ಸುಧಾಪಾಠ ನಂತರ, ನಿಮ್ಮ ಶಿಷ್ಯರಿಗೆ ಮೊದಲು ಧಾತುಪಾಠ ಹೇಳಿ, ಸತ್ಯಾತ್ಮರೆ!
“ವೇತ್ಸ್ಯಸಿ” ಎನ್ನುವದು ಅಸಾಧುಶಬ್ದವಂತೆ, ವೇತ್ಸಿ ಅಸಿ ಎಂದು ವಿಭಾಗ ಮಾಡಬೇಕಂತೆ ಎಂದು, ತಂದೆ ತಾಯಿಗಳು ಕೊಟ್ಟ ಹೆಸರನ್ನೂ ಹೇಳಿಕೊಳ್ಳಲಿಕ್ಕಾಗದ, ತನ್ನ ಹೆಸರಿನ ಬಗ್ಗೆ ತನಗೇ ಹೇವರಿಕೆ ಉಳ್ಳ ಶ್ರೀಚರಣದಾಸ ಎಂಬ Fake ಹೆಸರಿನ ವ್ಯಕ್ತಿ ಪ್ರತಿಪಾದಿಸಿದ್ದಾರೆ. ಸತ್ಯಾತ್ಮರ ಸಮರ್ಥಕರಿಗೆ ಶ್ರೀಮನ್-ನ್ಯಾಯಸುಧಾ, ಪರಿಮಳ ಶೇಷವಾಕ್ಯಾರ್ಥಚಂದ್ರಿಕೆಗಳು ಸರಿಯಾಗಿ ಪಾಠವಾಗಿರುವದು ದೂರ ಉಳಿಯಿತು, ಧಾತುಪಾಠವೂ ಸರಿಯಾಗಿ ಆಗಿಲ್ಲ ಎನ್ನುವದನ್ನು ಉತ್ತರಾದಿಮಠದ ಶ್ರೀ ಸತ್ಯಧರ್ಮತೀರ್ಥರ ವ್ಯಾಖ್ಯಾನದಿಂದಲೇ ಇಲ್ಲಿ ಪ್ರತಿಪಾದಿಸಲಾಗಿದೆ. ಇನ್ನು ಮುಂದೆ Fake ಹೆಸರಿನ ವ್ಯಕ್ತಿಗಳಿಂದ ಬರುವ ಲೇಖನಗಳನ್ನು ಸತ್ಯಾತ್ಮರ ಲೇಖನಗಳೆಂದೇ ಪರಿಗಣಿಸಲಾಗುವದು ಎಂದು ಉತ್ತರಾದಿಮಠಕ್ಕೆ ಸ್ಪಷ್ಟ ಎಚ್ಚರಿಕೆಯನ್ನೂ ಕಡೆಯಲ್ಲಿ ನೀಡಲಾಗಿದೆ. 01:22 ಇದುವರೆಗೂ ಆದ ಚರ್ಚೆಯ ಸಂಗ್ರಹ 06:25 ಶ್ರೀಚರಣದಾಸ ಎಂಬ Fake ವ್ಯಕ್ತಿಯ ಪ್ರತಿಪಾದನೆ, ವೇತ್ಸ್ಯಸಿ ಸಾಧುಶಬ್ದವಲ್ಲ, ವೇತ್ಸಿ, ಅಸಿ ಎಂಬ ಎರಡು ಶಬ್ದಗಳು 10:55 ವೇತ್ಸ್ಯಸಿ ಅಸಾಧುಶಬ್ದವೇ ಅಲ್ಲ 12:21 “ಜಯತೇ” ಹೇಗೆ ಸಾಧುವೋ. “ವೇತ್ಸ್ಯಸಿಯೂ” ಹಾಗೆಯೇ ಸಾಧು ಶಬ್ದ 15:32 ಸ್ಕಂದಪುರಾಣದಲ್ಲಿ. “ವೇತ್ಸ್ಯಸಿ” ಎಂಬ ಪ್ರಯೋಗ 19:04 ಲಿಂಗಪುರಾಣದಲ್ಲಿ “ವೇತ್ಸ್ಯಸಿ” ಎಂಬ ಪ್ರಯೋಗ 19:18 “ಈ ಎಲ್ಲ ಕಡೆಯಲ್ಲಿಯೂ ವೇತ್ಸಿ, ಅಸಿ ಎಂದೇ ವಿಭಾಗ ಮಾಡುತ್ತೇವೆ” ಎಂದರೆ ಉತ್ತರವೇನು? 19:35 “ವೇತ್ಸ್ಯಂತಿ” “ವೇತ್ಸ್ಯಾಮಿ” “ವೇತ್ಸ್ಯಾಮಃ” ಇತ್ಯಾದಿ ಪ್ರಯೋಗಳು 23:00 ಶ್ರೀಮದ್ ರಾಮಾಯಣದಲ್ಲಿ ಪ್ರಯೋಗ 26:59 ನಾವು ಏನಾದರೂ ಮಾಡಿ ಇವೆಲ್ಲವೂ ವಿದಲೃ ಲಾಭೇ ಎಂಬ ಧಾತುವಿನ ರೂಪ ಎಂದೇ ಸಮರ್ಥಿಸುತ್ತೇವೆ, ಎಂದರೆ ಉತ್ತರ. 27:56 ಶ್ರೀ ಸತ್ಯಧರ್ಮತೀರ್ಥರ ವಚನದಿಂದಲೇ ಸತ್ಯಾತ್ಮರ ಸಮರ್ಥಕರ ಖಂಡನೆ 31:34 ವಾದರಂಗದಲ್ಲಿ ಮಾತನಾಡಬೇಕಾದರೆ ಇರಬೇಕಾದ ಎಚ್ಚರ ಸತ್ಯಾತ್ಮರ ಸಮರ್ಥಕರಿಗೆ ಇಲ್ಲ 32:06 ಲೌಕಿಕ ಸಾಹಿತ್ಯದಲ್ಲಿಯೂ ವೇತ್ಸ್ಯಸಿ ಎಂಬ ಪ್ರಯೋಗವಿದೆ 34:25 ಸತ್ಯಾತ್ಮರೇ, ಸುಧಾಪಾಠ ನಂತರ, ಮೊದಲು ನಿಮ್ಮ ಶಿಷ್ಯರಿಗೆ ಧಾತುಪಾಠ ಹೇಳಿ! ಉತ್ತರಾದಿಮಠಕ್ಕೊಂದು ಪರಿಸ್ಪಷ್ಟ ಸೂಚನ 36:11 Fake ಹೆಸರುಗಳಿಂದ ಬರುವ ಲೇಖನಗಳನ್ನು ಸತ್ಯಾತ್ಮರ ಲೇಖನ ಎಂದೇ ಇನ್ನುಮುಂದೆ ಪರಿಗಣಿಸುತ್ತೇನೆ 40 MB File
Play Time: 41:12, Size: 3.84 MB