ಧನಿಷ್ಠಾ ಶ್ರಾದ್ಧ
ಧನಿಷ್ಠಾ ಶ್ರಾದ್ಧ ಮಾಘ ಮಾಸದ ಅಮಾವಾಸ್ಯೆಯಂದು ಧನಿಷ್ಠಾನಕ್ಷತ್ರವಿದ್ದಲ್ಲಿ ಆ ದಿವಸ ಶ್ರಾದ್ಧ ಮಾಡಿದಾಗ ಪಿತೃಗಳಿಗೆ ಹತ್ತುಸಾವಿರ ವರ್ಷದ ತೃಪ್ತಿಯುಂಟಾಗುತ್ತದೆ. ಮಾಘೇಽಸಿತೇ ಪಂಚದಶೀ ಕದಾಚಿದುಪೈತಿ ಯೋಗಂ ಯದಿ ವಾರುಣೇನ ಋಕ್ಷೇಣ ಕಾಲಸ್ಸ ಪರಃ ಪಿತೄಣಾಂ ನ ಹ್ಯಲ್ಪಪುಣ್ಯೈರ್ನೃಪ ಲಭ್ಯತೇಸೌ ಕಾಲೇ ಧನಿಷ್ಠಾ ಯದಿ ನಾಮ ತಸ್ಮಿನ್ಭವೇತ್ತು ಭೂಪಾಲ ತದಾ ಪಿತೃಭ್ಯಃ ದತ್ತಂ ಜಲಾನ್ನಂ ಪ್ರದದಾತಿ ತೃಪ್ತಿಂ ವರ್ಷಾಯುತಂ ತತ್ಕುಲಜೈರ್ಮನುಷ್ಯೈಃ ಮಾಘ ಅಮಾವಾಸ್ಯೆ ಭಾನುವಾರ ಉಂಟಾಗಿ ಧನಿಷ್ಠಾ ನಕ್ಷತ್ರವಿದ್ದರೆ “ವ್ಯತೀಪಾತ” ಎಂಬ ವಿಶೇಷ ಪರ್ವಕಾಲವುಂಟಾಗತ್ತದೆ. (ವ್ಯತೀಪಾತ ಎಂದು ಒಂದು ಯೋಗವಿದೆ, ಅದು ಬೇರೆ, ಇದು ಬೇರೆ) ಶ್ರವಣಾಶ್ವಿಧನಿಷ್ಠಾರ್ದ್ರಾನಾಗದೈವತಹಸ್ತಕೈಃ। ಯದ್ಯಮಾ ರವಿವಾರೇಣ ವ್ಯತೀಪಾತಃ ಸ ಉಚ್ಯತೇ।। ವಿಕಾರಿ ಸಂವತ್ಸರದ ಮಾಘ ಅಮಾವಾಸ್ಯೆ ಭಾನುವಾರವೂ ಬಂದಿರುವದರಿಂದ ಎಂಬ ವಿಶೇಷ ಯೋಗವೂ ಉಂಟಾಗಿದೆ. ಹೀಗಾಗಿ ಈ ದಿವಸ ಶ್ರಾದ್ಧ, ತರ್ಪಣ, ಗೋಗ್ರಾಸ, ಬ್ರಾಹ್ಮಣಭೋಜನ, ಪಾರಾಯಣಗಳು ವಿಶೇಷ ಫಲಪ್ರದ.
Play Time: 05:41, Size: 5.21 MB