Prashnottara - VNP250

ಪರಿಮಳ ವಾಕ್ಯದ ಅರ್ಥ


					 	

ಈ ಉಪನ್ಯಾಸದಲ್ಲಿ ಯಾವ ಸಮಯಕ್ಕೆ ಯಾವ ವಿಷಯದ ನಿರೂಪಣೆ ಇದೆ ಎಂದು ಸುಲಭವಾಗಿ ತಿಳಿಯಲು, ಮತ್ತೆಮತ್ತೆ ಕೇಳಿ ವಿಷಯವನ್ನು ದೃಢಪಡಿಸಿಕೊಳ್ಳಲು ವಿಷಯಾನುಕ್ರಮಣಿಕೆ ನೀಡಿದ್ದೇನೆ. 03:43 “ರಾಯರು ಹೇಳಿದ್ದನ್ನೇ ಸತ್ಯಾತ್ಮರು ಹೇಳಿದ್ದಾರೆ” — ಉತ್ತರಾದಿಪಂಡಿತರ ವಾದ 07:40 ಪರಿಮಳ ವಾಕ್ಯದ ಸರಳ ಸಹಜ ಅರ್ಥ 15:38 ಪರಿಮಳದ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ ಶೇಷವಾಕ್ಯಾರ್ಥಚಂದ್ರಿಕಾ 23:03 ಶಂಕೆಯನ್ನೇ ಅನುಪಪನ್ನ ಎನ್ನುವದು ಸಾಧುತ್ವಸಮರ್ಥನೆಯಲ್ಲ 24:09 ಶಂಕೆಯೇ ತಪ್ಪು ಎನ್ನುವದಕ್ಕೆ ಶ್ರೀಮನ್ ನ್ಯಾಯಸುಧಾದಿಂದಲೇ ಒಂದು ದೃಷ್ಟಾಂತ 28:00 ಶಂಕೆಯೇ ತಪ್ಪು ಎನ್ನುವದಕ್ಕೆ ಸತ್ಯಾತ್ಮರ ಮಾತಿನಿಂದಲೇ ಒಂದು ದೃಷ್ಟಾಂತ 31:10 ಶಂಕೆಯನ್ನು ಒಪ್ಪಿ ತತ್ವಸಮರ್ಥನೆಗೆ ದೃಷ್ಟಾಂತ 34:37 ದುರಾಗ್ರಹ ತತ್ವವನ್ನು ಮರೆಮಾಚಿಸುತ್ತದೆ


Play Time: 46:06, Size: 3.84 MB


Download Article Download Upanyasa Share to facebook View Comments
20991 Views

Comments

(You can only view comments here. If you want to write a comment please download the app.)
 • Raghavendra,Ballari

  9:39 AM , 26/05/2022

  ಯಪ್ಪಾ ದಾಸ ನೀನು ಮೊದಲು ಸಂಸ್ಕೃತ ಕಲಿ ಇಂಗ್ಲಿಷನ್ನು ಆಮೇಲೆ ಹಾಳು ಮಾಡುವಂತೆ. I take bath ಅನ್ನೋದು ಸರಿಯಾದ ಪ್ರಯೋಗ ಅಲ್ಲೊ ದಾಸ
 • Madhusudan Fouzdar,Bebengalooeu

  3:31 PM , 24/05/2022

  🙏🏻
 • N.H. Kulkarni,Bangalore

  1:32 PM , 25/04/2022

  *ಹುಚ್ಚು -ಹೆಚ್ಚಾಗಲಿ*
  
  ಶ್ರೀ ನಾಗೇಂದ್ರಾಚಾರ್ಯರಿಗೆ ಅನೇಕ ಹುಚ್ಚುಗಳಿವೆ. 
  
  * ತಮ್ಮ ಮನೆಯಲ್ಲಿಯೇ ವಿಸ್ತಾರವಾದ ಗೋಶಾಲೆಯನ್ನು ಮಾಡಿಕೊಂಡು, ಅನೇಕ ಗೋವುಗಳ ಸೇವೆಯನ್ನು ಮಾಡುವ ಸಾತ್ವಿಕ ಹುಚ್ಚು.
  
  * ನಮ್ಮ ಪರಂಪರೆಯಲ್ಲಿ ಬಂದ ಮಹಾತ್ಮರ ಚರಿತ್ರೆ ಹಾಗೂ ಗ್ರಂಥಗಳ ಬಗೆಗೆ ಅಸಾಧುತ್ವದ ಆರೋಪ ಬಂದಾಗ, ಅವುಗಳನ್ನೆಲ್ಲ ವಿಮರ್ಶಿಸಿ ಸಾಧುತ್ವ ಸಮರ್ಥನೆ ಮಾಡಬೇಕೆನ್ನುವ ಹಿರಿದಾದ ಹುಚ್ಚು.
  
  * ಸಜ್ಜನರಿಗೆಲ್ಲ ಅವರಿದ್ದಲಿಗೆ ವಿಶ್ವನಂದಿನಿಯ ಮೂಲಕ ಶ್ರೀಮದ್ಭಾಗವತ, ಶ್ರೀ ರಾಮಾಯಣ ಇತ್ಯಾದಿ ಗ್ರಂಥಗಳನ್ನು ಮುಟ್ಟಿಸಬೇಕೆನ್ನುವ ತಾರಕ ಹುಚ್ಚು.
  
  * ಅನೇಕ ಸಜ್ಜನರ ಪ್ರಶ್ನೆಗಳಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಉತ್ತರಗಳನ್ನು ಕೊಟ್ಟು ಅವರಿಗೆ ನೆಮ್ಮದಿ ನೀಡಬೇಕೆನ್ನುವ ಒಳ್ಳೆಯ ಹುಚ್ಚು. 
  
  ಅವರಲ್ಲಿಯ ಇಂತಹ ಹುಚ್ಚುಗಳು ಹೆಚ್ಚಾಗಲಿ. 
  
  ಇಂತಹ ಹುಚ್ಚರ ಸಂಖ್ಯೆ ಹೆಚ್ಚಾದಷ್ಟು ಸಜ್ಜನ ಸಮುದಾಯದ ಸ್ವಾಸ್ಥ್ಯ ಸ್ಥಿರವಾಗುತ್ತದೆ. 
 • Pavan,Bangalore

  8:18 AM , 25/04/2022

  *ಒಂದು ಬಾರಿಯೂ ವಿವೇಕ ಬಾರದೇ...*
  
  *ವಿಷ್ಣುದಾಸ ನಾಗೇಂದ್ರಾಚಾರ್ಯರೆಂಬ ಅದ್ಭುತ!*
  
  *ಉತ್ತರಾದಿಮಠದವರ ಸೊಕ್ಕನ್ನು ಮುರಿಯಲಿಕ್ಕಾಗಿಯೆ ಬಂದ ಅವತಾರ ಪುರುಷ*
  
  *ಕೆಟ್ಟ ಕಲಿಯುಗದಿ ಕಂಗೆಟ್ಟ ಧರ್ಮವನ್ನು ಗಟ್ಟಿ ಮಾಡಲು ಬಂದ ಧರ್ಮಸಂಸ್ಥಾಪಕ*
  
  ಹೀಗೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾ ಎಲ್ಲರನ್ನೂ ಆಡಿಕೊಳ್ಳುತ್ತಾ ಹೆಮ್ಮಿಗೆಯಲ್ಲಿ ನೆಮ್ಮದಿಯಿಂದ ಮೈಮರೆಯುವ ಪಂಡಿತರೆ ಈ ವಿಷ್ಣುದಾಸ ನಾಗೇಂದ್ರಾಚಾರ್ಯ. ಇನ್ನು ಏನಾದರೂ ಹೇಳಬೇಕು ಎಂದೆನಿಸಿದರೆ ಹೇಳಬಹುದು. 
  
  ಏನೋ ಭಾಗವತ ಮುಂತಾದ ಚರಿತ್ರೆಗಳನ್ನು ಹೇಳ್ತಾರೆ ಹಬ್ಬ-ಹರಿದಿನಗಳ ಬಗ್ಗೆ ತಿಳಿಸ್ತಾರೆ ಅಂತ ಅನ್ಕೋಡ್ರೆ ಬೇಡವಾಗಿದ್ದೆಲ್ಲಾ ಮಾತಾಡ್ತಾ ಸಮಾಜದಲ್ಲಿ ಹಿರೋ ಆಗುವ ಪ್ರಯತ್ನದಲ್ಲಿ ಇದ್ದಾರೆ. 
  
  *ಈ ಹುಚ್ಚು ಹೆಚ್ಚಾದಾಗ...*
  
  ಇವರಿಗೆ ಒಂದಲ್ಲಾ ಎರಡಲ್ಲಾ. ಅನೇಕ ಸಮಸ್ಯೆಗಳು ಪಾಪ!
  
  ಉಡುಪಿ ಚಾತುರ್ಮಾಸ್ಯದಲ್ಲಿ ಸತ್ಯಾತ್ಮತೀರ್ಥರು ಹೇಳಿದ ವಿಷಯವು ವ್ಯಾಖ್ಯಾನಕಾರರಿಗಿ ಸಮ್ಮತವಾಗಿದ್ದೆ ಆಗಿದೆ. ಆದರೂ ಭಂಡತನದಿಂದ ಅದು ಅಪದ್ಧ ಎಂದು ಹೇಳಿಬಿಟ್ಟರು. ಅಷ್ಟಕ್ಕೆ ಸುಮ್ಮನಿದ್ದರೆ ಆಗೋದು. ಇದರಲ್ಲಿ ಅಂಥಾ ಮಹತ್ವದ ವಿಷಯವೇನೂ ಇಲ್ಲವಾದ್ದರಿಂದ ಇದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮತ್ತೆ ಮತ್ತೆ ಮತ್ತೆ ಮತ್ತೆ ಇದಕ್ಕೆ ಯಾವ ಉತ್ತರಾದಿಮಠದವರು ಉತ್ತರ ಕೊಟ್ಟಿಲ್ಲ ಎಂದು ಹೇಳಿ ಬೇಡವಾಗಿದ್ದ ಪ್ರಚೋದನೆ ನೀಡಿದರು.
  
  ಇವರ ಈ ಅಪಪ್ರಚಾರಕ್ಕೆ ಉತ್ತರರೂಪವಾಗಿ ಪುಸ್ತಕವನ್ನು ರಘುವೀರಾಚಾರ್ಯರು ಮಾಡಿದರು. ಈ ವಿಷಯ ತಿಳಿಯುತ್ತಿದ್ದಂತೆ ತಳ ಸುಟ್ಟವರಂತೆ ಒದರಾಡಲು ಶುರುಮಾಡಿದ್ದಾರೆ. ನನಗೆ ಈಗಲೆ ಪುಸ್ತಕ ಬೇಕೂ..... ಅಂತ ಮಕ್ಕಳ ಹಾಗೆ ಹಟ ಮಾಡುತ್ತಿದ್ದಾರೆ.
  
  ಪುಸ್ತಕ ಬರೆದವರೆ ಹೇಳುತ್ತಿದ್ದಾರೆ ಕೆಲವೇ ದಿನಗಳಲ್ಲಿ ಪುಸ್ತಕವನ್ನು ತಲುಪಿಸುತ್ತೇವೆ ಎಂದು. ಅದನ್ನು ಕೇಳಿಸಿಕೊಳ್ಳಲು ಅರಗಿಸಿಕೊಳ್ಳಲು ಇವರಿಗೆ ಆಗುತ್ತಿಲ್ಲ. ಪಾಪ ಇರಲಿ. (ಆದರೂ ಇವರ ವಾಕ್ಯಾರ್ಥವೇದಿಕೆ ಸಿದ್ಧಮಾಡುವೆ ಎಂಬ ಮಾತು ಹೊಸ ಹುರುಪು ಕೊಟ್ಟಿದೆ. ಕಾಯೋಣ) 
  
  ಇಷ್ಟು ಸಾಲದೆಂಬಂತೆ ಇವರ ಆಡಂಬರದ ಮಾತಿನಿಂದ ಬೆಸತ್ತ ವಿದ್ವಾಂಸರು ಒಂದೇ ದಿನದಲ್ಲಿ ಅನೇಕ ಪ್ರತಿಕ್ರಿಯೆಗಳನ್ನು ನೀಡಿದರು.
  
  #ಶ್ರೀಚರಣದಾಸ ಎನ್ನುವವರು ನಾಗೇಂದ್ರರ ಅಭಿಪ್ರಾಯವನ್ನು ಸಂಪೂರ್ಣ ಖಂಡಿಸಿಬಿಟ್ಟರು.
  
  #ಹೃಷೀಕೇಶಾಚಾರ್ಯರು ನಾಗೇಂದ್ರರ ಅಭಿಪ್ರಾಯವನ್ನು ಖಂಡಿಸಿ ಸಮಾಜದಲ್ಲಿ ಮಾತನಾಡುವ ಬದುಕುವ ಪಾಠವನ್ನು ಸೌಜನ್ಯದಿಂದ ತಿಳಿಸಿದರು.
  
  #ರಂಗಾಚಾರ್ಯರು ವಿಸ್ತೃತವಾದ ಖಂಡನೆ ಬರೆದು ಕಳಿಸಿದರು.
  
  ಬಹುಶಃ ಇವರೆಲ್ಲರೂ ಉತ್ತರಾದಿಮಠದವರೆ.
  
  ಹೀಗೆ ಒಂದೇ ದಿನದಲ್ಲಿ ಇಷ್ಟು ಜನ ಪಂಡಿತರು ಏಕಪ್ರಕಾರವಾಗಿ ಉತ್ತರಗಳನ್ನು ನೀಡಿದಾಗಲೂ ಹೆಣ್ಣುಮಕ್ಕಳ ಮುಂದೆ ಉತ್ತರಕುಮಾರನಂತೆ ನನಗೆ ಯಾವ ಉತ್ತರಾದಿಮಠದವರು ಉತ್ತರ ಕೊಟ್ಟಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಲೇ ಇದ್ದಾರೆ. ಪಾಪ!
  
  ರಘುವೀರಾಚಾರ್ಯರ ಪುಸ್ತಕವಿರಲಿ. ಉಳಿದ ಪಂಡಿತರು ನೀಡಿದ ಪ್ರತಿಕ್ರಿಯೆಗೆ ಉತ್ತರಿಸುವುದು

  Vishnudasa Nagendracharya

  ನಿಮ್ಮ ಸಕಲ ವ್ಯಂಗ್ಯದ ನುಡಿಗಳನ್ನೂ ಮತ್ತು ನಿಂದೆಯನ್ನೂ ಶ್ರೀ ಭೂತರಾಜರಿಗೆ, ಅವರ ಅಂತರ್ಯಾಮಿಯಾದ ಶ್ರೀವಾದಿರಾಜವರದ ಶ್ರೀಮಧ್ವವಲ್ಲಭ ಶ್ರೀಲಕ್ಷ್ಮೀನರಸಿಂಹದೇವರಿಗೆ ಒಪ್ಪಿಸಿದ್ದೇನೆ. 
 • Karanam sameernath,Rayadurgam, Ananthapur dist.

  9:12 PM , 25/04/2022

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು ಪರಿಮಳ ವಾಕ್ಯದ ಅರ್ಥ ನಿರೂಪಣೆ ಮಾಡಿ ನಮ್ಮ ಶಂಕೆಯನ್ನು ತೀರಿಸ್ಸೀಧ್ಧೀರಿ, ಅವರು ಶ್ರೀ ರಾಘವೇಂದ್ರ ಸ್ವಾಮಿಗಳು ಹೇಳಿದ್ದ ವಚನಗಳೇ ಶ್ರೀ ಸತ್ಯಾತ್ಮರು ನುಡಿದಿದ್ದಾರೆ ಎಂದು ಆ ಅಪವಾದವನ್ನು ರಾಘವೇಂದ್ರ ಸ್ವಾಮಿಗಳಿಗೆ ಅನುವಾದಿಸುವದು ಎಷ್ಟು ನ್ಯಾಯ ಸಮ್ಮತ? ಈ ಕುರಿತು ನೀವು ಶ್ರೀ ಸುಬುಧೇಂದ್ರತೀರ್ಥರ ಪ್ರಕಟಣೆ ರೂಪದಲ್ಲಿ ಸಹಾಯ ಕೇಳಲು ಉತ್ತಮ ಪ್ರತಿಕ್ರಿಯೆ ಅಂತ ಅನಿಸಿ ಕೆ; ಒಟ್ಟಾರೆ ನೀ ನು ನೀಡುತ್ತಿರುವ ಜ್ಞಾನ ಯಜ್ಙ ಜಯವಾಗಲಿ. ಏನಾದರೂ ತಪ್ಪು ನುಡಿದಿದ್ದಾರೆ ಕ್ಷಮಿಸಿ.
 • Narayanaswamy,Mysore

  10:58 AM, 25/04/2022

  ದುರಾಗ್ರಹಗಳಿಂದ ಶಾಸ್ತ್ರ ಗಳಿಗೆ ಅಪವ್ಯಾಖ್ಯಾ ಮಾಡಲು ಎಲ್ಲ ಕಾಲಗಳಲ್ಲಿಯು ದುಷ್ಟ ಜನರು ಹುಟ್ಟಿ ಬಂದು ಶಾಸ್ತ್ರ ಗಳನ್ನ ಕಲುಷಿತಗೊಳಿಸುತ್ತಾರೆ ಆದರೆ..
  ಕರುಣಾಳುವಾದ ಭಗವಂತ ಯಾವಾಗಲು ಸಜ್ಜನರ ದಾರಿ ತಪ್ಪದ ಹಾಗೆ ತನ್ನವರ ಮೂಲಕ ಸಜ್ಜನರ ಸಂಶಯ ಪರಿಹಾರ ಮಾಡಿ ಸಾಧನೆ ಮಾಡಿಸುತ್ತಾನೆ.... 🙇‍♂️
  
  ನಂದಿನಿ ಎಂಬ ಗೋ ಮಾತೆ ಪರಿಶುದ್ಧ ಹಾಲಿನಿಂದ ಹೇಗೆ ಜಗತ್ತಿನ ರಕ್ಷಣೆ ಮಾಡುತ್ತದೆಯೋ ಹಾಗೆ
  ವಿಷ್ಣುದಾಸ ನಾಗೇಂದ್ರಚಾರ್ಯ ಎಂಬ ಗೋ ಪರಿಶುದ್ಧ ಶಾಸ್ತ್ರ ತತ್ವಗಳನ್ನು ನಿಸ್ಸಂಶಯವಾಗಿ ತಿಳಿಸಿ ಸಜ್ಜರನ್ನ ದಾರಿ ತಪ್ಪಾದ ಹಾಗೆ ಮಾಡುತ್ತೆ
  ಇನ್ನು ಅನಂತ ಜನ್ಮಗಳಕ್ಕೂ ಇಂತ ಶ್ರೇಷ್ಠ ವಾದ ಗುರುಗಳನ್ನು ಪಡೆಯುವ ಭಾಗ್ಯವನ್ನು ಗುರುಗಳು, ಭಗವಂತ ಕರುಣಿಸಲಿ 🙏🙏🙏🙏🙏🙇‍♂️🙇‍♂️🙇‍♂️🙇‍♂️🙇‍♂️
 • Vijay Mohan Kulkarni,Raichur

  2:12 AM , 25/04/2022

  Superb clarity 👌
  ಶಂಕೆ ನಿವಾರಣೆ ಆಗೋದು ಬೇರೆ
  ಸಾಧುತ್ವ ಸಮರ್ಥನೆ ಬೇರೆ
  ** ನೀವು ಹೇಳಿದ ಹಾಗೆ ಸಾಧುತ್ವ ಸಮರ್ಥನೆ ಅಂದರೆ ಶಂಕೆ ನಿವಾರಣೆ ಆಗಿದೆ ಅಂತನೇ **
  ಆದರೆ ಶಂಕೆ ನಿವಾರಣೆ ಆದ ಮಾತ್ರಕ್ಕೆ ಸಾಧುತ್ವ ಇದೆ ಎಂದು ಹೇಳಲು ಸಾಧ್ಯವೇ ಇಲ್ಲ
  👌👌👌 very clear 
  ಇನ್ನೊಂದು ಉದಾಹರಣೆ ಕೂಡ ಕೊಡಬಹುದು, ಒಂದು ಜಾಗದಲ್ಲಿ ಮನೆ ಕಟ್ಟಿದಾರೆ ಅಂದ್ರೆ ಆ ಜಾಗ ಖಾಲಿ ಇಲ್ಲ ಅಂತನೇ ತಿಳಿತದೆ , ಆದರೆ ಖಾಲಿ ಜಾಗವನ್ನು ಕಟ್ಟಿದ ಮನೆಯಂದು ಸಮರ್ಥಿಸಲು ಸಾಧ್ಯವಿಲ್ಲ
  ಇಲ್ಲಿ ಖಾಲಿ ಜಾಗ ಶಂಕೆ ನಿವಾರಣೆ ಆದರೆ
  ಸಾಧುತ್ವ ಕಟ್ಟಿದ ಮನೆ 🙏
 • Vasudeva,Bangalore

  2:47 PM , 24/04/2022

  ನಿಮಗೆ ತತ್ವ ನಿರ್ಣಯದ ಉದ್ದೇಶವೇ ಇಲ್ಲ. ಹಾಗೆ ಇದ್ದಿದ್ದರೆ ನೀವು ಹೀಗೆ ಹಾಹಾಕಾರ ಮಾಡ್ತಾ ಇರಲಿಲ್ಲ. 
  ಇನ್ನು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಬಗ್ಗೆ ಹೇಳುವುದಾದರೆ ಅವರು ಪ್ರತಿಪಕ್ಷಿಯು ಎಷ್ಟೇ ಚಿಕ್ಕವನಾಗಿದ್ದರೂ ತತ್ವ ನಿರ್ಣಯದ ಉದ್ದೇಶ ಇದ್ದಾಗ ಮಾತ್ರ ಆಕ್ಷೇಪಕ್ಕೆ ಉತ್ತರ ಕೊಟ್ಟರು.
  ಹೊರತು ಕೇವಲ ದ್ವೇಷ ಒಂದೇ ಉದ್ದೇಶ ಇರುವ ನಿಮ್ಮಂಥವರ ಜೊತೆಗೆ ವಾದ ಮಾಡಿಲ್ಲ . ಆಚಾರ್ಯರು ಯಾಕೆ ! ಸ್ವಯಂ ಪರಮಾತ್ಮನೇ ವಾದ ಮಾಡಲು ಇಚ್ಛಿಸುವುದಿಲ್ಲ . ಹಾಗಾಗಿಯೇ ಹಿರಣ್ಯಕಶಿಪು ಮುಂತಾದವರು ತಾವೇ ಸರ್ವೋತ್ತಮರು ಅಂದುಕೊಂಡಾಗಲು ಕೂಡ ದೇವರು ಅವರ ಜೊತೆ ವಾದ ಮಾಡಲಿಲ್ಲ. ಇನ್ನೂ ನಿಮಗೆ ಕೇವಲ ಪ್ರಸಿದ್ಧಿಯ ಉದ್ದೇಶ ಒಂದೇ ಇದೆ. " येन केन प्रकारेण प्रसिद्धपुरुषो भव " ಎನ್ನುವ ಮಾತಿನ ಆದರ್ಶ ಒಂದೇ ಹಿಡುದುಕೊಂಡು ಹೀಗಲ್ಲ ಮಾಡ್ತಾ ಇದ್ದೀರಾ ಅಷ್ಟೇ . ಈಗ ನಿಮ್ಮ ಅರಿವು ನಮಗೆ ಆಯಿತು . ತತ್ವ ತಪ್ಪು ನಿರ್ಣಯದ ಮುಖವಾಡವನ್ನು ಹಾಕಿಕೊಂಡು ಕೇವಲ ಕೇವಲ ಕೇವಲ ಕೇವಲ ಕೇವಲ ಪ್ರಸಿದ್ಧಿಯ ಮುಖವನ್ನು ಪಡೆದವರು ನೀವು . ಸಂತೋಷ .

  Vishnudasa Nagendracharya

  1. 
  
  ಉತ್ತರಾದಿಮಠದ ಪಾಖಂಡಿಗಳಾದ ನಿಮಗೆ ಶ್ರೀಮಧ್ವವಿಜಯದ ಕಥೆಗಳ ಪರಿಚಯವೇ ಇಲ್ಲ. ಆಚಾರ್ಯರ ತೇಜೋಗ್ನಿಯಲ್ಲಿ ಭಸ್ಮವಾಗಿ ಹೋದವರು ತತ್ವನಿರ್ಣಯಕ್ಕಾಗಿ ಬಂದವರಲ್ಲ. ತತ್ವನಿರ್ಣಯಕ್ಕಾಗಿ ಬಂದವರು ಆಚಾರ್ಯರ ಶಿಷ್ಯರಾಗಿ ಸಾಧನೆ ಮಾಡಿಕೊಂಡ ಮಹಾನುಭಾವರು. ಮೊದಲಿಗೆ ಮಧ್ವವಿಜಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. 
  
  ಇನ್ನು ಹಿರಣ್ಯಕಶಿಪು ವಾದಕ್ಕೆ ಕರೆಯಲಿಲ್ಲ, ಹೀಗಾಗಿ ವಾದ ನಡೆಯಲಿಲ್ಲ. ಅವನು ಪ್ರಹ್ಲಾದರಾಜರನ್ನು ಕೊಲ್ಲಲೇ ಬಂದ. ನರಸಿಂಹದೇವರು ಅವನನ್ನೇ ಕೊಂದು ಹಾಕಿದರು. 
  
  ಭೀಮಸೇನದೇವರು ಜರಾಸಂಧ ಮುಂತಾದವರ ಜೊತೆಯಲ್ಲಿ ವಾದ ಮಾಡಿದರು. ಅಂದಹಾಗೆ ನಿಮ್ಮ ಪ್ರಕಾರ ಜರಾಸಂಧ ಮುಂತಾದವರು ತತ್ವನಿರ್ಣಯಕ್ಕೆ ಹೊರಟವರೇನು?
  
  ವಿಷಯ ಗೊತ್ತಿದ್ದರೆ ಮಾತನಾಡಬೇಕು. ಇಲ್ಲದಿದ್ದರೆ ಸುಮ್ಮನಾಗಬೇಕು. 
  
  2. 
  
  ಶ್ರೀಮಚ್ಚಂದ್ರಿಕಾಚಾರ್ಯರ ಕುರಿತು ಅಪಹಾಸದ ನಗುನಕ್ಕು ಸುಳ್ಳುಕಥೆ ಹೇಳುವಾಗ ಸತ್ಯಾತ್ಮರಿಗೆ ತತ್ವನಿರ್ಣಯದ ಉದ್ದೇಶವಿತ್ತೆ?
  
  ಶ್ರೀ ರಾಮಚಂದ್ರತೀರ್ಥ ಶ್ರೀಪಾದಂಗಳವರು ವಾದಕ್ಕೆ ಹೆದರಿ ಓಡಿ ಓಡಿ ಹೋದರು ಎಂದು ಸುಳ್ಳು ಕಥೆ ಹೇಳುವಾಗ ಸತ್ಯಾತ್ಮರಿಗೆ ತತ್ವನಿರ್ಣಯದ ಉದ್ದೇಶವಿತ್ತೆ ?
  
  ಶ್ರೀ ಸುಮತೀಂದ್ರತೀರ್ಥ ಶ್ರೀಪಾದಂಗಳವರ ಬಗ್ಗೆ ನಿರಾಧಾರ ಸುಳ್ಳು ಕಥೆ ಹೇಳುವಾಗ ಸತ್ಯಾಸ್ಮರಿಗೆ ತತ್ವನಿರ್ಣಯದ ಉದ್ದೇಶವಿತ್ತೆ?
  
  ಶ್ರೀ ಶ್ರೀಪಾದರಾಜರಿಂದಾರಂಭಿಸಿ ಸಮಗ್ರ ಮಹಾನುಭಾವರ ಬಗ್ಗೆ ಸುಳ್ಳುಸುಳ್ಳು ಕಥೆಗಳನ್ನು ಹೇಳುವ, ಬರೆಸುವ ಸತ್ಯಾತ್ಮರಿಗೆ ತತ್ವನಿರ್ಣಯದ ಉದ್ದೇಶವಿದೆಯೇ?
  
  ಬನ್ನಂಜೆಯನ್ನು ಪ್ರವಚನಕ್ಕೆ ಎಂದು ಆಹ್ವಾನಿಸಿ ದಿಗ್ವಿಜಯ ಎಂದು ಶಿಷ್ಯರಿಂದ ಹೇಳಿಸಿಕೊಳ್ಳುವಾಗ ಸತ್ಯಾತ್ಮರಿಗೆ ತತ್ವನಿರ್ಣಯದ ಉದ್ದೇಶವಿತ್ತೆ?
  
  ಸತ್ಯಾತ್ಮರ ಮುಖವಾಡ ಕಳಚಿ ಬೀಳುತ್ತಿರುವದು ಸಹನೆಯಾಗುತ್ತಿಲ್ಲ. ಹೀಗಾಗಿ "ಆಕ್ರೋಶಂತೋ ನಿರಾಶಾಃ" ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. 
  
  3. 
  
  ಪ್ರಚಾರದ ಉದ್ದೇಶ ನನಗಿದ್ದಿದ್ದರೆ, ಸತ್ಯಾತ್ಮರನ್ನು ಹೊಗಳಿದ್ದರೆ ಇವತ್ತು ಉತ್ತರಾದಿಮಠದ ಮನೆಮನೆಗಳಲ್ಲಿ ನನ್ನ ವಿಶ್ವನಂದಿನಿ ರಾರಾಜಿಸುತ್ತಿತ್ತು. ಹಿಂದೆ ಸತ್ಯಾತ್ಮರನ್ನು ಬೆಂಬಲಿಸಿ ಒಂದು ಲೇಖನ ಬರೆದಾಗ ನನ್ನ ಮೇಲೆ ಎರಡು ಶ್ಲೋಕಗಳನ್ನೇ ಉತ್ತರಾದಿಮಠದ ವಿದ್ವಾಂಸರು ಬರೆದಿದ್ದರು. 
  
  ಪ್ರಚಾರದ ಉದ್ದೇಶ ನನಗಿದ್ದಿದ್ದರೆ, Facebook, Youtube ಮುಂತಾದ ಎಲ್ಲ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದೆ. ಒಂದು ಬಾರಿ Uninstall ಮಾಡಿದರೆ ಮುಗಿದು ಹೋಗುವ ನನ್ನ App ಅನ್ನು ಬಳಸಿಕೊಳ್ಳುತ್ತಿರಲಿಲ್ಲ. 
  
  ನನ್ನ ಉದ್ದೇಶ ನನಗೆ ಸ್ಪಷ್ಟವಿದೆ. ನನ್ನ ದಾರಿ ನನಗೆ ಸ್ಪಷ್ಟವಿದೆ. 
  
  ವಿದ್ಯಾನಿಧಿಗಳ ಕಾಲದಿಂದ ಆರಂಭಿಸಿ ಸತ್ಯಾತ್ಮರ ವರೆಗಿನ ಈ ಉತ್ತರಾದಿಮಠದ ಜನರಿಂದ ಆಗಿರುವ ಸಕಲ ವೈಷ್ಣವದ್ರೋಹಗಳನ್ನು ಬಯಲಿಗೆಳೆದು ಉತ್ತರ ನೀಡುವವನಿದ್ದೇನೆ. 
  
  ನೀವಿನ್ನೂ ಬಹಳ ಕುದಿಯಬೇಕಾಗಿದೆ. ಸಿದ್ದರಾಗಿರಿ. 
  
  
 • Vibhudesh kulkarni,Bijapur

  5:35 PM , 24/04/2022

  ಆಚಾರ್ಯ ನಿಮ್ಮಈ ಲೇಖನಕ್ಕೆಚರಣಾದಸ್ ಅನ್ನುವವರು ಮತ್ತೆ ಹೃಷಿಕೇಶ ಮಠದ ಅವರು ನೀವು ಹೇಳಿದ್ದು ಸರಿಯಲ್ಲ ಅಂದು ಸಮರ್ಥನೆ ಮಾಡಿದ್ದಾರೆ ಅದನ್ನು ಒಂದುಸಲ ನೋಡಿ

  Vishnudasa Nagendracharya

  ಹೃಷೀಕೇಶ ಮಠದ ಅವರ ಉತ್ತರ ಎಷ್ಟು ಹಾಸ್ಯಾಸ್ಪದವಾಗಿದೆ ಎನ್ನುವದನ್ನು ಸದ್ಯದಲ್ಲೇ ಪ್ರಸ್ತುತಪಡಿಸುತ್ತಿದ್ದೇನೆ. ಅದರದೇ Recording ನಡೆದಿದೆ. 
  
  ಅತ್ಯಂತ ಸಾಮಾನ್ಯರಿಗೂ ಅರ್ಥವಾಗುತ್ತಿರುವ ವಿಷಯ, ಆಗ್ರಹವಿದ್ದಾಗ ಅರ್ಥವಾಗುವದಿಲ್ಲ ಎನ್ನುವದನ್ನು ಮನಗಾಣುತ್ತೀರಿ. 
 • Srikanth v,Bangalore

  2:34 PM , 24/04/2022

  Sri Gurubhyo Namaha.
  Uttaradi mathadida istella gurudroha vaguttidaga , are parampareya bhagavdbhatarada Sri Raguttama teertaru mattu Sri Yadupatyacharyaru Aa Janarannu Nigraha madalillave?

  Vishnudasa Nagendracharya

  ಅವರು ಆ ರೀತಿ ನಿಗ್ರಹ ಮಾಡಿದ್ದರ ದಾಖಲೆ ಇತಿಹಾಸದಲ್ಲಿ ಇಲ್ಲ. 
 • Vasudeva,Bangalore

  12:01 PM, 24/04/2022

  ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವುದು ಬೇಡ ಅಂತ ಸ್ವಾಮಿಗಳು ಸುಮ್ಮನೆ ಇದ್ದಾರೆ ಅಷ್ಟೇ ಇನ್ನೊಂದು ಏನೆಂದರೆ ನೀವು ಎಬ್ಬಿಸಿದ ವಿಷಯ ಸಿದ್ಧವಾದದ್ದು ಇಲ್ಲಿ ಯಾವ ಪಂಡಿತರಿಗೂ ಈ ವಿಷಯದ ಬಗ್ಗೆ ವಿವಾದವಿಲ್ಲ ಎಲ್ಲಾ ಪಂಡಿತರು ಅವರ ಅವರ ನಿರ್ಣಯವನ್ನು ಮಾಡಿಕೊಂಡು ಬಿಟ್ಟಿದ್ದಾರೆ ಆದರೂ ನೀವು ಕೇವಲ ದುರಾಗ್ರಹ ದಿಂದ ಶ್ರೀಗಳವರನ್ನು ದ್ವೇಷ ಮಾಡಬೇಕು ಎಂದು ಒಂದೇ ಉದ್ದೇಶದಿಂದಾಗಿ ಮಾತಾಡ್ತಾ ಇದ್ದೀರಾ ಇಂತಹ ನಿಮ್ಮ ಹಾಸ್ಯ ವಾದ ದೊಡ್ಡ ಸಾಧನೆಗೆ ಶ್ರೀಗಳವರು ಯಾಕೆ ವಿಘ್ನ ಕೊಡಬೇಕು ಅಂತ ಸುಮ್ಮನೆ ಇದ್ದಾರೆ ಅಷ್ಟೇ

  Vishnudasa Nagendracharya

  ಎಟುಕದ ಹಣ್ಣು ಹುಳಿ ಅಂತ ಗಾದೆ ಇದೆ ಹಾಗಾಯಿತು ಇದು. 
  
  ಶಾಸ್ತ್ರದ ವಿಷಯದಲ್ಲಿ ಯಾರೇ ಪ್ರಶ್ನೆ ಮಾಡಿದರೂ, ವಾಕ್ಯಾರ್ಥಕ್ಕೆ ಕರೆದರೂ, ಉತ್ತರ ನೀಡಬೇಕಾದ್ದು ಅವರ ಕರ್ತವ್ಯ ಎಂದು ಅವರೇ ಹೇಳಿಕೊಂಡಿದ್ದಾರೆ. 
  
   ಇನ್ನು ನಿಮ್ಮ "ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ" ಗಾದೆಯ ಕುರಿತು. ಶ್ರೀಮಧ್ವವಿಜಯದಲ್ಲಿ ಆಚಾರ್ಯರ ಕುರಿತು ಶ್ರೀಮನ್ನಾರಾಯಣಪಂಡಿತಾಚಾರ್ಯರು ತಿಳಿಸುತ್ತಾರೆ - "ಅಪ್ಯಲ್ಪೋಸೋ ನಹ್ಯುಪೇಕ್ಷಾಂಬಭೂವೇ, ತೇಜೋರಾಜೀರಾಜಿತೇನಾಗ್ನಿನೇವ" ಎಂದು. ಶ್ರೀಮದಾಚಾರ್ಯರ ಜ್ಞಾನದ ಎತ್ತರಕ್ಕೆ ಯಾವ ರೀತಿಯಲ್ಲಿಯೂ ಸರಿಸಾಟಿಯಲ್ಲದ ವಾದಿ ಎದುರಿಗೆ ಬಂದರೂ ಆಚಾರ್ಯರು ಉತ್ತರಿಸಿ ನಿರುತ್ತರನನ್ನಾಗಿ ಮಾಡುತ್ತಿದ್ದರು, ಆಚಾರ್ಯರ ತೇಜೋಗ್ನಿಯಲ್ಲಿ ಒಂದು ಪುಟ್ಟ ಪತಂಗವೂ ಭಸ್ಮವಾಗಿ ಹೋಗುತ್ತಿತ್ತು ಎಂದು. ಅಂದರೆ, ಹದಿನಾಲ್ಕು ಲೋಕದ ಅಧಿಪತಿಯಾದ, ಜ್ಞಾನಾಭಿಮಾನಿ ದೇವತೆಯಾದ ಶ್ರೀಮದಾಚಾರ್ಯರೇ ತಮ್ಮ ಮುಂದೆ ಬರುವ ಸಣ್ಣಪುಟ್ಟ ವಾದಿಗಳ ಆಕ್ಷೇಪಕ್ಕೂ ಉತ್ತರ ಕೊಟ್ಟು ಸಿದ್ಧಾಂತ ಸ್ಥಾಪನೆ ಮಾಡುತ್ತಿದ್ದರು. ನೀವು ಮಾತ್ರ ಗಾದೆ ಹೇಳುತ್ತೀರಿ, ನಮ್ಮ ಸ್ವಾಮಿಗಳು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವದಿಲ್ಲ ಎಂದು.
  
  ಸತ್ಯಾತ್ಮರ ಸಮಸ್ತ ಅಭಿಮಾನಿಗಳಾದ ನೀವೆಲ್ಲರೂ ಸೇರಿ ಬಿನ್ನವತ್ತಳೆ ಬರೆದು ನೀಡಿ. ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಎಂದು ಅವರೇ ಹೇಳುತ್ತಿದ್ದಾರೆ, ನಿಮ್ಮ ಬಳಿ ಇರುವ ಬ್ರಹ್ಮಾಸ್ತ್ರ ಪ್ರಯೋಗಿಸಿ ಅವರನ್ನು ಭಸ್ಮ ಮಾಡಿಬಿಡಿ ಎಂದು. ಆಗಲಾದರೂ ಸತ್ಯಾತ್ಮರು ಉತ್ತರ ನೀಡುತ್ತಾರೇನೋ ನೋಡೋಣ. 
  
  ಇನ್ನು, ನಿಮ್ಮ ಪಂಡಿತರುಗಳಿಗೆ ನಿರ್ಣಯವಿದೆ ವಿಷಯ. ಶ್ರೀಮಟ್ಟೀಕಾಕೃತ್ಪಾದರ ವಾಕ್ಯಕ್ಕೆ ಸತ್ಯಾತ್ಮರು ಅಪದ್ಧ ಅರ್ಥ ಹೇಳಿದರೆ, ರಕ್ಷಣೆೆ ಮಾಡಲೂ ಈಗಲೂ ನಾವಿದ್ದೇವೆ. ಇಡಿಯ ಉತ್ತರಾದಿಮಠವನ್ನು ಎದುರು ಹಾಕಿಕೊಂಡು ಉತ್ತರ ನೀಡಲು. ಆದರೆ ಸತ್ಯಾತ್ಮರ ಅರ್ಥವನ್ನು ಅಪದ್ಧ ಎಂದರೆ ಈ ಪಂಡಿತರೆಲ್ಲ ನಮಗೆ ನಿರ್ಣಯವಿದೆ ಎಂದು ಸುಮ್ಮನಾಗಿದ್ದಾರಂತೆ. 
  
  ನನಗೆ ವಿಘ್ನ ಕೊಡಬಾರದು ಎಂದು ನಿಮ್ಮ ಸತ್ಯಾತ್ಮರಿಗೆ ನಿರ್ಣಯವಿದ್ದಿದ್ದರೆ, 8 ವರ್ಷದ ಹಿಂದಿನ ವಿಷಯಕ್ಕೆ ಉತ್ತರ ಬರೆಸಿದ್ದೇನೆ ಎಂದು ಏಕೆ ಪ್ರಕಟ ಮಾಡಬೇಕಾಗಿತ್ತು? ಎಲ್ಲೆಡೆಯೂ ಸುಳ್ಳಾ ? 
  
  ನಿಮ್ಮ ಸತ್ಯಾತ್ಮರ ಬಳಿ ಉತ್ತರ ಇಲ್ಲ. ಅದಕ್ಕಾಗಿಯೇ ಉತ್ತರ ನೀಡಲಾಗುತ್ತಿಲ್ಲ. ಇದೇ ಸತ್ಯ. 
  
 • SUDHEENDRA H,Bengalore

  9:38 AM , 24/04/2022

  ಶ್ರೀ ಸತ್ಯಾತ್ಮ ತೀರ್ಥರು ಏಕೆ ನೇರವಾಗಿ ಅವರೇ ಉತ್ತರ ಕೊಡುವ ಪ್ರಯತ್ನ ಮಾಡುತ್ತಿಲ್ಲ

  Vishnudasa Nagendracharya

  ಸತ್ಯಾತ್ಮರ ಬಳಿಯಲ್ಲಿ ಉತ್ತರ ಇಲ್ಲ. ಅದಕ್ಕಾಗಿ ನೇರವಾಗಿ ನೀಡುತ್ತಿಲ್ಲ.
  
  ಉತ್ತರ ಇದ್ದಿದ್ದರೆ ಸುಮ್ಮನಿರುತ್ತಿದ್ದರೆ. ಒಂದು ದಿಗ್ವಿಜಯ ಸಭೆ ಎಂದು ಮಾಡಿ ನನಗೆ ಅಹ್ವಾನ ನೀಡಿ ಖಂಡಿಸುತ್ತಿದ್ದರು. 
  
  ಉತ್ತರ ನೀಡದಂತೆಯೂ ಆಗಬಾರದು ಎನ್ನುವ ಕಾರಣಕ್ಕೆ ಶಿಷ್ಯರಿಂದ ಬರೆಸುತ್ತಿದ್ದರೆ. ಸೋತರೆ ಶಿಷ್ಯರ ಸೋಲು. ಗೆದ್ದರೆ ಗುರುಗಳ ಗೆಲುವು. 
  
 • Shreesha Vitthala,Bangalore

  7:21 PM , 23/04/2022

  ನಮಸ್ಕಾರ ಗುರುಗಳೇ, 
  ಇಷ್ಟು ತಾಳ್ಮೆಯಿಂದ ನಮ್ಮಂಥವರಿಗೆ ಅರ್ಥ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು.
  ಒಂದು ಸಂಶಯ.
  ಮೊದಲನೆಯ ಪಕ್ಷದಲ್ಲಿ ಶಂಕೆಯನ್ನೇ ನಿರಾಕರಣೆ ಮಾಡಿದ ಮೇಲೆ, ಎರಡನೇ ಪಕ್ಷದಲ್ಲಿ ಶಂಕೆ ಒಪ್ಪಿ ಸಾಧುತ್ವ ಸಮರ್ಥನೆ ಮಾಡಿದರೆ ಮೊದಲನೇ ಪಕ್ಷ ವ್ಯರ್ಥ ಆದಂತೆ ಅಲ್ಲವೇ?
  ದಯವಿಟ್ಟು ಪ್ರಶ್ನೆ ಸರಿ ಇಲ್ಲದಿದ್ದರೆ ಕ್ಷಮಿಸಿ

  Vishnudasa Nagendracharya

  ಶ್ರೀಮಟ್ಟೀಕಾಕೃತ್ಪಾದರ ವ್ಯಾಖ್ಯಾನಗಳು ಸರ್ವಥಾ ವ್ಯರ್ಥವಲ್ಲ. 
  
  ಶ್ರೀಮದಾಚಾರ್ಯರ ವಾಕ್ಯಗಳಿಗೆ ಅನೇಕ ಅರ್ಥಗಳಿವೆ ಎಂದು ತೋರಿಸಲಿಕ್ಕಾಗಿ ಶ್ರೀಮಟ್ಟೀಕಾಕೃತ್ಪಾದರು ಅನೇಕ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. 
  
   ವಿಥ್ಯಾ ಮತ್ತು ಯಾಃ ಎಂದು ವಿಭಾಗ ಮಾಡಿ ಅರ್ಥ ಹೇಳಿದಾಗ ಮಾಯಾವಾದಿಗಳು ಹೇಳುವ ಪ್ರತಿಪಾದನೆಯ ಖಂಡನೆ ಇದೆ. 
  
  ಮಿಥ್ಯಾಯಾಃ ಎಂದು ಒಂದೇ ಪದ ಒಪ್ಪಿ ಅರ್ಥ ಹೇಳಿದಾಗ ಮಾಯಾವಾದಿಗಳ ಪ್ರತಿಜ್ಞೆಯ ಖಂಡನೆ ಇದೆ. 
  
  ಹೀಗಾಗಿ ಎರಡೂ ಸಾರ್ಥಕ. ಈ ಎರಡೂ ರೀತಿಯ ಖಂಡನೆ ಹೇಗಿವೆ ಎನ್ನುವದನ್ನು ಬನ್ನಂಜೆ ವಿಮರ್ಶದ "ನ್ಯಾಯಸುಧಾದ ಚರ್ಚೆ"ಎನ್ನುವಲ್ಲಿ ವಿವರಿಸಿದ್ದೇನೆ. ಕೇಳಿ. 
  
  ನೀವು ಹೇಳಿದ ವಿಷಯವನ್ನಿಟ್ಟುಕೊಂಡೇ ಚರ್ಚೆಯ ವಿಷಯವನ್ನು ಮತ್ತೊಮ್ಮೆ ಪ್ರಸ್ತುತ ಪಡಿಸುತ್ತೇನೆ ನೋಡಿ. 
  
  
  
 • Suraj Sudheendra,Bengaluru

  12:49 PM, 22/04/2022

  Gurugale bahala spashatavaagi namanta saamanyarigu arthavaguvante tilisikottideeri. Sriman Nyaya Sudha haagu Raayara vaakyagala artha yatha mati naavu arthamadikolluva jignaasege uttara kottidakke savinaya namaskaragalu. 
  Yeradu samshayagallannu pariharisabekendu praarthane.
  1. Naavu samskrutavannu artha maadikollabekaadare kannadada shabda prayogagalinda sulabhavaagi artha maadikollalu prayatnisuttirutteve aadare illi ಸುಳ್ಳು annuvudakke samskrutadalli मिथ्या yendu. Aadare adu samskrutadalli avyaya yendaadare sulinalle jeevana saagisuttidaare athawa sullindale jeevana yemba vaakya samskrutadalli hegaguttade ... Kannada dalli naamapada vaadaga samskrutadalli avyaya vaada mithya shabdada prayoga hege
  2. Innu Uttaradimutt da moola purusharindale doddodavara drogadigalu yendaadare... Ee lineage athawa parampare ye fake aaguvuda ... Ide parampare yalli banda Sri Raghutama Teertharu, Nirruti gala amsharu yendu kelutteve, Satyadhyanadi teertharu ivarugalu fake aaguttara..
  Tappagi kelidalli Kshame irali

  Vishnudasa Nagendracharya

  1. ಕನ್ನಡದಲ್ಲಿ "ಸ್ನಾನ ಮಾಡುತ್ತೇನೆ" ಎನ್ನುತ್ತೇವೆ. 
  English ನಲ್ಲಿ " I do bath" ಅನ್ನಲ್ಲ. "I take bath" ಎನ್ನುತ್ತೇವೆ. ಹಾಗೆಯೇ ಕನ್ನಡದಲ್ಲಿ "ಸ್ನಾನ ತೊಗೊಳ್ತೇನೆ" ಎನ್ನುವದಿಲ್ಲ.
  
  ಹಾಗೆಯೇ ಕನ್ನಡದಲ್ಲಿ "ಮಳೆ ಬರ್ತಾ ಇದೆ" ಎನ್ನುತ್ತೇವೆ. 
  English ನಲ್ಲಿ " Rain is coming" ಅನ್ನಲ್ಲ. "It is raining" ಎನ್ನುತ್ತೇವೆ. 
  
  ಶಬ್ದಗಳ ಪ್ರಯೋಗ ಬೇರೆಯ ರೀತಿಯಾದರೂ, ಭಾವ ಒಂದೇ ಇರುತ್ತದೆ. ಶಬ್ದದ ಸ್ವರೂಪಕ್ಕೆ ತಕ್ಕಂತೆ ಪ್ರಯೋಗವಿರುತ್ತದೆ. 
  
  ಹಾಗೆಯೇ ಸುಳ್ಳಿನಿಂದಲೇ ಬದುಕುತ್ತಾನೆ ಎನ್ನುವದನ್ನು "मिथ्यामयं तज्जीवनम्, मिथ्यालम्बनं तज्जीवनम्" ಎಂಬಿತ್ಯಾದಿ ಪ್ರಯೋಗ ಮಾಡುತ್ತೇವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣದೇವರೇ ಪ್ರಯೋಗ ಮಾಡುತ್ತಾರೆ - "मिथ्याचारः स उच्यते" ಸುಳ್ಳಿನ ನಡತೆಯವನು ಎಂದರ್ಥ. 
  
   2. ಉತ್ತರಾದಿಮಠದಿಂದ ಇತಿಹಾಸಕ್ಕೆ, ಮಹಾನುಭಾವರಿಗೆ ಆದ ದ್ರೋಹದ ಬಗ್ಗೆ ಮಾತನಾಡಿದರೆ, ಆ ವ್ಯಕ್ತಿಗಳೇಕೆ Fake ಆಗುತ್ತಾರೆ. ಇಲ್ಲಿ ವ್ಯಕ್ತಿಗಳ ಬಗ್ಗೆ ಚರ್ಚೆ ಇರುವದಲ್ಲ, ಉತ್ತರಾದಿಮಠದಿಂದ ವೈಷ್ಣವಪರಂಪರೆಗೆ ಆದ ಮತ್ತು ಆಗುತ್ತಿರುವ ದ್ರೋಹದ ಬಗ್ಗೆ ಚರ್ಚೆ.
  
 • savitri,Auckland

  3:55 PM , 22/04/2022

  🙏 what an amazing explanation, with minute details 👏, it shows how much study and dedicated hours of sadhana you do ,appa no words ,I just bow to your knowledge, pranamas
 • Sameer Joshi,Bangalore

  2:35 PM , 22/04/2022

  ಸತ್ಯವಾಗಿಯೂ ನಿಮ್ಮ ಮೇಲೆ ಶ್ರೀಮನ್ಮಧ್ವಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ, ಶ್ರೀರಾಘವೇಂದ್ರಸ್ವಾಮಿಗಳ ಅನುಗ್ರಹ ವಿಶೇಷ ಎಷ್ಟಿದೆ ಎನ್ನುವದು ಇವತ್ತು ಮತ್ತಷ್ಟು ಸ್ಪಷ್ಟವಾಯಿತು. 
  ನಿಜವಾಗಿಯೂ ಬಹಳ ಸುಂದರವಾಗಿ ಆ ವಾಕ್ಯದ ಹಾಗೂ ಶ್ರೀರಾಯರ ವಾಕ್ಯದ ಅಭಿಪ್ರಾಯವನ್ನು ಪಾಮರರಿಗೂ ಅರ್ಥವಾಗುವಂತೆ ತಿಳಿಸಿದ್ದೀರಿ. ನಿಮಗ ಅನಂತ ಅನಂತ ನಮಸ್ಕಾರಗಳು. 🙏🙏🙏🙏
 • SUDHEENDRA H,Bengalore

  10:53 AM, 22/04/2022

  ನಮ್ಮಂತಹ ಅಲ್ಫರಿಗೂ ಅರ್ಥವಾಗುವಂತೆ ತಿಳಿ ಸಿದ್ದೀರಿ.  ಸಾಷ್ಟಾಂಗ ನಮಸ್ಕಾರಗಳು.
 • Srinivasa Deshpande,Chennai

  11:59 PM, 21/04/2022

  Crystal clear
  
  What a wonderful presentation!
  
  Now I understood why UM scholars retreated from Vakyartha.
  
  Bhakti Purvaka Sashtanga Namaskaragalu
 • N.H. Kulkarni,Bangalore

  11:39 PM, 21/04/2022

  "ನಂಬಿ ಕೆಟ್ಟವರಿಲ್ಲವೋ ಗುರುಗಳ, 
  ನಂಬದೆ ಕೆಡುವರುಂಟು "
 • N D Shreenivaas,Mysuru

  10:19 PM, 21/04/2022

  While reading vnp 250 ... It looks as if you are describing...ಇನ್ನು Audio ಕೇಳಿದರಂತು....👍