ರುದ್ರಾಕ್ಷಿ ಮತ್ತು ತುಳಸೀಮಣಿ
ರುದ್ರಾಕ್ಷಿ ಮಾಲೆ ಹಾಗೂ ತುಳಸಿ ಮಾಲೆಯನ್ನು ಒಬ್ಬ ವ್ಯಕ್ತಿ ಏಕ ಕಾಲದಲ್ಲಿ ಧರಿಸಬಹುದೇ? ದಯವಿಟ್ಟು ಉತ್ತರಿಸಿ. — ನಿತ್ಯಾನಂದ ಭಟ್ ರುದ್ರಾಕ್ಷಿಯ ಧಾರಣೆ ಶಿವಸರ್ವೋತ್ತಮತ್ವವನ್ನು ಅರ್ಥಾತ್ ಶಿವನೇ ದೇವರು ಎಂಬ ತತ್ವವನ್ನು ಒಪ್ಪುವದರ ಪ್ರತೀಕ. ತುಳಸೀಮಾಲೆಯ ಧಾರಣೆ ವಿಷ್ಣು ಸರ್ವೋತ್ತಮತ್ವವನ್ನು ಅರ್ಥಾತ್ ವಿಷ್ಣುವೇ ದೇವರು ಎಂಬ ತತ್ವವನ್ನು ಒಪ್ಪುವದರ ಪ್ರತೀಕ. ಎರಡೂ ವಿರುದ್ಧವಾದದ್ದು. ವಿಷ್ಣು ದೇವರು, ಶಿವ ದೇವತೆ ಎನ್ನುವದು ವೈಷ್ಣವ ಸಿದ್ಧಾಂತವನ್ನು ಅನುಸರಿಸುವವರು ರುದ್ರಾಕ್ಷಿಯನ್ನು ಧರಿಸಬಾರದು. ಹೀಗಾಗಿ ಎರಡೂ ಮಾಲೆಗಳನ್ನು ಒಟ್ಟಿಗೆ ಧರಿಸುವದು ಅಯುಕ್ತ. — ವಿಷ್ಣುದಾಸ ನಾಗೇಂದ್ರಾಚಾರ್ಯ