Prashnottara - VNP227

ಅಕ್ಕಿ ಬೇಳೆಗಳನ್ನು ತೊಳೆದ ನೀರಿನ ಮಹಿಮೆ


					 	

ಹೆಣ್ಣುಮಕ್ಕಳು ಅತ್ಯಂತ ಸುಲಭವಾಗಿ ತನ್ನ ಗಂಡನ, ತಂದೆಯ, ತಾಯಿಯ ಕುಲದವರಿಗೆ ಶ್ರಾದ್ಧಫಲವನ್ನು ದೊರಕಿಸಿಕೊಡುವ ಕ್ರಮದ ವಿವರಣೆ. ಹಾಗೂ ಮನೆಯಲ್ಲಿ ಅಡಿಗೆ ಮಾಡುವಾಗ, ಶ್ರಾದ್ಧದಲ್ಲಿ ಮತ್ತು ಅಪರಕರ್ಮದಲ್ಲಿ ಅಕ್ಕಿ ಬೇಳೆಗಳನ್ನು ಎಷ್ಟು ಬಾರಿ ತೊಳೆಯಬೇಕು ಎನ್ನುವದರ ವಿವರ.


Watch Video Share to facebook View Comments
2927 Views

Comments

(You can only view comments here. If you want to write a comment please download the app.)
 • Thejaswini J Hegde,Mangalore

  2:16 PM , 14/06/2021

  Thumba Dhanyawadagalu gurugale 🙏
 • Thejaswini J Hegde,Mangalore

  9:00 PM , 13/06/2021

  Namaskara gurugale🙏 
  Naavu tharakari gallanu shuruvige tholedare saakaguthadeye? Athava addannu cut maadida nanthara kuda tholiya beke gurugale? Dayavittu thilisi 🙏

  Vishnudasa Nagendracharya

  ಆರಂಭದಲ್ಲಿ ತೊಳೆದರೆ ಸಾಕು.
  
  ಸವತೇಕಾಯಿ ಹೀರೇಕಾಯಿ ಮುಂತಾದವನ್ನು ಕತ್ತರಿಸಿದ ನಂತರ ತೊಳೆಯಲು ಸಾಧ್ಯವಿಲ್ಲ.
 • Kushal nayak,Mysuru

  7:53 PM , 13/06/2021

  ನಮಸ್ಕಾರ ಆಚಾರ್ಯರೇ,
  ನಮ್ಮ ಮನೆಯಲ್ಲಿ ಅಕ್ಕಿ ತೊಳೆದ ನೀರು ಹಾಗೂ ತರಕಾರಿ ಮತ್ತು ಹಣ್ಣು ಸಿಪ್ಪೆಗಳನ್ನು ಗಿಡಗಳಿಗೆ ಹಾಕುತೀವಿ ಅದು ಸರಿಯಾ? ಇದು ಹಸುಗಳು ಇಲ್ಲದ ಕಾರಣ.
  ದಯವಿಟ್ಟು ತಿಳಿಸಿ 🙏

  Vishnudasa Nagendracharya

  ಹಸುಗಳಿದ್ದರೆ ಅವಕ್ಕೆ ನೀಡಬೇಕು. ಇಲ್ಲದಿದ್ದರೆ ಗಿಡಗಳಿಗೆ ಹಾಕುವದು ಉತ್ತಮ.
 • Vasudha S,Bangalore

  6:57 PM , 13/06/2021

  ಬಹಳ ಒಳ್ಳೆಯ ವಿಷಯ ತಿಳಿಸಿದ್ದೀರಿ. ಧನ್ಯವಾದಗಳು ಆಚಾರ್ಯರೆ. ಸುತ್ತಮುತ್ತ ಹಸುಗಳು ಇಲ್ಲದಿದ್ದರೆ ಏನು ಮಾಡಬೇಕು?

  Vishnudasa Nagendracharya

  ಅದು ಇಂದಿನ ಪಟ್ಟಣಗಳ ದುರಂತ. ಏನೂ ಮಾಡಲು ಸಾಧ್ಯವಿಲ್ಲ. ಗಿಡಗಳಿಗೆ ಹಾಕಲು ಪ್ರಯತ್ನಿಸಬೇಕು. ಅದೂ ಸಾಧ್ಯವಿಲ್ಲ ಎಂತಾದರೆ ಚೆಲ್ಲಬೇಕಷ್ಟೆ. 
 • V.Padma Sirisha,ಮೈಸೂರು

  6:43 PM , 13/06/2021

  ನಿಜವಾಯಗಿಯೂ ಬಹಳ ಮಹತ್ವದ ವಿಷಯ ಗುರುಗಳೆ ! 
  ಈಗಿನ polished ಧಾನ್ಯಗಳ ಜಮಾನೆಯಲ್ಲಿ ಸುಮಾರು ಜನ ಅಂತಾರೆ, ಒಂದಕ್ಕಿಂತ ಹೆಚ್ಚು ಬಾರಿ ತೊಳೆದರೆ, ಅದರಲ್ಲಿನ vitamins ಹೋಗ್ತವು ಅಂತ. 
  
  ನೀವು ತಿಳಿಸಿದ ವಿಧಾನ ಬಹಳ ಮನಸ್ಸಿಗೆ ನಾಟುವಂತಿದೆ. ಜೊತೆಗೆ 
  ಹೆಣ್ಣು ಮಕ್ಕಳು ಮಾತ್ರವೇ ಇರುವ ತಾಯಂದಿರಗಂತೂ ಬಹಳ ಬಹಳ ಬೇಕಾದ ವಿಷಯವಿದು. 
  
  ನಮ್ಮ ಶಾಸ್ತ್ರದಲ್ಲಿ ಹೆಣ್ಣು ವೇದ ಓದಬಾರದು, ನಮಗೆ ದೇವರ್ನ, ಸಾಲಿಗ್ರಾಮ ಮುಟ್ಟಿ ಪೂಜೆ ಮಾಡೋ ಹಕ್ಕಿಲ್ಲವಾ ಅಂತ ಮಾತಾಡುವ ಹೆಣ್ಣು ಮಕಕಳಿಗೆ ಇದರಿಂದ ಗೊತ್ತಾಗಬೇಕು, ಎಷ್ಟು ಸುಲಭದ ಉಪಾಯಗಳು ನಮಗೆ ಮೋಕ್ಷಕ್ಕೂ ಸಾಧನೆಗಳು ಅಂತ..
  
  
  ನಿಮ್ಮ ವಾಗ್ಝರಿಗೆ ಸಹಕರಿಸುವಂತೆ ಆಶೀರ್ವಾದ ರೂಪದಂತೆ ನಿಮ್ಮ ಹಿಂದೆ ಆನಂದವಾಗಿ ಹರಿಯುತ್ತಿರುವ ನನ್ನ ತಾಯಿ ಕಾವೇರಮ್ಮಗೆ 🙏🏽🙇🏻‍♀️🙏🏽 ಅತ್ಯಮೂಲ್ಯ ವೀಡಿಯೋ ರತ್ನವಿದು.

  Vishnudasa Nagendracharya

  ಸ್ತ್ರೀ ಶೂದ್ರರಿಗೆ ಇರುವಷ್ಟು ಸುಲಭದ ಸಾಧನೆ ಯಾರಿಗೂ ಇಲ್ಲ. 
  
  ಕಲಿಯುಗದ ಬ್ರಾಹ್ಮಣರಿಗೆ ಇರುವಷ್ಟು ಸುಲಭದ ಸಾಧನೆ ಇತರ ಯುಗದ ಬ್ರಾಹ್ಮಣರಿಗಿಲ್ಲ. 
  
  
 • Shravan Prabhu,Kumta taluk near gokarna

  6:12 PM , 13/06/2021

  ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು. 
  ಆಚಾರ್ಯರೇ ಮೃತ ವ್ಯಕ್ತಿಯ ಕ್ರಿಯೆಯನ್ನು ಮಾಡುವಾಗ ಸ್ಮಶಾನದಲ್ಲಿ ಅಕ್ಕಿಯನ್ನು ತೊಳೆಯದೇ ಪಿಂಡವನ್ನು ಮಾಡಬೇಕು ಎಂದು ಹೇಳಿದ್ದೀರಿ. ಅದಾದ ಮೇಲೆ ಮಾರನೇಯ ದಿನ ಅಂದರೆ ಏರ್ಡನೆ ಮೂರನೇ ನಾಲ್ಕನೇ ದಿನದಿಂದ್ ಒಂಬತ್ತನೇ ದಿನದವರೆಗೆ ಮಾಡುವ ನಿತ್ಯ ಕ್ರಿಯೆಯಲ್ಲಿ ಅಕ್ಕಿಯನ್ನು ತೊಳೆಯದೇ ಪಿಂಡವನ್ನು ಮಾಡಬೇಕೇ?
  ದಯವಿಟ್ಟು ತಿಳಿಸಬೇಕೆಂದು ವಿನಂತಿಸಿೊಳ್ಳುತ್ತೇನೆ.
  🙏🙏🙏

  Vishnudasa Nagendracharya

  ಹೌದು. ಸಪಿಂಡೀಕರಣ ಮತ್ತು ಆ ದಿವಸ ಮಾಡುವ ಎಲ್ಲ ಕ್ರಿಯೆಗಳ ವರೆಗೆ ಅಕ್ಕಿಯನ್ನು ತೊಳೆಯದೇ ಅನ್ನ ಮಾಡಿ ಪಿಂಡಪ್ರದಾನ ಮಾಡಬೇಕು.