Prashnottara - VNP215

26-04-2022 ಏಕಾದಶಿ ವಿವರ


					 	

ಈ ಬಾರಿ ದಶಮೀ, ಏಕಾದಶಿ, ದ್ವಾದಶಿಗಳ ಅನುಷ್ಠಾನದ ವಿವರ. ವಿಶೇಷ ಸೂಚನೆ — ಈ File ನ್ನು ನೀವು ಈಗಾಗಲೇ Download ಮಾಡಿದ್ದರೆ Delete ಮಾಡಿ ಮತ್ತೊಮ್ಮೆ Download ಮಾಡಿ. ಈ ಪುಟದ ಬಲಗಡೆಯ ಮೇಲ್ಭಾಗದಲ್ಲಿ Delete button ಇದೆ. Please delete and download the file and download again. Delete button is located on the right top of this page.


Download Article Share to facebook View Comments
14587 Views

Comments

(You can only view comments here. If you want to write a comment please download the app.)
 • Rajendra Koushik,Delhi

  6:56 PM , 25/04/2022

  ವಿದ್ಧೇಕಾದಶಿಯ ಬಗ್ಗೆ ಇನ್ನಷ್ಟು ತಿಳಿಸಿ ಕೊಡಿ, ಯಾಕೆ ಅಂದರೆ ಪಂಚಾಂಗ (app) hindu calendar app ಅಲ್ಲಿ  ರಾತ್ರಿ ಒಂದು ಗಂಟೆ 37 ನಿಮಿಷಕ್ಕೆ ದಶಮಿ ಮುಗಿಯುತ್ತದೆ ಎಂದು ಬರೆದಿದೆ, ಏಕಾದಶಿಗೆ ದಶಮಿ ಸಂಪರ್ಕ ಇಲ್ಲ ಆದರೂ ಹೇಗೆ ವಿದ್ದೇಕಾದಶಿ 😀 ತಲೆಹರಟೆ ಆದರೆ ಕ್ಷಮಿಸಿ 🙏😀

  Vishnudasa Nagendracharya

  ಖಂಡಿತ ತಲೆಹರಟೆ ಅಲ್ಲ. ನೀವು ಹಿಂದಿನ ಕಾಮೆಂಟಿನಲ್ಲಿಯೇ ಪ್ರಶ್ನೆ ಕೇಳಿದಿರಿ. ಆದರೆ, ಕಾಮೆಂಟಿನಲ್ಲಿ ಉತ್ತರಿಸುವಷ್ಟು ಸಣ್ಣ ವಿಷಯವಲ್ಲ ಅದು ಎನ್ನುವದಕ್ಕೆ ನಾನು ಉತ್ತರಿಸರಿಲಿಲ್ಲ. ಆದಷ್ಟು ಸಂಕ್ಷಿಪ್ತವಾಗಿ ತಿಳಿಸಲು ಪ್ರಯತ್ನಿಸುತ್ತೇನೆ. 
  
  ನೀವು ನೋಡುತ್ತಿರವ ಕ್ಯಾಲೆಂಡರ್ ಗಳು ದೃಗ್ಗಣಿತಕ್ಕೆ ಸಂಬಂಧಿಸಿದ್ದು. ಇವತ್ತಿನ ಎಲ್ಲ ದೃಗ್ಗಣಿತ ಪಂಚಾಂಗಗಳೂ Western ephimeries ನ್ನು ಆಧರಿಸಿ ತಯಾರಿಸುವ ಪಂಚಾಂಗಗಳು. ಅದರ ಪ್ರಕಾರ ಆಗುವ ಸೂರ್ಯೋದಯ ಸೂರ್ಯಾಸ್ತ ಮುಂತಾದವುಗಳು ವಾಸ್ತವಿಕ ಸೂರ್ಯೋದಯಾದಿಗಳಿಗಿಂತ ಒಂದು ಸೆಕೆಂಡಿನಿಂದ 5 ನಿಮಿಷಗಳವರೆಗೆ ವ್ಯತ್ಯಾಸವನ್ನು ಹೊಂದಿರುತ್ತವೆ. ಹೀಗಾಗಿ ಸೂರ್ಯೋದಯ ಸೂರ್ಯಾಸ್ತಗಳನ್ನು ಬೇರೆಯ ರೀತಿಯಲ್ಲಿ ಲೆಕ್ಕ ಹಾಕಿ ಪಂಚಾಂಗಗಳಲ್ಲಿ ನೀಡಿರುತ್ತಾರೆ. 
  
  ಆದರೆ, ಸೂರ್ಯೋದಯ, ಸೂರ್ಯಾಸ್ತ, ಗ್ರಹಣ, ಚಂದ್ರ ಮೊದಲಾದ ಸಕಲ ಆಕಾಶಕಾಯಗಳ ಚಲನೆಗಳನ್ನು ಅತ್ಯಂತ ಕರಾರುವಾಕ್ಕಾಗಿ ನಿರೂಪಿಸುವ ಗ್ರಂಥ ಸೂರ್ಯಸಿದ್ಧಾಂತ. ಶ್ರೀ ಸೂರ್ಯದೇವರು ಮಯಾಸುರರಿಗೆ ಉಪದೇಶಿಸಿದ ಗ್ರಂಥರತ್ನವದು. ನಮ್ಮ ಸಕಲ ಅನುಷ್ಠಾನಗಳೂ ಅದರ ಮೇಲೆಯೇ ಅವಲಂಬಿತವಾಗಿರುವದು. ಹೀಗಾಗಿ ಅದರ ಲೆಕ್ಕ ಅತ್ಯಂತ ಆವಶ್ಯಕ. ವಾಸ್ತವಿಕವಾಗಿ ಸೂರ್ಯಸಿದ್ಧಾಂತ ಪಂಚಾಂಗವೇ ದೃಗ್ಗಣಿತ ಪಂಚಾಂಗ. ಬೇರೆ ಅಲ್ಲ. 
  
  ಈ ಸೂರ್ಯಸಿದ್ಧಾಂತದ ಲೆಕ್ಕಾಚಾರವನ್ನೂ ಸಹ ಇಂದಿನ ಪಂಚಾಂಗಕರ್ತರು ಸರಿಯಾಗಿ ಲೆಕ್ಕ ಹಾಕುತ್ತಿಲ್ಲ. ಅವರೂ ಸಹ ಬಹುತೇಕ ಪಾಶ್ಚಾತ್ಯರ ಲೆಕ್ಕಾಚಾರಗಳನ್ನು ಅವಲಂಬಿಸಿಕೊಂಡಿದ್ದಾರೆ. 
  
  ಈ ಸೂರ್ಯಸಿದ್ಧಾಂತದ ಲೆಕ್ಕಾಚಾರವನ್ನು ಅತ್ಯಂತ ಕರಾರುವಾಕ್ಕಾಗಿ, ಒಂದು ಮಿಲಿಸೆಕೆಂಡೂ ಸಹ ವ್ಯತ್ಯಾಸ ಉಂಟಾಗದ ಹಾಗೆ, ಲೆಕ್ಕಾಚಾರವನ್ನು ಶ್ರೀಬ್ರಹ್ಮಣ್ಯತೀರ್ಥಗುರುಸಾರ್ವಭೌಮರ ಅನುಗ್ರಹದಿಂದ ಸಿದ್ಧಪಡಿಸಿದ್ದೇನೆ. ಆ ಲೆಕ್ಕಾಚಾರಗಳೆಲ್ಲ ಈಗ ಕೋಡಿಂಗ್ ಹಂತದಲ್ಲಿದೆ. ಅವು ಮುಗಿದ ತಕ್ಷಣ ವಿಶ್ವನಂದಿನಿಯಲ್ಲಿ ಸಮಗ್ರ ಜನತೆಯ ಮುಂದೆ ಪ್ರಸ್ತುತ ಪಡಿಸುತ್ತೇನೆ. ನೀವು ವಿಶ್ವದ ಯಾವುದೇ ಸ್ಥಳದಲ್ಲಿದ್ದರೂ ಸಹ ನಿಖರವಾಗಿ ತಿಥಿ, ನಕ್ಷತ್ರಾದಿಗಳನ್ನು ತಿಳಿಸುವ ಮತ್ತು ಧರ್ಮಶಾಸ್ತ್ರದ ವಿಷಯಗಳನ್ನೊಳಗೊಂಡ ವಿಭಾಗ ವಿಶ್ವನಂದಿನಿಯಲ್ಲಿ ಬರಲಿದೆ. 
  
  ಅದರ ಆಧಾರದ ಮೇಲೆ ಲೆಕ್ಕಾಚಾರ ಹಾಕಿರುವದರಿಂದಲೇ ಅತ್ಯಂತ ನಿಖರವಾಗಿ ಫಲಗಳನ್ನು ಪಡೆಯಲು ಸಾಧ್ಯವಾಗಿದೆ. ವಾಸ್ತವಿಕವಾಗಿ ಈ ತಿಥಿ-ನಕ್ಷತ್ರಗಳ ವಿಷಯವೆಲ್ಲವೂ ಪ್ರತ್ಯಕ್ಷಸಿದ್ಧ. Undisputable ಆದ ವಿಷಯಗಳಿವು. ಕಾರಣ ತಿಥಿ ಎಂದರೆ ಸೂರ್ಯ ಮತ್ತು ಚಂದ್ರರ ನಡುವಿನ ನಿಖರ ಅಂತರವಷ್ಟೆ. ಮತ್ತೇನೂ ಅಲ್ಲ. ವಿಶ್ವನಂದಿನಿಯಲ್ಲಿ ಪ್ರತಿಕ್ಷಣ ಸೂರ್ಯ ಚಂದ್ರರು ವಿಶ್ವದ ಯಾವ ಸ್ಥಳದಿಂದ ಹೇಗೆ ಕಾಣುತ್ತಾರೆ, ಆಕಾಶದಲ್ಲಿ ಎಲ್ಲಿದ್ದಾರೆ, ಅವರಿಬ್ಬರ ಮಧ್ಯದಲ್ಲಿ ಎಷ್ಟು ಅಂತರವಿದೆ ಎನ್ನುವದನ್ನು Animation ಮುಖಾಂತರ ತೋರಿಸಿಕೊಡುವವನಿದ್ದೇನೆ. ನೀವು ಪ್ರತಿಯೊಬ್ಬರೂ ಅದನ್ನು ನಿಮ್ಮ ಕಣ್ಣುಗಳಿಂದ ಕಂಡು ನಿರ್ಣಯಿಸಬಹುದು. 
  
  ಹೀಗೆ ಸೂರ್ಯಸಿದ್ಧಾಂತವನ್ನೇ ನಾವು ತಿಥಿಯ ನಿರ್ಣಯಕ್ಕೆ ಅನುಸರಿಸಬೇಕು. ಆ ಸೂರ್ಯಸಿದ್ಧಾಂತದಿಂದ ದೊರೆಯವ ದಶಮೀ ಘಳಿಗೆಗಳಿಗೆ ಅಧಿಕವಾಗಿ ಮತ್ತಷ್ಟು ಸೇರಿಸಬೇಕು ಎಂದು ಶ್ರೀಮತ್-ತ್ರಿವಿಕ್ರಮಪಂಡಿತಾಚಾರ್ಯರು ತಿಳಿಸಿದ್ದಾರೆ. ಅದಕ್ಕೆ ವ್ಯಾಖ್ಯಾನ ಮಾಡುತ್ತ ಭಾವಿಸಮೀರ ಶ್ರೀವಾದಿರಾಜತೀರ್ಥ ಗುರುಸಾರ್ವಭೌಮರು ಏಕಾದಶೀ ನಿರ್ಣಯದಲ್ಲಿ, ಶ್ರೀ ಕೃಷ್ಣಾಚಾರ್ಯರು ಸ್ಮೃತಿಮುಕ್ತಾವಲಿಯಲ್ಲಿ ನೀಡಿದ ನಿರ್ಣಯಗಳ ಅನುಸಾರವಾಗಿ (ಈ ಕಾಮೆಂಟಿನ ಮಟ್ಟಿಗೆ) ಒಂದು ಸಾಮಾನ್ಯ ಲೆಕ್ಕ ಹೇಳುವದಾದರೆ ದಶಮೀ ತಿಥಿಯು ಹಿಂದಿನ ಸೂರ್ಯೋದಯದಿಂದ ಆರಂಭಿಸಿ, ಸೂರ್ಯಸಿದ್ಧಾಂತದ ಪ್ರಕಾರ 52ನೆಯ ಗಳಿಗೆ ದಾಟಿಬಿಟ್ಟರೆ ದಶಮೀ ವೇಧ ಇದ್ದಂತೆ ನಿರ್ಣಯ ಎಂದು. 
  
  ಎಲ್ಲ ಮಠದವರ ಪಂಚಾಂಗಗಳ ಪ್ರಕಾರವೂ ಆ ಬಾರಿ ದಶಮಿ 53 ಗಳಿಗೆಗಳನ್ನು ದಾಟಿದೆ. ಹೀಗಾಗಿ ವೇಧ ಇರುವದು ನಿರ್ಣಯ. 
  
  ನೀವಿರುವ ದೆಹಲಿಗೇ ಲೆಕ್ಕ ಹೇಳುವದಾದರೆ 53 ಗಳಿಗೆ 30ನೇ ಪಲ, 22 ನೇ ವಿಪಲಕ್ಕೆ ದಶಮಿ ಮುಗಿಯುತ್ತದೆ. 
  
  ಇನ್ನು ಉತ್ತರಾದಿಮಠದ ಶ್ರೀ ವಿದ್ಯಾಧೀಶ ತೀರ್ಥರು ಆ ಮಠದವರಿಗೆ ಬರೆದು ಕೊಟ್ಟಿರುವ ಪದಕದ ಅನುಸಾರಿಯಾಗಿ ಲೆಕ್ಕ ಹಾಕಿದರೂ ಸಹ, ಅವರು ನೀಡಿರುವ ಗಡುವಿಗಿಂತ ಕೇವಲ ಮೂರು ನಿಮಿಷಗಳ ಮುಂಚೆ ದಶಮಿ ಮುಗಿಯುತ್ತಿದೆ. ಹೀಗಾಗಿ ವೇಧದ ಸಂಶಯ ಇದ್ದೇ ಇದೆ. 
  
  ದಶಮೀವೇಧದ ವಿಷಯದಲ್ಲಿ ಎಳ್ಳಷ್ಟು ಸಂಶಯ ಬಂದರೂ, ಅದನ್ನು ತೊರೆದು ದ್ವಾದಶಿಯಂದು ಉಪವಾಸ ಮಾಡಬೇಕು ಎಂದು ಶ್ರೀಮದಾಚಾರ್ಯರು ಸ್ಪಷ್ಟವಾಗಿ ನಿರ್ಣಯಸಿದ್ದಾರೆ. ಹೀಗಾಗಿ, 26-04-2022 ರಂದು ಉಪವಾಸ ಮಾಡುವದು ಸರ್ವಥಾ ಸಲ್ಲದು. 
  
  ಇಲ್ಲಿ ವಿವರಿಸಬೇಕಾದ ಹತ್ತಾರು ವಿಷಯಗಳಿವೆ. ಕಾಮೆಂಟಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಮುಂದೆ ಎಲ್ಲವೂ ಸಚಿತ್ರ, ಸವಿವರವಾಗಿ ಕೇವಲ ಏಕಾದಶಿಯಷ್ಟೇ ವರ್ಷದ 360 ತಿಥಿಗಳ ನಿರ್ಣಯ ಸಜ್ಜನರ ಕೈಸೇರಲಿದೆ. ಸದ್ಯಕ್ಕಿಷ್ಟು ಸಾಕು. 
  
 • Vikram Shenoy,Doha

  8:44 PM , 25/04/2022

  ಆಚಾರ್ಯರಿಗೆ ನಮನಗಳು. ಭಾರತ ದೇಶದ ಪಶ್ಚಿಮದ ಪ್ರದೇಶ್ಗಗಳಿಗೆ ನಾಳೆ ಎಂದರೆ ೨೬ಕ್ಕೇನೆ ಏಕಾದಶಿ ಉಪವಾಸ ಆದರೆ, ಸರಿಯೇ?? ಪಂಚಾಂಗ ಈ ಪ್ರದೇಶಕ್ಕೆ ೨೫ ನೇ ರಾತ್ರಿ ೧೧:೦೭ ಕ್ಕೆನೆ ಏಕಾದಶಿ ತಿಥಿ ಸುರು ಆಗಿದೆ. ( ನಿಮ್ಮ ಭಾರತ ದೇಶದ ಹೊರಗಡೆ ಮಾಡುವ ವೃತಕ್ಕೆ ಫಲ ಕಮ್ಮಿ ಎಂಬ ವಿಚಾರಕ್ಕೆ ನಾನು against ಇಲ್ಲ. )

  Vishnudasa Nagendracharya

  ನೀವಿರುವ "ದೋಹ" ದಲ್ಲಿ ರಾತ್ರಿ 11:07 ಕ್ಕೆ ದಶಮಿ ಮುಗಿಯುತ್ತಿರುವದು Western ephimaries ಅನ್ನು ಆಧರಿಸಿದ ಪಂಚಾಂಗದ ಪ್ರಕಾರ. ಅದು ತಪ್ಪು. 
  
  ವಾಸ್ತವಿಕವಾಗಿ ರಾತ್ರಿ 49 ಗಳಿಗೆ 11 ಪಲ 25ನೇ ವಿಪಲಕ್ಕೆ, ಅಂದರೆ ಮಧ್ಯರಾತ್ರಿ ಒಂದೂ ಮುಕ್ಕಾಲರ ಸುಮಾರಿಗೆ ದೋಹಾದಲ್ಲಿ ದಶಮಿ ಮುಗಿಯುತ್ತಿದೆ. 
  
  ಸೂರ್ಯೋದಯದಿಂದ 52ನೇ ಗಳಿಗೆಗೆ ದಶಮೀ ಇದ್ದರೆ ಉಪವಾಸ ಮಾಡಬಾರದು. ನಿಮ್ಮಲ್ಲಿ 49ನೇ ಗಳಿಗೆಗೇ ದಶಮಿ ಮುಗಿಯುತ್ತಿರುವದರಿಂದ ವೇಧವಿಲ್ಲ. ಹೀಗಾಗಿ ನಿಮಗೆ 26-04-2022. ರಂದೇ ಉಪವಾಸ. 
  
  ಮತ್ತು ನಿಮಗೆ (Doha) ದ್ವಾದಶಿ ಹರಿವಾಸರವೂ ಇಲ್ಲ. ಹರಿವಾಸರ ಮುಗಿದ ಮೇಲೆಯೇ ಸೂರ್ಯೋದಯವಾಗುತ್ತಿದೆ. ಹೀಗಾಗಿ ಸೂರ್ಯೋದಯಾನಂತರ ನೀವು ನೈವೇದ್ಯ ಮಾಡಿ ಪಾರಣೆ ಮಾಡಬಹುದು. 
 • RAHUL H R,Bengaluru

  6:16 AM , 26/04/2022

  Shree Gurubyoh namaha.
  Ekadashi divasadalli vipareeta nidre barutide yenu madabeku antha thilisi?

  Vishnudasa Nagendracharya

  ಲಕ್ಷ್ಮಣ ಅರ್ಜುನರ ಸ್ಮರಣೆ, ಲಕ್ಷ್ಮಣ ಅರ್ಜುನರ ಪರಾಕ್ರಮದ ಚಿಂತನೆ, ಲಕ್ಷ್ಮಣ ಅರ್ಜುನರ ಚರಿತ್ರೆ ಶ್ರವಣ ಮಾಡುವದರಿಂದ ಕೇವಲ ಏಕಾದಶಿಯಲ್ಲ, ಒಟ್ಟಾರೆ ನಿದ್ರೆಯ ಮೇಲೆ ಗೆಲುವನ್ನು ಸಾಧಿಸುತ್ತೇವೆ. 
  
  ಶ್ರೀಮದ್ ರಾಮಾಯಣದಲ್ಲಿ ಈಗ ಬರುತ್ತಿರುವ ಶ್ರೀ ಲಕ್ಷ್ಮಣರ ಚರಿತ್ರೆಯ ಉಪನ್ಯಾಸಗಳನ್ನೆಲ್ಲ ಗುರುತು ಮಾಡಿಟ್ಟುಕೊಂಡು ಪ್ರತಿದಿವಸ ಶ್ರವಣ ಮಾಡಿ. 
  
  ಶ್ರೀಹರಿಭಕ್ತಿಸಾರದ ಉಪನ್ಯಾಸ ಮಾಲಿಕೆಯಲ್ಲಿ ಅರ್ಜುನರ ಮಹಾಪರಾಕ್ರಮದ ಚಿತ್ರಣದ ಉಪನ್ಯಾಸವಿದೆ. ಕೇಳಿ. 
 • Vikram Shenoy,Doha

  12:50 AM, 26/04/2022

  ಅತೀ ಉತ್ತಮ, ಕೋಟಿ ವಂದನೆಗಳು ಆಚಾರ್ಯರಿಗೆ. ಚಿರ ಋಣಿ ನಿಮಗೆ ಮತ್ತು ವಿಶ್ವನಂದಿನಿಗೆ. ಅಹೋ ಭಾಗ್ಯ
 • Rajendra Koushik,Delhi

  8:37 PM , 25/04/2022

  ಮತ್ತೆ ನಿಮ್ಮ ಎಲ್ಲಾ ಯೋಜನೆಗಳು ಎಲ್ಲಾ ಪ್ರಯತ್ನಗಳು ಈ ತಂತ್ರಜ್ಞಾನದ ಮೂಲಕ ತಲುಪಿಸುವ ಪ್ರಯತ್ನಗಳು ಹರಿ ಇಚ್ಛೆ ಅಂತೆ ಹರಿ ಪ್ರೇರಣೆಯಿಂದ ಸಜ್ಜನರ ಉದ್ಧಾರಕ್ಕಾಗಿ ಪ್ರೇರಣೆಯಾಗಲಿ ಎಂದು ಹರಿಯನ್ನೇ ಪ್ರಾರ್ಥಿಸುತ್ತೇವೆ 🙏😀

  Vishnudasa Nagendracharya

  ಖಂಡಿತ. 
 • Rajendra Koushik,Delhi

  8:08 PM , 25/04/2022

  🙏🙏🙏 ಸಂಶಯ ಬಂದರೆ ಸಲ್ಲದು, ಬ್ರಾಹ್ಮಣರು ಅಥವಾ ಹಿರಿಯರು ಹೇಳುವುದು ಸರಿ. ಆಮೇಲೆ ಈ ಬಗ್ಗೆ, ಹೋದ ವರ್ಷ ನಮ್ಮ ದಿಲ್ಲಿಯಲ್ಲಿನ ಒಬ್ಬರು ಪಂಡಿತರ ( ಪುರೋಹಿತರು) ಜೊತೆ ವಿಷಯ ವಿನಿಮಯ ಮಾಡಿಕೊಂಡಿದ್ದೆ, ಅವರು ಈ 52 ಗಳಿಗೆ ಬಗ್ಗೆ ಹೇಳಿದ್ದರು ಆದರೆ ಅವರು ಏಕಾದಶಿ ಅಂತ ಬರೆದು ಬಿಟ್ಟಿದ್ದಾರೆ ದೇವಸ್ಥಾನದಲ್ಲಿ, ಆಗ ಅವರಿಗೆ ಸಾಮನ್ಯವಾಗಿ ದೊರೆಯುತ್ತಿದ್ದ ಪಂಚಾಂಗ ಇರಲಿಲ್ಲ ( ಹೆಸರು ಗೊತ್ತಿಲ್ಲ, ಹಿಂದಿಯದು ಅದು) ಈಗ ಅದು ಯಾರೋ ದಾನಿಗಳ ನೆರವಿನಿಂದ ಮೊನ್ನೆ ಅವರ ಕೈ ಸೇರಿತು, ಅವರಿಗೂ ಈ ವಿಷಯ ಹೇಳಿ ವಿಷಯ ವಿನಿಮಯ ಮಾಡಿಕೊಳ್ಳುತ್ತೇನೆ 😀😀🙏🙏 ನಿಜವಾಗಿಯೂ ತುಂಬಾ ಖುಷಿ ಆಯಿತು ನಿಮ್ಮ ಸಹನೆ ಹಾಗೂ ಚಿಕ್ಕವರ ಪ್ರಶ್ನೆಗೆ ಉತ್ತರಿಸುವ ನಿಮ್ಮ ದೊಡ್ಡತನ 🙏🙏
 • Srinivasa Deshpande,Chennai

  8:08 PM , 25/04/2022

  I appreciate Rajendra Koushik for asking this question.
  
  Acharyare, Bhakti
  Purvaka sashtanga namaskaragaLu. 
  
  Your vidwat is unfathomable to us.
 • Vikram Shenoy,Doha

  12:56 PM, 25/04/2022

  ಕೋಟಿ ಧನ್ಯವಾದಗಳು ಆಚಾರ್ಯರಿಗೆ
 • Rajendra Koushik,Delhi

  11:35 AM, 25/04/2022

  ಇದು ಹೇಗೆ ವಿದ್ಧೇಕಾದಶಿ ಅಂತ ಗೊತ್ತಾಗಿಲ್ಲ, ನೀವು ಹೇಳಿರುವ 68 ಮತ್ತು 103 ರ ಮಧ್ಯೆ ನಾವು ಭಾರತೀಯರು ಇದ್ದೇವೆ, ಆದ್ದರಿಂದ ನಾವು ಮಾಡಬಹುದು ಅಲ್ಲವಾ ??? ತಪ್ಪಿದ್ದರೆ ತಿದ್ದಿ

  Vishnudasa Nagendracharya

  +103 ಅಲ್ಲ. -103 (Minus) ಲೇಖನದಲ್ಲಿ ಸ್ಪಷ್ಟವಾಗಿ ಮೈನಸ್ ಚಿಹ್ನೆ ಹಾಕಿದ್ದೇನೆ. 
  
  ನಮ್ಮ ಭಾರತದ ಪಶ್ಚಿಮದ ತುತ್ತತುದಿಯಲ್ಲಿರುವ ದ್ವಾರಕೆ ಇರುವದೇ 68.9 ರಲ್ಲಿ. ಅದಕ್ಕಿಂತ ಪೂರ್ವದಲ್ಲಿರುವ ನಾವೆಲ್ಲರೂ 68ಕ್ಕಿಂತ ಅಧಿಕದಲ್ಲಿದ್ದೇವೆ. 
  
  68ಕ್ಕಿಂತ ಕಡಿಮೆ ಇರಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. 
  
  68ಕ್ಕಿಂತ ಕಡಿಮೆ ಎಂದರೆ, ಪಾಕೀಸ್ತಾನ, ಅಫಘನಿಸ್ತಾನ, ಸೌದಿ ಅರೇಬಿಯಾ, ಆಫ್ರಿಕಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೇರಿಕಾದಲ್ಲಿನ New mexico ವರೆಗಿನ ಪ್ರದೇಶಗಳು. ಇವು -103 ಕ್ಕಿಂತ ಹೆಚ್ಚು ಮತ್ತು 68ಕ್ಕಿಂತ ಕಡಿಮೆ ಸಂಖ್ಯೆಯ Longitude ಗಳನ್ನು ಹೊಂದಿವೆ. 
  
  ಭಾರತ ಮತ್ತು ಭಾರತದಿಂದ ಪೂರ್ವದಲ್ಲಿರುವ ಎಲ್ಲ ಪ್ರದೇಶಗಳಲ್ಲಿಯೂ 27ರಂದು ಉಪವಾಸ.
 • Guruprasad,Chennai

  12:52 AM, 24/03/2021

  🙏🙏🙏