Prashnottara - VNP237

ಕೃಷ್ಣಾಷ್ಟಮಿ ಪಾರಣೆ ದ್ವಾದಶಿಯಂತೆಯೆ?


					  	

ದ್ವಾದಶಿಯಂದು ನಾವು ಪಾರಣೆ ಮಾಡಿದಾಗ ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುವದಿಲ್ಲ. ಫಲಾಹಾರ ಸ್ವೀಕರಿಸುತ್ತೇವೆ. ಕೃಷ್ಣಾಷ್ಟಮಿಯ ಪಾರಣೆಯಲ್ಲಿಯೂ ಹಾಗೆ ಮಾಡಬೇಕೆ ಅಥವಾ ರಾತ್ರಿ ಊಟ ಮಾಡಬಹುದು. ದ್ವಾದಶಿಯ ಪಾರಣೆ ದಿನತ್ರಯದ ಆಚರಣೆಗೆ ಸೇರಿದ್ದು. ಆ ದಿವಸ ರಾತ್ರಿ ಊಟ ಮಾಡಿದರೆ ದಿನತ್ರಯದ ವ್ರತಕ್ಕೆ ಭಂಗವುಂಟಾಗುತ್ತದೆ. ಆದರೆ ಕೃಷ್ಣಾಷ್ಟಮಿ ಹಾಗಲ್ಲ. ಕೃಷ್ಣಾಷ್ಟಮಿಯ ಮಾರನೆಯ ದಿವಸ ಪಾರಣೆ ಮಾಡಿದಾಗ ಅಲ್ಲಿಗೆ ವ್ರತ ಸಮಾಪ್ತಿಯಾಗುತ್ತದೆ. ಹೀಗಾಗಿ ಆವಶ್ಯಕತೆ ಇದ್ದವರು ರಾತ್ರಿ ಊಟ ಮಾಡಬಹುದು. ಫಲಾಹಾರವನ್ನಾದರೂ ಮಾಡಬಹುದು. — ವಿಷ್ಣುದಾಸ ನಾಗೇಂದ್ರಾಚಾರ್ಯ


Watch Video Share to facebook View Comments
2034 Views

Comments

(You can only view comments here. If you want to write a comment please download the app.)
  • Gopalakrishna B S,Tumkur

    8:29 PM , 30/08/2021

    ಧನ್ಯವಾದಗಳು ಗುರುಗಳೆ