ಸಪಿಂಡೀಕರಣವನ್ನು ಮನೆಯ ಮೇಲೆ ಮಾಡಬಹುದೇ?
ಮುತ್ತೈದೆಯರು ಸತ್ತಾಗ ತುಳಸಿ ಹಾರವನ್ನು ಅವರಿಗೆ ಹಾಕಬಹುದಾ ಧರ್ಮೊದಕ ಮತ್ತು ಸಪಿಂಡಿಕರಣ ಶ್ರಾದ್ಧವನ್ನು ಮನೆಯ ಮಹಡಿಯ ಮೇಲೆ ಮಾಡಬಹುದಾ... 1. ಸ್ತ್ರೀ-ಪುರುಷರಿಬ್ಬರ ಶವಗಳಿಗೂ ಅವಶ್ಯವಾಗಿ ತುಳಸೀಹಾರ ಹಾಕಬಹುದು. ಮುತ್ತೈದೆಯರು ಬದುಕಿದ್ದಾಗ ತೀರ್ಥ ಸ್ವೀಕರಿಸುವ ಸಂದರ್ಭದಲ್ಲಿ ತುಳಸಿಯನ್ನು ತೆಗೆದುಕೊಂಡು ತಿನ್ನಬಹುದು, ಮುಡಿಯಬಾರದು. ಆದರೆ, ಶವಕ್ಕೆ ದೇವರ ನಿರ್ಮಾಲ್ಯ ತುಳಸಿಯನ್ನು ಹಾಕವದು ಶವದಲ್ಲಿ ಸಂಸ್ಕಾರಕ್ಕೆ ಯೋಗ್ಯವಾದ ಪಾವಿತ್ರ್ಯ ಉಂಟಾಗಲಿ ಎಂಬ ಕಾರಣಕ್ಕೆ. ಹೀಗಾಗಿ ಮುತ್ತೈದೆಯರ ಶವಕ್ಕೆ ತುಳಸಿಯನ್ನು ಹಾಕಬಹುದು. 2. ಧರ್ಮೋದಕ ಸಪಿಂಡೀಕರಣಗಳನ್ನು ಸರ್ವಥಾ ಮನೆಯಲ್ಲಿ, ಮನೆಯ ಮೇಲೆ, ಮನೆಯ ಅಂಗಳ, ಹಿತ್ತಲುಗಳಲ್ಲಿ ಮಾಡಬಾರದು. ನದೀ ತೀರಗಳಲ್ಲಿಯೇ ಮಾಡಬೇಕು. ಕಾರಣ, ಧರ್ಮೋದಕ ಮತ್ತು ಸಪಿಂಡೀಕರಣ ಎರಡೂ ಸಹ ಪ್ರೇತಕರ್ಮಗಳು, ಪಿತೃಕರ್ಮಗಳಲ್ಲ. ಪ್ರೇತಕರ್ಮಗಳನ್ನು ಮನೆಯಲ್ಲಿ, ಊರಿನಲ್ಲಿ ಮಾಡತಕ್ಕದ್ದಲ್ಲ. ಊರಿನ ಹೊರಗೇ ಮಾಡಬೇಕು.