Prashnottara - VNP236

ಈ ಬಾರಿಯ ಕೃಷ್ಣಾಷ್ಟಮಿ


					 	

2021 ರಲ್ಲಿ ಕೃಷ್ಣಾಷ್ಟಮಿಯನ್ನು ಎಂದು ಆಚರಿಸಬೇಕು ಎಂಬ ಪ್ರಶ್ನೆಗೆ ಉತ್ತರ.


Play Time: 18:03, Size: 16.5 MB


Download Article Download Upanyasa Share to facebook View Comments
13588 Views

Comments

(You can only view comments here. If you want to write a comment please download the app.)
 • Sudheendra,Bangalore

  4:37 PM , 31/08/2021

  ಗುರುಗಳೇ, ನಿಮ್ಮ ಉತ್ತರ ಸಮಾಧಾನ ತಂದು ಕೊಟ್ಟಿದೆ ಮತ್ತು ನನ್ನ ಗೊಂದಲ ನಿವರಿಸಿದೆ. ನಿಮಗೆ ನನ್ನ ನಮಸ್ಕಾರಗಳು
 • Sudheendra,Bangalore

  3:56 AM , 31/08/2021

  ಗುರುಗಳೇ ಅಷ್ಟು ದೊಡ್ಡ comment ge ಕ್ಷಮಿಸಿ. ಇದನ್ನು ನನ್ನ ವಿಪ್ರ ಸ್ನೇಹಿತ ನನಗೆ ಕಳುಹಿಸಿ ಜಿಜ್ಞಾಸೆ ಮೂಡಿಸಿದ್ದನೆ. ನಾನು ನಿಮ್ಮ audio ಕೇಳಿದೆ ಹಾಗೂ ಕಳುಹಿಸಿದೆ. ಆದರೂ ನನಗೆ ಅರ್ಧ ರಾತ್ರಿ ರೋಹಿಣಿ ನಕ್ಷತ್ರ ಕೂಡಿದ ಅಷ್ಟಮಿ ಇದ್ದಾಗ ನಾವು ಏಕೆ ಬರಿ ಅಷ್ಟಮಿ ಇದ್ದ ದಿನದಲ್ಲಿ ಆಚರಿಸಿ ಎಂದು ಹೇಳಿದಿರಿ..

  Vishnudasa Nagendracharya

  ಉತ್ತರ ಅತ್ಯಂತ ಸರಳ ಮತ್ತು ಸ್ಪಷ್ಟವಿದೆ. 
  
  ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು “ಅರ್ಧರಾತ್ರೇ ತು ಯದಾ ಕಾಲಾಷ್ಟಮೀ ಭವೇತ್” ಎಂದು ಅರ್ಧರಾತ್ರಿಯಲ್ಲಿ ಅಷ್ಟಮಿ ಇರಬೇಕು ಎಂದು ನಿರ್ಣಯಿಸಿದ್ದಾರೆ. 
  
  ಪುರಾಣಗಳ ಸಾವಿರ ವಾಕ್ಯಗಳು ಸಾವಿರ ದಾರಿಯನ್ನು ತೋರಿಸಲಿ, ಎಲ್ಲವನ್ನೂ ನಾವು ಶ್ರೀಮದಾಚಾರ್ಯರ ನಿರ್ಣಯದ ಅನುಸಾರಿಯಾಗಿಯೇ ತಿಳಿಯಬೇಕು. 
  
  ಅನಂತ ವೇದಗಳಿಗೆ ಅರ್ಥವನ್ನು ತಿಳಿಯಬೇಕಾದರೆ ಹೇಗೆ ಬ್ರಹ್ಮಸೂತ್ರಗಳಿಗೆ ಅನುಸಾರಿಯಾಗಿಯೇ ತಿಳಿಯಬೇಕೋ, ಕಾರಣ, ಬ್ರಹ್ಮಸೂತ್ರಗಳು ವೇದಗಳ ನಿರ್ಣಯಕ್ಕಾಗಿ ಹೊರಟದ್ದು, ಹಾಗೆ ಯಾವುದೇ ಪುರಾಣದ ವಾಕ್ಯವನ್ನೂ ಸಹ ಆಚಾರ್ಯರ ನಿರ್ಣಯದ ಅನುಸಾರಿಯಾಗಿಯೇ ತಿಳಿಯಬೇಕು. 
  
  ಪುರಾಣಗಳಲ್ಲಿ ಮೋಹಕ ವಚನಗಳೂ ಇರುತ್ತವೆ, ಪ್ರಕ್ಷಿಪ್ತ ವಚನಗಳೂ ಇರುತ್ತವೆ. ಆಚಾರ್ಯರ ನಿರ್ಣಯಕ್ಕೆ ವಿರುದ್ಧವಾದುದನ್ನು ತ್ಯಾಗ ಮಾಡಲೇಬೇಕು.
  
  ಪುರಾಣಗಳ ಅರ್ಥವನ್ನು ನಿರ್ಣಯ ಮಾಡುವದಕ್ಕಾಗಿಯೇ ಆಚಾರ್ಯರು ಜಯಂತೀಕಲ್ಪವನ್ನು ರಚಿಸಿರುವದು. ಪುರಾಣಗಳಿಂದ ಆಚಾರ್ಯರ ವಾಕ್ಯದ ಅರ್ಥ ತಿಳಿಯುವದಲ್ಲ, ಆಚಾರ್ಯರ ನಿರ್ಣಯದ ಅನುಸಾರಿಯಾಗಿ ಪುರಾಣಗಳ ಅರ್ಥವನ್ನು ತಿಳಿಯಬೇಕು. 
  
  ಇನ್ನು, ಮಧ್ಯರಾತ್ರಿಯಲ್ಲಿ ಅಷ್ಟಮಿ ಇದೆ ಎನ್ನುವದನ್ನು ಪರಿಶುದ್ಧವಾದ ಪ್ರತ್ಯಕ್ಷಸಾಕ್ಷಿಯುಳ್ಳ ಸೂರ್ಯಸಿದ್ಧಾಂತಗಣಿತದಿಂದ ತಿಳಿಯಬೇಕೇ ಹೊರತು, ಪಾಶ್ಚಾತ್ಯರ Ephimeries ನ್ನು ಆಧರಿಸಿದ ಪ್ರತ್ಯಕ್ಷ ಮತ್ತು ಶಾಸ್ತ್ರಗಳಿಗೆ ವಿರುದ್ಧವಾದ ಇಂದಿನ ದೃಗ್ಗಣಿತದಿಂದಲ್ಲ. (ವಾಸ್ತವಿಕವಾಗಿ ಸೂರ್ಯಸಿದ್ಧಾಂತವೇ ದೃಗ್ಗಣಿತ. ಇದನ್ನು ನಿಮಗೆಲ್ಲರಿಗೂ ಪ್ರತ್ಯಕ್ಷದ ಪುರಾವೆಯೊಂದಿಗೆ ಸಾಬೀತು ಪಡಿಸುವ App ಸಿದ್ಧವಾಗುತ್ತಿದೆ. ಇನ್ನೊಂದು ವರ್ಷದೊಳಗೆ ನಿಮ್ಮ ಮುಂದಿರುತ್ತದೆ) 
  
  ಸೂರ್ಯಸಿದ್ಧಾಂತದ ಪ್ರಕಾರ ಭಾನುವಾರ ಮಧ್ಯರಾತ್ರಿಯಲ್ಲಿಯೇ ಅಷ್ಟಮಿ ಇದ್ದದ್ದು, ಸೋಮವಾರ ಮಧ್ಯರಾತ್ರಿ ಇರಲಿಲ್ಲ. 
  
  ಇನ್ನು ಮಧ್ಯರಾತ್ರಿಯಲ್ಲಿರುವ ಅಷ್ಟಮಿಯೊಂದಿಗೆ ರೋಹಿಣೀ, ಬುಧವಾರ, ಸೋಮವಾರಗಳು ಬಂದರೆ ನಮಗೆ ಗ್ರಾಹ್ಯವೇ ಹೊರತು ಪ್ರತ್ಯೇಕ ಬಂದಾಗ ಅಲ್ಲ. 
  
  ಹಾಗೆ ಪ್ರತೀವಾರವೂ ಬುಧ-ಸೋಮವಾರಗಳು ಬರುತ್ತವೆ, ಪ್ರತೀತಿಂಗಳೂ ರೋಹಿಣೀ ಬರುತ್ತದೆ. ಶ್ರಾವಣ ಕೃಷ್ಣಪಕ್ಷದ ಅಷ್ಟಮಿಯು ಮಧ್ಯರಾತ್ರಿಯಲ್ಲಿದ್ದಾಗ ಅವು ಜೊತೆಗೂಡಿದರೆ ಅವಕ್ಕೆ ಪ್ರಾಶಸ್ತ್ಯವೇ ಹೊರತು ಪ್ರತ್ಯೇಕವಾಗಿ ಅಲ್ಲ. 
 • Sudheendra,Bangalore

  3:48 AM , 31/08/2021

  *ಶ್ರೀಕೃಷ್ಣಜಯಂತಿ*
  ಈ ಬಾರಿ ತಾ. ೨೯-೮-೨೦೨೧ ಜನ್ಮಾಷ್ಟಮಿಯ ಆಚರಣೆಯನ್ನು ಕೆಲವರು ತಿಳಿಸಿದ್ದರೆ ಇನ್ನೂ ಕೆಲವು ಪಂಚಾಂಗಗಳು ತಾ. ೩೦-೮-೨೦೨೧ ಜಯಂತಿಯ ಆಚರಣೆಯನ್ನು ವಿಧಿಸಿವೆ. ಅವರವರು ಆಯಾಯ ಗುರುಮಠವನ್ನು ಅನುಸರಿಸುವುದು ಸೂಕ್ತವಾದರೂ ಯಾವ ದಿನ ಸರಿ ಎಂಬ ಜಿಜ್ಞಾಸೆ ಸಹಜ. ತಾರೀಕು ೨೯-೮-೨೧ ರಂದು ದೃಗ್ಗಣಿತ ಅಥವಾ ಆರ್ಯಭಟೀಯ ಎರಡೂ ಪಂಚಾಂಗ ರೀತ್ಯಾ ಚಂದ್ರೋದಯ ಕಾಲದಲ್ಲಿ ಅಷ್ಟಮಿಯಿದೆ. ಆದರೆ ರೋಹಿಣೀ ನಕ್ಷತ್ರ ಇರುವುದಿಲ್ಲ. ಶ್ರೀಮದಾಚಾರ್ಯರು ಜಯಂತೀ ನಿರ್ಣಯದಲ್ಲಿ ಹೇಳುವಂತೆ -
  *रोहिण्यां अर्धरात्रे तु यदा कालाष्टमी भवेत् ।*
  *जयन्ती नाम सा प्रोक्‍ता सर्वपापप्रणाशिनी ।*
  यस्‍यां जातो जगन्नाथः निशीथे भगवानजः ॥
  ಅರ್ಧರಾತ್ರಿಯಲ್ಲಿ ರೋಹಿಣೀ ನಕ್ಷತ್ರವಿದ್ದು ಆ ಸಮಯದಲ್ಲಿ ಅಷ್ಟಮಿಯು ಒದಗಿದರೆ ಜಯಂತಿ ಎಂದು ನಿರ್ಣಯಿಸಿದ್ದಾರೆ. ೨೯ ರಂದು ರೋಹಿಣೀ ನಕ್ಷತ್ರವಿಲ್ಲ. ಹಾಗೆಂದು ಕೇವಲ ಅಷ್ಟಮಿಯನ್ನು ಆಚರಿಸಬಹುದೇ ಎಂದು ಪ್ರಶ್ನಿಸಿದರೆ ಶ್ರೀಮದಾಚಾರ್ಯರ ಪೂರ್ವಾಶ್ರಮದ ಸಹೋದರರೂ ಶಿಷ್ಯರೂ ಆದ ಶ್ರೀವಿಷ್ಣುತೀರ್ಥರು -
  *सिंहमासे तु रोहिण्यायुतां कृष्णाष्टमीं पुमान्* ।
  *उपोष्य* मध्यरात्रे तु पूजयेत् नन्दनन्दनम् ॥
   ಸಿಂಹಮಾಸದಲ್ಲಿ ರೋಹಿಣೀ ಸಹಿತವಾದ ಅಷ್ಟಮೀ ಒದಗಿದಂದೇ ಜಯಂತಿಯನ್ನು ಆಚರಿಸಬೇಕೆಂದು ನಿರ್ಣಯವನ್ನು ಕೊಟ್ಟಿದ್ದಾರೆ. ಆದ್ದರಿಂದ ೨೯ ರಂದು ಅಷ್ಟಮಿ ಮಾತ್ರವಾದ್ದರಿಂದ ಆಚರಣೆಗೆ ಸೂಕ್ತವಲ್ಲ. ಭವಿಷ್ಯತ್ಪುರಾಣದಲ್ಲೂ -
  *सत्यष्टममुहूर्ते वा *रोहिणीसहिताष्टमी* ।
  *श्रावणे मासि सिंहार्के* *क्वचित्सापि च शस्यते* ।। 
  *एकादशीनां कोटीनां व्रतैश्च लभते फलम्*।
  *अतो दशगुणं प्रोक्तं कृत्वैतत्फलमाप्नुयात्* ।।
  ಸಿಂಹಮಾಸದಲ್ಲಿ ಒದಗಿದ ಶ್ರಾವಣ ಮಾಸದಲ್ಲಿ ರೋಹಿಣೀ ಸಹಿತವಾದ ಅಷ್ಟಮಿಯನ್ನು ಆಚರಿಸಬೇಕು. ಅಂದು ಹತ್ತು ಕೋಟಿ ಏಕಾದಶಿ ಉಪವಾಸ ಮಾಡಿದಷ್ಟು ಪುಣ್ಯ ಉಪವಾಸದಿಂದ ಸಿಗುತ್ತದೆ ಎಂದಿದೆ. ಗರುಡ ಪುರಾಣದಲ್ಲೂ,
  *कृष्णाष्टम्यां च रोहिण्यां* *अर्धरात्रेऽर्चनं हरेः* ।
  *कार्याविद्धापि सप्तम्यां* *हन्तिपापं त्रिजन्मनः*॥
  ಕೃಷ್ಣಪಕ್ಷದ ಅಷ್ಟಮಿಯಿಂದ ಕೂಡಿದ ರೋಹಿಣಿಯನ್ನು ಆಚರಿಸುವಂತೆ ತಿಳಿಸಿದ್ದಾರೆ. ಶ್ರೀವಿಷ್ಣುತೀರ್ಥರಾಗಲಿ ಗರುಡಪುರಾಣವಾಗಲಿ ಅರ್ಧರಾತ್ರಿಯಲ್ಲಿ ಪೂಜಿಸಬೇಕೆಂದು ಹೇಳಿದ್ದಾರೆಯೇ ಹೊರತು ಅರ್ಧರಾತ್ರಿಯಲ್ಲಿ ಅಷ್ಟಮೀ ಯೋಗವನ್ನು ಕಡ್ಡಾಯವಾಗಿ ಹೇಳಿಲ್ಲ. ಆದರೆ ರೋಹಿಣೀ ಸಹಿತವಾದ ಅಷ್ಟಮಿಯ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ಹೇಳಿದ್ದಾರೆ. 
  *रोहिण्याश्च यदा कृष्णपक्षेऽष्टम्यांद्विजोत्तम*।
  *जयन्ती नाम सा प्रोक्ता सर्वपापहरातिथिः*॥                       - विष्णुधर्म
  *कृष्णाष्टम्यां भवेद्यत्र कलैका रोहिणी नृप*।
  *जयन्ती नाम सा प्रोक्ता उपोष्या सा प्रयत्नतः*
 • Vikram Shenoy,Doha

  11:26 PM, 28/08/2021

  ಆಚಾರ್ಯರಿಗೆ ಧನ್ಯವಾದಗಳು. ಅಶ್ಟಮಿಯು ರಾತ್ರಿ ಶುರುವದಲ್ಲಿ, ಮಧ್ಯರಾತ್ರಿ ಬರಲು ಇನ್ನಷ್ಟು ಗಳಿಗೆಗಳ ಲೆಕ್ಕವಿಲ್ವೆವೆ??
 • Vikram Shenoy,Doha

  11:24 PM, 28/08/2021

  ಆಚಾರ್ಯರಿಗೆ ಧನ್ಯವಾದಗಳು. ಒಂದು ಪ್ರಶ್ನೆ, ಬಹ್ನುವರ ಅಷ್ಟಮಿ ಪ್ರರಂಭವಾಡಲ್ಲಿ, ಮಧ್ಯ ರಾತ್ರಿ
 • Shridhar Kulkarni,ಬೆಂಗಳೂರು

  8:12 AM , 28/08/2021

  ಆಚಾರ್ಯರಿಗೆ ನಮಸ್ಕಾರಗಳು.
  2016 (ದುರ್ಮುಖ ಸಂವತ್ಸರ) ಕೃಷ್ಣಾಷ್ಟಮಿ ಇದೆ ರೀತಿ ಇತ್ತು. 24 august ರಾತ್ರಿ ಸುಮಾರು 10.20 ಕ್ಕೆ ಅಷ್ಟಮಿ ಶುರುವಾಗುತ್ತದೆ ಆದರೆ ರೋಹಿಣಿ ಇರುವುದಿಲ್ಲ. 25 august ರಾತ್ರಿ ಸುಮಾರು 8:10ಕ್ಕೇ ಅಷ್ಟಮಿ ಮುಗಿಯುತ್ತದೆ. ಅಂದರೆ 25 august ರಾತ್ರಿ ಚಂದ್ರೋದಯದಲ್ಲೀ ಅಷ್ಟಮಿ ಇಲ್ಲ ಆದರೆ ರೋಹಿಣಿ ಇದೆ. ಆವಾಗ ಉ.ಮಠದ ಪಂಚಾಂಗದಲ್ಲಿ 25ಕ್ಕೇ ಮಾಡಬೇಕು ಎಂದು ಕೊಟ್ಟಿದ್ದಾರೆ. ಆದರೆ ಈ ವರ್ಷ ಮಾತ್ರ ನೀವು ಹೇಳಿದಂತೆ ಕೊಟ್ಟಿದ್ದಾರೆ. ಇದರಲ್ಲಿ ಯಾವುದನ್ನು ಅನುಸರಿಸಬೇಕು?

  Vishnudasa Nagendracharya

  ದುರ್ಮುಖ ಸಂವತ್ಸರದಲ್ಲಿ ಬುಧವಾರ ಮಧ್ಯರಾತ್ರಿ ಸಪ್ತಮಿ ಇದೆ. (ಉತ್ತರಾದಿ ಮಠದ ಪಂಚಾಂಗದ ಪ್ರಕಾರ ಸಪ್ತಮಿ 47 ಗಳಿಗೆ ಇದೆ.) 
  
  ಇನ್ನು ಗುರುವಾರ ಮಧ್ಯರಾತ್ರಿ ಆರಂಭವಾಗುವ 4 ಘಳಿಗೆ 19 ವಿಘಳಿಗೆ ಮುಂಚೆಯೇ ಅಷ್ಟಮಿ ಮುಗಿದಿದೆ. 
  
  ಹೀಗಾಗಿ ಎರಡೂ ಮಧ್ಯರಾತ್ರಿಗಳಲ್ಲಿ ಅಷ್ಟಮಿ ಇಲ್ಲ. 
  
  ಅಂತಹ ಸಂದರ್ಭಗಳಲ್ಲಿ ಮಧ್ಯರಾತ್ರಿಗೆ ಸಮೀಪದ ಕಾಲದಲ್ಲಿರುವ, ಮತ್ತು ಸಪ್ತಮೀವೇಧರಹಿತವಾದ ಅಷ್ಟಮಿಯನ್ನು ಗ್ರಹಿಸಬೇಕು. 
  
  ಹೀಗಾಗಿ ದುರ್ಮುಖದಲ್ಲಿ ಗುರುವಾರ ಕೃಷ್ಣಾಷ್ಟಮಿ ಮಾಡಿರುವದು ಯುಕ್ತವಾಗಿದೆ. 
 • Sheshagiri,Bangalore

  5:45 PM , 27/08/2021

  ಆಚಾರ್ಯರಿಗೆ ನಮಸ್ಕಾರ, ರಾತ್ರಿ ಷೋಡಶೋಪಚಾರ ಪೂಜೆ ನಂತರ ವಾಯು ದೇವರ ನೈವೇದ್ಯ ಮಾಡಬೇಕಾ ಅಥವಾ ದೇವರ ನೈವೇದ್ಯದ ವರೆಗೆ ಅಷ್ಟೇ ಪೂಜಾ ನಿಯಮ?? ದಯವಿಟ್ಟು ತಿಳಿಸಿ
 • Suraj Sudheendra,Bengaluru

  10:20 PM, 25/08/2021

  Gurugale. .inthaha uttama vishayagallannu tilisidakkagi ananta pranamagalu.. Aadare kelavomme annisuvudu matadipatigalu, panchanga kartru galu yaake inthaha controversial vishayagalanella srimadachaaryara nirnayakke anusaariyaagi samajakkagi bageharisuvudilla. . Tilisikotta nimmannu nindisuttare athawa nirlakshisuttareye horatu solution kodalaararu. . Idara madhye manda buddhi, manda bhaagyaru, adhyana heenaraada naavu silukiddeve. .
 • Muralidhar,Mangalore

  6:25 PM , 24/08/2021

  Dhanwaadagalu.
  Very very useful
  ShashTanga namaskaaragalu