Prashnottara - VNP181

ಕುಶಲವರೋ, ಲವಕುಶರೋ?


					 	

ನಮಸ್ಕಾರ ಗುರುಗಳೇ. ರಾಮಾಯಣ ಪ್ರವಚನ ತುಂಬಾ ಅದ್ಭುತವಾಗಿ ಮೂಡಿಬರ್ತಾಯಿದೆ. ನನ್ನ ಪ್ರಶ್ನೆ, ನೀವು ಪ್ರತಿಬಾರಿ ಕುಶ - ಲವರು ಎಂದು ಸಂಭೋಧಿಸಿದ್ದಿರಾ‌. ನಾನು ರಾಮಾಯಣ ಕಥೆ ಕೇಳಿದಾಗ ರಾಮನ ಮಕ್ಕಳ ಹೆಸರು ಲವ - ಕುಶರು ಎಂದೇ ಕೇಳಿದ್ದೇನೆ. ಇದೇ ಮೊದಲ ಬಾರಿಗೆ ನಿಮ್ಮ ಪ್ರವಚನದಲ್ಲಿ ಕುಶ - ಲವರು ಎಂದು ಕೇಳಿದೆನು. ಇದರ ಕಾರಣ ವೇನು? ಇದಕ್ಕೆ ಒಳ ಅರ್ಥವಿದೆಯಾ? — ಪೂರ್ಣಿಮಾ ಮಂಜುನಾಥ್


Download Article Share to facebook View Comments
2739 Views

Comments

(You can only view comments here. If you want to write a comment please download the app.)
 • Parimala,Dharwad

  9:59 AM , 21/04/2022

  🙏🏻ಹರೇ ಶ್ರೀನಿವಾಸ🙏🏻
  ನಮಸ್ಕಾರಗಳು ಗುರುಗಳೇ 🙏🏻🙏🏻🙏🏻🙏🏻
  ರಾಮಾಯಣ ಉಪನ್ಯಾಸ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ನಮ್ಮ ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನ್ನುವ ರೀತಿಯಲ್ಲಿ ಅದರಲ್ಲೆ ಮುಳುಗಿ ಹೋಗಿರುತ್ತೇವೆ ಪ್ರತಿ ಕ್ಷಣ ಮನೆಯ ಕೆಲಸ ಮಾಡಬೇಕಾದರೂ ಮನಸ್ಸಲ್ಲಿ ಅದೆ ಮೆಲುಕು ಹಾಕುತಿರುತ್ತೇವೆ ನಿಮ್ಮ ಆಶೀರ್ವಾದ ಅನುಗ್ರಹ ನಮ್ಮ ಮನಸ್ಸಿನ ಆಳಕ್ಕೆ ಮುಟ್ಟುವ ರೀತಿಯಲ್ಲಿ ನೀವು ತಿಳಿಸಿ ಕೊಡುತ್ತೀರಿ ಗುರುಗಳೇ ಅನಂತ ನಮಸ್ಕಾರಗಳು ಗುರುಗಳೇ 🙏🏻🙏🏻🙏🏻🙏🏻
  
  ಗುರುಗಳೇ ನನ್ನದೊಂದು ಪ್ರಶ್ನೆ : ಶ್ರೀಸೀತಾದೇವಿಯರು ಜನಕ ಮಹಾರಾಜಾರಿಗೆ ಭೂದೇವಿಯ ಮಡಿಲಲ್ಲಿ ಸಿಕ್ಕಿದ್ದಾರೆ ಅಂದ್ರೆ ಶ್ರೀಸಿತಾ ದೇವಿಯರ ತಾಯಿ ಯಾರು ತಿಳಿಸಿ ಗುರುಗಳೇ 🙏🏻🙏🏻🙏🏻🙏🏻
 • Vikram Shenoy,Doha

  1:12 PM , 29/04/2020

  ಆಚಾರ್ಯರಿಗೆ ಅನಂತ ಕೋಟಿ ಸಾಷ್ಟಾಂಗ ನಮಸ್ಕಾರಗಳು. ನನಗೆ ಅವಳಿ ಮಕ್ಕಳು, ಈ ವರೆಗೆ ನಾನು ಮೊದಲು ಹೊರಗೆ ಬಂದವನ್ನನು ಅಣ್ಣನೆಂದು ಭಾವಿಸಿದ್ದೆ. ನಿಮ್ಮ ಈ ನಿರ್ಣಾಯಕವಾದ ಜ್ಞಾನದಿಂದ ಈ ಅಜ್ಞಾನ ನಾಶವಾಯಿತು. ಧನ್ಯವಾದಗಳು. ಅಂತರ್ಯಾಮಿಯಾದ ಭಗವಂತನಲ್ಲಿ ಸದಾ ಪ್ರಾರ್ಥನೆ, ನಿಮ್ಮ ಈ ಜ್ಞಾನ ಕಾರ್ಯ ಸದಾ ನವಚೇತನದಲ್ಲಿ ಸಾಗುತ್ತಿರಲಿ ಎಂದು. 🙏🙏🙏
 • Satish P Sali,Hubli

  11:15 PM, 01/04/2020

  ಆಚಾರ್ಯರೇ ಅನಂತ ನಮಸ್ಕಾರಗಳು ರಾಮಾಯಣ ಹಾಗು ಮಹಾಭಾರತ ದಲ್ಲಿ ಶ್ರೀ ಹರಿ ಅವತಾರ ಮಾಡಿದ್ದು ಶ್ರೀ ರಾಮ ಯಾವುದೇ ಪವಾಡ ಮಾಡಲಿಲ್ಲ ಆದರೆ ಶ್ರೀ ಕೃಷ್ಣ ಸಾಕಷ್ಟು ಪವಾಡ ಮಾಡಿದ ಏನು ಕಾರಣ?

  Vishnudasa Nagendracharya

  ಎಲ್ಲ ಅವತಾರಗಳೂ ಸಹ ಒಂದೇ ರೀತಿಯಾಗಿ ಇರಬೇಕು ಎಂದು ನಿಯಮವಿಲ್ಲ. ಯಾವ ಸಂದರ್ಭಕ್ಕೆ ಯಾವ ಮಹಿಮೆ ತೋರಬೇಕೋ ಆ ಮಹಿಮೆ ತೋರುತ್ತಾನೆ ಭಗವಂತ. 
  
  ಕ್ಷತ್ರಿಯ ರಾಜನಾಗಿ ಹುಟ್ಟಿಬಂದ ಸ್ವಾಮಿ ರಾಜ ಹೇಗಿರಬೇಕು ಎನ್ನುವದನ್ನು ರಾಮಾವತಾರದಲ್ಲಿ ತೋರುತ್ತಾನೆ. ರಾಜನಾದವನು ಪವಾಡ ತೋರಿಸುವ ಪವಾಡ ಪುರುಷನಾಗಬೇಕಾಗಿಲ್ಲ. ಪ್ರಜೆಗಳ ಜೊತೆಯಲ್ಲಿದ್ದು ಪ್ರಯತ್ನ ಪೂರ್ವಕವಾಗಿ ಯಶಸ್ಸನ್ನು ಪಡೆಯುವವನಾಗಬೇಕು. ರಾಜ್ಯ ಪವಾಡಗಳಿಂದ ನಡೆಯುವದಿಲ್ಲ. ಪ್ರಯತ್ನದಿಂದ ನಡೆಯುತ್ತದೆ ಎನ್ನುವದನ್ನು ಸ್ವಾಮಿ ತೋರುತ್ತಾನೆ. 
  
  ಇನ್ನು ಕೃಷ್ಣಾವತಾರದಲ್ಲಿಯೂ ಸಹ ಎಷ್ಟು ಆವಶ್ಯಕವೋ ಅಷ್ಟು ಮಾತ್ರ ಮಹಿಮೆ ತೋರಿದ ಸ್ವಾಮಿ. ಅಲ್ಲಿಯೂ ಪುರುಷ ಪ್ರಯತ್ನದ ಸಂದರ್ಭ ಬಂದಾಗ ಪುರುಷ ಪ್ರಯತ್ನವನ್ನೇ ದೇವರು ಅನುಸರಿಸಿದ್ದಾನೆ. 
 • Padma Sirisha,Mysore

  7:00 AM , 22/03/2020

  ಪ್ರಶ್ನೆ ಕೇಳಿದ ಪೂರ್ಣಿಮಾ ಅವರಿಗೂ, ಪೂರ್ವಪಕ್ಷಕ್ಕೆ ಠಾವಿಲ್ಲದೆ, ಇದಮಿತ್ಥಂ ಎಂದೇ ಇರುವ ನಿಮ್ಮ ಉತ್ತರಕ್ಕೂ ಅನಂತಾನಂತ ವಂದನೆಗಳು ಗುರುಗಳೇ... 🙏
 • Suresh M Kamble,Nargund

  5:11 PM , 21/03/2020

  🙏🙏🙏