(You can only view comments here. If you want to write a comment please download the app.)
bindu madhava,Bangalore
9:17 PM , 12/04/2021
ಗುರುಗಳೇ ಮೃತರಾದವರ ಮನೆಯಲ್ಲಿ ಒಂದು ವರ್ಷದವರೆಗೆ ಹಬ್ಬವಿರುವುದಿಲ್ಲ, ಅವರು ತೋರಣ ಒಂದು ವರ್ಷದ ಒಳಗೆ ಮನೆಯಲ್ಲಿ ಕಟ್ಟುವಂತಿಲ್ಲವೇ.ಏಕೆಂದರೆ ವೈಕುಂಠ ಸಮಾರಾಧನೆ ಮಾಡುವ ದಿವಸ ಮನೆಯಲ್ಲಿ ತೋರಣವನ್ನು ಕಟ್ಟಿರುತ್ತಾರೆ, ಅಡಜಕಾಗಿ ಈ ಪ್ರಶ್ನೆ
jayaramacharya benkal,Bengaluru
6:51 PM , 12/04/2021
ಹರೇ ಶ್ರೀನಿವಾಸಾ, ನಮ್ಮ ಉತ್ತರ ಕರ್ನಾಟಕದ ಕಡೆಗೆ ಜೋಳದ ದಂಟಿನಿಂದ ಸಿಬರು ತೆಗೆದು ಮಾವಿನ ತೋರಣ ಕಟ್ಟುತ್ತೇವೆ.
Vishnudasa Nagendracharya
ಸತ್ಯ.
ಶ್ರೀಮದುಡುಪಿಯ ಕಡೆಯ ಸಜ್ಜನರು ಅಡಿಕೆ ಹೂವನ್ನು ಕಟ್ಟುತ್ತಾರೆ.
ಶ್ರೀ ಶ್ರೀಕಂಠೇಶ್ವರದೇವರನ್ನು ಮನೆದೇವರನ್ನಾಗಿ ಪಡೆದಿರುವ ನಾವು ಬಿಲ್ವದ ಗೊಂಚಲನ್ನು ಮದುವೆ ಮುಂಜಿಗಳಲ್ಲಿ ಕಟ್ಟುತ್ತೇವೆ.
ಶ್ರೀನಿವಾಸದೇವರನ್ನು ಮನೆದೇವರನ್ನಾಗಿ ಪಡೆದಿರುವವರು ಬಿದಿರಿನ ಎಲೆಗಳನ್ನು ಕಟ್ಟುತ್ತಾರೆ.
ಹಾಗೆಯೇ ಉತ್ತರ ಕರ್ನಾಟಕದಲ್ಲಿ ಅನೇಕ ರೀತಿಯ ಸಂಪ್ರದಾಯಗಳಿವೆ.
ಆಯಾಯ ಕುಲದ ಆಚರಣೆಗೆ ತಕ್ಕ ಹಾಗೆ ಅವೆಲ್ಲವನ್ನೂ ಆಚರಿಸಬೇಕು.
Chandrika prasad,Bangalore
6:51 PM , 12/04/2021
ನಮಸ್ಕಾರ ಗಳು 🙏 ನೀವು ತಿಳಿಸಿ ಕೊಟ್ಟಂತೆಯೇ ನಮ್ಮ ಮನೆಯಲ್ಲಿ ತೋರಣ ಹಿರಿಯರ ಮಾರ್ಗದರ್ಶನ ದಲ್ಲಿ ಕಟ್ಟಿರುತ್ತೇ ವೆ. ಸಂತೋಷವಾಯ್ತು.1 ಸಣ್ಣ ವಿಚಾರ ದಲ್ಲಿಯಾದರೂ ಸರಿಯಾಗಿ ನೆಡೆದಿರುವೆವು ಅಂತಾ. ಧನ್ಯವಾದಗಳು ಹಾಗೂ ನಮಸ್ಕಾರಗಳು 🙏🙏