Prashnottara - VNP170

ಕರ್ಮಗಳು ನಮಗೆ ಅಂಟದಿರಲು ಏನು ಮಾಡಬೇಕು?


					 	

ಗುರುಗಳಿಗೆ ನಮಸ್ಕಾರಗಳು. ನಮ್ಮ ಹಿಂದಿನ ಜನ್ಮದ ಕರ್ಮಗಳೇ ನಮ್ಮನ್ನು ಸಾಕಷ್ಟು ಕಾಡಿಸುತ್ತಿವೆ. ರೋಗ, ದಾರಿದ್ರ್ಯ ಎಲ್ಲವೂ ಇವೆ. ಈಗ ಮತ್ತೆ ನಮ್ಮಿಂದ ಪಾಪಕರ್ಮಗಳು ನಡೆಯುತ್ತಲೇ ಇವೆ. ನಾವು ಈ ಕರ್ಮದ ಸಂಕೋಲೆಯಿಂದ ಹೊರಬರಲು ಯಾವುದಾದರೂ ಸುಲಭೋಪಾಯವಿದ್ದರೆ ತಿಳಿಸಿ. ಯಾವಾಗಲೂ ಮನಸ್ಸಿನಲ್ಲಿ ಸ್ಮರಣೆ ಮಾಡುವಂತದ್ದು. ಉಳಿದ ಯಾವುದೇ ವ್ರತ, ಅಧ್ಯಯನ ಮಾಡುವಷ್ಟು ಶಕ್ತಿಯಿಲ್ಲ. ನನಗೆ ಸದ್ಯಕ್ಕೆ ಮತ್ತೇನೂ ಫಲ ಬೇಡ, ಮಾಡುವ ಕರ್ಮಗಳು ಅಂಟದಿದ್ದರೆ ಸಾಕು, ಸ್ವಾಮಿ. ನೊಂದಿರುವೆ, ದಯವಿಟ್ಟು ದಾರಿ ತೋರಿಸಿ. — ಹೆಸರು ಬೇಡ. ನಿಮ್ಮ ಪ್ರಶ್ನೆಗೆ ಸ್ವಯಂ ಶ್ರೀಕೃಷ್ಣನೇ ಗೀತೆಯಲ್ಲಿ ಉತ್ತರ ನೀಡಿದ್ದಾನೆ, ಅತ್ಯಂತ ಸುಲಭ ಮಾರ್ಗ. ಗುರ್ವನುಗ್ರಹದಿಂದ ವಿವರಿಸಿದ್ದೇನೆ. ಕೇಳಿ. ನಿಮ್ಮ ಕಷ್ಟಗಳೆಲ್ಲ ಪರಿಹಾರವಾಗಲಿ ಎಂದು ಶ್ರೀಹರಿ ವಾಯು ದೇವತಾ ಗುರುಗಳನ್ನು ಪ್ರಾರ್ಥಿಸುತ್ತೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Play Time: 08:17, Size: 1.37 MB


Download Upanyasa Share to facebook View Comments
6611 Views

Comments

(You can only view comments here. If you want to write a comment please download the app.)
 • Shrinidhi Walvkar,Bangalore

  8:13 AM , 09/07/2021

  Hare shrinivasa
 • Jayashree karunakar,Bangalore

  2:21 PM , 28/05/2021

  ಗುರುಗಳೇ.... ಅದ್ಭುತವಾದ ವಾಕ್ಯಗಳು..... ಮನಸ್ಸಿಗೆ ಒಪ್ಪಿಗೆಯಾಗುವಂತೆ... ನಮ್ಮ ಪುಟ್ಟದಾದ ಬುದ್ದಿಗೆ ಅರ್ಥವಾಗುವಂತೆ.... ನಿತ್ಯದಲ್ಲಿ ಅನುಷ್ಠಾನ ಮಾಡಲು ಪ್ರೇರಣೆ ನೀಡುತ್ತಿದೆ ನಿಮ್ಮ ವಾಕ್ಯಗಳು...
 • VADIRAJ,KITTUR

  2:02 AM , 28/05/2021

  ಮನೆ ಯಲ್ಲಿ ಹಿರಿಯರು ತೀರಿ ಕೊಂಡ 1 ತಿಂಗಳಿಗೆ ಸತ್ಯನಾರಾಯಣ ವ್ರತ ಮಾಡಬಹುದೇ

  Vishnudasa Nagendracharya

  ಹಿರಿಯರು ಮರಣ ಹೊಂದಿದಾಗ ಒಂದು ವರ್ಷ ಸಂಭ್ರಮ ಸಡಗರಗಳನ್ನು ಬಿಡತಕ್ಕದ್ದು. ಇತ್ತೀಚಿಗೆ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. 
  
  ಇನ್ನು ಯಾವುದೋ ಒಂದು ಕಾರ್ಯಸಿದ್ಧಿಗಾಗಿ ಅಥವಾ ತೀವ್ರವಾದ ಕಷ್ಟಪರಿಹಾರಕ್ಕಾಗಿ ಸತ್ಯನಾರಾಯಣಪೂಜೆಯನ್ನು ಮಾಡುವದಿದ್ದರೆ, ಪೂಜೆಯನ್ನು ಮಾತ್ರ ಭಕ್ತಿಯಿಂದ ಮಾಡತಕ್ಕದ್ದು. ತೋರಣ ಕಟ್ಟಿ ಸಂಭ್ರಮಾದಿಗಳನ್ನು ಮಾಡಬಾರದು. 
 • deashmukhseshagirirao,Banglore

  6:52 PM , 23/06/2020

  🙏🏻🙏🏻🙏🏻🙏🏻🙏🏻🙏🏻🙏🏻🙏🏻
 • Satyanarayana R B,Bengaluru

  12:20 AM, 29/01/2020

  Excellent acharyare
 • Y V GOPALA KRISHNA,Mysore

  9:29 PM , 27/01/2020

  Excellent explanation Gurugale
 • Nanjundachary,

  1:18 PM , 25/01/2020

  Guruji we cont play this. Pls activate Sriguruji.Dhanyavadagalu Guruji.
 • Ramesha Beejady Upadhya,Bengaluru

  3:52 PM , 20/01/2020

  ಶ್ರೀ ಕೃಷ್ಣಾರ್ಪಣಮಸ್ತು
 • Chandrika prasad,Bangalore

  9:11 AM , 17/01/2020

  ತುಂಬಾ ಅತ್ಯದ್ಭುತ ವಾಕ್ಯ ಗಳು 🙏👌. ನೀವು ಕೊಟ್ಟ ವಿವರಣೆಯನ್ನು ಅರ್ಥಮಾಡಿಕೊಳ್ಳಲು ಭಗವಂತನೇ ಮತಿ ಕೊಡಬೇಕು. ತುಂಬಾ ಅರ್ಥಪೂರ್ಣ ವಾಗಿದೆ. ಲೀಲಾಮನುಷಾವಿಗ್ರಹ ಅಂತಾ ಇದರ ಅರ್ಥವಲ್ಲವೇ ಆಚಾರ್ಯ re. ನಿಮಗೆ ಧನ್ಯವಾದಗಳು 🙏🙏