Prashnottara - VNP167

ಮಲತಾಯಿ ಇದ್ದರೆ ತಾಯಿಯ ಶ್ರಾದ್ಧ ಮಾಡಬಾರದೇ?


					 	

ತಾಯಿ ಮೃತಳಾಗಿದ್ದು ತಂದೆ ಮತ್ತು ಮಲತಾಯಿ ಇದ್ದರೆ ತಾಯಿಯ ಶ್ರಾದ್ಧವನ್ನು ಮಗನು ಮಾಡಬಹುದೇ? ಅವಶ್ಯವಾಗಿ ಮಾಡಲೇಬೇಕು. ತಂದೆ ತಾಯಿಗಳ ಅಂತ್ಯಸಂಸ್ಕಾರದಲ್ಲಿ ಮತ್ತು ಶ್ರಾದ್ಧದಲ್ಲಿ ಮುಖ್ಯ ಅಧಿಕಾರ ಇರುವದು ಮಗನಿಗೆ. ಒಂದು ಗಂಡು ಮಗು ಹುಟ್ಟಿದ ತಕ್ಷಣ ತಾಯಿಯೋ ತಂದೆಯೋ ಸತ್ತು ಹೋಗಿದ್ದಾರೆ ಎಂದಿಟ್ಟುಕೊಳ್ಳಿ. ಮಗುವಿಗೆ ಏನೂ ತಿಳಿದಿರುವದಿಲ್ಲ. ಮತ್ತೊಬ್ಬ ಯಾರೋ ಬಾಂಧವರು ಅಂತ್ಯಸಂಸ್ಕಾರ ಮಾಡುತ್ತಿರುತ್ತಾರೆ. ಆದರೂ ಮಗುವನ್ನೇ ಶ್ಮಶಾನಕ್ಕೆ ಕರೆದೊಯ್ದು ಅದರ ಕೈಯಿಂದಲೇ ಅಗ್ನಿಸ್ಪರ್ಶವನ್ನು ಮಾಡಿಸಬೇಕು. ಇನ್ನು ಗಂಡುಮಗುವಿಗೆ ಉಪನಯನವಾಗದಿದ್ದರೂ, ತಂದೆ ತಾಯಿಗಳಲ್ಲಿ ಯಾರಾದರೂ ತೀರಿಹೋದರೆ ಅವರ ಅಂತ್ಯಸಂಸ್ಕಾರವನ್ನು ಮಂತ್ರಪುರಸ್ಸರವಾಗಿ ಮಾಡುವ ಅಧಿಕಾರ ಉಪನಯನವಾಗದ ಮಗನಿಗೂ ಇರುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ. ಇದೆಲ್ಲದರ ತಾತ್ಪರ್ಯ — ತಂದೆ ತಾಯಿಗಳ ಅಂತ್ಯಸಂಸ್ಕಾರ ಮತ್ತು ಶ್ರಾದ್ಧದ ಮುಖ್ಯ ಅಧಿಕಾರ ಇರುವದು ಮಗನಿಗೇನೇ. ಹೀಗಾಗಿ ಮಲತಾಯಿ ಇರಲಿ, ಇಲ್ಲದಿರಲಿ ತಾಯಿಯ ಶ್ರಾದ್ಧವನ್ನು ಮಗ ಅವಶ್ಯವಾಗಿ ಮಾಡಲೇಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
1743 Views

Comments

(You can only view comments here. If you want to write a comment please download the app.)
 • Ramakanth,Ballari

  10:27 AM, 13/01/2020

  ಆಚಾರ್ಯರೇ ನಮಸ್ಕಾರ .ಇಬ್ಬರು ಹೆಂಡತಿ ಇದ್ದ ವಿಷಯದಲ್ಲಿ ಹೆತ್ತ ತಾಯಿ ಇರುವಾಗ ಇನ್ನೊಬ್ಬ ತಾಯಿ ಹೋದರೆ (ಅವರಿಗೇ ಗಂಡುಮಕ್ಕಳಿಲ್ಲ ) ಆಗ ತಾಯಿ ಇರುವ ಮಗನ ಕರ್ತವ್ಯ ತಿಳಿಸಿ .
 • Pranesh,Bangalore

  9:52 AM , 09/01/2020

  ಶಾಸ್ತ್ರಗಳ ಮುಖಾಂತರ ಭಗವಂತನಿಗೆ ನಮ್ಮ ಮೇಲಿನ ಕಾರುಣ್ಯ ಸುಸ್ಪಷ್ಟವಾಗಿ ನಮಗೆ ತಿಳಿಯುತ್ತದೆ