Prashnottara - VNP248

ನಿಸ್ಸಾರ ಪುಸ್ತಕ, ವಾಕ್ಯಾರ್ಥದಿಂದ ಪಲಾಯನ


					 	

ಉತ್ತರಾದಿಮಠದ ಚಂದಿ ರಘುವೀರಾಚಾರ್ಯರು ಸತ್ತ್ವಹೀನವಾದ ಪುಸ್ತಕವನ್ನು ಪ್ರಕಟಿಸಿ ನನಗೆ ಕಳುಹಿಸಿದ್ದರು. 14ನೆಯ ತಾರೀಕು ವಾಕ್ಯಾರ್ಥಕ್ಕೆ ಬನ್ನಿ ಎಂದರೆ, “ವಾಕ್ಯಾರ್ಥದ ಆವಶ್ಯಕತೆ ಇರುವದು ನನಗಲ್ಲ, ನಿಮಗೆ ಎಂದು ಜಾರಿಕೊಂಡು ಕಿರುಲೇಖನವೊಂದನ್ನು ಕಳುಹಿಸಿದ್ದಾರೆ. ಅವರ ಪುಸ್ತಕ, ಕಿರುಲೇಖಗಳನ್ನು ಪ್ರಕಟಿಸಿದ್ದೇನೆ, ನನ್ನ ಸ್ಪಷ್ಟನಿಲುವುಗಳೊಂದಿಗೆ.


Play Time: 19:13, Size: 14 MB


Download Article Download Upanyasa Share to facebook View Comments
15528 Views

Comments

(You can only view comments here. If you want to write a comment please download the app.)
 • Subbarajan,Chennai

  10:57 PM, 19/04/2022

  Acharyare! Motta modalige, aarambave nintha madi aarambisida ee prasura, koneyalli nimmannu nintha maaduthare enthu heliruvarudu.....?....? Maththu onthu matatha mele ishtu kaara, thumbi iruva nimma jothege hege vakyarthakke baruva sagaja thana huttuvadu? Prelude baratha pandithargalanna karedhu nimma aakshepavannu thilisi, santhi yaagavu prayththane maadubohudu allava? Maththu pancha beda kooda, matathe bedha maaduva kootadalli neevu seribittiruvathu nammantha nimma abimaanigalige novagithe. Eethara barithathikke nanna kshamisisa beku. Namaskara.....Subbarajan

  Vishnudasa Nagendracharya

  उत्तरादिमठ अवर मूलपुरुषराद विद्यानिधिगळ कालदिंद हिडिदु इवत्तिनवरेगे वैष्णवद्रोहवन्ने माडुत्तिद्दारे. अदक्कागिये नन्न भाषे इष्टु खार. 
  
  तावु तिळिदद्दु सरियागिदे एंदु उत्तरादिमठद पंडितरिगे नंबिके इद्दिद्दरे अवरु वाक्यार्थक्क बंदु नन्नन्नु खंडिसि नानु तप्पु एन्नुवदन्नु तोरिसुत्तिद्दरु. 
  
  नानु मठभेद माडलु होरटिल्ल. अदु नन्न उद्देशवू अल्ल. माध्वपरंपरेगे आगिरुव आगुत्तिरुव द्रोहद विरुद्ध मात्र नन्न होराट. 
 • Ganesh k manglekar,Belagavi

  4:15 PM , 14/04/2022

  🙏🙏🙏
 • rammurthy kulkarni,Bangalore

  11:42 PM, 10/04/2022

  ಗುರುಗಳೇ,
  
  ಒಬ್ಬ ಮಾಧ್ವನು ತನ್ನನ್ನು ತಾನು ಯಾವುದಾದರೂ ಮಠದೊಂದಿಗೆ ಗುರುತಿಸಿಕೊಳ್ಳಲೇಬೇಕೆ? ಮಠಾತೀತವಾಗಿ, ಕೇವಲ ಭಕ್ತಿ, ಶ್ರಧ್ಧೆಯಿಂದ ಸಾತ್ವಿಕ ಬದುಕು ಬದುಕಬಹುದೇ?

  Vishnudasa Nagendracharya

  ಇವತ್ತಿನ ಸಂನ್ಯಾಸಿಗಳನ್ನು ನೋಡಿ ನಮ್ಮ ಮಹಾನುಭಾವರ ಪರಂಪರೆಗಳಿಂದ (ಮಠಗಳಿಂದ) ನಾವೇಕೆ ದೂರವಾಗಬೇಕು?
  
  ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ನಮ್ಮ ಉದ್ಧಾರಕ್ಕಾಗಿಯೇ ಸ್ಥಾಪನೆ ಮಾಡಿದ ಮಠಗಳಿವು. ಭಗವದಪರೋಕ್ಷವನ್ನು ಪಡೆದ ಮಹಾನುಭಾವರು, ಸಾಕ್ಷಾತ್ ದೇವತೆಗಳು ಋಷಿಗಳು ಶ್ರೇಷ್ಠ ಪರಂಪರೆಗಳಲ್ಲಿ ಆಗಿ ಹೋಗಿದ್ದಾರೆ. 
  
  ಹೀಗಾಗಿ ಸರ್ವಥಾ ನಾವು ಆ ಮಹಾಗುರುಗಳ ಪರಂಪರೆಗೆ ಸೇರಿದವರು ಎಂದು ಹೆಮ್ಮೆ ಭಕ್ತಿಗಳಿಂದ ಸ್ಮರಿಸಬೇಕು. 
  
  ಆದ್ದರಿಂದ ಶ್ರೀಮದಾಚಾರ್ಯರ "ಪರಿಶುದ್ಧ" ಪರಂಪರೆಗಳಿಂದ ಎಂದಿಗೂ ನಾವು ದೂರವಾಗಬಾರದು. 
  
  ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಮೊದಲು ಅದ್ವೈತಿಗಳಾಗಿದ್ದವರು. ಆ ಮತ ಸರಿಯಿಲ್ಲ ಎಂದು ತೊರಂದು ಶ್ರೀಮದಾಚಾರ್ಯರ ಮತವನ್ನು ಸ್ವೀಕರಿಸಿದಂತೆ ನಾವೂ ಸಹ ದುಷ್ಟಪರಂಪರೆಯ ಮಠವನ್ನು ತೊರೆದು ಶ್ರೀಮದಾಚಾರ್ಯರ ಪರಿಶುದ್ಧ ಪರಂಪರೆಯ ಮಠವನ್ನು ಅವಶ್ಯವನ್ನು ಸ್ವೀಕರಿಸಬಹುದು. 
  
  ಇನ್ನು ಇವತ್ತಿನ ಸಂನ್ಯಾಸಿಗಳು ಕಪಟಿಗಳಾಗಿದ್ದಲ್ಲಿ, ಕಳ್ಳತನದ ಸುಳ್ಳಿನ ಪರಂಪರೆಗಳಿದ್ದಲ್ಲಿ ಅವರಿಂದ ದೂರವಾಗಲೇಬೇಕು. ಸಂಶಯವಿಲ್ಲ. 
  
  ಮಠಗಳ ರಾಜಕೀಯಗಳು, ಅಲ್ಲಿ ನಡೆಯುತ್ತಿರುವ ಅನಾಚಾರ ಮುಂತಾದವುಗಳನ್ನು ಕಂಡು ಈಗಾಗಲೇ ಸಾತ್ವಿಕ ಸಜ್ಜನರು ಅದರಿಂದ ದೂರವಾಗಿಬಿಟ್ಟಿದ್ದಾರೆೆ. ಹೀಗಾಗಿ  ಇವತ್ತಿನ ಮಠಗಳ ಈ ಕುಕೃತ್ಯಗಳಿಂದ ದೂರವಾಗೋಣ. ಆದರೆ ಶುದ್ಧ ಪರಂಪರೆಯಿಂದ ದೂರವಾಗುವ ಅಪರಾಧ ಬೇಡ. ಶ್ರೀಮದಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀಮದ್ವಾದಿರಾಜರು, ಶ್ರೀರಾಘವೇಂದ್ರತೀರ್ಥರು ಮುಂತಾದ ಮಹಾನುಭಾವರ ಪಾದದಾಶ್ರಯದಲ್ಲಿಯೇ ಬದುಕೋಣ. 
 • ರಿತ್ತಿ ವಾಸುದೇವಾಚಾರ್,ಬೆಂಗಳೂರು

  12:09 AM, 11/04/2022

  ನಮೋ ನಮಃ ಆಚಾರ್ಯರೇ🙏

  Vishnudasa Nagendracharya

  ಶುಭವಾಗಲಿ.
 • Vijendran,Chennai

  2:04 PM , 12/04/2022

  🙏🙏🙏gurugale...
 • undefined,undefined

  7:52 PM , 11/04/2022

  ನಮೋನಮಃ 🙏🙏
 • Pradyumna,Bengaluru

  3:24 PM , 11/04/2022

  Nama
 • Srinivasa Deshpande,Chennai

  9:03 AM , 11/04/2022

  What a shame on Uttaradi Mutt pundits.
 • savitri,Auckland

  1:40 AM , 11/04/2022

  🙏
 • savitri,Auckland

  1:39 AM , 11/04/2022

  Sorry by mistake it was send without completing, it shows your true devotion towards sri hari vayu gurugaluji.
 • savitri,Auckland

  1:37 AM , 11/04/2022

  Appa , it proves your knowledge, Confidence , Dedication and
 • bindu madhava,Bangalore

  11:03 PM, 10/04/2022

  ಅಚಾರ್ಯರೇ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಉತ್ತರಾದಿಮಠದ ಯತಿಗಳು, ಹಾಗೂ ಶಿಷ್ಯರು ಈ ಹಿಂದೆ ಅನೇಕ ಪ್ರಮಾದಗಳನ್ನು, ತಪುಗಳನ್ನು ಮಾಡಿದ್ದಾರೆ ಎಂದು ತಿಳಿಯುತ್ತದೆ.. ಈಗಿನ ಕಾಲದ ಅನೇಕ ಜನಗಳಿಗೆ ಇದರ ಬಗ್ಗೆ ತಿಳಿದಿಲ್ಲ...ನೀವು ಅವೆಲ್ಲವನ್ನು ಒಂದು ಪುಸ್ತಕ ರೂಪದಲ್ಲಿ ಸಾಕ್ಷಿ ಸಮೇತ ಪ್ರಕಟ ಮಾಡಬಹುದೇ???

  Vishnudasa Nagendracharya

  ಖಂಡಿತ 
 • rammurthy kulkarni,Bangalore

  10:10 PM, 10/04/2022

  ಆಚಾರ್ಯರೇ,
  
  ಅವರ (UM) ಮನೋರೋಗಕ್ಕೆ ಮದ್ದಿಲ್ಲ. ಶ್ರೀಮದಾಚಾರ್ಯರನ್ನೂ ಇವರು ಮಠಕ್ಕೆ ಸೀಮಿತಗೊಳಿಸುವ ಮನಸ್ಥಿತಿಗೆ ಏನು ಹೇಳೋಣ? ವೃಥಾ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಇತಿಹಾಸವನ್ನೇ ತಿರುಚುವ ಇವರಿಗೆ ನಿಮ್ಮ ಮಾತುಗಳನ್ನು ಕೇಳುತ್ತಾರಾ?

  Vishnudasa Nagendracharya

  ನಿಜ. ನಿಮ್ಮ ಮಾತು ಸತ್ಯ. ನಾವೇ ದೊಡ್ಡವರು ಎಂಬ ಮನೋರೋಗಕ್ಕೆ ಸರ್ವಥಾ ಮದ್ದಿಲ್ಲ. 
  
  ಹೀಗಾಗಿ ಉತ್ತರಾದಿಮಠದವರು ಬದಲಾಗುತ್ತಾರೆ, ತಮ್ಮನ್ನು ತಾವು ತಿದ್ದುಕೊಳ್ಳುತ್ತಾರೆ, ಆ ಕಾರ್ಯ ನನ್ನಿಂದ ಆಗುತ್ತದೆ, ನನ್ನ ಮಾತು ಇವರು ಕೇಳುತ್ತಾರೆ ಎಂಬ ಭ್ರಮೆ ನನಗೆ ಸರ್ವಥಾ ಇಲ್ಲ. ಅವರು ಬದಲಾಗುವದೂ ಇಲ್ಲ, ಅವರನ್ನು ಬದಲಿಸುವದು ನನ್ನ ಉದ್ದೇಶವೂ ಅಲ್ಲ. 
  
  ಆದರೆ, ಈಗ ಮಾಡುತ್ತಿರುವ ಕಾರ್ಯ ಸರ್ವಥಾ ವ್ಯರ್ಥವಲ್ಲ. ಕಾರಣ, ಉತ್ತರಾದಿಮಠದವರು ಹೇಳುವ ಸುಳ್ಳು ಕಥೆಗಳನ್ನು ನಂಬಿಕೊಂಡು ಸಾವಿರಾರು ಸಜ್ಜನರು ದಾರಿ ತಪ್ಪುತ್ತಿದ್ದಾರೆ. ಸ್ವಯಂ ನಾನೇ ತಪ್ಪಿದ್ದೆ. ಶ್ರೀ ಮಧ್ವವಿಜಯದಲ್ಲಿ ಒಂದು ಮಾತು ಬರುತ್ತದೆ, ಮೋಹಪೀತಲವಣೋದಕಃ ಎಂದು. ಅಮೃತದ ಪರಿಚಯವಿಲ್ಲದ ವ್ಯಕ್ತಿ, ಉಪ್ಪನೀರನ್ನೇ ಅಮೃತ ಎಂದು ಭ್ರಮಿಸಿ ಕುಡಿದಂತೆ ಎಂದು. ಹಾಗೆ, ಈ ಉತ್ತರಾದಿಮಠದವರು ಹೇಳುವ ಸುಳ್ಳು ಕಥೆಗಳೆಲ್ಲ ನನ್ನ ಮೇಲೆ ವಿಚಿತ್ರ ಪರಿಣಾಮ ಬೀರಿದ್ದವು. ಇದೇ ಮೂಲಮಠ, ಉಳಿದದ್ದೆಲ್ಲ ಶಾಖಾಮಠ, ಇವರನ್ನು ಹೊಗಳಿದರೇ ಮುಕ್ತಿ ಇತ್ಯಾದಿ ಭ್ರಮೆಯ ಲೋಕದಲ್ಲಿಯೇ ಇದ್ದೆ. ಇವರ ಈ ಸುಳ್ಳುಕಥೆಗಳಿಗೆ ಈಗಲೂ ಸಾವಿರಾರು ಅಮಾಯಕ ಸಜ್ಜನರು ಬಲಿಯಾಗಿದ್ದಾರೆ. 
  
  ಆದರೆ, ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದಂತೆ ಇವರ ಕತೆಗಳೆಲ್ಲ ಕಟ್ಟುಕತೆಗಳು, ತಮ್ಮವರನ್ನು ದೊಡ್ಡವರನ್ನಾಗಿ ಮಾಡಲು, ಮಹಾನುಭಾವರನ್ನು ಸಣ್ಣವರನ್ನಾಗಿ ಮಾಡಿದ್ದಾರೆ ಎನ್ನುವ ಸತ್ಯದ ಅರಿವಾಗುತ್ತ ಹೋಯಿತು. ಹೀಗಾಗಿ ಉಳಿದವರು ದಾರಿತಪ್ಪುವದು ಬೇಡ ಎಂದು ಇವರ ಇತಿಹಾಸದ ಸಮಸ್ಯೆಗಳನ್ನು ತೋರಿಸಲು ಮುಂದಾಗಿದ್ದೇನೆ. 
  
  ಹಾಗಂತ ಯಾರನ್ನೋ ಉದ್ಧಾರ ಮಾಡಲು ಹೊರಟಿದ್ದೇನೆ ಎಂಬ ಭ್ರಮೆಯೂ ಸರ್ವಥಾ ನನಗಿಲ್ಲ. ಕೇವಲ ಯಥಾರ್ಥವನ್ನು ತಿಳಿದರೆ ಸಾಲದು, ಅಯಥಾರ್ಥದ ಖಂಡನೆಯನ್ನು ಮಾಡಲೇಬೇಕು ಎಂಬ ಉಪನಿಷತ್ತಿನ, ಶ್ರೀಮದಾಚಾರ್ಯರ ಆದೇಶವನ್ನು ಅನುಷ್ಠಾನ ಮಾಡುತ್ತಿದ್ದೇನೆ, ನನ್ನ ಕರ್ತವ್ಯರೂಪವಾಗಿ. 
  
  ಅವರು ಬರೆದುಕೊಂಡಿರುವ ಸುಳ್ಳುಕಥೆಗಳೂ ಇತಿಹಾಸದಲ್ಲಿ ದಾಖಲಾಗಿವೆ. ಅದರ ಖಂಡನೆಯೂ ದಾಖಲಾಗಲಿ. 
  
  ಹೀಗೆ, ಕರ್ತವ್ಯರೂಪವಾಗಿ, ಶುದ್ಧ ಇತಿಹಾಸದ ಉಳಿವಾಗಾಗಿ ಈ ಪ್ರಯತ್ನ. 
  
  "ಕೇವಲ ಯಥಾರ್ಥವಾದುದನ್ನು ತಿಳಿದರೆ ಸಾಲದು, ಅಯಥಾರ್ಥವನ್ನು ಖಂಡನೆ ಮಾಡಲೇಬೇಕು" ಎಂದು ಶ್ರೀಮದಾಚಾರ್ಯರು ಈಶಾವಾಸ್ಯೋಪನಿಷದ್ಭಾಷ್ಯದಲ್ಲಿ ಮಾಡಿದ ಆದೇಶದ ಪರಿಪಾಲನೆಯಿದು. ಸಮಯವನ್ನು ವ್ಯರ್ಥ ಮಾಡುಲ ಕೆಲಸವಲ್ಲ, ಸಾರ್ಥಕಗೊಳಿಸುವ ಶ್ರೀವಿಷ್ಣುಪೂಜೆಯಿದು. 
 • M V Lakshminarayana,Bengaluru

  5:07 PM , 10/04/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
  ತಮ್ಮ ಅನಿಸಿಕೆಗಳು ಸಾರ್ವಕಾಲಿಕ ಸತ್ಯ. ಅನಂತಾನಂತ ನಮಸ್ಕಾರಗಳು
 • M V Lakshminarayana,Bengaluru

  2:24 PM , 10/04/2022

  ಆಚಾರ್ಯರಿಗೆ ಶಿರಸಾಷ್ಟಾಂಗ ನಮಸ್ಕಾರಗಳು. 
  ಎಲ್ಲಾ ಮಾಧ್ವ ಮಠಗಳೂ ವಿಶಾಲ ಅಡಿಪಾಯದಂತೆ ಕೆಲಸ ಮಾಡಿ ಶುದ್ಧ ತತ್ವಗಳನ್ನು ಸದ್ವೈಷ್ಣವರಿಗೆ ತಲುಪಿಸಬೇಕೇ ವಿನಃ, ಈ ರೀತಿ ಮಠಭೇದಗಳನ್ನು ಪ್ರಕಟ ಮಾಡಿಕೊಂಡು, ಅನ್ಯರೆದುರಿಗೆ ಚಿಕ್ಕವರಾಗುವದರಲ್ಲಿ ಅರ್ಥವಿಲ್ಲ. ರಾಜಕೀಯ ಪಕ್ಷಗಳು ಕಿತ್ತಾಡಿದ ಹಾಗೆ ಮಠಗಳೂ ಕಿತ್ತಾಡಿ ದೊರೆ, ಸಮಾಜದಲ್ಲಿ ಗೌರವ ಉಳಿಯಲು ಹೇಗೆ ಸಾಧ್ಯ? ಈಗ ಮಾಧ್ಯಮಗಳು ಪ್ರಬಲವಾಗಿರುವ ಕಾರಣ, ಪ್ರತಿ ನಡೆನುಡಿಗಳೂ ಎಚ್ಚರಿಕೆಯಿಂದಿರಬೇಕು. ಎಲ್ಲಾ ಮಠದ ವಿದ್ವಾಂಸರನ್ನು ಎಲ್ಲಾ ಮಠದವರೂ ಗೌರವಿಸಲೇಬೇಕು. ಗೊಂದಲಗಳು ತಲೆದೋರಿದಾಗ ಮಾಧ್ಯಮಗಳ ಮುಂದೆ ಹೋಗುವ ಬದಲು ವಿಚಾರ ಗೋಷ್ಠಿಗಳ ಮೂಲಕ ಸರಿಪಡಿಸಿಕೊಳ್ಳಬೇಕೇ ಹೊರತು, ದೋಷಾರೋಪಗಳಿಗೆ ಮೊರೆಹೋಗಬಾರದು. ಮಾಧ್ವ ಮಠಗಳು ಒಂದಾಗುವದು ಯಾವಾಗ?

  Vishnudasa Nagendracharya

  ಸಾಮರಸ್ಯ ಖಂಡಿತ ಎಲ್ಲರಿಗೂ ಆವಶ್ಯಕ ನಿಜ. 
  
  ನಾವು ಹಿಂದೂಗಳು ಮುಸಲ್ಮಾನರಾದ ಕಲಾಂ ರವರನ್ನು ರಾಷ್ಟ್ರಪತಿ ಎಂದು ಮಾಡಿ ಗೌರವ ಕೊಟ್ಟವರು. ಆದರೆ, ನಮ್ಮಲ್ಲಿಯೇ ಇರುವ ಕೆಲವು ಮುಸಲ್ಮಾನರು ಭಾರತದ ವಿರುದ್ಧ ಪಿತೂರಿ ಮಾಡಿದಾಗ, ನಮ್ಮ ದೇಶ ನಮ್ಮ ಧರ್ಮಕ್ಕೆ ಧಕ್ಕೆ ಮಾಡುವ ಕಾರ್ಯ ಮಾಡುವಾಗ ಸುಮ್ಮನೇ ಕೂಡಬೇಕೇ? ಸರ್ವಥಾ ಇಲ್ಲ. 
  
  ಹಾಗೆಯೇ ಉತ್ತರಾದಿಮಠದವರೂ ಸಹ. 
  
  ಸಕಲ ಮಾಧ್ವಪರಂಪರೆಗಳಲ್ಲಿ ಬಂದಿರುವ ಎಲ್ಲರೂ ಇವರ ಶಿಷ್ಯರಂತೆ. 
  
  ಸತ್ಯಪ್ರಮೋದರು ಸ್ವಾದಿಯಲ್ಲಿ ಚಾತುರ್ಮಾಸ್ಯಕ್ಕೆ ಅಂತ ಹೋಗಿ, ಅಲ್ಲಿಂದ ಬಂದ ಮೇಲೆ ಶ್ರೀ ವಿಶ್ವೋತ್ತಮತೀರ್ಥಶ್ರೀಪಾದಂಗಳವರನ್ನು ತಮ್ಮ ಶಿಷ್ಯರು ಎಂದು ಪ್ರಚಾರ ಮಾಡಿಸಿಕೊಂಡು ಸತ್ಯಾತ್ಮರ ಕಾಲಕ್ಕೆ ಶ್ರೀಮದ್ವಾದಿರಾಜಸಂಸ್ಥಾನದಿಂದಲೇ ಮುಖಭಂಗವಾದದ್ದು ದಾಖಲಾಗಿದೆಯಲ್ಲವೇ?
  
  ಮಹಾನುಭಾವರನ್ನೆಲ್ಲ ದೂಷಿಸಿದವರು, ಇವತ್ತಿಗೂ ದೂಷಿಸುವವರು ಉತ್ತರಾದಿ ಮಠದವರು. ಶ್ರೀಮಚ್ಚಂದ್ರಿಕಾಚಾರ್ಯರು, ರಾಯರು ಪ್ರಹ್ಲಾದರಾಜರ ಅವತಾರ, ಶ್ರೀ ಪುರಂದರದಾಸಾರ್ಯರು ನಾರದರ ಅವತಾರ ಎನ್ನುವದಕ್ಕೆ ಪ್ರಮಾಣವಿಲ್ಲವಂತೆ, ಸತ್ಯಪ್ರಮೋದರು, ಸತ್ಯಾಭಿಜ್ಞರು ದೇವತೆಗಳು ಋಷಿಗಳು ಎನ್ನುವದಕ್ಕೆ ಪ್ರಮಾಣವಿದೆಯಂತೆ. ಅವರ ಪುಸ್ತಕಗಳಲ್ಲಿಯೇ ಈ ವಿಷಯಗಳಿವೆ ನೋಡಿ. 
  
  ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಪುಟ್ಟ ಮಗ ಜ್ವರದಿಂದ ಬಳಲುತ್ತಿದ್ದರೆ, ಆ ಕೂಸಿಗೆ ಔಷಧಿಯೂ ದೊರೆಯದಂತೆ ಮಾಡಿ ಊರಿನಿಂದ ಹೊರಗಟ್ಟಿದವರು, ಉತ್ತರಾದಿಮಠದವರು. ಆ ಜಂಬುಖಂಡಿ ಆಚಾರ್ಯರನ್ನು ಕೊಲ್ಲಲೆಂದೇ ಪ್ರಯತ್ನಪಟ್ಟವರು ಉತ್ತರಾದಿಮಠದವರು. (ಶ್ರೀ ಗುರುಗೋವಿಂದ ವಿಠಲದಾಸರು ಮತ್ತು ಶ್ರೀ ಜಯಸಿಂಹರವರು ಬರೆದ ಪುಸ್ತಕಗಳಲ್ಲಿ ಇದರ ಕುರಿತ ಸಾಕ್ಷಾತ್ ದಾಖಲೆಗಳಿವೆ ನೋಡಿ)  
  
  ವಿದ್ಯಾನಿಧಿಗಳಿಂದ ಆರಂಭವಾಗಿರುವ ಈ ವೈಷ್ಣವದ್ರೋಹ ಸತ್ಯಾತ್ಮರ ಕಾಲಕ್ಕೂ ಮುಂದುವರೆಯುತ್ತಿದೆ. 
  
  ಕಲಾಂ ರಂತಹ ಮುಸಲ್ಮಾನರನ್ನು ಹೃದಯದಲ್ಲಿಟ್ಟು ಗೌರವಿಸುವ ನಾವೇ ಕಸಬ್ ನನ್ನ ಗಲ್ಲಿಗೇರಿಸಿದ್ದಕ್ಕೆ ಸಂತೋಷ ಪಡುತ್ತೇವೆ. ನಾವು ಹಿಂದೂಗಳು ಸಾಮರಸ್ಯಪ್ರಿಯರು, ಶಾಂತಿಪ್ರಿಯರು ನಿಜ. ಆದರೆ, ಆ ಸಾಮರಸ್ಯ ಶಾಂತಿಯಿಂದ ಗುಲಾಮಗಿರಿ ಬರುವದಾದರೆ, ನಮ್ಮ ಪ್ರಾಚೀನರ ಗೌರವಕ್ಕೆ, ಭವ್ಯ ಇತಿಹಾಸಕ್ಕೆ ಧಕ್ಕೆ ಆಗುವದಾದರೆ ಆ ರೀತಿಯ ಸಾಮರಸ್ಯ ಸಾಮರಸ್ಯವೇ ಅಲ್ಲ. ಹೇಡಿತನವಾಗುತ್ತದೆ. 
  
  ಎರಡು ಗುಂಪುಗಳಲ್ಲಿರುವ ಜನರಲ್ಲಿ ಒಂದೇ ರೀತಿಯ ಮನಸ್ಸು ಇದ್ದಾಗ ಸಾಮರಸ್ಯ. ಕಪಟ ವಂಚನೆಗಳಿಂದ ಕೂಡಿದವರೊಂದಿಗೆ ಸಾಮರಸ್ಯ ಎಂದಿಗೂ ಸಾಧ್ಯವಿಲ್ಲ. 
  
  ಅವರ ಬಣ್ಣ ಬಯಲಾಗಲೇಬೇಕು, ಆ ಬಯಲಾಟವನ್ನು ಎಲ್ಲರೂ ನೋಡಲೇಬೇಕು. 
  
  ಅಂದ ಹಾಗೆ, ಶುದ್ಧ ಮಾಧ್ವರ ಮಧ್ಯದಲ್ಲಿ ವಿರಸಗಳು ಬರುತ್ತವೆ, ಹೋಗುತ್ತವೆ. ಅದಕ್ಕೆ ಸಾವಿರಾರು ಉದಾಹರಣೆಗಳಿವೆ. ಶ್ರೀ ಸೋಸಲೆ ವ್ಯಾಸರಾಜ ಮಠ, ಶ್ರೀಕುಂದಾಪುರ ವ್ಯಾಸರಾಜ ಮಠಗಳಲ್ಲಿ ಕೆಲವು ದಶಕಗಳ ಕಾಲ ಬಿರುಕು ಮೂಡಿತ್ತು, ಆ ನಂತರ ಅದು ಪರಿಹಾರವಾಗಿ ಒಬ್ಬರನ್ನೊಬ್ಬರು ಆಪ್ಯಾಯತೆಯಿಂದಲೇ ಕಾಣುತ್ತಿದ್ದಾರೆ. ಶ್ರೀ ಸೋದಾಮಠ, ಶ್ರೀ ಸುಬ್ರಹ್ಮಣ್ಯಮಠಗಳಲ್ಲಿ ಯಾವುದೋ ಕಾರಣಕ್ಕೆ ವಿರಸವುಂಟಾಗಿತ್ತು. ಈಗ ಹಾಲು ಜೇನಿನಂತೆ ಒಂದಾಗಿದ್ದಾರೆ.