Prashnottara - VNP137

ಏಕಾದಶಿ ದ್ವಾದಶಿಗಳಂದು ಧನುರ್ಮಾಸದ ಆಚರಣೆ ಹೇಗೆ?


					 	

ಪೂಜ್ಯ ಗುರುಗಳಿಗೆ ನಮಸ್ಕಾರಗಳು. ಧನುರ್ಮಾಸದಲ್ಲಿ ಸೂರ್ಯೋದಯಕ್ಕಿಂತ ಮುಂಚೆ ನೈವೇದ್ಯ ಎಂದು ಹೇಳಿದ್ದೀರಿ. ದ್ವಾದಶಿಯಂದೂ ಹಾಗೆಯೇ ಮಾಡಬೇಕಾ? ಹಾಗೆಯೇ ಏಕಾದಶಿಯಂದು ದೇವರಿಗೆ ಮಾತ್ರ ಹುಗ್ಗಿ ಸಮರ್ಪಿಸಲೇಬೇಕಾ? ದಯವಿಟ್ಟು ತಿಳಿಸಿ. — ರಾಘವೇಂದ್ರ ಉಮರ್ಜಿ. ಧನುರ್ಮಾಸದ ನಿಯಮಕ್ಕಿಂತ ಏಕಾದಶಿ ದ್ವಾದಶಿಗಳ ನಿಯಮ ದೊಡ್ಡದು. ಹೀಗಾಗಿ ಯಾವುದನ್ನು ಏಕಾದಶಿ-ದ್ವಾದಶಿಗಳಂದು ಪಾಲಿಸಬಾರದೋ ಅವನ್ನು ಹೊರತು ಪಡಿಸಿ ಉಳಿದ ಧನುರ್ಮಾಸದ ನಿಯಮಗಳನ್ನು ಪಾಲಿಸಬೇಕು. ಏಕಾದಶಿಯಂದು ದೇವರಿಗೆ ಸರ್ವಥಾ ಅನ್ನದ ನೈವೇದ್ಯ ಮಾಡಬಾರದು. ಹೀಗಾಗಿ ಏಕಾದಶಿಯಂದು ಅರುಣೋದಯದ ಪೂಜೆ ಮಾತ್ರ. ಹುಗ್ಗಿಯ ನೈವೇದ್ಯ ಇರುವದಿಲ್ಲ. ದ್ರಾಕ್ಷಿ ಗೋಡಂಬಿ ಮುಂತಾದವನ್ನು ನೈವೇದ್ಯ ಮಾಡಬಹುದು. ದ್ವಾದಶಿಯಂದು ಸೂರ್ಯೋದಯಕ್ಕಿಂತ ಮುಂಚೆ ನೈವೇದ್ಯ ಇರುವದಿಲ್ಲ. ಹೀಗಾಗಿ ಅರುಣೋಯದ ಪೂಜೆಯನ್ನು ಮುಗಿಸಿ ಸೂರ್ಯೋದಯದ ನಂತರ ನೈವೇದ್ಯ-ವೈಶ್ವದೇವ-ಹಸ್ತೋದಕಗಳನ್ನು ಬೇಗನೆ ಮಾಡಿ, ವಿಲಂಬ ಮಾಡದೇ ಪಾರಣೆಯನ್ನು ಮಾಡಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
5901 Views

Comments

(You can only view comments here. If you want to write a comment please download the app.)
 • N H Joshi,Kasbalingsugur

  7:52 PM , 11/01/2021

  ನಿತ್ಯದಂತೆ ಸೂರ್ಯೋದಯ ಸಮಯವೋ ಅಥವಾ ಯಾವ ಸೂರ್ಯೋದಯ ಸಮಯ.

  Vishnudasa Nagendracharya

  ಪ್ರಶ್ನೆ ಅರ್ಥವಾಗಲಿಲ್ಲ. 
  
  ದಿವಸಕ್ಕೆ ಒಮ್ಮೆ ಮಾತ್ರ ಸೂರ್ಯೋದಯ ಆಗುತ್ತದೆ. 
  
  ಯಾವ ಪ್ರದೇಶದಲ್ಲಿ ನಾವು ವಾಸ ಮಾಡುತ್ತಿದ್ದೇವಯೋ ಆ ಪ್ರದೇಶದ ಸೂರ್ಯೋದಯ ನಮಗೆ ಲೆಕ್ಕಕ್ಕೆ ಬರುತ್ತದೆ. 
 • Suraj Sudheendra,Bengaluru

  7:49 PM , 09/01/2021

  ಗುರುಗಳಿಗೆ ನಮಸ್ಕಾರಗಳು. ಏಕಾದಶೀ ದ್ವಾದಶಿ ಗಳ ನಿಯಮ ದೊಡ್ಡದು ಎಂಬುದಕ್ಕೆ ಪ್ರಮಾಣ ತಿಳಿಸಬೇಕಾಗಿ ಸವಿನಯ ಪ್ರಾರ್ಥನೆ. ಇದು ಜಿಜ್ಞಾಸೆ. ತಪ್ಪ್ಪಿದ್ದರೆ ದಯಮಾಡಿ ಕ್ಷಮಿಸಿ.
 • Sathyanarayan,Bangalore

  6:52 PM , 14/12/2019

  Kannada please gurugalay.
 • RAGHAVENDRA N S,BANGALORE

  8:00 PM , 27/12/2018

  Gurugale, I have heard in udupi Krishna mutt rice is offered to lord Krishna on ekadeshi and it will be given to cow,please advice
 • Chandrika. C. M,Bangalore

  8:27 PM , 22/12/2018

  ಗುರುಗಳಿಗೆ ವಂದನೆಗಳು 🙏 🙏 *ಶಾಬರವೃತ್ತಿ, ಶಾಬರ ಮಂತ್ರಗಳು* ಅಂದ್ರೆ ಏನು /ಯಾವುವು ಅವು? ದಯಮಾಡಿ ತಿಳಿಸಿ
 • ಪ್ರಮೋದ,ಬೆಂಗಳೂರು

  9:59 PM , 19/12/2018

  ತಿಳಿಸಿದಕ್ಕೆ ಅನಂತಾನಂತ ಧನ್ಯವಾದಗಳು ಆಚಾರ್ಯರೇ🙏🙏🙏