Prashnottara - VNP255

ವ್ಯಾಕರಣದ ದೃಷ್ಟಿಯಿಂದ ವಾಮನನ ಕೃತಿ ಪ್ರಮಾಣವೇ ಅಲ್ಲ


					 	

ಒಂದು ಗ್ರಂಥವನ್ನು ಪ್ರಮಾಣ ಎಂದು ಒಪ್ಪಬೇಕಾದರೆ ಯಾವ ಮಾನದಂಡಗಳಿರಬೇಕು ಎಂದು ಶ್ರೀಮದಾಚಾರ್ಯರು ಶ್ರೀಮಟ್ಟೀಕಾಕೃತ್ಪಾದರು ತಿಳಿಸಿದ್ದಾರೆಯೋ ಆ ಯಾವ ವಿಷಯಗಳೂ ವಾಮನನ ಈ ಕೃತಿಯಲ್ಲಿಲ್ಲ ಎನ್ನುವದನ್ನು ಇಲ್ಲಿ ಮನಗಾಣುತ್ತೇವೆ. ಸಾಧುಶಬ್ದಗಳನ್ನು ಅಸಾಧು ಎಂದು ಭ್ರಮಿಸಿ ಸಾಧುತ್ವನಿರ್ಣಯ ಮಾಡಲು ಹೊರಟ ಕಾವ್ಯಾಲಂಕಾರಸೂತ್ರ ವ್ಯಾಕರಣದ ದೃಷ್ಟಿಯಿಂದಲೇ ಪರಮ ಅಪ್ರಮಾಣವಾದ ಗ್ರಂಥ ಎಂದು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. 02:51 “ವೇತ್ಸ್ಯಸಿ ಪಾಣಿನಿ ವ್ಯಾಕರಣದೃಷ್ಟಿಯಿಂದ ಅಸಾಧು, ವಾಮನನ ಸೂತ್ರ ಅತ್ಯಂತ ಯುಕ್ತ, ಅವನು ಹೇಳಿದಂತೆಯೇ ಸಾಧುತ್ವ ತಿಳಿಯಬೇಕು” — ಸತ್ಯಾತ್ಮರು (ಶ್ರೀಚರಣದಾಸರು) 04:14 ಆಚಾರ್ಯವಾನ್ ತತ್ವಂ ವೇತ್ಸ್ಯತಿ, ಅಯಂ ವೇತ್ಸ್ಯತಿ ಎಂಬಲ್ಲಿ ವೇತ್ಸಿ ಅತಿ ಎಂದು ವಿಭಾಗ ಮಾಡಬೇಕೇನು? 06:24 ಒಂದು ಗ್ರಂಥವನ್ನು ಪ್ರಮಾಣ ಎಂದು ಒಪ್ಪಬೇಕಾದರೆ, ಶ್ರೀಮಧ್ವಶಾಸ್ತ್ರ ತಿಳಿಸಿದ ಮಾನದಂಡಗಳು 08:04 “ಪ್ರತಿಪಾದಿಸುವ ವಿಷಯದ ಕುರಿತು ಗ್ರಂಥಕಾರನಿಗೆ ಯಥಾರ್ಥಜ್ಞಾನವಿರಬೇಕು” — ಶ್ರೀಮಟ್ಟೀಕಾಕೃತ್ಪಾದರು 09:18 ಪ್ರಾಚೀನ ಗ್ರಂಥ ಎಂದ ಮಾತ್ರಕ್ಕೆ ಪ್ರಮಾಣವಲ್ಲ, ಅರ್ವಾಚೀನವಾದ ಮಾತ್ರಕ್ಕೆ ಅಪ್ರಮಾಣವೂ ಅಲ್ಲ 12:09 “ಗುರುಗಳನ್ನು ಸ್ವೀಕಾರ ಮಾಡಬೇಕಾದರೂ ಪರೀಕ್ಷೆ ಮಾಡಿಯೇ ಸ್ವೀಕಾರ ಮಾಡಬೇಕು” — ಶ್ರೀಮದಾಚಾರ್ಯರು 14:27 ಸಾಧುಶಬ್ದಗಳನ್ನೂ ಅಸಾಧು ಎಂದು ಭ್ರಮಿಸಿದ್ದಾನೆ, ವಾಮನ. 16:31 ಇಂದ್ರವಾಹನ ಎಂಬ ಶಬ್ದವೂ ಅಸಾಧುಶಬ್ದವಂತೆ! ವಾಮನ ಅದನ್ನು ಸರಿಪಡಿಸಿದ್ದಾನಂತೆ! 18:17 ಯಾವುದು ತಾನಾಗಿ ಹೋಗಿ ವಾಹನವನ್ನು ಏರಲು ಸಾಧ್ಯವಿಲ್ಲ, ಮತ್ತೊಬ್ಬರು ಹೊತ್ತು ವಾಹನದಲ್ಲಿ ಇಡಬೇಕು, ಅಂತಹ ಇಕ್ಷು (ಕಬ್ಬು), ದರ್ಭ, ಶರ ಮುಂತಾದವುಗಳನ್ನು ಹೊರುವ ವಾಹನ ಎಂದ ಹೇಳಬೇಕಾದರೆ ವಾಹಣ ಎಂದಾಗುತ್ತದೆ. ಇಕ್ಷುವಾಹಣ, ಶರವಾಹಣ, ದರ್ಭವಾಹಣ ಎಂದು” — ಪಾಣಿನಿ ಮಹರ್ಷಿಗಳು ಹೇಳುತ್ತಾರೆ. ಈ ನಿಯಮವನ್ನು ಓದಿದ ನೀವೇ ಹೇಳಿ, ಇಂದ್ರವಾಹನ ಎನ್ನುವದು ಇಂದ್ರವಾಹಣ ಎಂದಾಗುತ್ತದೆಯೋ? ಇಂದ್ರದೇವರನ್ನು ಮತ್ತೊಬ್ಬರು ಹೊತ್ತೊಯ್ದು ಐರಾವತದ ಮೇಲೆ ಇರಿಸಬೇಕೋ, ಅಥವಾ ದೇವತಾಚಕ್ರವರ್ತಿಯಾದ ಇಂದ್ರದೇವರು ರಾಜಗಾಂಭೀರ್ಯದಿಂದ ತಮ್ಮ ಭಕ್ತೋತ್ತಮರಾದ ಐರಾವತರ ಮೇಲೆ ಕಾಲಿಟ್ಟು ಏರುತ್ತಾರೆಯೋ? ಆದರೆ ವಾಮನ ಹೇಳುತ್ತಾನೆ. ಪಾಣಿನಿಯ ಸೂತ್ರದ ಪ್ರಕಾರ ಇಂದ್ರವಾಹಣ ಎಂದಾಗಬೇಕು. ಆದರೆ, ನಾವು “ಹೊತ್ತೊಯ್ದು ಇಡಲ್ಪಟ್ಟ” ಎಂಬ ಭಾಗವನ್ನು ಇಲ್ಲಿ ಪರಿಗಣಿಸಬಾರದು. ಆಗ ಸಾಧು ಎಂದಾಗುತ್ತದೆ ಎಂದು. ಇಂದ್ರದೇವರು “ಹೊತ್ತೊಯ್ದು ಇಡಬೇಕಾದ” ಪದಾರ್ಥವೇ ಅಲ್ಲ. ಅಂದ ಮೇಲೆ ಇಂದ್ರವಾಹಣ ಎಂದಾಗುವ ಪ್ರಸಕ್ತಿಯೇ ಇಲ್ಲ. ಇಂದ್ರದೇವರಲ್ಲಿ “ಹೊತ್ತೊಯ್ದು ಇಡಲ್ಪಟ್ಟವರು” ಎಂಬ ಗುಣವೇ ಇಲ್ಲದಿದ್ದಾಗ, ಅದನ್ನು ಪರಿಗಣಿಸಬಾರದು ಎಂದು ಹೇಳುವ ಈ ವಾಮನನಿಗೆ ವ್ಯಾಕರಣಜ್ಞಾನವಿದೆ ಎಂದು ಒಪ್ಪಲು ಸಾಧ್ಯವೇ? 25:59 ವಾಮನನ್ನು ಕಟಾಕ್ಷೀಕರಿಸಿದ ಸಿದ್ಧಾಂತಕೌಮುದೀ 27:57 ವಾಮನ ಮತ್ತು ಸತ್ಯಾತ್ಮರ ಪ್ರತಿಪಾದನೆಗಳಲ್ಲಿರುವ ಸಾಮ್ಯ 28:58 ಆಚಾರ್ಯರು ನೀಡಿದ ಮೂರೂ ಮಾನದಂಡಗಳಿಂದ ವಾಮನನ ಕೃತಿ ಅಪ್ರಮಾಣ ಎಂದು ಸಿದ್ಧವಾಗುತ್ತದೆ 30:51 ಅವರಿವರು ಒಪ್ಪಿದ್ದಾರೆ ಎನ್ನುವದರಿಂದ ಪ್ರಮಾಣ ಎಂದಾಗುವದಿಲ್ಲ 33:15 ಸೂತ್ರ ಎಂದರೆ ಸಂದೇಹವಿರಬಾರದು “ಅಲ್ಪಾಕ್ಷರಮಸಂದಿಗ್ಧಮ್”, ಆದರೆ ತನ್ನ ಸಂದೇಹವನ್ನೇ ಸೂತ್ರ ಮಾಡಿದ್ದಾನೆ ವಾಮನ. 37:09 ಅಧಿಕರಣ, ಅಧ್ಯಾಯಗಳ ವ್ಯತ್ಯಾಸವೂ ತಿಳಿದಿಲ್ಲ ವಾಮನನಿಗೆ 39:54 ನಾನು ಮಾಧ್ವಗ್ರಂಥಗಳನ್ನು ಪ್ರಮಾಣ ಎಂದು ನೀಡಿದರೆ, ಸತ್ಯಾತ್ಮರ ಸಮರ್ಥಕರು ಎಂತಹ ಗ್ರಂಥಗಳನ್ನು ಪ್ರಮಾಣ ಎಂದು ನೀಡುತ್ತಿದ್ದಾರೆ, ನೀವೇ ಪರೀಕ್ಷೆ ಮಾಡಿ. 41 MB


Play Time: 42:41, Size: 3.84 MB


Download Article Download Upanyasa Share to facebook View Comments
21318 Views

Comments

(You can only view comments here. If you want to write a comment please download the app.)
 • Srinidhi Joshi,Ballari

  4:46 PM , 17/07/2022

  Sri Gurubhyo Namaha. 
  Ella vishayagalannu sushpashtavagi vivarisiddiri. Dhanyavadagalu. Ivaru heluva reeti ondu shabdavannu arsha granthagalli matra saadhu endu tilidu adu lowkikadalli asadhu anta asaadhu endu helabahude. Dayavittu tilisikodi
 • Jayashree karunakar,Bangalore

  10:29 PM, 01/06/2022

  ಶಾಸ್ತ್ರದ ಜ್ಞಾನವಿಲ್ಲದ ಸಾಮಾನ್ಯರಿಗೂ ಅರ್ಥ ವಾಗುವಂತಹ ವಿವರಣೆ... 
  
  Mathamatically proved with proper example... 
  
  ಬುದ್ಧಿಯನ್ನು ಚುರುಕುಗೊಳಿಸುತ್ತದೆ... 
  
  ಏನೂ ಗೊತಿಲ್ಲದ ನಮ್ಮಂತಹ ಸಾಮಾನ್ಯರ ಬುದ್ಧಿಗೂ ರಸದೌತಣದಂತಿದೆ.. ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ... 
  
  ಇನ್ನು ಎಲ್ಲವನ್ನೂ ತಿಳಿದಿರುವ ಪಂಡಿತರಿಗೆ ಅದೆಷ್ಟು interesting topic ಇದಾಗಿರಬಹುದು... 
  
  ಈ ರೀತಿಯ ಆರೋಗ್ಯಕರವಾದ, ತತ್ವ ಜ್ಞಾನವನ್ನೂ ನೀಡುವ, ಕಿವಿಗಳಿಗೆ ರಸದೌತಣ ನೀಡುವ ಚರ್ಚೆಗಳು ನಮ್ಮಂತವರ ಜ್ಞಾನದ ಹಂತವನ್ನು ಎತ್ತರಕ್ಕೇರಿಸುತ್ತದೆ... 
  
  ನಮ್ಮ ಮಧ್ವಮತದ ಸಿದ್ಧಾಂತವನ್ನು ಇಷ್ಟು ಸ್ವಾರಸ್ಯಕರವಾಗಿ ನಿರೂಪಿಸುವ ನಮ್ಮೆಲ್ಲರ ಗುರುಗಳಿಗೊಂದು ಭಕ್ತಿ ಪೂರ್ವಕವಾದ ಪ್ರಣಾಮಗಳು.
 • N.H. Kulkarni,Bangalore

  2:57 PM , 01/06/2022

  @Srinivasa Deshpande:
  👌👌
 • Srinivasa Deshpande,Chennai

  2:39 PM , 01/06/2022

  By each and every Upanyasa we are getting pure knowledge. 
  
  Such a beautiful and perfect way is shown by Srimadacharyaru and Sri Teekacharyaru to decide the authenticity of any Grantha. 
  
  We have always herad that Sri Madhwa Shastra has answers for all questions. Now Vishwanandini is proving it beyond any doubt. 
  
  I enjoyed the “Indra Vahana” part like anything. listened to the same part four times. Beautiful topic with marvellous presentation. 
  
  There is a misconception that common people cannot understand Tatvika issues. But if we have a teacher like you, any topic can be not only easily understood, but we can enjoy the teachings too. 
  
  The urge to learn Shastra is increasing. 
  
  No Shastra is equallent to our Madhwa Shastra.
 • N.H. Kulkarni,Bangalore

  2:22 PM , 01/06/2022

  ಶ್ರೀ ನಾಗೇಂದ್ರ ಆಚಾರ್ಯರ ಈ ಪ್ರವಚನವು ಅವರ ವಿಸ್ತೃತವಾದ ಅಧ್ಯಯನವನ್ನು , ಆಳವಾದ ಪಾಂಡಿತ್ಯವನ್ನು ಹಾಗೂ ವಿಷಯ ನಿಷ್ಠವಾಗಿ ಚರ್ಚೆ ಮಾಡುವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸುತ್ತಿದೆ.
  
  ಪೂರ್ವಾಗ್ರಹದ ದಟ್ಟ ಮೋಡಗಳು ದೂರ ಸರಿದು, ತತ್ವಸೂರ್ಯನ ದರ್ಶನ ಯಲ್ಲ ಸಜ್ಜನರಿಗೆ ಬಹು ಬೇಗ ಆಗುವಂತಾಗಲಿ ಅಂತ ಆಶಿಸುತ್ತೇನೆ.
 • Madhukar V,Chintamani

  11:10 AM, 01/06/2022

  I never knew these UM people will also write fake articles!!!!!