Prashnottara - VNP169

ರಾಮನಾಮ ವಿಷ್ಣುಸಹಸ್ರನಾಮಕ್ಕೆ ಸಾಟಿಯೇ?


					 	

“ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ” ಎಂಬ ವಾಕ್ಯವನ್ನಿಟ್ಟುಕೊಂಡು ಅನೇಕ ಜನ ರಾಮನಾಮವು ವಿಷ್ಣುಸಹಸ್ರನಾಮಕ್ಕೆ ಸಮ ಎಂದು ಹೇಳುತ್ತಾರೆ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ. ರಾಮನಾಮ ವಾಸುದೇವಸಹಸ್ರನಾಮಕ್ಕೆ ಸಮವಾದದ್ದು. ವಿಷ್ಣುಸಹಸ್ರನಾಮಕ್ಕಲ್ಲ. ಈ ವಿಷಯದ ಕುರಿತ ಚರ್ಚೆ ಇಲ್ಲಿದೆ. ರಾಮನಾಮವು ಸಹಸ್ರನಾಮಕ್ಕೆ ಸಾಟಿಯಾಗಿದ್ದರೆ, ಸಹಸ್ರನಾಮ ಯಾಕೆ ಬೇಕು? ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ ವಾಸುದೇವಸಹಸ್ರನಾಮದ ವೈಶಿಷ್ಟ್ಯ ಹಾಗೂ ವಿಷ್ಣುಸಹಸ್ರನಾಮ, ಭಗವದ್ಗೀತೆಗಳ ಅದ್ಭುತ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ, ಸಹಸ್ರ ಎಂಬ ಶಬ್ದದ ಅರ್ಥಾನುಂಸಂಧಾನದೊಂದಿಗೆ.


Play Time: 18:39, Size: 1.37 MB


Download Upanyasa Share to facebook View Comments
5875 Views

Comments

(You can only view comments here. If you want to write a comment please download the app.)
 • Anu,Bangalore

  7:13 AM , 11/06/2022

  ಪ್ರೆಶ್ನೆಯನ್ನೂ ನೀವೇ ಹೇಳಿ ಕೊಟ್ಟು ಉತ್ತರವನ್ನೂ ನೀವೇ ಹೇಳುತ್ತೀರಿ...ಈ ವೇದಿಕೆಯೊಂದು ಅದ್ಭುತವಾದ ರೀತಿಯಲ್ಲಿ ನಮ್ಮ ಸಂಶಯಗಳನ್ನು ಹಾಗೂ ಮಂದೆ ಬರ ಬಹುದಾದ ಸಂಶಯಗಳನ್ನೂ ತಿಳಿಸಿ ,ಅವುಗಳನ್ನು ನಿವಾರಿಸಿ ಪ್ರಮೇಯಾರ್ಥವನ್ನು ಮನದಟ್ಟು ಮಾಡಿದೆ... ಅನಂತ ನಮನಗಳು...
 • Tirtharaj Das,Hubli Dharwad

  1:31 PM , 23/08/2020

  Hare Krishna Prabhu dandavat pranam prabhu please mention that any Slokas comes from which Purana and also sloka bomber also that is very important for divotees
 • M V Lakshminarayana,Bengaluru

  4:12 PM , 19/08/2020

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  ಪಾರ್ವತಿ, ಕೇನೋಪಾಯೇನ ಲಘುನಾ ವಿಷ್ಣೋರ್ನಾಮ ಸಹಸ್ರಕಮ್ ಎಂದು ಈಶ್ವರನನ್ನು ಕೇಳಿದಾಗ, ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ಎಂದು ಉತ್ತರ ಕೊಡುತ್ತಾನೆ. ಇದನ್ನು ದಶಕಗಳಿಂದ ಹೇಳಿಕೊಂಡು ಬಂದಿದ್ದೇವೆ. ಎಲ್ಲ ವಿಷ್ಣು ಸಹಸ್ರನಾಮದ ಪುಸ್ತಕದಲ್ಲೂ ಹೀಗೇ ಮುದ್ರಿತ ವಾಗಿದೆ. ಹಾಗಾದರೆ ಇದು ತಪ್ಪೇ? ವಾಸುದೇವನಿಗೂ ರಾಮನಿಗೂ ಬೇಧವಿದೆಯೇ?
  ಇಂತಿ ನಮಸ್ಕಾರಗಳು

  Vishnudasa Nagendracharya

  ವಾಸುದೇವನಿಗೂ ರಾಮನಿಗೂ ಭೇದ ಸರ್ವಥಾ ಇಲ್ಲ. ಭಗವಂತನ ಯಾವುದೇ ರೂಪಕ್ಕೂ ಭೇದವಿಲ್ಲ. ಆದರೆ, ವಿಶೇಷವಿದೆ. 
  
  ನಾವು ಸೀತಾಪತಿ ರಾಮಚಂದ್ರ ಎನ್ನುತ್ತೇವೆಯೇ ಹೊರತು, ಸೀತಾಪತಿ ಶ್ರೀಕೃಷ್ಣ ಅಥವಾ ರುಗ್ಮಿಣೀಪತಿ ರಾಮ ಎನ್ನುವದಿಲ್ಲ. 
  
  
  ಇನ್ನು ರಾಮನಾಮ ಮತ್ತು ಸಹಸ್ರನಾಮಗಳ ಕುರಿತ ವಿಷಯ — 
  
  ವಿಷ್ಣುಸಹಸ್ರನಾಮ, ವಾಸುದೇವಸಹಸ್ರನಾಮ ಮುಂತಾದವು ಸ್ತೋತ್ರಗಳು. ಅವು ಶ್ರೀಹರಿಯ ಸ್ತೋತ್ರಗಳೇ ಆದರೂ ಪರಸ್ಪರ ಭೇದವಿದೆ. ಭಗವದ್ಗೀತೆಗೂ ಭಾಗವತಕ್ಕೂ ಭೇದ ಇರುವಂತೆ. ಭೇದವಿದ್ದಲ್ಲಿ ತಾರತಮ್ಯವೂ ಇರುತ್ತದೆ. 
  
  ವಿಷ್ಣುಸಹಸ್ರನಾಮ ಸರ್ವೋತ್ತಮವಾದ ಸ್ತೋತ್ರ. ವಾಸುದೇವಸಹಸ್ರನಾಮ ಪುರಾಣಗಳಿಗೆ ಸಮವಾದ ಸ್ತೋತ್ರ. 
  
  ಉಪನ್ಯಾಸದಲ್ಲಿ ತಿಳಿಸಿರುವಂತೆ ಸಹಸ್ರನಾಮ ತತ್ತುಲ್ಯಂ ಎನ್ನುವದು ವಾಸುದೇವಸಹಸ್ರನಾಮದಲ್ಲಿ ಬಂದಿರುವದು. ಹೀಗಾಗಿ ರಾಮನಾವು ವಾಸುದೇವಸಹಸ್ರನಾಮದ ಫಲವನ್ನು ನೀಡುತ್ತದೆ. ಅಲ್ಲಿ ವಿಷ್ಣುಸಹಸ್ರನಾಮದ ಪ್ರಸಕ್ತಿಯೇ ಇಲ್ಲ. 
  
  ಇನ್ನು, ವಿಷ್ಣುಸಹಸ್ರನಾಮದ ಕಡೆಯಲ್ಲಿ ಹೇಳುತ್ತಿರುವ ಶ್ಲೋಕದ ಕುರಿತು. ಆ ಶ್ಲೋಕ ಯಾವ ಮೂಲಗ್ರಂಥಗಳಲ್ಲಿಯೂ ಇಲ್ಲ. ಇತ್ತೀಚಿಗೆ ಸೇರ್ಪಡೆಯಾದದ್ದು. 
  
  ಕಟ್ಟ ಕಡೆಯ ಮಹತ್ತ್ವದ ಮಾತು — ರಾಮನಾಮವೂ ಮೋಕ್ಷ ನೀಡುತ್ತದೆ, ವಿಷ್ಣುಸಹಸ್ರನಾಮವೂ ಮೋಕ್ಷ ನೀಡುತ್ತದೆ, ವಾಸುದೇವಸಹಸ್ರನಾಮವೂ ಮೋಕ್ಷ ನೀಡುತ್ತದೆ. ಆದರೆ ಅವು ನೀಡುವ ಮೋಕ್ಷಗಳಲ್ಲಿ ತಾರತಮ್ಯವಿರುತ್ತದೆ. ಆದರೆ ಮೋಕ್ಷ ನೀಡುವ ನಾಮ ಎನ್ನುವ ದೃಷ್ಟಿಯಿಂದ ಅವು ಸಮಾನ. 
  
  ವರ್ಣಹೀನರಾದವರು ಕೇವಲ ರಾಮನಾಮದಿಂದಲೇ ಮುಕ್ತರಾಗುತ್ತಾರೆ. ಅವರಿಗೆ ಉಳಿದ ಯಾವುದೇ ಸ್ತೋತ್ರ, ಗ್ರಂಥಗಳ ಆವಶ್ಯಕತೆಯಿಲ್ಲ. 
  
  ಕೆಲವರು ಪುರಾಣಾದಿಗಳ ಅಧ್ಯಯನದಿಂದಲೇ ಮುಕ್ತರಾಗುತ್ತಾರೆ. ರಾಮನಾಮದಿಂದ ಮುಕ್ತಿ ಪಡೆದವರಿಗಿಂತಲೂ ಹೆಚ್ಚಿನ ಆನಂದ ಪಡೆಯುತ್ತಾರೆ. 
  
  ಕೆಲವರು ವಿಷ್ಣುಸಹಸ್ರನಾಮಗಳ ಒಂದು ಅರ್ಥ ತಿಳಿದರೇ ಮುಕ್ತರಾಗುತ್ತಾರೆ. ಇವರ ಮುಕ್ತಿಯಲ್ಲಿ ಆನಂದ ಹಿಂದಿನವರಿಗಿಂತ ಹೆಚ್ಚಿನದು. 
  
  ಹೆಚ್ಚು ಅರ್ಥ ತಿಳಿದು ಉಪಾಸನೆ ಮಾಡುವವರು ಇನ್ನೂ ಹೆಚ್ಚಿನ ಆನಂದ ಪಡೆಯುತ್ತಾರೆ. 
  
  
  
  
 • Ashok Prabhanjan,Bangalore

  4:39 PM , 13/01/2020

  ಗುರುಗಳೇ, ವಿಷ್ಣು ಸಹಸ್ರನಾಮ ಪಠಿಸುವುದಕ್ಕೆ ಪ್ರಧಾನ ನಿಯಮಗಳು ಏನು? ಅಂದರೆ ನಾವು ಮಡಿಯಲ್ಲಿ ಇದ್ದಗಮಾತ್ರ ಪಠಿಸ ಬೇಕಾ ಅಥವಾ travelling ಮಾಡುವಾಗ office ನಲ್ಲಿ ಇರುವಾಗ ಬೇಕು ಅನಿಸಿದಾಗ ಪಠಿಸಬಹುದಾ? 
  ದಯವಿಟ್ಟು ತಿಳಿಸಿ

  Vishnudasa Nagendracharya

  VNP048 ರಲ್ಲಿ ಈಗಾಗಲೇ ಉತ್ತರ ನೀಡಿಯಾಗಿದೆ. 
 • Vikram Shenoy,Doha

  3:09 PM , 13/01/2020

  ಆಚಾರ್ಯರಿಗೆ ಅನಂತ ಕೋಟಿ ವಂದನೆಗಳು. ಅತೀ ಉತ್ತಮ ಪ್ರವಚನ...
 • Vijaya,Hyderabad

  1:51 PM , 13/01/2020

  Thumba chennagi artha helliri... Danyavadagallu... Nima tarha davaru ee samjakke thumba agathya videe 🙏🙏🙏
 • Y V GOPALA KRISHNA,Mysore

  12:24 PM, 13/01/2020

  The misconception prevailed has been cleared to the core...
 • T venkatesh,Hyderabad

  10:59 AM, 13/01/2020

  A very detailed explanation about a prevalent misunderstanding in our society.
 • Santosh Patil,Gulbarga

  10:41 AM, 13/01/2020

  Thanks Gurugale🙏