ಇಲ್ಲ ಇಲ್ಲ. ಮಂತ್ರದಿಂದ ಪಾಂಡವರು ಹುಟ್ಟಿದ್ದಲ್ಲ.
ಯಾವ ದೇವತೆಯಿಂದಾದರೂ ಮಕ್ಕಳನ್ನು ಪಡೆಯುವ ಮಂತ್ರವನ್ನು ಶ್ರೀ ದೂರ್ವಾಸರು ಕುಂತೀದೇವಿಯರಿಗೆ ನೀಡಿದ್ದು.
ಯಾವ ದೇವತೆಯಿಂದ ಮಕ್ಕಳನ್ನು ಪಡೆಯಬೇಕೋ, ಆ ದೇವತೆಯನ್ನು ಚಿಂತಿಸುತ್ತ ಮಂತ್ರ ಪಠಿಸಿದರೆ ಆ ದೇವತೆ ಬರುತ್ತಿದ್ದರು.
ಸೂರ್ಯ, ಯಮಧರ್ಮ ಮತ್ತು ಇಂದ್ರರಿಂದ ಮೈಥುನಕ್ರಮದಿಂದಲೇ ಕುಂತೀದೇವಿಯರು ಮಕ್ಕಳನ್ನು ಪಡೆದದ್ದು.
ವಾಯುದೇವರೊಂದಿಗೆ ಮೈಥುನ ಕ್ರಮ ನಡೆಯುವದಿಲ್ಲ. ವಾಯುದೇವರು ಕುಂತಿಯನ್ನು ಕೇವಲ ಸ್ಪರ್ಶ ಮಾಡುತ್ತಾರೆ, ಅದರಿಂದ ಕುಂತೀದೇವಿಯರು ಗರ್ಭಿಣಿಯಾಗುತ್ತಾರೆ.
ಮನಸ್ಸಿನ ಇಚ್ಛೆಯಿಂದ, ಸ್ಪರ್ಶದಿಂದಲೂ ಮಕ್ಕಳನ್ನು ನೀಡುವ ಸಾಮರ್ಥ್ಯ ದೇವತೆಗಳಿಗಿರುತ್ತದೆ.
ನಮಸ್ಕಾರಗಳು 🙏🏻ತುಂಬಾ ಸರಳವಾಗಿ, ನೇರವಾಗಿ, ದಿಟ್ಟತನದ ಉತ್ತರ ಹಾಗೂ ತಿಳುವಳಿಕೆ ಯ ನುಡಿಗಳನ್ನು ತಿಳಿಸಿದ್ದೀರಾ 🙏🏻ಅರ್ಧ ವಿಚಾರ ತಿಳಿದು ಮನಸ್ಸಿಗೆ ಬಂದಂತೆ ಮಾತನಾಡುವುದು ಈ ಕಲಿಯುಗದ ಕೆಲವು ಜನರ ಅಭಿಪ್ರಾಯ ವಾಗಿದೆ, ಜ್ಞಾನ ದ ಕಣ್ಣುಗಳು ತೆರೆಯಬೇಕು ಎಲ್ಲರೂ ಇದನ್ನು ತಿಳಿಯಲೇಬೇಕಾದ ವಿಚಾರ ವಾಗಿದೆ ಧನ್ಯವಾದಗಳು 🙏🏻