(You can only view comments here. If you want to write a comment please download the app.)
Vijay Mohan Kulkarni,Raichur
1:08 AM , 25/04/2022
ಜನ ಮರುಳು ಜಾತ್ರೆ ಮರುಳು *** ಮರುಳು ಸಿದ್ದಯ್ಯ
ರಿತ್ತಿ ವಾಸುದೇವಾಚಾರ್,ಬೆಂಗಳೂರು
11:59 PM, 24/03/2022
ನಮಸ್ಕಾರ ಆಚಾರ್ಯರಿಗೆ! ನಿಮ್ಮ ಧೈರ್ಯ ನಿಜವಾಗಿಯೂ ಮೆಚ್ಚುವಂಥದ್ದೇ! ಶ್ರೀಹರಿವಾಯುಗುರುಗಳ ಶ್ರೀರಕ್ಷೆ ನಿಮಗಿರುವಾಗ ಬರೀ ಪಾಂಡಿತ್ಯ ಇರುವ ವ್ಯಕ್ತಿಗಳು ನಿಮಗೇನು ಮಾಡಬಲ್ಲರು?! ಹ...ಹ... ನಮೋನಮಃ
ashok Kulkarni,Banglore
9:32 AM , 21/03/2022
ವೈಷ್ಣವದ್ರೋಹ ತುಂಬಿರುವ ಉತ್ತರಾಧಿಮಠ ಅಂತ ಹೇಳುತ್ತಿರೋದು ನೀವೇ, ಈಗ ಚರ್ಚೆಗೆ ನೀವು ನೀಡಿದ ಆಚಾರ್ಯರ ಹೆಸರು ಅವರು ಕೂಡ ಉತ್ತರಾಧಿ ಮಠದವರು, ಈಗ ನೀವು ಹೇಳಬಹುದು ಅವರನ್ನ ನಿಷ್ಪಕ್ಷವಾಗಿ ನಿರ್ಣಯಮಾಡಲು ಕರೆದಿದ್ದೇನೆ ಅಂತ. ಆದರೆ ನೀವು ಅವರ ಮೇಲೆ ಗೌರವ ಇಡಲೇಬಾರದು, ಯಾಕೆಂದ್ರೆ ಅವರು ಉತ್ತರಾಧಿ ಮಠದವರು. ಮತ್ತು ಸತ್ಯಾತ್ಮ ತೀರ್ಥರ ಬಗ್ಗೆ ಗೌರವ ಇದೆ ಎನ್ನುವುದು ನೀವು ಆ ಸೌಂಟಿನ ವಿಷಯದ ನಂತರವೇ ಹೇಳಿದ್ದು.
Vishnudasa Nagendracharya
ವಾಕ್ಯಾರ್ಥದಲ್ಲಿ ಶ್ರೀಮಟ್ಟೀಕಾಕೃತ್ಪಾದರ ಪರಿಶುದ್ಧ ಅರ್ಥಕ್ಕೇ ಜಯವಾಗುವದು. ಸತ್ಯಾತ್ಮರು ಹೇಳುತ್ತಿರುವ ಅರ್ಥಕ್ಕೆ ಜಯವಿಲ್ಲ.
ಹೀಗಾಗಿ ಜಯವಾದ ನಂತರ ನೀವೆಲ್ಲರೂ ಮಧ್ಯಸ್ಥರು ಸರಿ ಇರಲಿಲ್ಲ ಎಂದು ಆಪಾದನೆ ಮಾಡುವವರೇ.
ಹೀಗಾಗಿ,
ಉತ್ತರಾದಿ ಮಠದ ಬಗ್ಗೆ ಪ್ರೀತಿ ಇರುವ ಶ್ರೀ ವಿದ್ಯಾಶ್ರೀಶತೀರ್ಥಶ್ರೀಪಾದಂಗಳವರನ್ನು ಮತ್ತು ಶ್ರೀ ಹರಿದಾಸಭಟ್ಟಾಚಾರ್ಯರನ್ನು,
ಹಾಗೂ ಉತ್ತರಾದಿ ಮಠದ ಪಂಡಿತರೇ ಆಗಿರುವ ಶ್ರೀ ಮಾಹುಲೀ ಆಚಾರ್ಯರನ್ನು ಮತ್ತು ಶ್ರೀ ಸತ್ತಿಗೇರಿ ಧೀರೇಂದ್ರಾಚಾರ್ಯರನ್ನು
ಮಧ್ಯಸ್ಥನ್ನಾಗಿ ಒಪ್ಪಿರುವದು, ಇವರಲ್ಲಿ ಯಾರೂ ನನ್ನ ಮೇಲೆ ಪಕ್ಷಪಾತ ಮಾಡುವ ಕಿಂಚಿತ್ತೂ ಸಂಭವನೀಯತೆ ಇಲ್ಲ.
ಮತ್ತು.
ನಾನು ವಾಕ್ಯಾರ್ಥಕ್ಕೆ ಹೋಗುತ್ತಿರುವದು ವ್ಯಕ್ತಿಗಳನ್ನು ನಂಬಿಕೊಂಡಲ್ಲ. ಸರ್ವಾಂತರ್ಯಾಮಿಯಾದ ಶ್ರೀ ವೇದವ್ಯಾಸದೇವರ ಚರಣಕಮಲಗಳನ್ನು ನಂಬಿಕೊಂಡು. ಸಮಗ್ರ ವಾದಿಸಮೂಹಕ್ಕೆ ಪ್ರಾಶ್ನೀಕರು ಅವರೇ. ಅವರೇ ಮಧ್ಯಸ್ಥರಲ್ಲಿ ನಿಂತು ನಿರ್ಣಯ ನೀಡುತ್ತಾರೆ.
ಶ್ರೀಮನ್ ನ್ಯಾಯಸುಧಾ ಗ್ರಂಥಕ್ಕೆ ಎಂದಿಗೂ ಅಪಜಯವಿಲ್ಲ.
ಹೌದು, ಉತ್ತರಾದಿಮಠದ ಸತ್ಯಾತ್ಮರ, ಅವರ ಶಿಷ್ಯರ ನಿಜವಾದ ಬಣ್ಣ ನನಗೆ ಅರ್ಥವಾದದ್ದು ಸೀಕರಣೆಯ ಸೌಟಿನ ಪ್ರಸಂಗದ ನಂತರವೇ. ಕಣ್ಣಿಗೆ ಕಟ್ಟಿದ್ದ ಮುಸುಕನ್ನು ಆ ಪ್ರಸಂಗ ತೆರೆಸಿತು, ಆ ನಂತರವೇ ಮಹಾನುಭಾವರ ಬಗ್ಗೆ ಅವಹೇಳನ ಮಾಡಿರುವ ಅವರ ಮಠದ ಪರಮನೀಚಕೃತಿಗಳಾದ ಗುರುವಂಶಕಥಾಕಲ್ಪತರು, ಸತ್ರಥಾ ಮುಂತಾದ ಕೃತಿಗಳನ್ನು ಓದಿ ನಿರ್ಣಯಕ್ಕೆ ಬಂದದ್ದು.
ನನಗೆ ಸಮಸ್ಯೆ ಇರುವದು ಉತ್ತರಾದಿಮಠದ ಕೃತಿಗಳಲ್ಲಿ ಬಂದಿರುವ, ಮತ್ತು ಸತ್ಯಾತ್ಮರು ಮಾಡಿರುವ ಮಹಾನುಭಾವರ ಅವಹೇಳನದ ಬಗ್ಗೆ. ಉಳಿದ ವಿಷಯ ಮತ್ತು ಉಳಿದವರ ವಿಷಯ ನನಗೆ ಅನವಶ್ಯಕ. ಇವತ್ತಿಗೂ ಉತ್ತರಾದಿಮಠದ ಅನೇಕ ಪಂಡಿತರು, ಗೃಹಸ್ಥರು, ವಿದ್ಯಾರ್ಥಿಗಳು ನನ್ನನ್ನು ಸಂಪರ್ಕಿಸುತ್ತಿದ್ದಾರೆ, ಉತ್ತಮ ಬಾಂಧವ್ಯವವನ್ನೇ ಹೊಂದಿದ್ದಾರೆ.
ತಮ್ಮ ಮಠದ ಕತೆ ಹೇಳುವಾಗ ಶ್ರೀ ರಾಜೇಂದ್ರತೀರ್ಥಗುರುಸಾರ್ವಭೌಮರಿಗೆ ತೀರ್ಥ ಮಾಡಲೂ ಕೊಡಲೂ ಬರುತ್ತಿರಲಿಲ್ಲ ಎಂಬ ಅಪಚಾರ
ವಿದ್ಯಾನಿಧಿಗಳ ಕತೆ ಹೇಳುವಾಗ ವಿಬುಧೇಂದ್ರತೀರ್ಥಗುರುಸಾರ್ವಭೌಮರಿಗೆ ಉತ್ತರಾದಿ ಮಠದವರು ಮಾಡುವ ಅಪಚಾರ.
ರಘುವರ್ಯರು ಕತೆ ಹೇಳುವಾಗ ಶ್ರೀ ವಿಜಯಧ್ವಜತೀರ್ಥಗುರುಸಾರ್ವಭೌಮರಿಗೆ ಉತ್ತರಾದಿ ಮಠದವರು ಮಾಡುವ ಅಪಚಾರ.
ರಘುನಾಥರ ಕತೆ ಹೇಳುವಾಗ ಶ್ರೀ ಶ್ರೀಪಾದರಾಜಗುರುಸಾರ್ವಭೌಮರಿಗೆ ಮಾಡುವ ಅಪಚಾರ
ಶ್ರೀಮಚ್ಚಂದ್ರಿಕಾಚಾರ್ಯರು ರಚಿಸಿದ ವ್ಯಾಸತ್ರಯಗಳನ್ನು ನದಿಗೆ ಬಿಸಾಡಬೇಕು ಎಂದು ರಘುನಾಥರು ಹೇಳಿದರೆಂಬ ಅಪಚಾರದ ಕತೆ
ಶ್ರೀಮಚ್ಚಂದ್ರಿಕಾಚಾರ್ಯರ ವಿದ್ಯೆಯನ್ನು ಸೂಳೆಯ ವಿದ್ಯೆಗೆ ಹೋಲಿಸಿದ ಅಪಚಾರ,
ಭಾವಿಸಮೀರ ಶ್ರೀಮದ್ವಾದಿರಾಜತೀರ್ಥಗುರುಸಾರ್ವಭೌಮರನ್ನು, ಶ್ರೀ ಭೂತರಾಜರನ್ನು ಅವಾಚ್ಯಶಬ್ದಗಳಿಂದ ನಿಂದಿಸಿದ ಅಪಚಾರ
ಶ್ರೀ ವಿಜಯೀಂದ್ರತೀರ್ಥರು, ಶ್ರೀರಾಘವೇಂದ್ರತೀರ್ಥರು, ಶ್ರೀ ಲಕ್ಷ್ಮೀನಾರಾಯಣತೀರ್ಥರು, ಶ್ರೀ ಸುಮತೀಂದ್ರತೀರ್ಥರು, ಶ್ರೀ ಭಾಷ್ಯದೀಪಿಕಾಚಾರ್ಯರು ಮುಂತಾದ ಮಹಾನುಭಾವರಿಗೆ ಪುಂಖಾನುಪುಂಖವಾಗಿ ಮಾಡಿದ ಅಪಚಾರ.
ಸಜ್ಜನಸಮುದಾಯವನ್ನು ಉದ್ದರಿಸಲೆಂದೇ ಅವತರಿಸಿದ ಶ್ರೀ ಮಾದನೂರು ವಿಷ್ಣುತೀರ್ಥರು, ಶ್ರೀ ವಿಜಯಪ್ರಭುಗಳು, ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು ಮುಂತಾದ ಮಹಾನುಭಾವರಿಗೆ ಬಹಿಷ್ಕಾರ ಹಾಕಿದ ಅಪಚಾರ
ಒಂದೇ ಎರಡೇ...
Srinivas Devraj,Bangalore
10:23 PM, 20/03/2022
ನನ್ನ ಎಲ್ಲಾ ಮಾದ್ವ ಬಂಧುಗಳಿಗೆ ನಮಸ್ಕಾರಗಳು.
ಆಚಾರ್ಯರಲ್ಲಿ ಮೊದಲಿಗೆ ತಮ್ಮಲ್ಲಿ ಕ್ಷಮೆ ಕೇಳುತ್ತಾ ನನ್ನ ಅನಿಸಿಕೆಗಳನ್ನು ಹೇಳಲು ಇಚ್ಚಿಸುತ್ತೆನೆ.
ನಾನು ಕೂಡ ಆಚಾರ್ಯ ರನ್ನು 18-19 ವರ್ಷಗಳಿಂದ ನೋಡುತ್ತಾ ಬಂದಿದ್ದೆನೆ, ಗುರುಗಳನ್ನು 2005 (ಉತ್ತರಾದಿ ಮಠ) ವನ್ನು ಆದರಿಸುತ್ತಾ ಬಂದಿದ್ದೆನೆ. ಪ್ರಭಾವಿತನು ಆಗಿದ್ದೆನೆ. ಬೇರೆ ಮಠಗಳಿಗೆ ಹೋಲಿಸಿದರೆ (ಶ್ರೀ ಸುಭುದೇಂದ್ರ ಗುರುಗಳನು ಹೊರತುಪಡಿಸಿ) ಪಾಂಡಿತ್ಯ, ಸಾಮಾಜಿಕ ಕಳಕಳಿ, ವೈರಾಗ್ಯ ಪ್ರಸನ್ನತೆ ಯಲ್ಲಿ ಪೂಜ್ಯರು (ನಾನು ಕೂಡ ಅವರ ಭಾವಚಿತ್ರವನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತನೆ) ಅವರಿಂದ 6-7 ಬಾರಿಗೆ ಮುದ್ರೆಯನ್ನು ತೆಗೆದುಕೊಂಡಿದ್ದೆನೆ.
ಮತ್ತೂ ಖಂಡನೆಯ ವಿಶಯದಲ್ಲಿ ಆಚಾರ್ಯರ ಜೊತ್ತೆಗೆ ನಿಲ್ಲುತ್ತೆನೆ,
ಎಕೆಂದರೆ ಬನ್ನಂಜೆಯವರ, ಶ್ರೀ ಸತ್ಯಾತ್ಮರ, ಶ್ರೀ ವಿಶ್ವೇಶ್ವರ ತೀರ್ಥರ, ಅವರದೇ ಮಠದ ಶ್ರೀ ವಿದ್ಯಾಶ್ರೀಶರ, ನಿಲುವುಗಳನ್ನು, ಒಳಮರ್ಮಗಳನ್ನು ತಿಳಿಯಲು ನಮ್ಮಂಥವರಿಂದ ಸಾದ್ಯವಿಲ್ಲ ಮತ್ತು ನಮ್ ಮಠಜಾಡ್ಯಗಳು ನಮ್ಮ ನ್ನು ಕುರುಡರಾಗಿಸಿದೆ.
ಉತ್ತರಾದಿಮಠದವರ commercialization , ಪೇಜಾವರ ಶ್ರೀ ಗಳ, ಶ್ರೀ ವಿದ್ಯಾಶ್ರೀಶರ political games, ಬನ್ನಂಜೆಯವರ brainwashing, ಇವೆಲ್ಲಾ ನಮ್ಮ ಮಾಧ್ವರು ಅರ್ಥ ಮಾಡಿಕೊಳ್ಳುವ ಕಾಲ ಬಂದಿದೆ ಮತ್ತು ನಿಧಾನವಾಗಿಯಾರು ಅರ್ಥ ಆಗುತ್ತಿದೆ (ಆದರೆ ದೊಡ್ಡವರ ವಿಶಯ ಎಂದು ಸುಮ್ಮನಿರುತ್ತಾರೆ)
ನಾವು ಈಗಾಗಲೆ ಉಡುಪಿಯ ಮಠಗಳಲ್ಲಿ (ಶ್ರೀ ಲಕ್ಷಮೀವರರು, ಪುತ್ತಿಗೆ ಸ್ವಾಮಿಗಳು) ಇವರ ವಿಚಾರಗಳು ಎಲ್ಲರಿಗು ತಿಳಿದಿರುವ ವಿಶಯ.
ಅಚಾರ್ಯರ ಬನ್ನಂಜೆ ವಿಮರ್ಶೆ ಒಮ್ಮ ಒದಿ ನೋಡಿದರೆ ಗೊತ್ತಾಗುತ್ತದೆ ಅವರ ಪಾಂಡಿತ್ಯ, ಮತ್ತು ಬನ್ನಂಜೆ ಯವರ ಒಳಮರ್ಮ.. ಮತ್ತು ಈಗಿನ ಉತ್ತರಾದಿ ಮಠದವರ ದುರಬಿಮಾನ, ( ಅವರ ಬಹಳ ಪಕ್ಕಾ planning) ಮಳಖೆಡದ, ಪುಸ್ತಕ ಬಿಡುಗಡೆ ನಾಟಕಗಳು,ಎಲ್ಲಾ ಬುದ್ದಿವಂತರಿಗೆ ಅರ್ಥ ಆಗುತ್ತದೆ.
(ಬಹಳ ನೊವಾಗುವ ವಿಶಯ) ಶ್ರೀ ಪದ್ಮನಾಭ ತೀರ್ಥರ ರಾಜಕೀಯದಲ್ಲಿ ಶ್ರೀ ವ್ಯಾಸರಾಜರ ಬೃಂದಾವನದ ದುಸ್ತಿತಿ ಯನ್ನು (ಮೊದಲೇ ನವ ವ್ರುಂದಾವನದ ಬಗ್ಗೆ ಆಚಾರ್ಯರು ಎಚ್ಚರಿಸಿದ್ದರು) ನೊಡಿದ್ದವೆ.
ಮಾದ್ವ ಬಂಧುಗಳೆ ಈಗಲಾದರು ಸ್ವಾಮಿಗಳ, ಮಠಗಳ ದುರಬಿಮಾನ ಬಿಟ್ಟು (ಈಗಂತೂ ಸ್ವಾಮಿಗಳು ಸಂಸ್ತಾನದ manager ಅಷ್ಟೇ ಅಗಿ ಉಳಿದಿದ್ದಾರೆ) ಸಾದನೆ, ತತ್ವಗಳ ವಿಚಾರ, ಆಚಾರಗಳು, ದೇವರಲ್ಲಿ ಭಕ್ತಿ ಇವುಗಳಲ್ಲಿ ಆಸಕ್ತಿ ತೋರಿಸಿದರೆ ಒಳ್ಳೆಯದು.
ಸಾಮಾನ್ಯ ಗೃಹಸ್ತರುಗಳಿಗೆ ಸಾದನೆ ಹೇಗೆ ಮಾಡಬೆಕೆಂದು ತಿಳಿಸುತ್ತಾ, (ಕ್ಷೌರ ಸ್ನಾನ ಮುಂತಾದ ಸಣ್ಣ ವಿಷಯಗಳಿಂದ ಹಿಡಿದು) ದೊಡ್ಡ ಭಾಗವತ ದಂತಹ ವಿಶಯಗಳನ್ನು ಪ್ರಮಾಣ ಭದ್ದವಾಗಿ ತಿಳಿಸುತ್ತಿರುವ ನಮ್ಮ ಆಚಾರ್ಯರ ಬಗ್ಗೆ ಸಣ್ಣದಾಗಿ ಮಾತನಾಡಬೇಡಿ. (ಅವರ ಹಾಗೆ ನದಿ ತೀರದಲ್ಲಿ ವಾಸ vishnandini ಯಂತಹ ಕೆಲಸ ಅದು ಈಗಿನ ಕಾಲದಲ್ಲಿ ನೆನೆಸಿಕೊಂಡರೆ ಭಯವಾಗುತ್ತದೆ) ಯಾರಿಗಾದರೂ ನೊವಾಗಿದ್ದರೆ ಕ್ಷಮಿಸಿ
ashok Kulkarni,Banglore
7:58 PM , 20/03/2022
ವಿಷಯ ಪೂರ್ಣವಾಗಿ ಗೊತ್ತಿಲ್ಲದೆ comment ಮಾಡುತ್ತಿದ್ದೀನಿ ಅಂತ ನೀವು ಹೇಗೆ ನಿರ್ಧರಿಸಿದಿರಿ. ನಿಮ್ಮ commentಗಳು ಯಾರಿಗಾದ್ರು ತೋರಿಸಿ ನಿಮಗೆ ತಿಳಿಯುತ್ತೆ, ಅದರಲ್ಲಿ ಹಠದ ಪರಿ ಎಷ್ಟು ಇದೆ ಅಂತ. steal ಸೌಂಟಿನ ವಿಷಯದಲ್ಲೇ pdf ನಲ್ಲಿ ಕಡೆಯ ವಾಕ್ಯದಲ್ಲೇ ಗೊತ್ತಾಗುತ್ತೆ ನಿಮಗೆ ಉತ್ತರಾಧಿಮಠದ ಬಗ್ಗೆ ಎಷ್ಟು ಭಕ್ತಿ ಪ್ರೀತಿ ಇತ್ತು ಅಂತ.
ನೀವು ದೊಡ್ಡ ಏನು ಮಾಡಬೇಕೋ ಅದೇ ಮಾಡುತ್ತೀರಿ ಸಂಶಯವಿಲ್ಲ. ನನ್ನ ಆಲೋಚನೆಗಳಿಗೆ ನಿಮ್ಮ comment ವೈಖರಿಯೇ ಕಾರಣ.
Vishnudasa Nagendracharya
ವೈಷ್ಣವದ್ರೋಹವನ್ನೇ ಮೈತುಂಬಿಸಿಕೊಂಡಿರುವ ಉತ್ತರಾದಿ ಮಠದ ಬಗ್ಗೆ, ಸತ್ಯಾತ್ಮರ ಬಗ್ಗೆ ನನಗೆ ಗೌರವವಿಲ್ಲ ಎಂದು ಪರಿಸ್ಪಷ್ಟವಾಗಿ ಹೇಳಿದ್ದೇನೆ.
Vishwanandini User,Bangalore
9:11 PM , 20/03/2022
8 ವರ್ಷ ಹಿಂದೆ ಅಂತ ಬರೆದದ್ದು ಅನ್ನುವದರಿಂದಲೆ 2013 typing mistake ಅಂತ ಗೊತ್ತಾಗುತ್ತೆ ಅದು ಪ್ರತ್ಯೇಕ ಹೇಳಬೇಕಿಲ್ಲ.
ಎಲ್ಲಾ whatsapp ಗ್ರೂಪ್ ಅಲ್ಲಿ ಬಂದಿದೆ ಅದರ ದಾಖಲೆ ಕಳಿಸುವೆ.
Vishnudasa Nagendracharya
ಅದು ತಮಗೆ ನಾನು ಬಂದು ಹೇಳುವವರೆಗೆ ತಿಳಿದಿರಲಿಲ್ಲವೇ? ಕಾಮೆಂಟ್ ಏಕೆ ಮಾಡಿದ್ದೀರಿ.
ಅಂದಹಾಗೆ, ನಿಮಗೆ ನೀಡುವ ಉತ್ತರ ಇದೇ ಕಡೆಯದು.
ನಿಮ್ಮ ಹೆಸರು ಮೊಬೈಲನ್ನು ದಾಖಲಿಸದೇ ಇದ್ದಲ್ಲಿ, ನಿಮ್ಮನ್ನು Fake ಎಂದು ಪರಿಗಣಿಸಿ Block ಮಾಡುತ್ತಿದ್ದೇನೆ.
Srinivas Devraj,Bangalore
9:21 PM , 20/03/2022
ನನ್ನ ಎಲ್ಲಾ ಮಾದ್ವ ಬಂಧುಗಳಿಗೆ ನಮಸ್ಕಾರಗಳು.
ಆಚಾರ್ಯರಲ್ಲಿ ಮೊದಲಿಗೆ ತಮ್ಮಲ್ಲಿ ಕ್ಷಮೆ ಕೇಳುತ್ತಾ ನನ್ನ ಅನಿಸಿಕೆಗಳನ್ನು ಹೇಳಲು ಇಚ್ಚಿಸುತ್ತೆನೆ.
ನಾನು ಕೂಡ ಆಚಾರ್ಯ ರನ್ನು 18-19 ವರ್ಷಗಳಿಂದ ನೋಡುತ್ತಾ ಬಂದಿದ್ದೆನೆ, ಗುರುಗಳನ್ನು 2005 (ಉತ್ತರಾದಿ ಮಠ) ವನ್ನು ಆದರಿಸುತ್ತಾ ಬಂದಿದ್ದೆನೆ. ಪ್ರಭಾವಿತನು ಆಗಿದ್ದೆನೆ. ಬೇರೆ ಮಠಗಳಿಗೆ ಹೋಲಿಸಿದರೆ (ಶ್ರೀ ಸುಭುದೇಂದ್ರ ಗುರುಗಳನು ಹೊರತುಪಡಿಸಿ) ಪಾಂಡಿತ್ಯ, ಸಾಮಾಜಿಕ ಕಳಕಳಿ, ವೈರಾಗ್ಯ ಪ್ರಸನ್ನತೆ ಯಲ್ಲಿ ಪೂಜ್ಯರು (ನಾನು ಕೂಡ ಅವರ ಭಾವಚಿತ್ರವನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತನೆ) ಅವರಿಂದ 6-7 ಬಾರಿಗೆ ಮುದ್ರೆಯನ್ನು ತೆಗೆದುಕೊಂಡಿದ್ದೆನೆ.
ಮತ್ತು ಖಂಡನೆಯ ವಿಷಯದಲ್ಲಿ ಆಚಾರ್ಯರ ಜೊತೆಗೆ ನಿಲ್ಕುತ್ತೆನೆ ಎಕೆಂದರೆ ಬನ್ನಂಜೆಯವರ, ಶ್ರೀ ವಿಶ್ವೆಶತೀರ್ಥರ, ಶ್ರೀ ಸತ್ಯಾತ್ಮರ, & ಅವರದೇ ಮಠದ ಶ್ರೀ ವಿದ್ಯಾಶ್ರೀಶರ ವಿಚಾರಗಳಲ್ಲಿ ನಿಲುವುಗಳಲ್ಲಿ ಒಳ ಮರ್ಮಗಳನ್ನು ತಿಳಿಯುವುದು ನಮ್ಮಂತವರಿಗೆ ಸಾದ್ಯವಿಲ್ಲ ಮತ್ತು ನಮ್ಮ ಎಲ್ಲರ ಮಠಜಾಡ್ಯಗಳು ನಮ್ಮನ್ನು ಕುರುಡರಾಗಿಸಿವೆ.
ಶ್ರೀ ವೇದವ್ಯಾಸದೇವರು ಬ್ರಹ್ಮಸೂತ್ರಗಳನ್ನು ರಚಿಸಿದ್ದಾರೆ. ಅದರ ಅರ್ಥ ನಮಗಾಗುವದು ಆ ಬ್ರಹ್ಮಸೂತ್ರಗಳ ವ್ಯಾಖ್ಯಾನಗಳಾದ ಶ್ರೀಮದಾಚಾರ್ಯರ ಭಾಷ್ಯಗಳಿಂದ.
ಶ್ರೀಮದಾಚಾರ್ಯರ ಭಾಷ್ಯಗಳ ಅರ್ಥ ನಮಗಾಗುವದು ಅವುಗಳ ವ್ಯಾಖ್ಯಾನಗಳಾದ ಶ್ರೀಮಟ್ಟೀಕಾಕೃತ್ಪಾದರೇ ಮೊದಲಾದ ಜ್ಞಾನಿವರೇಣ್ಯರ ಟೀಕಾಗ್ರಂಥಗಳಿಂದ.
ಶ್ರೀಮಟ್ಟೀಕಾಕೃತ್ಪಾದರ ಟೀಕಾಗ್ರಂಥಗಳ ಅರ್ಥವಾಗುವದು ಶ್ರೀಮಚ್ಚಂದ್ರಿಕಾಚಾರ್ಯರ ತಾತ್ಪರ್ಯಚಂದ್ರಿಕಾ ಮುಂತಾದ ವ್ಯಾಖ್ಯಾನಗಳಿಂದ.
ಶ್ರೀಮಚ್ಚಂದ್ರಿಕಾಚಾರ್ಯರ ಗ್ರಂಥಗಳು ಅರ್ಥವಾಗುವದು ಶ್ರೀವಿಜಯೀಂದ್ರತೀರ್ಥಗುರುಸಾರ್ವಭೌಮರ ಮತ್ತು ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ ವ್ಯಾಖ್ಯಾನಗಳಿಂದ.
ಹೀಗೆ ಒಂದು ಗ್ರಂಥದ ಅರ್ಥವನ್ನು ಅದರ ವ್ಯಾಖ್ಯಾನಗಳಿಂದ ತಿಳಿಯುವದು ಸತ್-ಸಂಪ್ರದಾಯ. ಮಹಾಭಾಷ್ಯಕಾರರೂ ಇದನ್ನು ಅನುಮೋದಿಸುತ್ತಾರೆ -- ವ್ಯಾಖ್ಯಾನತೋ ವಿಶೇಷಪ್ರತಿಪತ್ತಿಃ ಎಂದು.
ಹಾಗೆ ಭಾವಿಸಮೀರರ ಗ್ರಂಥದ ಅರ್ಥಗಳು ಅವರಲ್ಲಿಯೇ ಅಧ್ಯಯನ ಮಾಡಿದ, ಅವರ ಪರಮಾನುಗ್ರಹಕ್ಕೆ ಪಾತ್ರರಾದ, ಮತ್ತು ಅವರ ಗ್ರಂಥದ ವಿಶೇಷಾರ್ಥಗಳನ್ನು ಅವರಿಂದಲೇ ಕೇಳಿದ್ದೇವೆ ಎಂದು ದಾಖಲಿಸಿರುವ ಶ್ರೀ ಸುರೋತ್ತಮತೀರ್ಥಶ್ರೀಪಾದಂಗಳವರು ಮತ್ತು ಶ್ರೀನಾರಾಯಣಾಚಾರ್ಯರು ಮುಂತಾದ ಮಹಾನುಭಾವರ ಗ್ರಂಥಗಳಿಂದ.
ಶ್ರೀ ನಾರಾಯಣಾಚಾರ್ಯರು ತಮ್ಮ ವ್ಯಾಖ್ಯಾನದಲ್ಲಿ ಪರಿಸ್ಪಷ್ಟವಾಗಿ ತಮ್ಮ ಗುರುಗಳ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಾಗಿ ನಿರ್ಣಯವಾಗುತ್ತದೆ.
ಇಷ್ಟೇ ಅಲ್ಲ, ಸಾಕ್ಷಾತ್ ತೀರ್ಥಪ್ರಬಂಧದ ಭಾವಿಸಮೀರರ ವಾಕ್ಯದಿಂದಲೇ ಅದು ಗಜಗಹ್ವರ ಎಂದು ಸಿದ್ಧವಾಗುತ್ತದೆ. ಕಾಮೆಂಟುಗಳಲ್ಲಿ ಅದನ್ನು ವಿವರಿಸಲು ಸಾಧ್ಯವಿಲ್ಲ. ಮುಂದೆ ಆ ಕುರಿತ ವಿಸ್ತೃತಚರ್ಚೆಯನ್ನು ಕೈಗೆತ್ತಿಕೊಂಡಾಗ ಅದರ ಕುರಿತ ಲೇಖನ ಉಪನ್ಯಾಸಗಳನ್ನು ಪ್ರಕಟಿಸುತ್ತೇನೆ. ದಿವ್ಯವಿಷಯವಿದೆ.
ashok Kulkarni,Banglore
3:39 PM , 20/03/2022
ಮೇಲೆ ಎಲ್ಲಾ ಪ್ರಶ್ನೆಗೂ ನೀವು ಉತ್ತರ ಕೊಡುವ ಬಗೆ ನೋಡಿದರೆ, ಎಲ್ಲರಿಗೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ,
ನೀವು ಈ ಚರ್ಚೆ ಶಾಸ್ತ್ರಕ್ಕಾಗಿ ಮಾಡುತ್ತಿರುವುದಲ್ಲ , ಬದಲಾಗಿ ಹಟಕ್ಕಾಗಿ ಮಾಡುತ್ತಿದ್ದೀರಿ ಅಂತ. ಮತ್ತು "ನಾನು" ಸೋಲಬಾರದು ಅಂತ ಈ ಚರ್ಚೆ ಮಾಡುತ್ತಿದ್ದೀರಿ ಅಂತ.
ಅವರು ಮಾಡಿದ್ದಾರೆ, ನಾನು ಮಾಡುತ್ತೇನೆ ಇದು ಚರ್ಚೆ ಮಾಡುವ ಕಾರಣ ಆಗಬಾರದು.
Vishnudasa Nagendracharya
ವಿಷಯವನ್ನು ಪೂರ್ಣ ಕೇಳದೇ, ಅರ್ಧಮರ್ಧ ಕೇಳಿ, ಕಾಮೆಂಟುಗಳನ್ನು ನೋಡಿ ಪ್ರಶ್ನೆ ಮಾಡಿದರೆ ಹೀಗೇ ಆಗುವದು.
2014 ರಲ್ಲಿ ಸತ್ಯಾತ್ಮರ ನಿರೂಪಣೆಯನ್ನು ನಾನು ವಿಮರ್ಶಿಸಿದಾಗ , ಅವರ ಕುರಿತು ಅತ್ಯಂತ ಗೌರವವಿತ್ತು. ಹೀಗಾಗಿ, ನಾನು ಆಗ ಸ್ಪಷ್ಟವಾಗಿ ಹೇಳಿದ್ದೇನೆ. "ನಾನು ಹೇಳಿದ ವಿಷಯವನ್ನು ತಪ್ಪು ಎಂದು ನಿರೂಪಿಸಿದಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ" ಎಂದು. ನನ್ನ ಆ ಮಾತಿಗೆ ನಾನು ಇಂದಿಗೂ ಬದ್ಧ.
ಇನ್ನು ಹಠದಿಂದ ಚರ್ಚೆ ಮಾಡುವದಿದ್ದರೆ ನಾನು ಸತ್ಯಾತ್ಮರನ್ನು ಉತ್ತರ ಕೊಡಿ ಉತ್ತರ ಕೊಡಿ ಎಂದು ಬೆನ್ನ್ಹತ್ತಬೇಕಿತ್ತು. ಈ ವಿಷಯವನ್ನು ಸಮಗ್ರ ಸಮಾಜ ಮರೆತೇ ಬಿಟ್ಟಿತ್ತು. ಆದರೆ ಉತ್ತರ ಕೊಟ್ಟಿದ್ದೇವೆ ಎಂದು ಪುಸ್ತಕ ಬಿಡುಗಡೆ ಮಾಡಿ ಮತ್ತೆ ಕೆದಕಿದವರು ಸತ್ಯಾತ್ಮರೇ. ಬಿಡುಗಡೆ ಮಾಡಿದ್ದೀರಿ ಪುಸ್ತಕ ನೀಡಿ ಎಂದರೆ, ಇನ್ನೂ Comma ಹಾಕಿಲ್ಲ, inverted comma ಹಾಕಿಲ್ಲ ಎಂದು ಬರೆದವರು ಕಥೆ ಹೇಳುತ್ತಿದ್ದಾರೆ. ಪೂರ್ಣವಾಗದಿದ್ದರೆ ಬಿಡುಗಡೆ ಮಾಡುವ ಸಾಹಸವೇಕೆ ಮಾಡಬೇಕಿತ್ತು.
ಶ್ರೀಮಟ್ಟೀಕಾಕೃತ್ಪಾದರು ಮೊದಲನೆಯ ಪಕ್ಷದಲ್ಲಿ ಮಿಥ್ಯಾಯಾಃ ಎನ್ನುವದು ಒಂದು ಶಬ್ದವಲ್ಲ, ಮಿಥ್ಯಾ ಮತ್ತು ಯಾಃ ಎಂದು ಎರಡು ಶಬ್ದ ಎಂದು ಹೇಳುತ್ತಿದ್ದಾರೆ. ಸತ್ಯಾತ್ಮರು, ಅದನ್ನು ಮಿಥ್ಯಾಯಾಃ ಎನ್ನುವದರ ಸಾಧುತ್ವ ಸಮರ್ಥನೆ ಎನ್ನುತ್ತಿದ್ದಾರೆ. ಶಬ್ದವೇ ಇಲ್ಲ ಎಂದು ಟೀಕಾಕೃತ್ಪಾದರು ಹೇಳುತ್ತಿದರೆ ಸತ್ಯಾತ್ಮರು ಅಲ್ಲಿ ಶಬ್ದದ ಸಾಧುತ್ವ ಸಮರ್ಥನೆ ಎನ್ನುತ್ತಿದ್ದಾರೆ.
ಶಬ್ದವೇ ಇಲ್ಲ ಎಂದು ಹೇಳುವ ಪಕ್ಷವನ್ನು , ಅದು ಶಬ್ದದ ಸಾಧುತ್ವ ಸಮರ್ಥನೆ ಎಂದರೆ ಶ್ರೀಮಟ್ಟೀಕಾಕೃತ್ಪಾದರನ್ನು ಅಪಹಾಸಕ್ಕೆ ಈಡುಮಾಡಿದ್ದಾರೆ, ಸತ್ಯಾತ್ಮರು.
ಶ್ರೀಮಟ್ಟೀಕಾಕೃತ್ಪಾದರ ಮೇಲಿನ ಆರೋಪಾಭಾಸವನ್ನು ಖಂಡನೆ ಮಾಡುವದು ಹಠ ಎಂದು ಕಂಡರೆ, ಅದು ನಿಮ್ಮ ಸಮಸ್ಯೆ.
ನಾನು ಮಾಡುವ ಕಾರ್ಯವನ್ನು ಮಾಡುತ್ತೇನೆ. ನಿಮಗೆ ಹೇಗೆ ಬೇಕೋ ಹಾಗೆ ಅರ್ಥ ಮಾಡಿಕೊಳ್ಳಿ. ನಿಮ್ಮ ಅಲೋಚನೆಗೆ ನಾನು ಹೊಣೆ ಅಲ್ಲ.
Shrinivas Raghavendrachar Ambekar,Mysore
7:23 PM , 20/03/2022
m.mmm....mmm
Vishwanandini User,Bangalore
6:07 PM , 20/03/2022
8ವರ್ಷಗಳ ಹಿಂದೆ 2013ರಲ್ಲಿ ರಂಗಾಚಾರ್ಯ ಗಣಾಚಾರಿ ಅವರು ನಿಮ್ಮ ಅಭಿಪ್ರಾಯ ಖಂಡಿಸಿ ಗುರುಪಾದೋಕ್ತಿಭೂಷಣ ಎಂಬ ಗ್ರಂಥವನ್ನು ಬರೆದಿದ್ದಾರೆ . ಅದು ನಿಮ್ಮ ಗಮನಕ್ಕೂ ಬಂದಿರಬೇಕು . ಆದರೆ ಅದಕ್ಕೆ 8 ವರ್ಷಗಳಿಂದ ಯಾವುದೆ ಉತ್ತರ ಬಂದಿಲ್ಲ ಏಕೆ ?
Vishnudasa Nagendracharya
ಸತ್ಯಾತ್ಮರು ಉಡುಪಿಯಲ್ಲಿ ಚಾತುರ್ಮಾಸ್ಯಕ್ಕೆ ಕುಳಿತದ್ದು 2014 ರಲ್ಲಿ.
ಆಗಲೇ ಸಭೆಗೆ ಗೋವಿಂದಾಚಾರ್ಯರನ್ನು ಕರೆಸಿ ಅವಮಾನ ಮಾಡಿದ್ದು. ಆ ಸಂದರ್ಭದಲ್ಲಿಯೇ ನ್ಯಾಯಸುಧಾಕ್ಕೆ ತಪ್ಪಾಗಿ ಅರ್ಥ ಹೇಳಿದ್ದು.
ನಾನು ಅದನ್ನು ವಿಮರ್ಶಿಸಿ 2014, ಜಯನಾಮ ಸಂವತ್ಸರ, ಆಶ್ವೀನ ಕೃಷ್ಣ ತ್ರಯೋದಶಿ, ನೀರು ತುಂಬುವ ಹಬ್ಬದ ದಿವಸ ಪುಸ್ತಕವನ್ನು ಪ್ರಕಟ ಮಾಡಿದ್ದೆ.
ಅದೇ ವರ್ಷದ ಕಾರ್ತೀಕ ಮಾಸದ ಶುಕ್ಲ ಪಕ್ಷದ ದ್ವಿತೀಯಾದಂದು ಸತ್ಯಾತ್ಮರಿಗೆ ಪುಸ್ತಕ ತಲುಪಿಸಿದ್ದೆ.
ಇವೆಲ್ಲ ನಡೆಯಲಿಕ್ಕಿಂತ ಮುಂಚೆ 2013 ರಲ್ಲಿಯೇ ಶ್ರೀ ಗಣಾಚಾರಿ ರಂಗಾಚಾರ್ಯರು ನನ್ನ ಅಭಿಪ್ರಾಯ ಖಂಡಿಸಿ ಪುಸ್ತಕ ಬರೆದುಬಿಟ್ಟಿದ್ದರಾ?
ಸುಳ್ಳು ಹೇಳುವದಕ್ಕೂ ಒಂದು ಮಿತಿ ಬೇಡವೇ?
ಸರಿ, ಅವರು ಅಪರೋಕ್ಷಜ್ಞಾನಿಗಳಾಗಿ ಸತ್ಯಾತ್ಮರ ಅಭಿಪ್ರಾಯ ಮತ್ತು ನನ್ನ ಅಭಿಪ್ರಾಯಗಳನ್ನು ಮೊದಲೇ ತಿಳಿದು ಮೊದಲೇ ಉತ್ತರ ಬರೆದಿದ್ದರು ಎಂದಿಟ್ಟುಕೊಳ್ಳೋಣ. ನನಗೆ ತಲುಪಿಸಿದ ದಾಖಲೆಯೇನಾದರೂ ನಿಮ್ಮ ಬಳಿ ಇದೆಯೇ? ನನಗೆ ತಲುಪಿಸುವದು ಬೇಡ, ಜಾಲತಾಣದಲ್ಲಿ ಈಗಾಗಲೇ ಅದು ಪ್ರಕಟವಾಗಿರಬೇಕಿತ್ತಲ್ಲವೇ? Facebook ನಲ್ಲಿ Post ಗಳ ದಿನಾಂಕ, ವರ್ಷಗಳು ದಾಖಲಾಗುತ್ತವೆ. ಅದಾದರೂ ದಾಖಲೆ ಇರಬೇಕಲ್ಲವೇ ?
ಆ ಪುಸ್ತಕ ನನಗೆ ತಲುಪಿರುವದು 15/03/2022 ರಂದು. ವಾಕ್ಯಾರ್ಥದ ನಂತರ ಉತ್ತರ ನೀಡುತ್ತೇನೆ.
Prasanna Kumar N S,Bangalore
3:41 PM , 20/03/2022
ನಮ್ಮ ಸಮಾಜದ ದೌರ್ಭಾಗ್ಯ ಇದು.
ಮಹಾನುಭಾವರು ಹಾಗೂ ನಮಗೆಲ್ಲ ಪೂಜ್ಯರಾದ ಶ್ರೀ ಶ್ರೀಪಾದರಾಜರು, ಶ್ರೀ ವ್ಯಾಸರಾಜರು, ಶ್ರೀ ವಾದಿರಾಜರು ಇಂತಹವರ ವಿಚಾರದಲ್ಲಿ ತಪ್ಪು ಸಂದೇಶಗಳು ಸಮಾಜಕ್ಕೆ ತಲುಪಿಸಿದಾಗ ಅದರ ಬಗ್ಗೆ ಪ್ರಶ್ನೆ ಕೇಳುವುದೇ ಒಂದು ಅಪರಾಧ.
Vadiraj S Dandin,Roha
12:27 AM, 20/03/2022
TRP ಹೆಚ್ಚಿಸಿಕೂಳ್ಳಲು ನ್ಯೂಸ್ ಚಾಲನ್ಗಳು ಕಿತ್ತಾಡೋ ತರ ನಿಮ್ಮ ವರ್ತನೆ. ಅಷ್ಟಕ್ಕೂ ನಿಮಗೆ ನಿಮ್ಮದೇ ಆದ ಅಭಿಮನಿ ವರ್ಗ ಇದ್ರೆ ಪ್ರತ್ಯೇಕ ಮಾಧ್ವ ಮಠ ಸ್ಥಾಪಿಸಿ ತೋರಿಸಿ.
Vishnudasa Nagendracharya
ಒಂದು ನಿಮಿಷ ಆಲೋಚನೆ ಮಾಡಿ.
ನಾನು ಸತ್ಯಾತ್ಮರನ್ನು ಹೊಗಳಿದ್ದರೆ, ಅಥವಾ ಪ್ರಶ್ನಿಸದೇ ಇದ್ದರೇನೇ ನನಗೆ ನೀವುಗಳು ಹೇಳುತ್ತಿರುವ TRP, ಹಣ, ಪ್ರತಿಷ್ಠೆ, ಇತ್ಯಾದಿಗಳ ಲಾಭವಾಗುವದು. ಎದುರು ಹಾಕಿಕೊಂಡರೆ ಅಲ್ಲ.
ಖಂಡಿತವಾದಿ ಲೋಕವಿರೋಧಿ ಎಂಬ ಮಾತಿದೆ. ಲೋಕವಿರೋಧಿಯ ಬಳಿಯಲ್ಲಿ ಯಾರೂ ಸುಳಿಯುವದಿಲ್ಲ. ಲೋಕವಿರೋಧಿಗಳಿಗೆ ಲೋಕವಿರೋಧವೊಂದೇ ಸಮೃದ್ಧವಾಗಿ ಸಿಗುವದು.
ಅಷ್ಟೇಕೆ ತಾವೇ, ವಿಶ್ವನಂದಿನಿಯ ಅಭಿಮಾನಿಯಾಗಿದ್ದವರು, ಆಗಾಗ ಒಂದಷ್ಟು ದಕ್ಷಿಣೆಯನ್ನೂ ನನಗೆ ನೀಡಿದ್ದವರು. ಈಗ ದೂರ ಸರಿದಿದ್ದೀರಿ. ದಕ್ಷಿಣೆ ಕಳೆದುಕೊಂಡದ್ದು ನಾನು ತಾನೇ. ನಿಮ್ಮ ಅನುಭವವೇ ನಿಮಗೆ ಸಾಕ್ಷಿಯಿದೆ. ದಕ್ಷಿಣೆಗಾಗಿ ಕೆಲಸ ಮಾಡುತ್ತಿದ್ದರೆ ನಾನೇಕೆ ಸತ್ಯಾತ್ಮರ ವಿರುದ್ಧ ಧ್ವನಿಯೆತ್ತುತ್ತಿದ್ದೆ?
ಸತ್ಯಾತ್ಮರ ಸಕಲ ಅಭಿಮಾನಿಗಳೂ ನನ್ನನ್ನು ಅವಾಚ್ಯವಾಗಿ ನಿಂದಿಸುತ್ತಿರುವದನ್ನು ನೀವೇ ಸಾಕ್ಷಾತ್ತಾಗಿ ಕಾಣುತ್ತಿದ್ದೀರಿ. ಗೌರವ ಕಳೆದುಕೊಂಡದ್ದು ನಾನು ತಾನೇ. ಸತ್ಯಾತ್ಮರ ಅಭಿಮಾನಿಗಳಿಂದ ಗೌರವ ಪಡೆಯಲು ಕೆಲಸ ಮಾಡುತ್ತಿದ್ದರೆ ನಾನೇಕೆ ಸತ್ಯಾತ್ಮರ ವಿರುದ್ಧ ಧ್ವನಿಯೆತ್ತುತ್ತಿದ್ದೆ?
ನನ್ನ ಅಂತರ್ಯಾಮಿಯ ಸಾಕ್ಷಿಯಾಗಿ, ಮುನಿತ್ರಯರ ಗ್ರಂಥಗಳ ಸಾಕ್ಷಿಯಾಗಿ ಹೇಳುತ್ತಿದ್ದೇನೆ ಕೇಳಿ — ಹಣ, ಪ್ರತಿಷ್ಠೆ, ಗೌರವ, ಪ್ರಾಣ, ಬದುಕು ಮತ್ತೊಂದರ ಬಗ್ಗೆ ನನಗೆ ಮನಸ್ಸಿನ ಮೂಲೆಯಲ್ಲಿಯೂ ಚಿಂತೆಯಿಲ್ಲ. ಶ್ರೀಮಚ್ಚಂದ್ರಿಕಾಚಾರ್ಯರಾದಿ ಮಹಾನುಭಾವರ ನಿಂದೆಗೆ ಉತ್ತರ ನೀಡುವ ಕಾರ್ಯವನ್ನು ಜೀವದ ಕರ್ತವ್ಯ ಎಂದು ಮಾಡುತ್ತಿದ್ದೇನೆ. ಏನನ್ನೂ ಲೆಕ್ಕಿಸದೆ.
ಇನ್ನು ಮಠ ಸ್ಥಾಪಿಸುವದು ನನ್ನ ಉದ್ದೇಶವೂ ಅಲ್ಲ. ಇವತ್ತಿನ ಅನಿವಾರ್ಯತೆಯೂ ಅಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಗೃಹಸ್ಥನಾದ ನನಗೆ ಆ ಅಧಿಕಾರವೇ ಇಲ್ಲ.
ಕಡೆಯಲ್ಲಿ ನಿಮಗೆ ಒಂದು ಪ್ರಶ್ನೆ — ಪುಸ್ತಕ ಬಿಡುಗಡೆ ಮಾಡಿದವರು ಸತ್ಯಾತ್ಮರು. ಆ ಪುಸ್ತಕ ನೀಡಿ ಎಂದು ಕೇಳಿದ್ದು ತಪ್ಪಾಗಿ ಹೋಯಿತೇ? ಬಿಡುಗಡೆ ಮಾಡಿದ ಪುಸ್ತಕವನ್ನು ನೀಡಲು ಹಿಂಜರಿಕೆ ಏಕೆ? ಪುಸ್ತಕ ಪೂರ್ಣವಾಗದಿದ್ದರೆ ಸಮಾಜದ ಮಧ್ಯದಲ್ಲಿ ಬಿಡುಗಡೆ ಮಾಡಬಾರದಿತ್ತು, ಬಿಡುಗಡೆ ಮಾಡಿದ ಬಳಿಕ ಪ್ರತಿಪಕ್ಷಿಗೆ ನೀಡುವದು ಅನಿವಾರ್ಯ ಎಂಬ ಎಚ್ಚರವಿರಬೇಕಿತ್ತು.
Vadiraj S Dandin,Roha
3:05 PM , 20/03/2022
ಆಯ್ತು ಬಿಡಿ. ನೀವು ಪೀತ ಪತ್ರಿಕೋದ್ಯಮದ ರಾಯಭಾರಿ ಆಗಿ. All the best.
Vishnudasa Nagendracharya
ಪ್ರಶ್ನೆಗೆ ಉತ್ತರವಿಲ್ಲದಾಗ, ಹೀಗೆಯೇ ಹತಾಶ ಮಾತುಗಳು ಹೊರಬರುತ್ತವೆ.
ಉತ್ತರಾದಿಮಠದವರು "ನಾನು ಅಂಧತಮಸ್ಸಿಗೆ ಹೋಗುತ್ತೇನೆ" ಎಂದು ಹೇಳುತ್ತಿದ್ದಾರೆ. ಹಾಗೆ ಹೇಳಲು ಅವರು ಅಂಧತಮಸ್ಸನ್ನು ಗುತ್ತಿಗೆ ಹಿಡಿದು ಕುಳಿತಿಲ್ಲ.
ಪೀತ ಪತ್ರಿಕೋದ್ಯಮದ ರಾಯಭಾರಿ ಆಗಿ ಎಂದು ಹೇಳಲು ನಾನು ಅರ್ಜಿಯೂ ಹಾಕಿಲ್ಲ, ನೀವು RNI (Rigistrar of News Papers India) ದ ಅಧಿಕಾರಿಯೂ ಅಲ್ಲ.
ಉತ್ತರವಿಲ್ಲದವರ ಹತಾಶ ವಚನಗಳಷ್ಟೇ ಇವು.
Vadiraj S Dandin,Roha
2:50 PM , 20/03/2022
ನಿಮ್ಮ ಪ್ರಶ್ನೆ,ವಾದ,ವಿವಾದ ಏನೇ ಇದ್ದರೂ ಸಂಬಂಧಪಟ್ಟ ಆಯಾ ಮಠಾಧೀರೊಂದಿಗೆ one to one ಚರ್ಚಿಸಿ ಬಗೆಹರಿಸಿಕೊಳ್ಳಿ. Public domain ನಲ್ಲಿ ರಾಡಿ ಎಬ್ಬಸಿ ಸಮಾಜದ ಸ್ವಾಸ್ಥ್ಯ ಕೆಡಿಸದಿರಿ. ನಮ್ಮ ಸಮಾಜಕ್ಕೆ ರವಿ ಬೆಳಗೆರೆ, ಅನಂತಮೂರ್ತಿ ಯಂಥ hyper critics ಗಳ ಅವಶ್ಯಕತೆಯಿಲ್ಲ.
Vishnudasa Nagendracharya
ಈ ಉಪದೇಶವನ್ನು ಹೃಷೀಕೇಶಾಚಾರ್ಯ ಮಠದ ಅವರೂ ಸಹ ಮಾಡಿದ್ದಾರೆ.
ಇಡಿಯ ಸಮಾಜ ಗಮನಕೊಟ್ಟು ನೋಡಬೇಕಾದ ಉತ್ತರ ಇದೆ. ಮತ್ತು ಹಿಂದಿನ ನೂರು ವರ್ಷಗಳಲ್ಲಿ ನಡೆದಂತಹ ಘಟನೆಗಳ ದಾಖಲೆಗಳನ್ನು ನೀಡಬೇಕಾಗಿದೆ. ಹೀಗಾಗಿ ಲೇಖನ ಉಪನ್ಯಾಸಗಳನ್ನೇ ಮಾಡಬೇಕು.
ವಾಕ್ಯಾರ್ಥದ ನಂತರ ಬರೆದು ಉಪನ್ಯಾಸ ಮಾಡಿ ಪ್ರಕಟಿಸುತ್ತೇನೆ.
ಈಗ ಒಂದು ಉತ್ತರ ನೀಡುತ್ತೇನೆ — ಸತ್ಯಾತ್ಮರೂ ಸಹ ಉತ್ತರವನ್ನು ಬರೆಸಿ ನನಗೆ ಕಳುಹಿಸಿಬಿಟ್ಟಿದ್ದರೆ ಬಗೆ ಹರಿಯುತ್ತಿತ್ತಲ್ಲವೇ? ಅವರು ಮಾತ್ರ ಸಮಾಜದ ಮಧ್ಯದಲ್ಲಿ ಪುಸ್ತಕ ಬಿಡುಗಡೆ ಮಾಡಬಹುದು. ನಾನು ಮಾತ್ರ One to one ಪ್ರಶ್ನೆ ಮಾಡಬೇಕು. ಇದು ಯಾತರ ನ್ಯಾಯ?
ಮತ್ತು ಸತ್ಯಾತ್ಮರು ತಮ್ಮ ಶಿಷ್ಯರಿಗೆ ಪಾಠ ಹೇಳುವಾಗ ಹೇಳಿದ್ದನ್ನು ನಾನು ಖಂಡಿಸಿರುವದಲ್ಲ. ಅವರು ಸಮಾಜದ ಮಧ್ಯದಲ್ಲಿ ಹೇಳಿದ್ದನ್ನೇ ಖಂಡಿಸಿದ್ದೇನೆ.
ಸಮಾಜದ ಮಧ್ಯದಲ್ಲಿ ಸಾಮಾಜಿಕ ವ್ಯಕ್ತಿಯಾಗಿ ಇರುವವರು ಸಾಮಾಜಿಕ ಪ್ರಶ್ನೆಗಳನ್ನು ಎದುರಿಸಲೇ ಬೇಕು. ಪ್ರಶ್ನಾತೀತರಾಗಲು ಸಾಧ್ಯವಿಲ್ಲ. ನಾನಾಗಲೀ ಅವರಾಗಲಿ.
ಅಷ್ಟೇಕೆ, ಸಮಾಜದ ಮಧ್ಯದಲ್ಲಿ ಪ್ರಶ್ನೆ ಉಪದೇಶ ಮಾಡಬಾರದು ಎಂಬ ನಿಲುವುಳ್ಳ ತಾವು ನನಗೆ ನೇರವಾಗಿ Whatsapp ಮಾಡಬಹುದಿತ್ತಲ್ಲವೇ? ವಿಶ್ವನಂದಿನಿಯಲ್ಲೇಕೆ comment ಮಾಡಿದಿರಿ. ನಿಮಗೊಂದು ನ್ಯಾಯ ನನಗೊಂದು ನ್ಯಾಯವಾ?
ಉತ್ತರ ನೀಡುವ ಶಕ್ತಿ ಇರುವವರಿಗೆ, ಮತ್ತು ನೀಡುವ ಉತ್ತರ ಸರಿಯಾಗಿದೆ ಎಂಬ ವಿಶ್ವಾಸವಿರುವವರಿಗೆ ಪ್ರಶ್ನೆ "ಭಯಂಕರ" ವಾಗುವದಿಲ್ಲ. ಪ್ರಶ್ನೆಗೆ ಉತ್ತರವಿಲ್ಲದವರಿಗೇ ಪ್ರಶ್ನೆಗಳು ಸಮಸ್ಯೆಯಾಗುವದು.
ಪುಸ್ತಕ ಪೂರ್ಣವಾಗದಿದ್ದರೆ ಸಮಾಜದ ಮಧ್ಯದಲ್ಲಿ ಬಿಡುಗಡೆ ಮಾಡಬಾರದಿತ್ತು, ಬಿಡುಗಡೆ ಮಾಡಿದ ಬಳಿಕ ಪ್ರತಿಪಕ್ಷಿಗೆ ತಲುಪಿಸುವ ಅನಿವಾರ್ಯತೆಯಿದೆ ಎಂಬ ಎಚ್ಚರವಿರಬೇಕಿತ್ತು. ಈಗ ಉತ್ತರವಿಲ್ಲ. ಅದಕ್ಕಾಗಿ ಪ್ರಶ್ನೆ ಮಾಡಿದ್ದೇ ತಪ್ಪು ಎನ್ನುತ್ತಿದ್ದೀರಿ.
Kruti Pujar,Bengaluru
8:54 AM , 20/03/2022
ರಂಗಾಚಾರ್ಯರಲ್ಲದೆ, ಹೃಶೀಕೇಶಾಚಾರ್ಯ ಮಠದ ಹಾಗೂ ಮತ್ತೊಬ್ಬರು (ಲೇಖನದಲ್ಲಿ ಅವರ ಹೆಸರು ಇಲ್ಲ) ಉತ್ತರ ನೀಡಿದ್ದಾರೆ.
ಹಾಗೂ ಹೃಶೀಕೇಶ ಮಠದ ಅವರು ಹೇಳಿದಂತೆ, ಮಾದ್ವೇತರರು ಇದರ ದುರುಪಯೋಗ ಮಾಡಿಕೊಳ್ಳದಂತೆ ನಮ್ಮಲ್ಲೇ ಈ ಚರ್ಚೇ ಮಾಡೋದು ಉಚಿತ
Vishnudasa Nagendracharya
ಶ್ರೀ ಹೃಷೀಕೇಶಾಚಾರ್ಯ ಮಠದ ಅವರ ಪ್ರಶ್ನೆಗಳಿಗೆ ವಾಕ್ಯಾರ್ಥದ ನಂತರ ಅವಶ್ಯವಾಗಿ ಉತ್ತರಿಸುತ್ತೇನೆ.
Kruti Pujar,Bengaluru
11:42 PM, 19/03/2022
ಸ್ವಾಮಿ ನಾಗೇಂದ್ರಾಚಾರ್ಯರೆ
ರಂಗಾಚಾರ್ಯ ಗಣಾಚಾರ್ಯ ಎಂಬುವರು ಈಗಾಗಲೇ ಸ್ವಾಮಿಗಳು ಹೇಳಿದಪಕ್ಶದ ಸಾಧುತ್ವಸಮರ್ಥನೆಯ ಉತ್ತರ ನೀಡಿದ್ದಾರೆ..
ಪುಸ್ತಕ ಬಂದಿಲ್ಲ ಎಂದು ಆಕ್ಶೇಪಿಸಿದವರು ಇನ್ನೂ ಉತ್ತರ ಯಾಕೆ ನೀಡಿಲ್ಲ?
ವಾದದ ವೇದಿಕೆ ಸಿದ್ಧಪಡಿಸುವ ವಿಶಯದ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.
Vishnudasa Nagendracharya
ಶ್ರೀ ಗಣಾಚಾರಿ ರಂಗಾಚಾರ್ಯರ ಪುಸ್ತಕವು ನನಗೆ 15/03/2022 ರಂದು ತಲುಪಿದೆ. ವಾಕ್ಯಾರ್ಥವೇ ನಡೆಯಲಿದೆ. ವಾಕ್ಯಾರ್ಥ ಸಭೆಯಲ್ಲಿ ಅದರ ಪ್ರಸ್ತಾವವೂ ಬಂದರೆ ಅವಶ್ಯವಾಗಿ ಅದಕ್ಕೂ ಉತ್ತರಿಸುತ್ತೇನೆ. ಬರಲಿಲ್ಲವಾದರೆ, ಉತ್ತರವನ್ನು ವಾಕ್ಯಾರ್ಥದ ನಂತರ ವಿಶ್ವನಂದಿನಿಯಲ್ಲಿ ಪ್ರಕಟಿಸುತ್ತೇನೆ.
ಶ್ರೀಮಟ್ಟೀಕಾಕೃತ್ಪಾದರು ನ್ಯಾಯಸುಧೆಯಲ್ಲಿ ಒಂದು ಮಾತನ್ನು ಹೇಳುತ್ತಾರೆ - "ಮತ್ತೊಬ್ಬರ ಮೈ ಸುಟ್ಟಿದೆ ಎಂದು ನಮ್ಮ ಮೈ ಸುಟ್ಟಿದ್ದರ ತಾಪ ಹೋಗುವದಿಲ್ಲ ಎಂದು". ಹಾಗಾಗಿದೆ ಇದು. ಸತ್ಯಾತ್ಮರು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಪುಸ್ತಕ ಪೂರ್ಣವಾಗದಿದ್ದರೆ ಬಿಡುಗಡೆ ಮಾಡಬಾರದಿತ್ತು. ಬಿಡುಗಡೆ ಮಾಡಿದ ಮೇಲೆ ಪ್ರತಿಪಕ್ಷಿಗೆ ತಲುಪಿಸಬೇಕಾದ್ದು ಅನಿವಾರ್ಯ. ಅವರು ಅದನ್ನು ಬಿಡುಗಡೆ ಮಾಡದೇ ಇದ್ದರೆ ಈ ಪ್ರಶ್ನೆಗಳೇ ಉದ್ಭವಿಸುತ್ತಿರಲಿಲ್ಲ.
ವಾದ ವೇದಿಕೆಗೆ ಸ್ಥಳ ನೀಡುವ ಅಧಿಕಾರವುಳ್ಳವರು ಸ್ವಲ್ವ ದಿವಸಗಳ ನಂತರ ತಿಳಿಸುತ್ತೇವೆ ಎಂದಿದ್ದಾರೆ. ಅವರು ಅಧಿಕೃತವಾಗಿ ತಿಳಿಸಿದ ತಕ್ಷಣ ವಿಶ್ವನಂದಿನಿಯಲ್ಲಿಯೇ ಪ್ರಕಟಿಸಲಾಗುವದು.
subramanya v bhat,mandya
12:54 PM, 19/03/2022
ವಿದ್ವಾಂಸರ ನಡುವಿನ ಚರ್ಚಾಗೋಷ್ಠಿ ಯಾವಾಗ ಗುರುಗಳೆ ನೋಡಬೇಕೆಂದು ತುಂಬಾ ಕಾತುರದಿಂದ ಕಾಯುತ್ತಿದ್ದೇನೆ .ಜೀವನದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಆಸೆ .ಸಾಷ್ಟಾಂಗ ನಮಸ್ಕಾರ ಗುರುಗಳೇ .
Srinivasa Deshpande,Chennai
10:10 PM, 18/03/2022
Hatsoff to the confidence you have!
All the four judges selected are favorable to UM. Oh my god!