Prashnottara - VNP130

ಶಾಕ, ದ್ವಿದಳ ವ್ರತಗಳಲ್ಲಿ ತಿರುಪತಿ ಲಡ್ಡು ಮುಂತಾದ ಪ್ರಸಾದವನ್ನು ತಿನ್ನಬಹುದೇ?


					 	

ಆಚಾರ್ಯರಿಗೆ ವಂದನೆಗಳು. ನಮ್ಮಕ್ಕ ತಿರುಪತಿಯ ಲಡ್ಡು ಪ್ರಸಾದ ತಂದು ಕೊಟ್ಟಿದ್ದಾರೆ. ಶಾಕ ವ್ರತದಲ್ಲಿ ಸ್ವೀಕರಿಸಬಹುದೇ ಎಂಬ ಗೊಂದಲದ ಮದ್ಯದಲ್ಲಿ ಪ್ರಸಾದವಾದ್ದರಿಂದ ಸ್ವೀಕರಿಸಿದ್ದೇನೆ. ತಪ್ಪಾಗಿದ್ದಲ್ಲಿ ಏನು ಮಾಡಬೇಕೆಂದು ತಿಳಿಸಿಕೊಡಿ. - ರಾಘವೇಂದ್ರ. ಸ್ವೀಕರಿಸಬಾರದು. ಶಾಕವ್ರತದಲ್ಲಿ, ದ್ವಿದಳವ್ರತದಲ್ಲಿ, ಅಥವಾ ಯಾವುದೇ ಆಹಾರದ ವ್ರತವನ್ನು ಮಾಡುತ್ತಿರುವಾಗ ಆ ವ್ರತದಲ್ಲಿ ನಿಷಿದ್ಧವಾದ ಪದಾರ್ಥದಿಂದ ತಯಾರಿಸಿದ ಪ್ರಸಾದ ದೊರೆತಾಗ ತಿನ್ನಬಾರದು. ತಿನ್ನುವದರಿಂದ ವ್ರತಭಂಗ ಉಂಟಾಗುತ್ತದೆ. ಆದರೆ ಪ್ರಸಾದವನ್ನು ತಿರಸ್ಕರಿಸಬಾರದು. ಎರಡೂ ಕೈಯಲ್ಲಿ ತೆಗೆದುಕೊಂಡು, ಕಣ್ಣಿಗೊತ್ತಿಕೊಂಡು ತಲೆಯ ಮೇಲಿಟ್ಟುಕೊಂಡು ಗೌರವ ಸಲ್ಲಿಸಬೇಕು. ಗೊತ್ತಿಲ್ಲದೇ ತಿಂದಾಗ, ಅಥವಾ ಬೇರೆಯ ರೀತಿಯಲ್ಲಿ ವ್ರತಭಂಗವಾದಾಗ ಒಂದು ದಿವಸ ಉಪವಾಸ ಮಾಡಿ ದೇವರಿಗೆ 48 ನಮಸ್ಕಾರಗಳನ್ನು ಸಲ್ಲಿಸಬೇಕು. ಏಕಾದಶಿ ವಿಷ್ಣುಪಂಚಕ ಮುಂತಾದ ಉಪವಾಸಗಳಂದೂ ಸಹ ಸರ್ವಥಾ ಯಾವುದೇ ಪ್ರಸಾದ ಸ್ವೀಕರಿಸತಕ್ಕದ್ದಲ್ಲ. - ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
5306 Views

Comments

(You can only view comments here. If you want to write a comment please download the app.)
 • Sree Gopalan,Melbourne

  4:30 PM , 02/08/2021

  Kannada Texts appearing in this app, are unable to be copied. Can you please make it copyable so people unable to read Kannada can benefit by using Google translate. 🙏
 • Sathyanarayan,Bangalore

  12:31 PM, 31/10/2019

  Namaskara acharyare. Vratha illadiruvagaTirupathi ladu sweekara madabahuda.

  Vishnudasa Nagendracharya

  ತಿರುಪತಿಯ ದೇವಸ್ಥಾನದ ಪ್ರಾಕಾರದಲ್ಲಿ ನೀಡುವ ಪ್ರಸಾದವನ್ನು ಅವಶ್ಯವಾಗಿ ಸ್ವೀಕರಿಸಬೇಕು. (ಚಾತುರ್ಮಾಸ್ಯ ಹೊರತು ಪಡಿಸಿ). ಕಾರಣ ಅಲ್ಲಿ ಸಾಕ್ಷಾತ್ ಬ್ರಹ್ಮದೇವರಿಂದ ನೈವೇದ್ಯ ನಡೆಯುತ್ತದೆ. 
  
  ಇನ್ನು ಹೊರಗಡೆ ಮಾರಾಟವಾಗುವ ಲಡ್ಡುಗಳ ಕುರಿತು, ಅದರ ತಯಾರಿಕೆಯ ಕುರಿತು ತುಂಬ ಸಂಶಯವನ್ನು ಇತ್ತೀಚಿನವರು ವ್ಯಕ್ತ ಪಡಿಸುತ್ತಾರೆ. ಅದರ ಸತ್ಯಾಸತ್ಯತೆಯನ್ನು ನಿಶ್ಚಯಿಸಿಕೊಂಡು, ಸಾತ್ವಿಕವಾದ ಕ್ರಮದಲ್ಲಿ ನಿರ್ಮಾಣವಾಗುತ್ತಿರುವ ನಿರ್ಣಯವಾದಲ್ಲಿ ಸ್ವೀಕರಿಸಬಹುದು. 
 • siri,

  8:44 PM , 10/08/2018

  ನಮಸ್ಕಾರ ಗುರುಗಳಿಗೆ
 • siri,bangalore

  8:42 PM , 10/08/2018

  ವೆಂಕಟಾದ್ರೌ ಶುಚಿಕ್ಷೇತ್ರೆ ಅಶುಚಿ ದೋಷೋ ನ ವಿದ್ಯತೇ
  ತಸ್ಮಾದ್ ವೆಂಕಟನಾಥಸ್ಯ ನೈವೇದ್ಯಂ ಗ್ರಾಹ್ಯ ಮುತ್ತಮಂ ಅಂತ ಶಾಸ್ತ್ರಹೇಳಿದೆ ಅಂತ ದೊಡ್ಡವರು ಹೇಳಿದ್ದು ಕೇಳಿ,ಇಲ್ಲಿಯತನಕ ಮುಸುರೆ ಪ್ರಸಾದವನ್ನ ಸ್ವಿಕರಿಸಿದ್ದೇನೆ
  ಆದರೆ ಪ್ರತಿ ಸಲವೂ ತಾಕಲಾಟ,ತಿನ್ನುವುದೊ ಬೇಡವೋ ಅಂತ
 • Srinivasan,

  2:03 PM , 08/08/2018

  vidya nidhi
 • Badareenath,

  12:24 PM, 08/08/2018

  ವ್ರತ ಇಲ್ಲದಿರುವಾಗ ಕ್ಷೇತ್ರಗಳಲ್ಲಿ ಮುಸುರಿಯ ಪ್ರಸಾದ ಸ್ವೀಕರಿಸಬಹುದೇ? ಉದಾಹರಣೆಗೆ ತಿರುಪತಿ ದೇವಸ್ಥಾನ ಒಳಗೆ ಕೊಡುವ ಹುಗ್ಗಿ Pongal ಇತ್ಯಾದಿ..

  Vishnudasa Nagendracharya

  It is a highly debatable issue. Will answer in a seperate article
 • ಪ್ರಮೋದ,ಬೆಂಗಳೂರು

  11:50 AM, 08/08/2018

  ಆಚಾರ್ಯರೇ ನಮಸ್ಕಾರಗಳು 🙏
    ಒಂದು ವೇಳೆ ಏಕಾದಶಿ ಉಪವಾಸವನ್ನು ಆಚರಿಸದೆ ಇರುವ ತುಂಬಾ ಅನಿವಾರ್ಯ ಪ್ರಸಂಗ ಒದಗಿದಾಗ ನೀವು ಹೇಳಿದ ಹಾಗೆ ಒಂದು ದಿವಸ ಉಪವಾಸ ಮಾಡಿ 48 ಬಾರಿ ದೇವರಿಗೆ ನಮಸ್ಕಾರಗಳನ್ನು ಸಲ್ಲಿಸಿದರೆ ಪ್ರಾಯಶ್ಚಿತ್ತರೂಪವಾಗಿ, ಆಗ ಏಕಾದಶಿ ಉಪವಾಸ ಮಾಡದೇ ಇದ್ದದಕ್ಕಾಗಿ ಬಂದ ಪಾಪ ನಾಶವಾಗುತ್ತದೆಯಾ? ಆಚಾರ್ಯರೇ. ದಯವಿಟ್ಟು ತಿಳಿಸಿ 🙏

  Vishnudasa Nagendracharya

  ಪುರಾಣಗಳನ್ನು ಸಂಶೋಧಿಸಬೇಕು
 • Raghavendra,Bangalore

  2:09 PM , 08/08/2018

  ಧನ್ಯವಾದಗಳು ಅಚಾರ್ಯರೇ
 • H. Suvarna Kulkarni,Bangalore

  11:07 AM, 08/08/2018

  ಗುರುಗಳಿಗೆ ಪ್ರಣಾಮಗಳು ನಾವುನಮ್ಮಮನೆ ದೇವರಿಗೆ ಹೊರಟಿದ್ದೇವೆ ಸನ್ನತಿ ಕ್ಷೇತ್ರ ಶ್ರೀ ಲಕ್ಷ್ಮೀ ಚಂದ್ರಲಾಪರಮೇಶ್ವರೀ ದೇವಸ್ಥಾನ ದಲ್ಲಿ ನಾವು ಸವ೯ ಸೇವೆ ಮಾಡುತ್ತೇವೆ ಆದಿನ ಊಟ ಮಾಡಬೇಕಾಗಿದೆ ಆದರೆ ಶಾಕವ್ರತದ ಅಡಿಗೆ ಮಾಡಿರದಿದ್ದಲ್ಲಿ ಏನು ಮಾಡಬೇಕು ದೇವಸ್ಥಾನ ದವರು ಚಾತುರ್ಮಾಸ್ಯ ದ ಅಡಿಗೆ ಇರುವುದಿಲ್ಲ ವೆಂದಾದಲ್ಲಿ ಏನು ಮಾಡಬೇಕು ದಯವಿಟ್ಟು ತಿಳಿಸಿ

  Vishnudasa Nagendracharya

  1. ಶಾಕವ್ರತ ಮುಗಿದ ಮೇಲೆ ಹೋಗಿ ಬನ್ನಿ.2. ಅನಿವಾರ್ಯವಾಗಿ ಹೋಗಲೇ ಬೇಕಾದ ಪರಿಸ್ಥಿತಿಯಲ್ಲಿ ಅನ್ನ ಮೊಸರನ್ನು ಊಟ ಮಾಡಿ ಬನ್ನಿ.