Prashnottara - VNP138

ಶ್ರೀ ಲಕ್ಷ್ಮೀಕಾಂತತೀರ್ಥರ ಚರಮಶ್ಲೋಕದ ಅರ್ಥ


					 	

ನಮಸ್ಕಾರ. लक्ष्मीकान्तगुरुं वन्दे लक्ष्मणार्यमहं सदा। रक्षितान् स्वेन कुर्वाणं लक्ष्मीशान् भिक्षुकानपि।। अहं भिक्षुकानपि लक्ष्मीशान् कुर्वाणं,सदारक्षितान्, लक्ष्मीकान्तगुरुं वन्दे लक्ष्मणार्यं ಅನ್ವಯದಲ್ಲಿ ಹೇಗೆ ಕೂಡುತ್ತೆ? ಅದರ ಅರ್ಥ ಏನು? केन रक्षितः ಮತ್ತು कः रक्षितः? स्वेन ಅಂದರೆ ಯಾರಿಂದ? ಶ್ಲೋಕಾರ್ಥ ತಿಳಿಸಿ ಅಂತ ಪ್ರಾರ್ಥನ. — ಶ್ಯಾಮ್


Download Article Share to facebook View Comments
3363 Views

Comments

(You can only view comments here. If you want to write a comment please download the app.)
 • ರಾಘವೇಂದ್ರ,ಬೆಂಗಳೂರು

  10:20 PM, 06/08/2019

  ಶ್ರೀ ಲಕ್ಷ್ಮೀಕಾಂತತೀರ್ಥರ ಆರಾಧನೆಯ ಈ ಸಂದರ್ಭದಲ್ಲಿ ಅವರ ಬಗ್ಗೆ ಮಾಹಿತಿ ನೀಡುವ ಒಂದು ಲೇಖನವನ್ನು ಕೊಡಬೇಕೆಂದು ಪ್ರಾರ್ಥಿಸುತ್ತೇನೆ
 • Ritthy G.Vasudevachar,Bengaluru

  6:28 PM , 22/07/2019

  ನಮೋ ನಮಃ| ಆಚಾರ್ಯರೇ, ನಮ್ಮ ಪರಿಚಿತರೊಬ್ಬರು (ಸ್ವಲ್ಪ ಶಾಸ್ತ್ರಪಾಠ ಆಗಿದೆ) ಲಕ್ಷಣಾರ್ಯಂ ಎಂದರೆ ಅದು ಶ್ರೀಗುರುಗಳ ಪೂರ್ವಾಶ್ರಮದ ಹೆಸರು (ಲಕ್ಷ್ಮಣಾಚಾರ್ಯ) ಆಗಿರಬೇಕು ಅಂತ ಬಲವಾಗಿ ನಂಬಿದ್ದಾರೆ

  Vishnudasa Nagendracharya

  ಮೊದಲನೆಯ ಉತ್ತರ — ಪೂರ್ವಾಶ್ರಮದ ಹೆಸರನ್ನು ಚರಮಶ್ಲೋಕದಲ್ಲಿ ಬಳಸುವ ಪದ್ಧತಿ ಸರ್ವಥಾ ಇಲ್ಲ. 
  
  ಎರಡನೆಯ ಉತ್ತರ — ಶ್ರೀ ಲಕ್ಷ್ಮೀಕಾಂತತೀರ್ಥಶ್ರೀಪಾದಂಗಳವರ ಪೂರ್ವಾಶ್ರಮದ ಹೆಸರು ಲಕ್ಷ್ಣಣಾಚಾರ್ಯರು ಎಂದಲ್ಲ. 
  
  ಮೂರನೆಯ ಉತ್ತರ — ಶ್ರೀ ಶೇಷಚಂದ್ರಿಕಾಚಾರ್ಯರ ಗುರುಗಳಾದ ಶ್ರೀಲಕ್ಷ್ಮೀನಾರಾಯಣತೀರ್ಥ ಶ್ರೀಪಾದಂಗಳವರ ಚರಮಶ್ಲೋಕದಲ್ಲಿಯೂ ಲಕ್ಷ್ಮೀನಾರಯಣಮುನಿಂ ಲಕ್ಷಣಾರ್ಯಮಹಂ ಭಜೇ ಎಂದು ಲಕ್ಷಣಾರ್ಯ ಎಂದು ಪ್ರಯೋಗವಿದೆ. 
  
  ಹಾಗೂ ಶ್ರೀ ಲಕ್ಷ್ಮೀನಾಥತೀರ್ಥ ಶ್ರೀಪಾದಂಗಳವರು ತಮ್ಮ ವ್ಯಾಖ್ಯಾನದಲ್ಲಿ ತಮ್ಮ ಗುರುಗಳಾದ ಶ್ರೀ ಲಕ್ಷ್ಮೀವಲ್ಲಭ ತೀರ್ಥ ಶ್ರೀಪಾದಂಗಳವರನ್ನು ಲಕ್ಷಣಾರ್ಯರು ಎಂದು ಕರೆದಿದ್ದಾರೆ. 
  
  ಲಕ್ಷಣಾರ್ಯ ಎಂದರೆ ಲಕ್ಷಣಗಳಿಂದ ಪೂಜ್ಯರು ಎಂದರ್ಥ. ಮಹಾಪುರುಷರ ಲಕ್ಷಣಗಳುಳ್ಳ ಶರೀರದವರು ಎಂದು ತಾತ್ಪರ್ಯ. 
  
  ನಾಲ್ಕನೆಯ ಉತ್ತರ — ತತ್ವನಿರ್ಣಯ ನಂಬಿಕೆಯಿಂದಲ್ಲ. ಆಧಾರಗಳಿಂದ.