Prashnottara - VNP188

ಮಹಾ ಆಪತ್ತನ್ನು ಪರಿಹರಿಸುವ ಉಗ್ರನರಸಿಂಹ ಸ್ತುತಿ


					 	

ಪರಿಹರಿಸಲಿಕ್ಕೆ ಸಾಧ್ಯವಿಲ್ಲದ ಖಾಯಿಲೆಯಾಗಿರಲಿ ದಾಟಲಿಕ್ಕೆ ಸಾಧ್ಯವಿಲ್ಲದ ಘೋರ ಕಷ್ಟವಿರಲಿ ಶತ್ರುಗಳಿಂದ ಅಪಾರ ದೈಹಿಕ ನೋವಾಗಿರಲಿ ನಮ್ಮವರೇ ನೀಡುವ ಅಪಾರ ಮಾನಸಿಕ ಹಿಂಸೆಯಾಗಿರಲಿ ಒಟ್ಟಾರೆ ಸಕಲ ವಿಧ ಆಪತ್ತುಗಳಿಂದ ನಮ್ಮನ್ನು ಪಾರು ಮಾಡುವ ಉಗ್ರನರಸಿಂಹನ ಅಪೂರ್ವ ರಹಸ್ಯ ಚಿಂತನೆಯನ್ನು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಶ್ರೀ ನರಸಿಂಹ ಸ್ತುತಿಗೆ ವ್ಯಾಖ್ಯಾನ ಮಾಡುತ್ತ ಶ್ರೀಸುಮತೀಂದ್ರತೀರ್ಥ ಗುರುಸಾರ್ವಭೌಮರು ತಿಳಿಸಿದ್ದಾರೆ. ಈ ಪರಮಶಕ್ತಿಶಾಲಿ ಶ್ಲೋಕ ಮತ್ತು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತಿಳಿಸಿರುವ ಪ್ರಾರ್ಥನೆಯ ವಿವರಣೆ ಇಲ್ಲಿದೆ. ಪ್ರತೀನಿತ್ಯ ಇದನ್ನು ಕನಿಷ್ಠ ಹನ್ನೊಂದು ಬಾರಿಯಂತೆ (ಸಮಯವಿದ್ದಾಗ ಹೆಚ್ಚೆಚ್ಚು ಬಾರಿ) ಪಠಿಸಿ. ನಿಮ್ಮ ಕಷ್ಟ ನಿವಾರಣೆಯಾಗುವವರೆಗೆ ಪಠಿಸಿ. ರಜಸ್ವಲಾ ನಿಯಮವನ್ನು ಪಾಲಿಸುವ ಪತಿವ್ರತೆಯರು ಅವಶ್ಯವಾಗಿ ಈ ಶ್ಲೋಕಗಳನ್ನು ಪಠಿಸಬಹುದು. ನೆನಪಿರಲಿ, ಬರಿಯ ಶ್ಲೋಕ ಪಠಿಸಿದರೆ ಫಲ ದೊರೆಯುವದಿಲ್ಲ. ಅರ್ಥಚಿಂತನದೊಂದಿಗೆ ಪೂರ್ಣ ಭಕ್ತಿ ಶ್ರದ್ಧೆಗಳಿಂದ ಪಠಿಸಬೇಕು. ಅರಿದರಮಸಿಖೇಟೌ ಬಾಣಚಾಪೇ ಗದಾಂ ಸ-
 ನ್ಮುಸಲಮಪಿ ದಧಾನಃ ಪಾಶವರ್ಯಾಂಕುಶೌ ಚ ।
 ಕರಯುಗಲಧೃತಾಂತ್ರಸ್ರಗ್ವಿಭಿನ್ನಾರಿವಕ್ಷೋ 
 ದಹ ದಹ ನರಸಿಂಹಾಸಹ್ಯವೀರ್ಯಾಹಿತಂ ಮೇ ॥ ಊರ್ಧ್ವಾಭ್ಯಾಮಾಂತ್ರಮಾಲೇ ತದನು ದರಮರಿಂ ಖಡ್ಗಖೇಟೌ ವಹಂತಂ ಬಾಣಂ ಚಾಪಂ ದಧಾನಂ ಮುಸಲಮಪಿ ಗದಾಂ ಪಾಶಮಪ್ಯಂಕುಶಂ ಚ । ಊರ್ವೋರ್ನಿಕ್ಷಿಪ್ಯ ದೈತ್ಯಂ ತದುದರಕುಹರಂ ದಾರಯಂತಂ ಚ ದೋರ್ಭ್ಯಾಂ ರಕ್ತಜ್ವಾಲಾಮಯಂ ತಂ ಜ್ವರಸಮರಭಯೇ ಚಿಂತಯೇದುಗ್ರಸಿಂಹಮ್ ॥ ವಿಶ್ವನಂದಿನಿಯ ಆತ್ಮೀಯ ಬಾಂಧವರಾದ ರಜತ್ ರವರು ಭಕ್ತಿ ಶ್ರದ್ದೆಗಳಿಂದ ಈ ಶ್ಲೋಕಗಳನ್ನುಪಠಿಸಬೇಕಾದರೆ ಮಾಡಬೇಕಾದ ಉಗ್ರನರಸಿಂಹ ರೂಪದ ಚಿತ್ರವನ್ನು ಬರೆದು ನೀಡಿದ್ದಾರೆ. ವಿಡಿಯೋದಲ್ಲಿ ನೀಡಿದ್ದೇನೆ. ಅದನ್ನು ನೋಡುತ್ತ, ಅರ್ಥ ಚಿಂತನೆ ಮಾಡುತ್ತ ಪಠಣ ಮಾಡಿ.


Play Time: 9:26, Size: 9 MB


Watch Video Download Upanyasa Share to facebook View Comments
42587 Views

Comments

(You can only view comments here. If you want to write a comment please download the app.)
 • Sowmya,Bangalore

  10:52 AM, 05/12/2020

  Adhubutha vagide🙏🙏
 • Sowmya Manchenalli Venkatesh,Bangalore

  5:22 PM , 27/10/2020

  ನಮಸ್ಕಾರ ಗುರುಗಳೇ... ಮಂತ್ರ ಪಟನೆ ಮಾಡುವಾಗ ತಪಾಗಿ ಉಚರಿಸಿದರೆ ಅದರಿಂದ ಮತಸ್ಟು ತೊಂದರೆ ಆಗಬಹುದು ಅನೋ ಬಯ ......ಹಾಗೂ ಪಂಚಮ ಶನಿ ಪ್ರಭಾವ ಮತ್ತು ಪರಿಹಾರ ತಿಳಿಸಿ ಕೊಡಿ ದಯಮಾಡಿ
 • deashmukhseshagirirao,Banglore

  7:13 PM , 13/07/2020

  🙏🏻🙏🏻🙏🏻🙏🏻🙏🏻🙏🏻🙏🏻
 • Harish M.,Sullia

  3:54 PM , 22/05/2020

  ಪೂಜ್ಯ ಗುರುಗಳೇ ಪ್ರಣಾಮಗಳು.....🙏
  
   "ಉಗ್ರ ನರಸಿಂಹ ಸ್ತುತಿ"ಯನ್ನು ನಮ್ಮ ಮನಸಿನಲ್ಲೇ ಪಠಿಸಿಕೊಳ್ಳಬಹುದಾ, ಅಥವಾ ಸ್ತುತಿ ಪಠಣೆ ಇತರರಿಗೂ ಕೇಳಿಸುವಂತ್ತಿರಬೇಕಾ....?
  
  ತಿಳಿಸಿ ಕೊಡಿ

  Vishnudasa Nagendracharya

  ಯಾವಾಗ ಪಠಿಸಿದರೂ ಮತ್ತೊಬ್ಬರಿಗೆ ತೊಂದರೆಯಾಗಬಾರದು. ಅಂತಹ ಸಂದರ್ಭದಲ್ಲಿ ಮನಸ್ಸಿನಲ್ಲಿಯೇ ಪಠಿಸಿ. ಮತ್ತೊಬ್ಬರೂ ಶ್ರವಣ ಮಾಡುತ್ತಿದ್ದಾಗ ಗಟ್ಟಿಯಾಗಿ ಪಠಿಸಿ. 
  
  
 • Vasudhendra,Vijayapura

  6:53 PM , 17/05/2020

  Gurugalige ನಮಸ್ಕಾರಗಳು. ಅರಿದರಮಸಿ - ಎನ್ನುವುದು ಶ್ರೀ ತ್ರಿವಿಕ್ರಮ ಪಂಡಿತ ಆಚಾರ್ಯ ಅವರಿಂದ ರಚಿತವಾದ ಶ್ಲೋಕ ಎಂದು ತಿಳಿದಿದೆ. ಆದರೆ ಇನ್ನೊಂದು ಶ್ಲೋಕ ಯಾರ ರಚನೆ ಎಂದು ತಿಳಿಸ ಬೇಕೆಂದು ವಿನಂತಿಸುತ್ತೇನೆ.

  Vishnudasa Nagendracharya

  ಊರ್ಧ್ವಾಭ್ಯಾಂ ಎನ್ನುವದು ಯಾವ ಗ್ರಂಥದ ಶ್ಲೋಕ ಎಂದು ತಿಳಿದುಬಂದಿಲ್ಲ. ಶ್ರೀ ಸುಮತೀಂದ್ರತೀರ್ಥಗುರುರಾಜರು ತಮ್ಮ ಗ್ರಂಥದಲ್ಲಿ ಉದಾಹರಿಸಿದ್ದಾರೆ. 
 • Harish M.,Sullia

  4:55 PM , 17/05/2020

  ಪೂಜ್ಯನೀಯ ಗುರುಗಳೇ ಪ್ರಣಾಮಗಳು....
  
  ಗುರುಗಳೇ ನನಗೆ ಈ ಸ್ತುತಿಯನ್ನು ಮೊದಲು ಎಲ್ಲಿಂದ ಓದಲು ಪ್ರಾರಂಭಿಸಬೇಕು ಅನ್ನುವ ಸಂಶಯ....
  
  ನಿಮ್ಮ ಲೇಖನದಲ್ಲಿರುವಂತೆ, ಮೊದಲು "ಅರಿದರಮಸಿಖೇಟೌ ಬಾಣಚಾಪೇ ಗದಾಂಸನ್ಮುಸಲಮಪಿ....." ಎಂಬಲ್ಲಿಂದ ಬರೆದು ನಂತರ "ಊರ್ಧ್ವಾಭ್ಯಾಮಾಂತ್ರಮಾಲೇ ತದನು ದರಮರಿಂ ಖಡ್ಗಖೇಟೌ ವಹಂತಂ....." ಎಂದು ಪ್ರಾರಂಭವಾಗುತ್ತದೆ....
  
  ಆದರೆ ನೀವು ವೀಡಿಯೋ/ಆಡಿಯೋದಲ್ಲಿ ಹೇಳಿರುವಂತೆ ಮೊದಲು "ಊರ್ಧ್ವಾಭ್ಯಾಮಾಂತ್ರಮಾಲೇ ತದನು ದರಮರಿಂ ಖಡ್ಗಖೇಟೌ ವಹಂತಂ....." ಎಂಬ ಸ್ತುತಿಯನ್ನು ಮೊದಲು ಆರಂಭಿಸಿ ನಂತರ"ಅರಿದರಮಸಿಖೇಟೌ ಬಾಣಚಾಪೇ ಗದಾಂ ಸನ್ಮುಸಲಮಪಿ....." ಎಂಬ ಸ್ತುತಿಯನ್ನು ಹೇಳಿದ್ದೀರಿ
  
  ಹಾಗಾಗಿ ನಾವು ಸ್ತುತಿಯನ್ನು ಮೊದಲು ಎಲ್ಲಿಂದ ಓದಲು ಪ್ರಾರಂಭಿಸಬೇಕು ಎಂಬುದನ್ನು ದಯವಿಟ್ಟು ತಿಳಿಸಿ ಕೊಡಿವಿರಾ

  Vishnudasa Nagendracharya

  ಎರಡೂ ಪ್ರತ್ಯೇಕ ಶ್ಲೋಕಗಳು. ಒಂದೇ ಸ್ತೋತ್ರದ ಹಿಂದು ಮುಂದಿನ ಶ್ಲೋಕಗಳಲ್ಲ. 
  
  ಅರಿದರಮಸಿಖೇಟೌ ಎನ್ನುವ ಶ್ಲೋಕ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಸ್ತೋತ್ರದಲ್ಲಿನ ಒಂದು ಶ್ಲೋಕ. ಅ
  
  ಊರ್ಧ್ವಾಭ್ಯಾಂ ಎನ್ನುವ ಶ್ಲೋಕ, ಶ್ರೀ ಸುಮತೀಂದ್ರತೀರ್ಥಗುರುರಾಜರು ಉಲ್ಲೇಖಿಸಿರುವ ಶಾಸ್ತ್ರದ ಶ್ಲೋಕ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಸ್ತೋತ್ರಕ್ಕೆ ಆಧಾರಭೂತವಾದ ಶ್ಲೋಕ. 
  
  ಮೊದಲಿಗೆ ಊರ್ಧ್ವಾಭ್ಯಾಂ ಎಂಬ ಶ್ಲೋಕ ಪಠಿಸಿ, ನಂತರ ಅರಿದರಮಸಿಖೇಟೌ ಎಂದು ಪಠಿಸುವದು ಉತ್ತಮ. 
  
  
 • Harish M.,Sullia

  11:56 AM, 17/05/2020

  ಪೂಜ್ಯ ಗುರುಗಳೇ.....
  
  ಈ ಉಗ್ರ ನರಸಿಂಹ ಸ್ತುತಿಯನ್ನು ಯಾವುದೇ ಸಮಯದಲ್ಲೂ, ಅಂದರೆ ಕಛೇರಿ ಕೆಲಸದಲ್ಲಿರುವಾಗ, ಇತರೆ ಬಿಡುವಿನ ವೇಳೆಯಲ್ಲಿಯೂ ಪಠಿಸಬಹುದೇ...?
  
  ದಯವಿಟ್ಟು ತಿಳಿಸಿ ಕೊಡಿ

  Vishnudasa Nagendracharya

  ಮಲಮೂತ್ರ ವಿಸರ್ಜನೆ ಮಾಡಿ ಸರಿಯಾಗಿ ಕೈಕಾಲುಗಳನ್ನು ತೊಳೆಯದೇ ಇದ್ದಾಗ, 
  
  ಶೂ ಚಪ್ಪಲಿ ಮುಂತಾದವುಗಳನ್ನು ಧರಿಸಿದಾಗ
  
  ಹಾಸಿಗೆ ಮುಂತಾದ ಮೈಲಿಗೆಯ ಪದಾರ್ಥಗಳ ಸಂಪರ್ಕವಿದ್ದಾಗ ಪಠಿಸುವದು ಬೇಡ. 
  
  ಶುದ್ಧ ಭಾರತೀಯ ವಸ್ತ್ರದಲ್ಲಿದ್ದಾಗ, ಮಡಿಯಲ್ಲಿಲ್ಲದಿದ್ದರೂ, ಪಠಿಸಬಹುದು. 
  
  ಪ್ರತೀದಿವಸ ಬೆಳಿಗಿನ ಪೂಜಾ ಸಂಧ್ಯಾವಂದನೆಗಳ ಸಮಯದಲ್ಲಿ, ಸಂಜೆ ಸಂಧ್ಯಾವಂದನೆ, ದೇವರಿಗೆ ನಮಸ್ಕಾರ ಮಾಡುವ ಸಂದರ್ಭಗಳಲ್ಲಿ ಪಠಿಸುವದು ಉತ್ತಮ. 
  
  ಎಂತಹ ಪರಮಮೈಲಿಗೆಯ ಸಂದರ್ಭವಿದ್ದರೂ ಶ್ರೀಲಕ್ಷ್ಮೀನೃಸಿಂಹಾಯ ನಮಃ ಎಂದು ಪಠಿಸಬಹುದು. ಇದು ನಾಮಸ್ಮರಣೆ. ಇದಕ್ಕೆ ಯಾವ ನಿರ್ಬಂಧವೂ ಇಲ್ಲ. 
  
  ಬೀಜಾಕ್ಷರ, ಪ್ರಣವಗಳ ಜೊತೆಯಲ್ಲಿರುವ ಮಂತ್ರಗಳನ್ನು, ಸ್ತೋತ್ರಗಳನ್ನು ಪಠಿಸಬೇಕಾದರೆ ಶುದ್ಧಿ ಅತ್ಯಂತ ಆವಶ್ಯಕ. 
  
  
 • Vasudha S,Bangalore

  10:43 AM, 15/05/2020

  ನನ್ನ ಸಲಹೆ ಏನೆಂದರೆ, ಕೆಲವರ ಬಳಿ trivikrama pandithacharyarinda ರಚಿತವಾದ ನರಸಿಂಹ ಸ್ತುತಿ ಇಲ್ಲದೆ ಇರಬಹುದು. ಹಾಗಾಗಿ ಅದನ್ನು ಸಹ ಪೂರ್ತಿಯಾಗಿ ದಯಪಾಲಿಸಲು ಕೋರುತ್ತೇನೆ. ತಪ್ಪಾಗಿ ಹೇಳಿದ್ದರೆ ಕ್ಷಮಿಸಿ.
 • Vijay Kumar K,Bangalore

  7:58 PM , 14/05/2020

  ಆಚಾರ್ಯರಿಗೆ ನಮಸ್ಕಾರಗಳು
  
  ಈಗ ಲೋಕದಲ್ಲಿ ನಡೆಯುತ್ತಿರುವ ಕಷ್ಟದ 
  
  ಪರಿಸ್ಥಿತಿಯಲ್ಲಿ ಅದ್ಭುತವಾದಂತಹ ಶ್ಲೋಕವನ್ನು ಕೊಟ್ಟಿದೀರಿ, ನಿಮ್ಮಂತಹ 
  
  ಗುರುಗಳು ನಮಗೆ ಈ ಕಲಿಯುಗದಲ್ಲಿ 
  
  ದೊರೆತಿರುವುದು ನಮ್ಮೆಲ್ಲರ ಪುಣ್ಯ.
  
  ಒಂದು ಸಣ್ಣ ಪ್ರಶ್ನೆ, ಇಲ್ಲಿ ಎರಡು ಶ್ಲೋಕ ಇದೆ 
  
  ,ಯಾವುದನ್ನು ತೆಗೆದುಕೊಳ್ಳಬೇಕು, 
  
  ದಯವಿಟ್ಟು ತಿಳಿಸಬೇಕಾಗಿ ವಿನಂತಿ.

  Vishnudasa Nagendracharya

  ಎರಡೂ ಶ್ಲೋಕ ಪಠಿಸಬೇಕು. 
  
  ಒಂದರಲ್ಲಿ ವಿಸ್ತೃತ ಚಿಂತನೆಯಿದೆ. ಮತ್ತೊಂದರಲ್ಲಿ ಪ್ರಾರ್ಥನೆಯಿದೆ. 
 • Vijay Kumar K,Bangalore

  8:11 PM , 14/05/2020

  ಆಚಾರ್ಯರಿಗೆ ನಮಸ್ಕಾರಗಳು.
  ಒಂದು ಪ್ರಶ್ನೆ ನರಸಿಂಹದೇವರ ಚಿತ್ರದ ಬಗ್ಗೆ.
  ಏಳನೇ ಬಲಗೈಯಲ್ಲಿ ದೇವರು ದೈತ್ಯನ ತಲೆಯನ್ನ ಹಿಡಿದಿದ್ದಾನೆ, ಎಡಗೈಯಲ್ಲಿ ದೈತ್ಯನ ಕಾಲನ್ನ ಹಿಡಿದಿದ್ದಾನೆ ಅಂತ ಇದೆ. ಆದರೆ ಚಿತ್ರದಲ್ಲಿ ಬಲಗೈಯಲ್ಲಿ ಕಾಲನ್ನ, ಎಡಗೈಯಲ್ಲಿ ತಲೆಯನ್ನ ಹಿಡಿದಿದ್ದಾನೆ. ಗೊಂದಲವನ್ನು ಪರಿಹಾರ ಮಾಡಬೇಕಾಗಿ ಪ್ರಾರ್ಥನೆ.

  Vishnudasa Nagendracharya

  ಎರಡೂ ತರಹದ ಚಿಂತನೆಯ ಕ್ರಮ ಸರಿ. 
  
  ಎರಡೂ ತರಹದ ಪ್ರತಿಮೆಗಳು ನಮಗೆ ಉಪಲಬ್ಧವಿವೆ. 
  
  
 • ಫಣಿಂದ್ರಾಚಾರ್ಯ,ಬೆಂಗಳೂರು

  12:01 PM, 14/05/2020

  ಹರೇಶ್ರೀನಿವಾಸ 
  ಆಚಾರ್ಯರೆ ಉಗ್ರನರಸಿಂಹದೇವರ ಸ್ತುತಿಯ ಅರ್ಥ ವಿವರಣೆಯನ್ನು ಲೇಖನ ಮಾಡಿಕೊಟ್ಟರೆ ಚಿಂತನ ಮಾಡಲು ಅನುಕೂಲ ಆಗತ್ತೆ
 • Jayashree Karunakar,Bangalore

  1:39 PM , 07/05/2020

  ದಹ ದಹ ನರಸಿಂಹಾ ಅಂತ ನೀವು ಹೇಳಿದ ರೀತಿ.... ಮನಸ್ಸಿಗೆ ತುಂಬಾ ಇಷ್ಟ...
  
  ಸಿಂಹದ ಮರಿ ಅದರ ಪಕ್ಕದಲ್ಲೇ ಭಯರಹಿತವಾಗಿ ಕುಳಿತಿರುತ್ತದೆ..ಆದರೆ ಉಳಿದ ಪ್ರಾಣಿಗಳಿಗೆ ಸಿಂಹವನ್ನು ಕಂಡರೆ ಭಯ..
  
  ಹಾಗೆ ಸಜ್ಜನರಿಗೆ ಅಭಯಪ್ರದನಾಗಿ ನರಸಿಂಹ ತೋರುವನು...
  ಅಂತಾ ನೀವು ಹೇಳುತ್ತಾ ಇದ್ದರೆ ಕಣ್ಣುಗಳಿಂದ ಆನಂದಭಾಷ್ಪಗಳು ಜಾರಿದ್ದೇ ತಿಳಿಯಲಿಲ್ಲ...
  
  ಅವನು ಅಸಜ್ಜನರಿಗೆ ತೋರುವ ಭಯಂಕರ ರೂಪಕ್ಕೂ , ಸಜ್ಜನರಿಗೆ ತೋರುವ ಕಾರುಣ್ಯಕ್ಕೂ ಇರುವ ವೆತ್ಯಾಸವನ್ನು ... ಮನಸ್ಸಿಗೆ ಸಂತೋಷವಾಗುವಂತೆ, ಕಿವಿಗಳಿಗೆ ಹಿತವಾಗುವಂತೆ, ಕಣ್ಗಳಿಗೆ ಆನಂದಭಾಷ್ಪವಾಗುವಂತೆ
  ಭಗವಂತನ ಕಾರುಣ್ಯವನ್ನು ಅದೆಷ್ಟು ಚೆಂದವಾಗಿ ವಿವರಿಸಿದ್ದೀರಿ ಗುರುಗಳೆ...ನಿಮ್ಮ ವಾಕ್ ಶಕ್ತಿಗೆ ಭಕ್ತಿಯ ಪ್ರಣಾಮಗಳು...
 • Jayashree Karunakar,Bangalore

  8:03 PM , 06/05/2020

  ಗುರುಗಳೆ
  ರಾಮ ಕೃಷ್ಣ ಅನ್ನುವಾಗಿನ ನಿಮ್ಮ ಸೌಮ್ಯ ಧ್ವನಿ...
  ಉಗ್ರನರಸಿಂಹ ಅನ್ನುವಾಗಿನ ಧ್ವನಿ...ಅಬ್ಬಾ!!ಅದ್ಭುತ ಪರಮಾದ್ಭುತ...
  
  ನರಸಿಂಹನ ಉಗ್ರರೂಪದ ಮಹಾ ಚಿಂತನದ ವೈಭವ ಆಹಾ ಆಹಾ....!! ಮತ್ತೆ ಮತ್ತೆ ಮಾಧ೯ನಿಸುತ್ತಿದೆ..
   ಪ್ರತಿಯೊಂದು ಕೈಗಳಲ್ಲಿರುವ ಆಯುಧಗಳಾದ 
  ಖಡ್ಗ, ಚಮ೯, ಬಾಣ, ಶಂಖ ಚಕ್ರ ಗಧೆ ಮುಂತಾದವುಗಳನ್ನು ಹಿಡಿದ ಭಗವಂತನ ಕೈಗಳ ವಣ೯ನೆ....ಅಲ್ಲಿ ಕೊಟ್ಟಿರುವ ಚಿತ್ರದಲ್ಲಿರುವ ಕೈಗಳೇ ಅಲುಗಾಡಿದ ಭಾವ..!!!!. 
  ಅದೆಂತಹ ವೀರಾವೇಶ ಭಗವಂತನು ಈ ರೂಪದಲ್ಲಿ ಅಭಿವ್ಯಕ್ತಿ ಮಾಡುತ್ತಿದ್ದಾನೆ ಅನ್ನವದನ್ನು ಸಂಸ್ಕೃತದ ಇಷ್ಟು ಕಷ್ಟವಾದ ಶ್ಲೋಕದಲ್ಲಿ ಅದೆಷ್ಟು ಭಾವ ಪೂಣ೯ವಾಗಿ ನಿಮ್ಮಧ್ವನಿಯಲ್ಲಿ ತೋರಿಸಿದ್ದೀರಾ ಗುರುಗಳೆ...
  ತುಂಬಾ ಚೆನ್ನಾಗಿದೆ 🙏
  ಭಗವಂತನ ಉಗ್ರರೂಪದಲ್ಲಿಯೂ ಎಷ್ಟೂಂದು ಪೀತಿ 
  ಭಕ್ತಿ ಯುಂಟಾಗುವ ಹಾಗೆ ಮಾಡಿದ್ದೀರಿ..ಚಿತ್ರದಲ್ಲಿರುವ ಭಗವಂತನ ಈ ಕೈಗಳೇ ಆ ರಾಕ್ಷಸನನ್ನು ಸಂಹಾರವನ್ನು ಈಗಲೇ ಮಾಡಿಬಿಡುತ್ತಾನೇನೊ ಅನ್ನುವಂತಿದೆ ನಿಮ್ಮ ವಿವರಣೆ ಪರಿ...ಅದ್ಭುತ ಪರಮಾದ್ಭುತವಾಗಿದೆ..