Prashnottara - VNP127

ಅನಂತಗುಣಪೂರ್ಣತೆಗೂ ಸಕಲಗುಣಪೂರ್ಣತೆಗೂ ಏನು ವ್ಯತ್ಯಾಸ


					 	

ಅನಂತಗುಣಪೂರ್ಣತೆಗೂ ಸಕಲಗುಣಪೂರ್ಣತೆಗೂ ಏನು ವ್ಯತ್ಯಾಸ ಆಚಾರ್ಯರೇ ನಮಸ್ಕಾರಗಳು 🙏 ಭಗವಂತನ ಅನಂತ ಗುಣಗಳಿಗೂ ಸಕಲ ಗುಣಗಳಿಗೂ ಏನು ವ್ಯತ್ಯಾಸ? ಅನಂತ ಅಂದರೆ ಅಂತ್ಯ ಇಲ್ಲದಿರುವುದು ಅಂತ ಅರ್ಥ ನೀಡೋವಾಗ ಸಕಲ ಎಂಬ ಅರ್ಥವೂ ಅಲ್ಲಿ ಸೇರುವುದಿಲ್ಲವೇ? ದಯಮಾಡಿ ತಿಳಿಸಿ ಆಚಾರ್ಯರೇ 🙏 — ಪ್ರಮೋದ, ಬೆಂಗಳೂರು


Play Time: 5 Minutes , Size: 2.53 MB


Download Upanyasa Share to facebook View Comments
4250 Views

Comments

(You can only view comments here. If you want to write a comment please download the app.)
 • siri,bangalore

  11:48 AM, 13/08/2018

  ಗುರುಗಳಿಗೆ ನಮಸ್ಕಾರಗಳು,
  ಭಗವಂತ ಸ್ತೋತಾ,ಅಂದರೆ ತನ್ನಸ್ತುತಿಯನ್ನು ತಾನೇಹಾಗೂತನ್ನಭಕ್ತರ ಸ್ತುತಿಯನ್ನುಮಾಡುವುದು ಯಾಕಾಗಿ ?
  ನಮ್ಮನ್ನ ನಾವೇಹೊಗಳಿಕೊಂಡರೆ ಅದು ಒಂದು ದೋಷವಾಗುವುತ್ತಲ್ಲವಾ,
  ಪರಮಾತ್ಮ ದೋಷದೂರ
  
  2)ರಣಪ್ರಿಯ:
  ಹಿಂಸೆಅಧರ್ಮ,ಯುದ್ದ ಹಿಂಸೆ
  ಇಂತಹ ಯುದ್ದದಲ್ಲಿ ನಿರ್ದೋಷನಾದ ಪರಮಾತ್ಮನಿಗೆ ಹೇಗೆ ಪ್ರಿಯಕರವಾಗಿದೆ

  Vishnudasa Nagendracharya

  ಜೀವರಿಗೆ ದೋಷವಾದದ್ದೆಲ್ಲ ದೇವರಿಗೆ ದೋಷವಾಗಬೇಕು ಎಂಬ ನಿಯಮವಿಲ್ಲ. 
  
  ಪರಸ್ತ್ರೀಗಮನ ಜೀವರಿಗೆ ದೋಷ. ಆದರೆ, ಭಗವಂತ ಕೃಷ್ಣಾವತಾರದಲ್ಲಿ ಗೋಕುಲದ ಗೋಪಪತ್ನಿಯರಿಗೆ ಜಾರನಾದ. ಅದು ಅವನಿಗೆ ದೋಷವೇ ಅಲ್ಲ. 
  
  ಹಾಗೆಯೇ ಆತ್ಮಪ್ರಶಂಸೆ ಎನ್ನುವದು ಜೀವರಿಗೆ ದೋಷ. ಭಗವಂತನಿಗಲ್ಲ. ಭಗವಂತ ತನ್ನನ್ನು ತಾನು ಸ್ತೋತ್ರ ಮಾಡಿಕೊಳ್ಳದಿದ್ದರೆ ನಾವು ಅವನನ್ನು ತಿಳಿಯಲು ಸಾಧ್ಯವೇ ಇಲ್ಲ. ಹೀಗಾಗಿ ಅವನು ತನ್ನನ್ನು ತಾನು ವೇದಗಳಲ್ಲಿ ಸ್ತೋತ್ರ ಮಾಡಿಕೊಳ್ಳುತ್ತಾನೆ, ನಾವು ತಿಳಿಯಲು ಸಾಧ್ಯವಾಗುತ್ತದೆ. ಹಾಗೆಯೇ ಅವನು ನಮ್ಮಲ್ಲಿ ನಿಂತು ತನ್ನನ್ನು ತಾನು ಸ್ತೋತ್ರ ಮಾಡಿಕೊಳ್ಳುತ್ತಾನೆ, ಹೀಗಾಗಿ ನಮ್ಮ ಉದ್ಧಾರ ಸಾಧ್ಯವಾಗುತ್ತದೆ. ಆದ್ದರಿಂದಲೇ ಅವನನ್ನು ಸ್ತೋತಾ ಎನ್ನುತ್ತಾರೆ. 
  
  ಯುದ್ಧ ಎನ್ನುವದು ಅಧರ್ಮವಾದಾಗ ಹಿಂಸೆ. ಧರ್ಮವಾದಾಗ ಹಿಂಸೆಯಲ್ಲ. 
  
  ಉದಾಹರಣೆಗೆ ಅಮಾಯಕರನ್ನು, ದುರ್ಬಲರನ್ನು ದುಷ್ಟರಾದ ಜನರು ಹಿಂಸಿಸುವಾಗ ಅವರೊಡನೆ ಹೋರಾಡಿ ಅವರನ್ನು ಕೊಂದು ದುರ್ಬಲರನ್ನು ರಕ್ಷಣೆ ಮಾಡುವದು ಹಿಂಸೆಯಲ್ಲ. ಮಹತ್ತರ ಭಗವಂತನ ಸೇವೆ. ಇಂತಹ ಧರ್ಮಯುದ್ಧಗಳು ಭಗವಂತನಿಗೆ ಪ್ರಿಯ. ಅದಕ್ಕಾಗಿಯೇ ಅವನು ರಣಪ್ರಿಯ.