ಮೃತವ್ಯಕ್ತಿಯ ದಹನವಾದ ನಂತರ ಆ ಚಿತೆಯ ಮೇಲೆ ಒಂದು ಪುಟ್ಟ ಶಿಲೆಯನ್ನಿಟ್ಟು ಅದರಲ್ಲಿ ಮೃತಜೀವವನ್ನು ಆವಾಹಿಸಲಾಗುತ್ತದೆ. ಅದನ್ನೇ ಪ್ರೇತಶಿಲೆ ಎನ್ನುತ್ತಾರೆ.
ಮುಂದಿನ ಹತ್ತು ದಿವಸಗಳ ಕಾಲ ಆ ಶಿಲೆಯನ್ನಿಟ್ಟುಕೊಂಡೇ ಪಿಂಡಪ್ರದಾನ ಮುಂತಾದ ಕಾರ್ಯಗಳು ನಡೆಯಬೇಕು.
ಅಷ್ಟೂ ದಿವಸಗಳ ಕಾಲ ಆ ಶಿಲೆಯನ್ನು ಕರ್ತೃ ತನ್ನ ಮನೆಯಲ್ಲಿ ಜೋಪಾನ ಮಾಡಿಟ್ಟುಕೊಳ್ಳಬೇಕು.