Prashnottara - VNP208

ಕರ್ಮಸಮರ್ಪಣೆಯಲ್ಲಿ ಹೇಳಬೇಕಾದ ಶ್ಲೋಕ


					 	

ಶ್ರೀಮದ್ ರಾಮಾಯಣ, ಶ್ರೀಮನ್ ಮಹಾಭಾರತ ಮುಂತಾದ ಸಕಲ ಶಾಸ್ತ್ರಗಳ ಅರ್ಥವನ್ನು ನಿರ್ಣಯಿಸುವ ಶ್ರೀಮನ್ ಮಹಾಭಾರತತಾತ್ಪರ್ಯನಿರ್ಣಯ ಎಂಬ ಪರಮಾದ್ಭುತ ಕೃತಿಯನ್ನು ವಿರಚಿಸಿ, ಆ ಗ್ರಂಥವನ್ನು ಶ್ರೀಹರಿಗೆ ಸಮರ್ಪಿಸುವ ಸಂದರ್ಭದಲ್ಲಿ ಶ್ರೀಮದಾಚಾರ್ಯರು ರಚಿಸಿರುವ, ಆ ಗ್ರಂಥದ ಕಡೆಯಲ್ಲಿರುವ ಶ್ಲೋಕ. ಇಡಿಯ ದಿವಸದ ಸತ್ಕರ್ಮಗಳನ್ನು ದೇವರಿಗೆ ರಾತ್ರಿ ಸಮರ್ಪಿಸುವ ಸಂದರ್ಭದಲ್ಲಿ, ಪ್ರತಿಯೊಂದು ಸತ್ಕರ್ಮವನ್ನು ಸಮರ್ಪಿಸುವ ಸಂದರ್ಭದಲ್ಲಿ ಮಾಡಬೇಕಾದ ಅನುಸಂಧಾನ ಪ್ರಾರ್ಥನೆಗಳನ್ನು ತಿಳಿಸುವ ಈ ದಿವ್ಯಶ್ಲೋಕದ ಅರ್ಥಾನುಸಂಧಾನ ಇಲ್ಲಿದೆ. ಯಃ ಸರ್ವಗುಣಸಂಪೂರ್ಣಃ ಸರ್ವದೋಷವಿವರ್ಜಿತಃ । ಪ್ರೀಯತಾಂ ಪ್ರೀತ ಏವಾಲಂ ವಿಷ್ಣುರ್ಮೇ ಪರಮಃ ಸುಹೃತ್।


Play Time: 4:48, Size: 5 MB


Download Upanyasa Share to facebook View Comments
4288 Views

Comments

(You can only view comments here. If you want to write a comment please download the app.)
 • Anu,Bangalore

  10:44 AM, 31/05/2022

  ಕೃಷ್ಣಾರ್ಪಣಮಸ್ತು ಎನ್ನುವಲ್ಲಿ ಅವತಾರ ರೂಪದ ಕೃಷ್ಣನಿಗೇ ಮಾತ್ರ ಸಮರ್ಪಣೆಯೋ ಅಥವಾ‌ ನಮ್ಮ ಬಿಂಬ ರೂಪಿಗೋ/ಕರ್ಮಾಧ್ಯಕ್ಷನಿಗೋ....ದಯಮಾಡಿ ವಿವರವಾಗಿ ತಿಳಿಸಿ ಕೊಡಿ.. ಆಚಾರ್ಯರೇ..

  Vishnudasa Nagendracharya

  ಸರ್ವವ್ಯಾಪಿಯಾದ ವಿರಾಡ್ರೂಪ, ವೇದಪ್ರತಿಪಾದ್ಯವಾದ ಶ್ರೀ ಹಯಗ್ರೀವರೂಪ, ಕರ್ಮಾಧ್ಯಕ್ಷವಾದ ಶ್ರೀಕಪಿಲರೂಪ, ಕರ್ಮಫಲಪ್ರದವಾದ ಶ್ರೀಕೃಷ್ಣರೂಪ, ಸಮಗ್ರ ಗುರ್ವಂತರ್ಯಾಮಿಯಾದ ಶ್ರೀ ವೇದವ್ಯಾಸರೂಪ, ಭರತಖಂಡದೊಡೆಯನಾದ ಬದರೀನಾರಾಯಣರೂಪ, ನಮ್ಮ ಅಂತರ್ಯಾಮಿಯಾದ ಶ್ರೀಭೂಸಮೇತಶ್ರೀಮನ್ನಾರಾಯಣರೂಪ ಇಷ್ಟು ರೂಪಗಳು, ಮತ್ತು ಆ ಸಮಯಕ್ಕೆ ಇನ್ನು ಯಾವಯಾವ ಭಗವಂತನ ರೂಪಗಳು ನೆನಪಿಗೆ ಬರುತ್ತವೆಯೋ ಆ ಎಲ್ಲ ಭಗವದ್ರೂಪಗಳಲ್ಲಿ ಅಭೇಧವನ್ನು ಚಿಂತನೆ ಮಾಡಿ ಕರ್ಮ ಸಮರ್ಪಣೆ ಮಾಡಬೇಕು. 
  
 • Krishna Achar,Ballari

  8:21 PM , 01/06/2021

  ಗುರುಗಳೇ ತಮಗೆ ಹೃತ್ಪೂರ್ವಕ ಸಾಷ್ಟಾಂಗ ನಮಸ್ಕಾರಗಳು .
  
  ನಾವು ಸತ್ಕರ್ಮ ಸಮರ್ಪಣೆ 
  ಮಾಡುವಾಗ , ಕೊನೆಯಲ್ಲಿ ,
  
   "ಶ್ರೀ ಕೃಷ್ಣಾರ್ಪಣಮಸ್ತು" ಎನ್ನುವ 
  
  ಸಂಪ್ರದಾಯವಿದೆ .
  
  
  ಭಗವಂತನಿಗೆ ಅನೇಕ ನಾಮಗಳಿದ್ದರೂ , 
  
  "ಕೃಷ್ಣ" ಎನ್ನುವ ನಾಮವೇ 
  
  ಬಳಕೆಯಲ್ಲಿದೆ . 
  
  ಕಾರಣ ತಿಳಿಯಬಹುದೇ ?
  
  ದಯಮಾಡಿ ತಿಳಿಸಿ .
  #
  ನಮಸ್ಕಾರಗಳು 🙏 .

  Vishnudasa Nagendracharya

  ಕಲಿಯುಗದಲ್ಲಿ ಶ್ರೀಕೃಷ್ಣರೂಪದ ಆರಾಧನೆಯನ್ನು ಮಾಡಬೇಕು ಎಂದು ಭಾಗವತ ಆದೇಶಿಸುತ್ತದೆ. ಕಾರಣ, ನಮಗೆ ಅತ್ಯಂತ ಹತ್ತಿರದ ಅವತಾರವನ್ನು ನಾವು ಆರಾಧಿಸಬೇಕು. 
  
  ಬುದ್ಧಾವತಾರ ಅತ್ಯಂತ ಸನಿಹದ ಅವತಾರವಾದರೂ, ದೈತ್ಯರನ್ನು ಮೋಹಗೊಳಿಸಲು ಮಾಡಿದ ಮೋಹಾವತಾರವಾದ್ದರಿಂದ ಅದನ್ನು ವಿಶೇಷವಾಗಿ ಆರಾಧಿಸುವಂತಿಲ್ಲ. ಹೀಗಾಗಿ ಶ್ರೀಕೃಷ್ಣರೂಪಕ್ಕೇ ಸಮರ್ಪಣೆ. 
  
  ಮತ್ತು ಆಚಾರ್ಯರು ಪ್ರತಿಷ್ಠಾಪನೆ ಮಾಡಿದ ಮೂರ್ತಿ ಶ್ರೀಕೃಷ್ಣ. ಆಚಾರ್ಯರಿಗೆ ಶ್ರೀ ವೇದವ್ಯಾಸದೇವರು ನೀಡಿದ ಎರಡೂ ಪ್ರತಿಮೆಗಳೂ ಕೃಷ್ಣಪ್ರತಿಮೆ. (ಒಂದು ಶ್ರೀಮದ್ ವ್ಯಾಸರಾಜಸಂಸ್ಥಾನದಲ್ಲಿರುವ ಮೂಲಗೋಪಾಲಕೃಷ್ಣ. ಎರಡನೆಯದು ಶ್ರೀ ಶ್ರೀಪಾದರಾಜಸಂಸ್ಥಾನದಲ್ಲಿರುವ ಗೋಪೀನಾಥ). 
  
  ಹೀಗಾಗಿ ಕೃಷ್ಣರೂಪಕ್ಕೇ ಸಮರ್ಪಣೆ. 
 • Gangadhar Shetty,Bangalore

  12:54 PM, 02/06/2021

  🙏🙏🙏
 • Jyothi Gayathri,Harihar

  2:18 PM , 26/02/2021

  🙏🙏🙏🙏🙏
 • V. Sridharan,Chennai

  10:53 PM, 08/02/2021

  Namasaragalu
 • Sampada,Belgavi

  12:30 PM, 06/11/2020

  🙏🙏🙏🙏