ಘಾತಚತುರ್ದಶಿಯಂದು ಮೃತರಾದವರಿಗೆ ಕಾಲಶ್ರಾದ್ಧ ಹಾಗು ಮಹಾಲಯ ಯಾವಾಗ ಮಾಡಬೇಕು?
ಯಾವ ಮಾಸದ ಯಾವ ತಿಥಿಯಂದು ಮೃತರಾಗಿದ್ದಾರೆಯೋ ಆ ಮಾಸದ ಆ ತಿಥಿಯಲ್ಲಿಯೇ ಮಾಡಬೇಕು. ಏಕಾದಶಿಯಂದು ಮೃತರಾದವರ ತಿಥಿಯನ್ನು ಮಾತ್ರ ದ್ವಾದಶಿಯಂದು ಮಾಡಬೇಕು. ಹೀಗಾಗಿ ಭಾದ್ರಪದ ಕೃಷ್ಣ ಚತುರ್ದಶಿಯಂದು ಮೃತರಾದವರ ಶ್ರಾದ್ಧವನ್ನು ಭಾದ್ರಪದಕೃಷ್ಣ ಚತುರ್ದಶಿಯಂದೇ (ಘಾತಚತುರ್ದಶಿಯಂದೇ ) ಮಾಡಬೇಕು. ಮೂರು ಪಿಂಡಗಳ ಪಾರ್ವಣ ಶ್ರಾದ್ಧ. ಘಾತ ಚತುರ್ದಶಿಯಂದು ಪಕ್ಷ ಮಾಡಬಾರದು, ಕೇವಲ ಅಪಘಾತದಲ್ಲಿ ಮೃತರಾದವರಿಗೆ ಮಾತ್ರ ಮಹಾಲಯ ಮಾಡಬೇಕು ಎಂದು ನಿಯಮ. ಕಾಲಶ್ರಾದ್ಧವನ್ನು ಮಾಡಬಾರದು ಎಂದು ನಿಯಮವಿಲ್ಲ. ಅವರ ಪಕ್ಷವನ್ನು ಅಮಾವಾಸ್ಯೆ, ಮಹಾಭರಣೀ, ಮಧ್ಯಾಷ್ಟಮೀ ಮುಂತಾದ ದಿವಸಗಳಲ್ಲಿ ಮಾಡಬಹುದು. (ನಿಷಿದ್ಧ ದಿವಸಗಳನ್ನು ಹೊರತು ಪಡಿಸಿ) — ವಿಷ್ಣುದಾಸ ನಾಗೇಂದ್ರಾಚಾರ್ಯ