(You can only view comments here. If you want to write a comment please download the app.)
Srihari,Bengaluru
10:58 AM, 20/03/2020
ಆಚಾರ್ಯರೆ, ಇಂತಹ ಉಪದೇಶದ ಐತಿಹ್ಯ ಯಥಾವತ್ತಾಗಿ ಶ್ರೀ ನರಹರಿ ತೀರ್ಥರಿಂದ ಶ್ರೀ ವಿದ್ಯಾರತ್ನಾಕರ ತೀರ್ಥರ ಮುಖಾಂತರ ಶ್ರೀ ವಿದ್ಯಾವಾರಿಧಿ ತೀರ್ಥರ ವರೆಗೆ ತಲುಪಿ, ಇಷ್ಟು ಗಹನವಾಗಿ, ಶಾಸ್ತ್ರೀಯವಾಗಿ ಉಳಿಯಬೇಕು ಎಂದರೆ ಪರಂಪರೆಯಲ್ಲಿ ಇನ್ನೆಷ್ಟು ಸಾಂಪ್ರದಾಯಿಕ ವಿಷಯಗಳು ಇವೆಯೊ ಎಂದು ಆಶ್ಚರ್ಯ ಆಗುತ್ತದೆ.
ಈ ಮಂಗಳಕರವಾದ ಗ್ರಂಥವನ್ನು ಓದಿ ತಿಳಿಯಬೇಕು ಎಂದು ಆಸೆ ಇದೆ. ದಯಮಾಡಿ ಶ್ರೀಗುರು ಮಾಹಾತ್ಮ್ಯ ಮಂಜರೀ ಪುಸ್ತಕವನ್ನು ಹೇಗೆ ಕಾಣಬಹುದು ಎಂದು ತಿಳಿಸಿರಿ.
Jayashree Karunakar,Bangalore
11:53 AM, 08/01/2020
1. ಪ್ರತಿಮಾಗತ ಅಂದರೇನು ಗುರುಗಳೆ
2. ನಮ್ಮ ಅಂತಯಾ೯ಮಿ ರೂಪ ನಮ್ಮಲ್ಲಿಯೇ ಇರುತ್ತದೆ ...ನಾವು ಮಾಡುವ ನೈವೇದ್ಯದಲ್ಲಿ ಹೇಗೆ ಬರುತ್ತದೆ ?
Vishnudasa Nagendracharya
ಪ್ರತಿಮಾಗತ ಎಂದರೆ ಪ್ರತಿಮೆಯಲ್ಲಿರುವ ಎಂದರ್ಥ. ಪ್ರತಿಮಾಗತ ರೂಪ ಎಂದರೆ ಪ್ರತಿಮೆಯಲ್ಲಿರುವ ರೂಪ.
ನಾವು ನೈವೇದ್ಯ ಮಾಡುವ ಪದಾರ್ಥಗಳಲ್ಲಿರುವ ರೂಪ, ನಾವು ಅರ್ಚಿಸುವ ಪ್ರತಿಮೆಯಲ್ಲಿರುವ ರೂಪ, ಮತ್ತು ನಮ್ಮಲ್ಲಿರುವ ಅಂತರ್ಯಾಮಿಯ ರೂಪ ಈ ಮೂರು ರೂಪಗಳ ಅಭೇಧ ಚಿಂತನೆಯೇ ನೈವೇದ್ಯ.
ಶ್ವೇತದ್ವೀಪದಲ್ಲಿರುವ ಶೇಷಶಯನನೇ ರಾಮ, ಕೃಷ್ಣನಾಗಿ ಅವತರಿಸಿ ಬಂದ ಎಂದರೆ ಶ್ವೇತದ್ವೀಪದಲ್ಲಿ ರೂಪ ಇಲ್ಲ ಎಂದಲ್ಲ. ಭಗವಂತ ಒಂದೇ ಕಾಲದಲ್ಲಿ ಒಂದೇ ರೂಪದಿಂದ ಅನಂತ ಪ್ರದೇಶಗಳಲ್ಲಿ ಇರಬಲ್ಲ. ಶ್ವೇತದ್ವೀಪದಲ್ಲಿಯೂ ಇದ್ದಾನೆ, ಭೂಮಿಯಲ್ಲಿಯೂ ಅವತರಿಸಿದ್ದಾನೆ.
ಹಾಗೆ ನಮ್ಮ ಅಂತರ್ಯಾಮಿಯನ್ನು ಪ್ರತಿಮೆಯಲ್ಲಿ ಸನ್ನಿಹಿತನಾಗಿ ಬಂದು ಪೂಜೆ ಸ್ವೀಕರಿಸು ಎಂದು ಪ್ರಾರ್ಥಿಸಿದಾಗ ಸ್ವಾಮಿ ಅಂತರ್ಯಾಮಿಯಾಗಿಯೂ ಇರುತ್ತಾನೆ, ಪ್ರತಿಮೆಯಲ್ಲಿಯೂ ಬಂದು ಸನ್ನಿಹಿತನಾಗುತ್ತಾನೆ.
1. ನಾವು ಬಾಳೆಹಣ್ಣೊಂದನ್ನು ದೇವರಿಗೆ ನೈವೇದ್ಯ ಮಾಡಿದಾಗ, ಬಾಳೆಹಣ್ಣು ಇದ್ದೇ ಇರುತ್ತದೆ. ದೇವರು ಸ್ವಾಖ್ಯರಸವನ್ನು ಭೋಗಿಸಿದರೂ ಬಾಳೆಹಣ್ಣು ನಾಶವಾಗುವದಿಲ್ಲ. ಕಾರಣ, ಯಾವ ಸ್ವಾಖ್ಯರೂಪಗಳೂ ನಾಶ ಹೊಂದುವದಿಲ್ಲ. ಸ್ವಾಖ್ಯರೂಪದ ಭೋಗ ಎಂದರೆ ಸ್ವಾಖ್ಯರೂಪ ನಾಶಹೊಂದುವದೂ ಅಲ್ಲ. ಆ ಸ್ವಾಖ್ಯರೂಪದಲ್ಲಿ ಪ್ರತಿಮಾಗತ ಮತ್ತು ನಮ್ಮ ಅಂತರ್ಯಾಮಿಯ ಒಂದು ರೂಪದ ಸನ್ನಿಧಾನ ಬರುವದೇ ಸ್ವಾಖ್ಯರೂಪದ ಭೋಗ.
2. ಹಸ್ತೋದಕವನ್ನು ಒಟ್ಟಿಗೇ ಕಲಿಸಿ ನೀಡುವ ಪದ್ಧತಿ ಮಠಗಳಲ್ಲಿದೆ. ಹಾಗೆ ನೀಡಬೇಕು ಎಂದೇನೂ ಪದ್ಧತಿಯಿಲ್ಲ. ಬಡಿಸುವವರು ತಮ್ಮ ಅನುಕೂಲಕ್ಕೆ ಕಲಿಸುತ್ತಾರಷ್ಟೇ. ಅವಶ್ಯವಾಗಿ ಪ್ರತ್ಯೇಕ ಉಣ್ಣಬಹುದು.
Vikram Shenoy,Doha
12:16 PM, 06/01/2020
ಅತೀ ಉತ್ತಮ ಪ್ರವಚನ. ಆಚಾರ್ಯರಿಗೆ ಕೋಟಿ ಕೋಟಿ ನಮನಗಳು.🙏🙏
Mukund pr,Bangalore
1:08 PM , 03/01/2020
🙏🙏🙏
Mukund pr,Bangalore
12:07 PM, 03/01/2020
Nimma prakara kevala noduvude aadare thappale sametha hastodaka maadabahudalla swalpa thatte yelli haki hastodaka yake maadabeku
Vishnudasa Nagendracharya
ಶ್ರಾದ್ಧದಲ್ಲಿ ಬ್ರಾಹ್ಮಣರು ಉಂಡು ಉಳಿದ ಮತ್ತು ಪಿಂಡಪ್ರದಾನ ಮಾಡಿ ಉಳಿದ ಅನ್ನದಿಂದ ನಾವು ಚಿತ್ರಾಹುತಿ ಇಡುವದಿಲ್ಲ.
ನೈವೇದ್ಯವಾದ ಅನ್ನವನ್ನು ಬಡಿಸಿಕೊಂಡು, ಪರಿಷೇಚನ, ಚಿತ್ರಾಹುತಿ, ಪ್ರಾಣಾಹುತಿ ಅಪೋಶನಗಳನ್ನು ಮಾಡಿ ಊಟ ಆರಂಭವಾದ ಬಳಿಕ ನಾವು ಪಿತೃಶೇಷವನ್ನು ಬಡಿಸಿಕೊಂಡು ಉಣ್ಣುತ್ತೇವೆ.
ಹಾಗೆಯೇ ಯತಿಗಳಿಗೆ ಸಮರ್ಪಿತವಾದ ಹಸ್ತೋದಕದಿಂದಲೂ ನಾವು ಚಿತ್ರಾಹುತಿಯನ್ನು ಇಡುವದಿಲ್ಲ, ಪ್ರಾಣಾಹುತಿಗಳನ್ನು ಸ್ವೀಕರಿಸುವದಿಲ್ಲ. ಊಟಕ್ಕೆ ಕುಳಿತ ಬಳಿಕ ಅದನ್ನು ಸ್ವೀಕರಿಸುತ್ತೇವೆ.
ದೊಡ್ಡ ತಪ್ಪಲೆಯಲ್ಲಿರುವ ಅನ್ನವನ್ನೇ ಹಸ್ತೋದಕ ಮಾಡಿದರೆ, ಅದನ್ನು ಮೊದಲಿಗೆ ಚಿತ್ರಾಹುತಿಗಾಗಿ ಬಡಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ತಪ್ಪಲೆಯಲ್ಲಿ ಮಾಡುವದಿಲ್ಲ.
ಎಲ್ಲರಿಗೂ ಸಮೃದ್ಧವಾಗಿ ಬಡಿಸಲು ಬೇಕೆಂಬ ಕಾರಣಕ್ಕೆ ತಪ್ಪಲೆಗಳಲ್ಲಿ ಅನ್ನ ಪಾಯಸಗಳನ್ನು ಹಸ್ತೋದಕ ಮಾಡಲು ಏನೂ ತೊಂದರೆಯಿಲ್ಲ. ಆದರೆ ಊಟದ ಮಧ್ಯದಲ್ಲಿಯೇ ಬಡಿಸಬೇಕು. ಮೊದಲಿಗೆ ಬಡಿಸಲಿಕ್ಕೆ ಹಸ್ತೋದಕವಲ್ಲದ ಕೇವಲ ನೈವೇದ್ಯದ ಅನ್ನ ಇರಬೇಕಷ್ಟೆ.