Prashnottara - VNP153

ಸ್ವೋತ್ತಮರು ಎಂದರೆ ಯಾರು


					 	

ಸ್ವೋತ್ತಮ ಎಂಬ ಶಬ್ದಕ್ಕೆ ಅರ್ಥವೇನು, ಯಾರನ್ನು ಸ್ವೋತ್ತಮರು ಎಂದು ಗ್ರಹಿಸಬೇಕು


Play Time: 04:49, Size: 3.40 MB


Download Upanyasa Share to facebook View Comments
2049 Views

Comments

(You can only view comments here. If you want to write a comment please download the app.)
 • Srikar K,Bengaluru

  7:54 AM , 05/12/2019

  Thank you very much Acharyare for providing the detailed elaboration. Tamagu & prashne kelida Vittal avarigu mattomme dhanyavadagalu
 • Vittal Jeevaji,Bangalore

  5:15 PM , 04/12/2019

  ಪೂಜ್ಯ ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು! 
  
  ಲೋಕದಲ್ಲಿ ನಾವು ಬದುಕುವ ಹಾಗೂ ನಮ್ಮ ಮಧ್ಯದಲ್ಲಿರುವ ಅನೇಕ ಜನರುಗಳಲ್ಲಿ ಬಂಧುಗಳಾಗಲಿ ಗೆಳೆಯರಾಗಲಿ ತಂದೆ ತಾಯಿಗಳಾಗಲಿ ಗುರುಗಳಾಗಲಿ ನಮ್ಮ ಸoಪಕ೯ಕ್ಕೆ ಬರುವ ಯಾವುದೇ ವ್ಯಕ್ತಿಗಳಾಗಲಿ ನಮಗೆ ಸ್ವೊತ್ತಮರೋ ಅಥವಾ ಅಲ್ಲವೋ ಎಂಬುದನ್ನು ತಿಳಿಯಲು ಸಾಧ್ಯವೇ? ಏಕೆಂದರೆ ನಮಗೆ ಜೀವ ಸ್ವರೂಪವನ್ನು ತಿಳಿಯಲು ಸಾಧ್ಯವಾಗದಾಗ ನಮ್ಮ ನಡುವೆ ಇರುವ ಜನರು ನಮಗೆ ಸ್ವೋತ್ತಮರೋ ಅಥವಾ ನಾವೇ ಅವರಿಗೆ ಸ್ವೊತ್ತಮಾರೋ ಎಂಬುದನ್ನು ನಮಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಲೋಕದಲ್ಲಿ ನಡೆಯುವ ವ್ಯವಹಾರದ ಆಧಾರದ ಮೇಲೆಯೇ, ಅಂದರೆ ಶಾಸ್ತ್ರೋಕ್ತವಾದ ಅನುಸಂಧಾನ ಹಾಗೂ ಆಚರಣೆಗಳ ಆಧಾರದ ಮೇಲೆ ತೀರ್ಮಾನಿಸಿ ತಿಳಿಯಬೇಕೇ. ಹೀಗೆ ತಿಲಿಯುವಾಗ ನಮ್ಮ ಅಭಿಪ್ರಾಯ ತಪ್ಪಾಗುವ ಸಾಧ್ಯತೆಗಳು ಇರುವುದಿಲ್ಲವೇ.

  Vishnudasa Nagendracharya

  ಮೊದಲಿಗೆ ನಮ್ಮಂತಹ ಸಾಮಾನ್ಯ ಜನರಿಗೆ ಮತ್ತೊಬ್ಬರ ಸ್ವರೂಪವನ್ನು ತಿಳಿಯಲು ಸಾಧ್ಯವಾಗುವದಿಲ್ಲ. 
  
  ಎರಡನೆಯದು — 
  
  ಲೋಕದಲ್ಲಿನ ಸಮಸ್ತ ವ್ಯವಹಾರಗಳೂ ಸಹ ಜೀವಸ್ವರೂಪದ ಯೋಗ್ಯತೆಯನ್ನು ಅನುಸರಿಸಿ ಮಾಡತಕ್ಕದ್ದಲ್ಲ, ಶಾಸ್ತ್ರ ಯಾರನ್ನು ಹಿರಿಯರು, ಕಿರಿಯರು ಎಂದು ವಿಭಾಗ ಮಾಡಿದೆಯೋ ಅದೇ ಕ್ರಮವನ್ನು ಅನುಸರಿಸತಕ್ಕದ್ದು. 
  
  ಉದಾಹರಣೆಗೆ, ಭೀಮಸೇನದೇವರು ವಾಯುದೇವರ ಅವತಾರವಾಗಿದ್ದರೂ, ಅಣ್ಣನಾದ ಧರ್ಮರಾಜರ ಕಾಲುಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಹೊರತು, ನಾನು ವಾಯುದೇವರು, ನೀವು ಸಣ್ಣವರು ಎಂದು ವ್ಯವಹಾರ ಮಾಡುತ್ತಿರಲಿಲ್ಲ. 
  
  ಹಾಗೆಯೇ ಶ್ರೀಮದಾಚಾರ್ಯರು ಅಚ್ಯುತಪ್ರೇಕ್ಷಾಚಾರ್ಯರಿಗೆ ಅಪಾರ ಗೌರವವನ್ನು ಸಲ್ಲಿಸಿದರು. ಅವರನ್ನು ಸೇವೆ ಮಾಡಿ, ಅವರ ಪ್ರೇಮವನ್ನು ಸಂಪಾದಿಸಿ ಅವರಿಂದ ಸಂನ್ಯಾಸವನ್ನು ಪಡೆದರು ಎಂದು ಕೇಳುತ್ತೇವೆ. “ಪ್ರಸಾದ್ಯ ತಂ ದೇವವರ ಪ್ರಸಾದಿತಃ” ಎಂದು. 
  
  ಹೀಗಾಗಿ, ತಂದೆ ತಾಯಿ ಅಣ್ಣ ಅಕ್ಕ ಮುಂತಾಗಿ ನಮಗಿಂತ ವಯಸ್ಸಾದ ಬಂಧುಜ್ಯೇಷ್ಠರಿಗೆ, ವಯಸ್ಸಿನಲ್ಲಿ ಹಿರಿಯರಾದ ಇತರರಿಗೂ ಗೌರವವನ್ನು ಸಲ್ಲಿಸತಕ್ಕದ್ದು. 
  
  ಮೂರನೆಯ ವಿಷಯ — 
  
  ಮನುಷ್ಯನಿಗೆ ಸಾಮಾನ್ಯವಾಗಿ ಸ್ವಲ್ಪ ಜ್ಞಾನ ಬಂದಾಗ, ಆ ತಿಳುವಳಿಕೆ ಇತರ ಹಿರಿಯರಿಗೆ ಇಲ್ಲದಿದ್ದಾಗ, ತಾನು ಮಹಾಚೇತನ ಎಂಬ ಭ್ರಾಂತಿ ಬರುವ ಸಾಧ್ಯತೆಗಳಿರುತ್ತವೆ. ತಂದೆ ತಾಯಿಗಳಿಗೆ ನಮಸ್ಕಾರ ಮಾಡದ, ಊಟ ಮಾಡುವಾಗ ತಂದೆಯನ್ನು ತನ್ನ ನಂತರ ಕೂಡಿಸುವ ಭ್ರಾಂತ ಪಂಡಿತರನ್ನೂ ನಾನು ಕಂಡಿದ್ದೇನೆ. 
  
  ಅದು ಸರ್ವಥಾ ತಪ್ಪು. ಸಂಬಂಧ, ವಯಸ್ಸು ಮುಂತಾದವುಗಳಲ್ಲಿ ಹಿರಿಯರಾದವರಿಗೆ ಅವಶ್ಯವಾಗಿ ಗೌರವವನ್ನು ಸಲ್ಲಿಸಲೇಬೇಕು. 
  
  ವಯಸ್ಸಿನಲ್ಲಿ ಹಿರಿಯರಾದ ಎಲ್ಲರನ್ನೂ ಸ್ಲೋತ್ತಮರು ಎಂದು ಕರೆಯಬೇಕಾಗಿಲ್ಲ, ಆದರೆ, ಗೌರವಕ್ಕೆ ಪಾತ್ರರವರು ಎನ್ನುವದನ್ನು ಮರೆಯತಕ್ಕದ್ದಲ್ಲ.