Prashnottara - VNP146

ಮಗು ಹುಟ್ಟುವ ಮುನ್ನ ಮಗುವಿಗಾಗಿ ಖರೀದಿ ಮಾಡಬಹುದೇ


					 	

ಆಚಾರ್ಯರಿಗೆ ನಮಸ್ಕಾರಗಳು. ನೀವು ಗರ್ಭಿಣಿಯರ ರಕ್ಷಣೆಗಾಗಿ ಮತ್ತು ಸುಖ ಪ್ರಸವಕ್ಕಾಗಿ ಪಠಿಸುವ ಶ್ಲೋಕದ ಬಗ್ಗೆ ಮಾಹಿತಿ ಕೊಟ್ಟರುವುದು ಬಹಳ ಉಪಕಾರ ಆಯಿತು. ಈಗ ಟ್ರೆಂಡ್ ಒಂದು ಇದೆ ಗರ್ಭಿಣಿಯರ ಮನೆಯವರು 7-8 ತಿಂಗಳ ಗರ್ಭ ಇರುವಾಗಲೇ ಮುಂದೆ ಹುಟ್ಟುವ ಮಗುವಿಗೆ ಬೇಕಾದ ವಸ್ತುಗಳನ್ನು ತೊಗಳೋಕೆ ಶುರು ಮಾಡ್ತರೆ ಈರೀತಿ ಮಾಡಬಹುದ? ಒಂದು ಮಾತಿದೆ "ಕೂಸು ಹುಟ್ಟಕ್ಕೆ ಮುಂಚೆ ಕುಲಾವಿ ಹೊಲಿದರು" ಅಂತ ಈ ಬಗ್ಗೆ ನಮ್ಮ ಶಾಸ್ತ್ರ ಏನು ಹೇಳತ್ತೆ?


Play Time: 2:00, Size: 1.8 MB


Download Upanyasa Share to facebook View Comments
2779 Views

Comments

(You can only view comments here. If you want to write a comment please download the app.)
 • Vidyadhar shanbhag,Murdeshwar

  9:48 AM , 18/11/2019

  ಆಚಾರ್ಯರಿಗೆ ನಮಸ್ಕಾರಗಳು..
  ಹಾಗಾದರೆ ಮಹಾಭಾರತದಲ್ಲಿ ಯುಧಿಷ್ಠಿರ ಪರೀಕ್ಷಿತ ಜನಿಸಿದಾಗ ಋಷಿ-ಮುನಿಗಳಿಗೆ ದಾನಾದಿಗಳನ್ನು ಮಾಡಿ, ಅವರಲ್ಲಿ ಜಾತಕದ ಭವಿಷ್ಯವನ್ನು ತಿಳಿದುಕೊಳ್ಳುತ್ತಾನೆ ಅಲ್ಲವೇ...?
  ಅದನ್ನು ಇಲ್ಲಿ ಹೇಗೆ ಕೂಡಿಸುವುದು...?

  Vishnudasa Nagendracharya

  ತತಃ ಸರ್ವಗುಣೋದರ್ಕೇ
  ಸಾನುಕೂಲಗ್ರಹೋದಯೇ
  ಜಜ್ಞೇ ವಂಶಧರಃ ಪಾಂಡೋಃ
  ಭೂಯಃ ಪಾಂಡುರಿವೌಜಸಾ
  
  ಆ ನಂತರ ಎಲ್ಲ ಗುಣಗಳಿಂದ ಕೂಡಿದ, ಗ್ರಹಗಳೆಲ್ಲವೂ ಅನುಕೂಲವಾಗಿದ್ದಾಗ, ಪಾಂಡುವಂಶವನ್ನು ಮುಂದುವರೆಸುವ ಪರೀಕ್ಷಿತರು ಹುಟ್ಟಿದರು. ಪಾಂಡುವೇ ಮತ್ತೊಮ್ಮೆ ಹುಟ್ಟಿಬಂದಂತೆ. 
  
  ತಸ್ಯ ಪ್ರೀತಮನಾ ರಾಜಾ 
  ವಿಪ್ರೈರ್ಧೌಮ್ಯಕೃಪಾದಿಭಿಃ
  ಜಾತಕಂ ಕಾರಯಾಮಾಸ
  ವಾಚಯಿತ್ವಾ ಚ ಮಂಗಲಮ್
  
  ಇದರಿಂದ ಅತ್ಯಂತ ಸಂತುಷ್ಟರಾದ ಯುಧಿಷ್ಠಿರ ಮಹಾರಾಜರು, ಧೌಮ್ಯ ಕೃಪ ಮುಂತಾದ ಬ್ರಾಹ್ಮಣೋತ್ತಮರಿಂದ ಮಂಗಲವನ್ನು ಹೇಳಿಸಿ (ಸ್ವಸ್ತಿವಾಚನ, ಪುಣ್ಯಾಹಗಳನ್ನು ಮಾಡಿಸಿ ಎಂದರ್ಥ) ಜಾತಕವನ್ನು ಬರೆಯಿಸಿದರು. 
  
  ಇಲ್ಲಿ ಪುಣ್ಯಾಹದ ನಂತರವೇ ಜಾತಕ ಬರೆಯಿಸಿದ್ದು ಎಂದು ನಿರ್ಣಯವಾಗುತ್ತದೆ. ಮಗು ಹುಟ್ಟಿದಂದಿನಿಂದ ಹನ್ನೊಂದನೆಯ ದಿವಸವೇ ಪುಣ್ಯಾಹ.