ಹಸಿ ತರಕಾರಿಯನ್ನು ನೇರವಾಗಿ ನೈವೇದ್ಯ ಮಾಡಬಹುದೇ?
ಬಾಳೆಹಣ್ಣು ಮುಂತಾದ ಹಣ್ಣುಗಳನ್ನು ದೇವರಿಗೆ ನೇರವಾಗಿ ನೈವೇದ್ಯ ಮಾಡುವಂತೆ ಹಸಿ ತರಕಾರಿಯನ್ನೂ ದೇವರಿಗೆ ನೈವೇದ್ಯ ಮಾಡಬಹುದೇ? ಯದ್ಯಥಾ ಭಕ್ಷ್ಯತೇ ಭಕ್ಷ್ಯಂ ತತ್ ತಥೈವ ಪ್ರದಾಪಯೇತ್ ಅನ್ಯಥಾ ತತ್ಪ್ರದಾನೇನ ನ ತತ್ಫಲಮವಾಪ್ನುಯಾತ್ — ಹಲಾಯುಧದಲ್ಲಿ ಉದ್ಧೃತ ಸ್ಮೃತಿವಚನ ಯಾವ ಪದಾರ್ಥವನ್ನು ಯಾವ ರೀತಿ ಉಣ್ಣುತ್ತೇವೆಯೋ ಹಾಗೆಯೇ ಅದನ್ನು ದೇವರಿಗೆ ಸಮರ್ಪಿಸಬೇಕು, ನಾವು ತಿನ್ನಲಿಕ್ಕೆ ಸಾಧ್ಯವಿಲ್ಲದ ಅವಸ್ಥೆಯಲ್ಲಿರುವ ಪದಾರ್ಥವನ್ನು ದೇವರಿಗೆ ಸಮರ್ಪಿಸಬಾರದು. ಸಮರ್ಪಿಸಿದೆ ನೈವೇದ್ಯದ ಫಲ ದೊರೆಯುವದಿಲ್ಲ. ಅರ್ಥಾತ್, ಅದನ್ನು ದೇವರು ಸ್ವೀಕರಿಸುವದಿಲ್ಲ, ಅದು ನೈವೇದ್ಯವಾಗುವದಿಲ್ಲ.