Prashnottara - VNP125

ಕೇದಾರನಾಥಕ್ಕೆ ಮಾಧ್ವರು ಏಕೆ ಹೋಗಬಾರದು


					 	

ಶ್ರೀ ಗುರುಭ್ಯೋ ನಮಃ, ಆಚಾರ್ಯರೇ, ವಿನಮ್ರ ಪೂರ್ವಕ ನಮಸ್ಕಾರಗಳು. ಮಾಧ್ವರು ಕೇದಾರನಾಥ ಮತ್ತು ನೇಪಾಳದ ಪಶುಪತಿನಾಥಕ್ಕೆ ಹೋಗಬಾರದೆಂದು ಹಿರಿಯರು ಹೇಳುವದನ್ನು ಕೇಳಿದ್ದೇವೆ. ಇದು ಸತ್ಯವಾ? ಸತ್ಯವಾಗಿದ್ದಲ್ಲಿ ಕಾರಣ ತಿಳಿಸಿ. — ಭಾರ್ಗವ ರಾವ್, ಬೆಂಗಳೂರು. ಆಚಾರ್ಯರಿಗೆ ಸಾಷ್ಟಾಂಗ ಪ್ರಣಿಪಾತಗಳು. ನಾವು ಮಾಧ್ವರು ಯಾವ ಕಾರಣಕ್ಕಾಗಿ ಕೇದಾರ ನಾಥ ದರ್ಶನ ಮಾಡಬಾರದು, ತಿಳಿಸಿ. — ಪವನ್ ಸತ್ಯೇಂದ್ರ


Play Time: , Size: 2.54 MB


Download Article Download Upanyasa Share to facebook View Comments
11253 Views

Comments

(You can only view comments here. If you want to write a comment please download the app.)
 • Vijaya bharathi k b,

  5:29 PM , 20/07/2018

  🙏🙏🙏
 • Sheath Rao,

  4:58 PM , 19/07/2018

  ನಮಸ್ಕಾರ ಆಚಾರ್ಯರಿಗೆ,
  
  ಗೊತ್ತಿಲ್ಲದೆ ಈಗಾಗಲೇ ಕೆದಾರನಾಥಕ್ಕೆ ಹೋಗಿ ಬಂದಿದ್ದರೆ ಏನು ಮಾಡುವುದು ತಿಳಿಸಿ

  Vishnudasa Nagendracharya

  ತಿಳಿದು ಮಾಡುವ ತಪ್ಪಿಗೂ ತಿಳಿಯದೇ ಮಾಡುವ ತಪ್ಪಿಗೂ ತುಂಬ ವ್ಯತ್ಯಾಸವಿದೆ. 
  
  ತಿಳಿಯದೇ ಮಾಡುವ ತಪ್ಪಿಗೆ ಕ್ಷಮೆಯನ್ನು ಬೇಡಿದಾಗ ಭಗವಂತ ಅವಶ್ಯವಾಗಿ ಕ್ಷಮಿಸುತ್ತಾನೆ. 
  
  ರುದ್ರದೇವರ ಸನ್ನಿಧಾನವಿರುವ ಕಾಶಿ, ರಾಮೇಶ್ವರ, ಗೋಕರ್ಣ, ನಂಜನಗೂಡು, ಕುಂಭಕೋಣ ಮುಂತಾದ ಯಾವುದೇ ಕ್ಷೇತ್ರಗಳಿಗೆ ಹೋಗಿ ನಮಸ್ಕಾರಪೂರ್ವಕವಾಗಿ ರುದ್ರದೇವರನ್ನು ಮತ್ತು ಅವರ ಅಂತರ್ಯಾಮಿಯನ್ನು ಪ್ರಾರ್ಥಿಸಿ ಕ್ಷಮೆ ಬೇಡುವದರಿಂದ ದೇವರು ಮನ್ನಿಸುತ್ತಾನೆ. 
  
  ರುದ್ರದೇವರ ಮಾತು ನಮಗೆ ಅಜ್ಞೆ. ಅದನ್ನು ನಾವು ಪಾಲಿಸಲೇ ಬೇಕು. ಮತ್ತೆ ಕೇದಾರನಾಥ ಕ್ಷೇತ್ರಕ್ಕೆ ಹೋಗತಕ್ಕದ್ದಲ್ಲ. ಅವಶ್ಯವಾಗಿ ಆ ಕ್ಷೇತ್ರದ ಸ್ಮರಣೆಯನ್ನು ಮಾಡತಕ್ಕದ್ದು. 
 • Bharateesh vasista,

  2:23 PM , 17/07/2018

  ಗುರುಗಳೇ ನೀವೇ ಗಿರಿಜಾ ಕಲ್ಯಾಣದಲ್ಲಿ ತಿಲೋಸಿದ ಹಾಗೆ, ಶಿವನು ವಿಷ್ಣುವಿನ ಪರಮ ಭಕ್ತ ಹಾಗಿರುವಾಗ, ಇಲ್ಲಿ ಹೇಳಿದ ಹಾಗೆ ಭೀಮ ಮತ್ತು ಶಿವನ ಮದ್ಯ ಸರ್ವೋತ್ತಮತ್ವದ ಬಗ್ಗೆ ಏಕೆ ವಾದವಾಯಿತು, ದಯಮಾಡಿ ತಿಳಿಸಿಕೊಡುವಿರ 🙏🙏
 • Prnava,Bellary

  9:04 PM , 16/07/2018

  ಆಚಾರ್ಯರಿಗೆ ನಮಸ್ಕಾರ, 
  Kashige ಹೋಗಿ ಬರುವಾಗ ಅಲ್ಲಿನ ಗಂಗೆ ನೀರನ್ನು ತಂದು ರಾಮೇಶ್ವರ ದೇವಸ್ಥಾನ ದಲ್ಲಿ ಅಭಿಷೇಕ ಮಾಡಿ, ಹಾಗೂ ರಾಮೇಶ್ವರ ದ ಮರಳನ್ನೂ ಮತ್ತೆ kashige ಹೋಗಿ ಅಲ್ಲಿ ಗಂಗೆ ಯಲ್ಲಿ ಬೆರಗಾಗಬೇಕು ಅಂತಾರೆ,
  ಎ೦ದು ಶಾಸ್ತ್ರ ಸಮ್ಮತ ವಾ?
  ನನಗೆ ತುಂಬಾ ಗೊಂದಲ ಆಗಿದೆ
 • Viswanath,

  7:57 PM , 16/07/2018

  ದಯವಿಟ್ಟು ಪೂಜ್ಯ ಆಚಾರ್ಯರುಗಳು ಸಮಾಜ ಒಂದುಗೂಡಿಸುವ ಮಾಹಿತಿಗಳನ್ನು ಮಾತ್ರ ಪ್ರಚಾರ ಮಾಡಬೇಕೆಂದು ಕೋರುತ್ತೇನೆ. ಇಲದೇ ಹೋದಲ್ಲಿ ರಾಜಕೀಯ ಮಾಡಿದಂತಾಗುತದೆ. ಮಾಧ್ವರು ಕಾಶಿಯಿಂದ ಹಿಂತಿರುಗುವಾಗ ಅಲ್ಲಿಯೇ ಇರುವ ರಾಯರ ಮಠಕ್ಕೆ ಭೇಟಿ ಕೊಟ್ಟು ಪಾಪ ಕಳೆದುಕೊಳ್ಳುವಂತೆ, ಇದು ಆಷಾಡಭೂತಿತನವಲವೆ
 • Jasyashree Karunakar,Bangalore

  12:33 PM, 12/07/2018

  ಗುರುಗಳೆ
  
  ವಾದ ನಡೆದದ್ದು ಕೇದಾರದಲ್ಲಿ. ಆದರೆ, ವಾದದ ವಿಷಯ "ವಿಷ್ಣು ಸವೋ೯ತ್ತಮತ್ತ್ವ ಮತ್ತು ಶಿವಸವೋ೯ತ್ತಮತ್ತ್ವದ" ಕುರಿತಾಗಿ.
  
    ಕ್ಷೇತ್ರದ ಕುರಿತಾಗಿ ಅಲ್ಲ...
  
  ಹಾಗಾದರೆ ಯಾಕೆ ಕ್ಷೇತ್ರದ ವಿಚಾರದಲ್ಲಿ ಶಾಪ ಕೊಟ್ಟದ್ದು?

  Vishnudasa Nagendracharya

  ಬ್ರಾಹ್ಮಣರೂಪದಲ್ಲಿರುವ ರುದ್ರದೇವರಿಗೆ ತಮ್ಮ ವಾದದ ಪರಾಭವದಿಂದ ಸಂಕೋಚವಾಗಿದೆ. ಅದಕ್ಕಾಗಿ ಶಾಪ ನೀಡಿದ್ದಾರೆ. 
  
  ಈ ಸ್ಥಳದಲ್ಲಿ ವಾದ ನಡೆದಿದೆ. ವಿಷ್ಣುಸರ್ವೋತ್ತಮತ್ವವಾದಿಗಳು ಇಲ್ಲಿಗೆ ಬಂದಾಗ ಅದನ್ನು ಸ್ಮರಿಸುತ್ತಾರೆ. ಆಗ ಮತ್ತೆ ಸಂಕೋಚ, ನಾಚಿಕೆಗಳು ಆಗಬಾರದು ಎನ್ನುವ ಕಾರಣಕ್ಕೆ ಇಲ್ಲಿಗೆ ಬರಬಾರದು ಎಂದು ಶಾಪ ನೀಡಿದ್ದು ಯುಕ್ತಿಯುಕ್ತವಾಗಿದೆ. 
  
 • ಪ್ರಮೋದ,ಬೆಂಗಳೂರು

  7:24 PM , 12/07/2018

  ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಆಚಾರ್ಯರೇ 🙏🙏🙏☺
 • Srinath Ramachandra,

  12:41 PM, 12/07/2018

  ಮಾಧ್ವರು ಕೇದಾರಕ್ಕೆ ಹೋಗಬಾರದು ಎಂದು ಮಹಾಭಾರತದಲ್ಲಿ ಅಥವಾ ಮತ್ತೆಲ್ಲಿಯಾದರೂ ಉಲ್ಲೇಖವಿದೆಯೆ (ಭೀಮ-ಪರಮೇಶ್ವರ ವಾದ ಪ್ರಕರಣ)

  Vishnudasa Nagendracharya

  ಕೇದಾರ ಮಾಹಾತ್ಮ್ಯದಲ್ಲಿ ಉಲ್ಲೇಖವಿದೆ ಎಂದು ಬನ್ನಂಜೆ ಗೋವಿಂದಾಚಾರ್ಯರು ಬರೆದಿದ್ದಾರೆ. ನನ್ನ ಕಣ್ಣಿಗೆ ಕಂಡಲ್ಲಿ ಅದನ್ನು ಸವಿವರವಾಗಿ ಪ್ರಕಟಿಸುತ್ತೇನೆ. 
 • ಪ್ರಮೋದ,ಬೆಂಗಳೂರು

  10:03 PM, 11/07/2018

  ನಮಸ್ಕಾರ ಆಚಾರ್ಯರೇ 🙏
      ಶ್ರೀಹರಿಯೇ ಸರ್ವೋತ್ತಮ ಎಂದು ಉಪಾಸಿಸುವ ರುದ್ರದೇವರು ತಾವು ಸರ್ವೋತ್ತಮ ಎಂದು ಪಾಶಾಪತಾಗಮವನ್ನು ಹಿಡಿದು ಯಾಕೆ ವಾದ ನಡೆಸಿದರು? ಅಲ್ಲದೇ, ತಾವೇ ಅಸುರಮೋಹಕ್ಕಾಗಿ ರಚಿಸಿದ ಶಾಸ್ತ್ರವನ್ನು ಭೀಮಸೇನದೇವರು ಪ್ರಮಾಣ ಸಹಿತವಾಗಿ ಖಂಡಿಸಿದಾಗ ನಾಚಿಕೆಯಾಗುವ ಪ್ರಸಕ್ತಿಯೇನಿದೆ? ಕಾರಣ ರುದ್ರದೇವರೇ "ಭಗವದಾಜ್ಞಾನುಸಾರ ಅಸುರರ ಮೋಹಕ್ಕಾಗಿ" ರಚಿಸಿದ ಶಾಸ್ತ್ರ ಅದು.

  Vishnudasa Nagendracharya

  ರುದ್ರದೇವರು ಪಾಶುಪತಾಗಮವನ್ನು ಅಸುರಮೋಹಕ್ಕಾಗಿ ರಚಿಸಿದ್ದು ಸತ್ಯ. 
  
  ಆದರೆ, ರುದ್ರದೇವರಿಗೆ ಅಸುರಾವೇಶದ ಪ್ರಸಕ್ತಿಯೂ ಇರುವದರಿಂದ ಆ ಸಂದರ್ಭದಲ್ಲಿ ಅವರು ಅಸುರಾವೇಶಕ್ಕೊಳಗಾಗಿ ಶಿವಸರ್ವೋತ್ತಮತ್ವವನ್ನು ಒಪ್ಪಿಯೇ ವಾದ ನಡೆಸಿದ್ದರು. 
  
  ಯಾರಿಗೇ ಆಗಲಿ, ತಮ್ಮ ವಾದದ ಖಂಡನೆಯಾದಾಗ ನಾಚಿಕೆಯಾಗುವದು ಸಹಜ.