Prashnottara - VNP186

ದೇವರು ಕಲ್ಲಾಗಲು ಹೇಗೆ ಸಾಧ್ಯ?


					 	

ಆಚಾರ್ಯರೇ ನಮಸ್ಕಾರ🙏🏻,ಜಡ ಚೇತನ ಆಗಲ್ಲ, ಚೇತನ ಜಡ ಆಗಲ್ಲ, ಅಂದಮೇಲೆ ಪರಮಚೇತನನಾದ ಭಗವಂತ, ಸ್ವಯಂವ್ಯಕ್ತ ಸ್ಥಳಗಳಲ್ಲಿ ನಮ್ಮ ಕಣ್ಣಿಗೆ ಕಲ್ಲಿನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ಹೇಗೆ ಎಂಬುದನ್ನು ತಿಳಿಸಿ ಆಚಾರ್ಯರೇ🙏🏻🙏🏻 — ಸುಧೀಂದ್ರ ಪರಮಚೇತನನಾದ ದೇವರು ಎಂದಿಗೂ ಜಡನಾಗುವದಿಲ್ಲ, ಕಲ್ಲಾಗುವದಿಲ್ಲ. ಭಕ್ತರ ಅನುಗ್ರಹಕ್ಕಾಗಿ ಒಂದು ಪ್ರತಿಮೆಯಲ್ಲಿ ಸನ್ನಿಹಿತನಾಗುತ್ತಾನೆ, ಅದನ್ನು ಸ್ವಯಂವ್ಯಕ್ತ ಪ್ರತಿನೆ ಎನ್ನುತ್ತಾರೆ. ಆವಾಹನೆ ಇಲ್ಲದೆ ಭಗವಂತ ತಾನಾಗಿ ಬಂದು ನೆಲೆಸಿದ ಎಂದು. ತಿರುಪತಿಯಲ್ಲಿರುವ ಶ್ರೀನಿವಾಸ ಪ್ರತಿಮೆ ಸ್ವಯಂವ್ಯಕ್ತ ಪ್ರತಿಮೆ. ಆ ಪ್ರತಿಮೆಯೇ ದೇವರಲ್ಲ, ಆ ಪ್ರತಿಮೆಯಲ್ಲಿ ದೇವರಿದ್ದಾನೆ. ತಿರುಪತಿಯ ಆನಂದನಿಲಯದಲ್ಲಿ ಸ್ವಾಮಿ ಸಾಕ್ಷಾತ್ತಾಗಿ ವಾಸವಿದ್ದ. ಅಂದರೆ ಮನುಷ್ಯರ ರೀತಿಯಲ್ಲಿ ಎಲ್ಲರ ಮಧ್ಯದಲ್ಲಿ ಓಡಾಡುತ್ತ ಇದ್ದ. ಇನ್ನು ಮುಂದೆ ಸಾಕ್ಷಾತ್ತಾಗಿ ಇರುವದು ಬೇಡ ಎಂದು ನಿರ್ಧರಿಸಿದ ಸ್ವಾಮಿ ಒಂದು ಶುಭಮುಹೂರ್ತದಲ್ಲಿ ತನ್ನಿಚ್ಛೆಯಿಂದಲೇ ಒಂದು ಪ್ರತಿಮೆ ನಿರ್ಮಾಣ ಮಾಡಿ (ಅಲ್ಲಿಗೆ ಕಲ್ಲು ಯಾರೂ ತರಲಿಲ್ಲ, ಕೆತ್ತಲಿಲ್ಲ, ದೇವರ ಇಚ್ಛೆಯಿಂದ ಆ ಪ್ರತಿಮೆ ತಾನಾಗಿ ನಿರ್ಮಾಣವಾಯಿತು. ಬ್ರಹ್ಮದೇವರ ಮನಸ್ಸಿನ ಇಚ್ಚೆಯಿಂದ ಮಾನಸ ಸರೋವರ ನಿರ್ಮಾಣವಾದಂತೆ) ಆ ಪ್ರತಿಮೆಯಲ್ಲಿ ತಾನು ಸನ್ನಿಹಿತನಾದ. ಮಹಾನುಭಾವರಾದ ತನ್ನ ಭಕ್ತವರೇಣ್ಯರಿಗೆ ಚಿದಾನಂದಾತ್ಮಕವಾದ ತನ್ನ ಶರೀರದಿಂದಲೂ ದರ್ಶನ ನೀಡುತ್ತಾನೆ. ಸಾಮಾನ್ಯರ ಮೇಲೆ ಅನುಗ್ರಹ ಮಾಡಲು ಪ್ರತಿಮೆಯನ್ನೂ ಸೃಷ್ಟಿಸಿದ್ದಾನೆ. ಆ ಪ್ರತಿಮೆಯ ಒಳಗಿದ್ದು ಸರ್ವರಿಗೆ ವರಪ್ರದನಾಗಿದ್ದಾನೆ. ಹೊರತು ಶ್ರೀನಿವಾಸನೇ ಕಲ್ಲಿನ ಪ್ರತಿಮೆಯಾಗಲಿಲ್ಲ, ಕಲ್ಲಿನ ಪ್ರತಿಮೆ ಶ್ರೀನಿವಾಸನಲ್ಲ. ಕಲ್ಲಿನ ಪ್ರತಿಮೆಯನ್ನು ಕೇವಲ ತನ್ನ ಇಚ್ಛೆಯಿಂದ ಸೃಷ್ಟಿಸಿ ಅದರೊಳಗೆ ದೇವರಿದ್ದಾನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ ———————— ದೇವರ ಶರೀರದ ಕುರಿತ ರಹಸ್ಯ ಮತ್ತು ಮಹತ್ತ್ವದ ವಿಷಯಗಳನ್ನು ಈಗಾಗಲೇ ಶ್ರೀಮದ್ ಭಾಗವತದ ಪ್ರಥಮಸ್ಕಂಧದ 75 ನೆಯ ಪ್ರವಚನದಲ್ಲಿ ತಿಳಿಸಲಾಗಿದೆ. [VNU579 ಶ್ರೀಮದ್ ಭಾಗವತಮ್ - 01 Folder ] ಕೇಳಿ. ಎಲ್ಲ ಸಂಶಯಗಳೂ ಪರಿಹಾರವಾಗುತ್ತವೆ. ತತ್ವ ಪರಿಸ್ಪಷ್ಟವಾಗಿ ಅರಿವಾಗುತ್ತದೆ. http://vishwanandini.com/fullupanyasa.php?serialnumber=VNU579


Share to facebook View Comments
2038 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:12 PM , 23/11/2022

  🙏🙏
 • JOTHIPRAKASH L,DHARMAPURI

  6:35 PM , 28/01/2021

  Mmmn m n  mb
 • Chandrika prasad,Bangalore

  7:51 PM , 23/06/2020

  ಅದಕ್ಕೆ ತಿರುಪತಿಗೆ ಅಷ್ಟು ಮಹತ್ವ. ಜೀವನದಲ್ಲಿ ಒಮ್ಮೆ ದರ್ಶನ ಮಾಡಲೇಬೇಕು
 • Vikram Shenoy,Doha

  9:11 PM , 22/04/2020

  ಅತೀ ಮಹತ್ತರವಾದ ಜ್ಞಾನ ..ಆಚಾರ್ಯರಿಗೆ ಕೋಟಿ ನಮನಗಳು. ಸ್ವಯಂಭು ಎಂಬ ಶಬ್ದಕ್ಕೆ ಅರ್ಥ ತಿಳಿಸಿ 🙏🙏
 • Sandeep,Kumar

  9:22 PM , 10/04/2020

  🙏
 • Dilip acharya belagal,Bellary

  8:26 PM , 09/04/2020

  🙏🙏🙏