದ ಹೆಚ್ಚು ಪುಣ್ಯವೋ, ಪರೋಪಕಾರದಿಂದ ಹೆಚ್ಚು ಪುಣ್ಯವೋ ಎಂಬ ಪ್ರಶ್ನೆಗೆ ಉತ್ತರ ಅತ್ಯಂತ ಸುಲಭವಿದೆ. 
  
  ದಾನ ನೀಡಿದಾಗ ತೆಗೆದುಕೊಳ್ಳುವ ವ್ಯಕ್ತಿಯ ಅರ್ಹತೆಯ (ವಿಷ್ಣುಭಕ್ತಿ, ಸಜ್ಜನಿಕೆ ಮುಂತಾದವು) ಮೇಲೆ ಫಲ ದೊರೆಯುತ್ತದೆ. ಶ್ರೀಮದಾಚಾರ್ಯರ ತಂದೆಗೆ ಒಬ್ಬರು ಗೋದಾನ ನೀಡುತ್ತಾರೆ. ಅದರಿಂದ ಮುಂದಿನ ಜನ್ಮದಲ್ಲಿ ಜ್ಞಾನ ಪಡೆದು ಮೋಕ್ಷವನ್ನೇ ಅವರು ಪಡೆದರು. ಅಂದರೆ ಗೋದಾನ ಮೋಕ್ಷಕ್ಕೆ ಕಾರಣವಾಗಿ ಮಹತ್ತರ ಫಲವನ್ನು ನೀಡಿತು. ಒಂದು ವೈತರಣಿ ನದಿಯನ್ನು ದಾಟಿಸುವಷ್ಟು ಶಕ್ತಿಯಿರುವ ಗೋದಾನಕ್ಕೆ, ಮಧ್ಯಗೇಹಾರ್ಯರ ಅರ್ಹತೆಯಿಂದ ಸಂಸಾರವನ್ನು ದಾಟಿಸುವ ಸಾಮರ್ಥ್ಯ ಉಂಟಾಯಿತು. 
  
  ಪರೋಪಕಾರದಲ್ಲಿ, ಉಪಕಾರದ ಮಟ್ಟದ ಮೇಲೆ ಪುಣ್ಯ ದೊರೆಯುತ್ತದೆ. ಒಂದು ಸಣ್ಣ ಹುಳು ನೀರಿನಲ್ಲಿ ಬಿದ್ದು ಸಾಯುತ್ತಿರುವಾಗ ಅದನ್ನು ಎತ್ತಿ ಪಕ್ಕದಲ್ಲಿಟ್ಟರೆ ಯಾವ ಯಾವ ಸಾಮಾನ್ಯ ದಾನದಿಂದಲೂ ಪಡೆಯಲಾರದಷ್ಟು ಪುಣ್ಯವನ್ನು ಪಡೆಯುತ್ತೇವೆ. 
  
  ಹೀಗಾಗಿ ಮನುಷ್ಯ ದಾನಶೀಲನೂ ಆಗಬೇಕು. ಪರೋಪಕಾರಿಯೂ ಆಗಬೇಕು. 
  
  
 • Pranesh ಪ್ರಾಣೇಶ,Bangalore

  11:19 PM, 07/07/2018

  ಆಚಾರ್ಯ ಆದರ ಪೂರ್ವಕ ನಮಸ್ಕಾರಗಳು 
  ಗೋದಾನ ವಿವರ ನಿಯಮ ನೀಡಿ
 • Drakshayani,Chikmagalur

  7:30 AM , 07/07/2018

  ಗುರುಗಳ ಪಾದಾರಾವಿಂದಗಳಿಗೆ ನನ್ನ ಅನಂತ ನಮಸ್ಕಾರಗಳು.ನಾವು ಜೀವಂತ ಗೋವುಗಳನ್ನ ದಾನಮಾಡಲು ಸಾದ್ಯಾವಾಗದಿದ್ದಾಗ ಲೋಹದಿಂದ ಮಾಡಿದ ಗೋವುಗಳನ್ನ ದಾನಮಾಡಿದಾಗ ಏನು ಪುಣ್ಯಬರುತ್ತದೆ.

  Vishnudasa Nagendracharya

  ಪ್ರತಿನಿತ್ಯ ಮನೆಯಲ್ಲಿ ಕಾಮಧೇನು, ನಂದಿನಿ, ಸುರಭಿ ಮುಂತಾದ ದೇವಧೇನುಗಳ ಪೂಜೆ ಮಾಡುವವರಿಗೆ ಈ ರೀತಿಯ ಲೋಹದ ಗೋವುಗಳನ್ನು ದಾನ ಮಾಡಬಹುದು. ಅದರಿಂದ ಪ್ರತಿಮಾದಾನದ ಪುಣ್ಯ ಬರುತ್ತದೆ. ಗೋದಾನದ ಪುಣ್ಯ ಬರುವದಿಲ್ಲ.
  
  ಗೋದಾನ ಮಾಡಲು ಸಾಮರ್ಥ್ಯವಿಲ್ಲದವರು ಎಷ್ಟು ಸಾಧ್ಯವೋ ಅಷ್ಟು ಗೋಗ್ರಾಸವನ್ನು ನೀಡಿದಲ್ಲಿ ಗೋದಾನಕ್ಕಿಂತಲೂ ಮಹತ್ತರ ಪುಣ್ಯ ಬರುತ್ತದೆ. 
  
  ದಾನಾತ್ ಶ್ರೇಯೋನುಪಾಲನಮ್ ಎಂದು ಮಾತಿದೆ. ಗೋದಾನಕ್ಕಿಂತಲೂ ಗೋಪಾಲನೆ ಶ್ರೇಷ್ಠವಾದದ್ದು. ಆ ಗೋವುಗಳ ಪಾಲನೆಗೆ ಅತ್ಯವಶ್ಯಕವಾದದ್ದು ಹುಲ್ಲು ಮುಂತಾದ ಗೋವಿನ ಆಹಾರ. 
  
  ಆ ರೀತಿಯಾದ ಆಹಾರವನ್ನು ಗೋವುಗಳಿಗೆ ನೀಡುವದರಿಂದ ಮಹತ್ತರ ಪುಣ್ಯ ಲಭಿಸುತ್ತದೆ. 
  
  ಗೋಗ್ರಾಸದ ಮಹತ್ತ್ವ ಎಷ್ಟೆಂದರೆ, ಶ್ರಾದ್ಧದ ನಿಯಮಗಳು ಅತ್ಯಂತ ಕಠಿಣ, ಶ್ರಾದ್ಧ ಮಾಡದೇ ಇದ್ದಲ್ಲಿ ಬ್ರಾಹ್ಮಣ ಚಂಡಾಲನಾಗುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಶ್ರಾದ್ಧ ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಪಿತೃಗಳು ಪ್ರೀತರಾಗಲಿ ಎಂದು ಗೋವಿನ ಹೊಟ್ಟೆ ತುಂಬುವಷ್ಟು ಹುಲ್ಲು ಆಹಾರ ನೀರನ್ನು ತಂದು ನೀಡಿದರೆ ಸಂಪೂರ್ಣ ಶ್ರಾದ್ಧದ ಫಲ ಬರುತ್ತದೆ. 
  
  ಗೋಗ್ರಾಸವನ್ನು ನೀಡುವದು ಕಷ್ಟವಲ್ಲ. ಹೀಗಾಗಿ ಅವಶ್ಯವಾಗಿ ಗೋವಿನ ದಾನದ ಫಲ ಬಯಸುವ, ಆದರೆ ಗೋದಾನ ಮಾಡಲು ಶಕ್ತಿಯಿಲ್ಲದವರು ಗೋಗ್ರಾಸಕ್ಕಾಗಿ ದಾನವನ್ನು ಮಾಡಬೇಕು. 
 • Prasanna Kumar N S,Bangalore

  10:10 PM, 06/07/2018

  ಮಾಡಬಹುದೆ
 • Prasanna Kumar N S,

  10:09 PM, 06/07/2018

  ಗುರುಗಳೆ,
  ಗೋದಾನ ಉಡುಪಿ ಶ್ರೀಕೃಷ್ಣನ ಪ್ರೀತ್ಯರ್ಥ
 • Prnava,Bellary

  8:18 PM , 06/07/2018

  ಆಚಾರ್ಯರಿಗೆ ನಮಸ್ಕಾರ,
  ನಾವು ಜೀವಂತ ವಾಗಿರುವಾಗಲೇ, ನಮಗಾಗಿ ನಾವು ಗೋದಾನ ಮಾಡಬಹುದಾ?
  ಮಕ್ಕಳು ಮಾಡುವ ಭರವಸೆ ಇಲ್ಲ ದಿರುವಾಗ

  Vishnudasa Nagendracharya

  ಸತ್ತ ಮೇಲೆ ನಮ್ಮ ಮಕ್ಕಳು ನಮಗಾಗಿ ಮಾಡುವ ಗೋದಾನಕ್ಕಿಂತ ನಾವು ನಮಗಾಗಿ ಮಾಡಿಕೊಳ್ಳುವ ಗೋದಾನ ಸಾವಿರ ಪಟ್ಟು ಅಧಿಕ ಪುಣ್ಯ ಬರುತ್ತದೆ. ಹೀಗಾಗಿ ಅವಶ್ಯವಾಗಿ ಮಾಡಿಕೊಳ್ಳಬೇಕು.