Prashnottara - VNP257

10-6-2022 ಏಕಾದಶಿ ವಿವರ


					 	

ಸ್ಮೃತಿಮುಕ್ತಾವಲಿ ಶ್ರೀ ಕೃಷ್ಣಾಚಾರ್ಯರ ನಿರ್ಣಯದ ಅನುಸಾರ ಭಾರತದಲ್ಲಿ 10-6-2022, ಶುಕ್ರವಾರದಂದೇ ಉಪವಾಸ, ಶನಿವಾರದ ದಿವಸವಲ್ಲ ಎಂಬ ನಿರೂಪಣೆಯೊಂದಿಗೆ ವಿಶ್ವದ ಇತರ ಸ್ಥಳಗಳಲ್ಲಿಯೂ ಉಪವಾಸ ಹರಿವಾಸರಗಳ ಕುರಿತ ವಿವರ ಈ ವಿಡಿಯೋದಲ್ಲಿದೆ.


Watch Video Share to facebook View Comments
14638 Views

Comments

(You can only view comments here. If you want to write a comment please download the app.)
 • Padmini.B,Bangalore

  5:47 PM , 14/06/2022

  ಗುರುಗಳಿಗೆ ನಮಸ್ಕಾರ. ಏಕಾದಶಿಯಂದು ಕೆಲವು ಸಲ (ನಿರ್ಜಲ) ಎಂದು ಬರೆಯುತ್ತಾರೆ. ಕಾರಣ ಏನು? ಪ್ರತಿ ಏಕಾದಶಿಯೂ ನಿರ್ಜಲವೇ ಅಲ್ವಾ? ದಯವಿಟ್ಟು ತಿಳಿಸಿ 🙏🏻🙏🏻

  Vishnudasa Nagendracharya

  ಏಕಾದಶಿಯ ಹೆಸರುಗಳ ಹಿಂದೆ ಮಹತ್ತ್ವದ ಕಾರಣಗಳಿವೆ. ಪೌರಾಣಿಕ ಕಥೆಗಳಿವೆ. 
  
  ಮುಂದೆ ವಿಶ್ವಪಂಚಾಂಗದಲ್ಲಿ ಇವೆಲ್ಲವೂ ವಿವರವಾಗಿ ನಿಮಗೆ ದೊರೆಯಲಿವೆ. 
 • GOPALACHAR HANJAKKI,Hutti

  10:30 PM, 09/06/2022

  Excellent 🙏
  Acharre nice use of graphics to detailing about Ekadashi Justification🙏
 • Vikram Shenoy,Doha

  8:47 AM , 09/06/2022

  ಕೋಟಿ ವಂದನೆಗಳು ಆಚಾರ್ಯರಿಗೆ
 • VYASARAJ T,Bengaluru

  10:29 PM, 08/06/2022

  Dhanyavadagalu Acharyare.
 • VYASARAJ T,Bengaluru

  9:39 PM , 08/06/2022

  ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು
  I have a question. If every mutts are following there own standard reference for calculation of Dashami Vedha then when we have to consider the "Bahvagama Virodheshu" shloka to reject the Viddha Ekadashi? 
  Prashneyalli Tappiddare Kshame irali

  Vishnudasa Nagendracharya

  ಅತ್ಯುತ್ತಮ ಪ್ರಶ್ನೆ. 
  
  ಎಲ್ಲರಿಗೂ ಅನುಕೂಲವಾಗಲಿ ಎಂದು ಪ್ರಶ್ನೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತೇನೆ. 
  
  ಶ್ರೀಮದಾಚಾರ್ಯರು
  
  "ಬಹ್ವಾಗಮವಿರೋಧೇಷು ಬ್ರಾಹ್ಮಣೇಷು ವಿವಾದಿಷು।
  ಉಪೋಷ್ಯಾ ದ್ವಾದಶೀ ಪುಣ್ಯಾ ತ್ರಯೋದಶ್ಯಾಂ ತು ಪಾರಣಮ್” ಎಂದು ಹೇಳಿದ್ದಾರೆ. 
  
  “ಅನೇಕ ಆಗಮಗಳ ವಿರೋಧ ತೋರಿದಾಗ, ಇಂದು ವೇಧ ಇದೆ, ವೇಧ ಇಲ್ಲ ಎಂದು ಬ್ರಾಹ್ಮಣರು ವಿವಾದ ಮಾಡುತ್ತಿದ್ದಾಗ, ಆ ಏಕಾದಶಿಯನ್ನು ತೊರೆದು ದ್ವಾದಶಿಯಂದು ಉಪವಾಸ ಮಾಡಬೇಕು”
  
  ಎಂದು ನೇರವಾಗಿ ಆದೇಶ ಮಾಡಿದ್ದಾರೆ. ಈ ನಿಯಮವನ್ನು ನಾವು ಯಾವಾಗ ಅನ್ವಯಿಸಿಕೊಳ್ಳಬೇಕು, ಅನ್ವಯಿಸಿಕೊಳ್ಳಬಾರದು ಎಂದು ಪ್ರಶ್ನೆ. 
  
  
  ನೋಡಿ ಮಠಗಳಾಗಲೀ, ಅಥವಾ ಯಾವುದೇ ವಿದ್ವಾಂಸರಾಗಲೀ, ಇಂತಹ ದಿವಸ ವೇಧ ಇದೆ ಎಂದ ಮಾತ್ರಕ್ಕೆ ನಾವು ಅದನ್ನು ಒಪ್ಪಿಬಿಡಬಾರದು. ಆಗ ಯಾರೋ ಒಬ್ಬ ವ್ಯಕ್ತಿ ಸುಮ್ಮಸುಮ್ಮನೇ ಈ ಬಾರಿಯ ಏಕಾದಶಿಗೆ ವೇಧೆ ಇದೆ ಎಂದು ಹೇಳಿದರೂ ನಾವು ಶಂಕೆಯ ಆಧಾರದ ಮೇಲೆ ಏಕಾದಶಿಯನ್ನು ಬಿಟ್ಟು ದ್ವಾದಶಿಯಂದು ಉಪವಾಸ ಮಾಡಬೇಕಾಗುತ್ತದೆ. ಹಾಗಿದ್ದಾಗ ಪ್ರತೀಬಾರಿ ಯಾರು ಬೇಕಾದರೂ ಹೇಳಿಬಿಡಬಹುದು. 
  
  ಹಾಗಲ್ಲ. ಮಠ ಹೇಳಲಿ, ಸ್ವಾಮಿಗಳು ಹೇಳಲಿ, ವಿದ್ವಾಂಸರು ಹೇಳಲಿ, ವೇಧೆ ಇದೆ ಎನ್ನುವದಕ್ಕೆ ಪ್ರಮಾಣವನ್ನು ಒದಗಿಸಿದಾಗ ಮಾತ್ರ ಆ ಶಂಕೆಯನ್ನು ಸ್ವೀಕಾರ ಮಾಡಬೇಕಾಗುತ್ತದೆ. 
  
  ಈ ಪ್ರಸಕ್ತ ಏಕಾದಶಿಯನ್ನೇ ತೆಗೆದುಕೊಳ್ಳೋಣ. ಏಕಾದಶಿಗೆ ದಶಮೀವೇಧೆ ಇದೆ ಎಂದು ರಾಯರ ಮಠದವರು ಹೇಳುತ್ತಿದ್ದಾರೆ. ಅದರೆ, ಸ್ಮೃತಿಮುಕ್ತಾವಲಿಯ ಶ್ರೀಕೃಷ್ಣಾಚಾರ್ಯರ ವಾಕ್ಯದ ಪ್ರಕಾರ, ಮತ್ತು ಇದೇ ರಾಯರ ಮಠದ ಪಂಚಾಂಗದ ಪ್ರಕಾರವೇ ವೇಧೆ ಬರಲು ಸಾಧ್ಯವೇ ಇಲ್ಲ ಎನ್ನುವದನ್ನು ಮನಗಂಡಿದ್ದೇವೆ. ಹೀಗಾಗಿ ಇಲ್ಲಿ ಶಂಕೆಯೇ ಅನುಪಪನ್ನ. ಶಂಕೆಗೆ ಆಧಾರವೇ ಇಲ್ಲ. ನಿರ್ದಲವಾದ ಶಂಕೆ
  
  ಇನ್ನು ಆರ್ಯಮಾನದಿಂದ ದಶಮೀವೇಧ ಇದೆ ಎಂದು ರಾಯರ ಮಠದವರು ಹೇಳುವದಾದರೆ ಅದಕ್ಕೆ ಪರಿಸ್ಪಷ್ಟವಾದ ಪ್ರಮಾಣವನ್ನು ಒದಗಿಸಬೇಕಾಗುತ್ತದೆ. 
  
  ರಾಯರ ಮಠದವರು ಪ್ರಮಾಣವನ್ನು ಸಮಾಜದ ಮುಂದೆ ಪ್ರಸ್ತುತಪಡಿಸಲಿ, ಆ ಪ್ರಮಾಣ ಸರಿಯಾಗಿದ್ದಲ್ಲಿ, ವೇಧ ಇರುವ ಸಂಶಯ ತಲೆದೋರಿದಲ್ಲಿ ನಾನೇ ಅವಶ್ಯವಾಗಿ ಸಮಾಜದ ಮುಂದೆ ಪ್ರಕಟಿಸುತ್ತೇನೆ. ವೇಧದ ಸಂಶಯ ಇರುವದರಿಂದ, ನಿರ್ಣಯ ಮಾಡಲು ಸಾಧ್ಯವಿಲ್ಲದಿರುವದರಿಂದ ಅವಶ್ಯವಾಗಿ ಈ ಏಕಾದಶಿಯಂದು ದಶಮಿಯ ಆಚರಣೆ ಮಾಡಿ, ದ್ವಾದಶಿಯಂದು ಉಪವಾಸ ಮಾಡಬೇಕು ಎಂದು. 
  
  ತಾತ್ಪರ್ಯ — ಮಠಗಳು, ಸ್ವಾಮಿಗಳು, ವಿದ್ವಾಂಸರು, ಪ್ರಮಾಣವಿಲ್ಲದೇ ವೇಧ ಇದೆ ಎಂದು ಹೇಳಿದರೂ ನಾವು ಒಪ್ಪಬೇಕಾಗಿಲ್ಲ. ಪ್ರಮಾಣವನ್ನು ತೋರಿಸಿ, ವೇಧ ಇದೆ ಎಂದು ಯಾರೇ ಹೇಳಿದರೂ, ಶಂಕೆಗೆ ಸೂಕ್ತವಾದ ಆಧಾರವಿದ್ದಲ್ಲಿ, ಶ್ರೀಮದಾಚಾರ್ಯರ ಆದೇಶದಂತೆ ಏಕಾದಶಿಯನ್ನು ತ್ಯಾಗ ಮಾಡಿ ದ್ವಾದಶಿಯಂದು ಉಪವಾಸ ಮಾಡಬೇಕು. 
 • Vasudha,Kurnool

  8:14 PM , 08/06/2022

  ಅತ್ಯದ್ಭುತ ಆಚಾರ್ಯ ರೆ🙏🙏🙏
 • Nagarahalli Vageeshachar,Mantralaya

  1:56 PM , 08/06/2022

  ನಮಸ್ಕಾರ ಆಚಾರ್ಯರೇ, 
   *क्षयेऽपि आर्यभटेन “पञ्चपञ्चाशद्घटिका नवनाडी यदा भवेत्” इति साम्प्रदायिकनिर्णीतवचनानुसारेण तावच्चेद् गण्यते तदा दशमीवेधः ।* ಎಂಬ ಸ್ಮೃತಿಮುಕ್ತಾವಲೀಕಾರರ ಮಾತನ್ನು ಗಮನಿಸಿದಾಗ *ಆರ್ಯಭಟೇನ* ಎಂಬುದಾಗಿ ಹೇಳಿದ್ದಾರೆ‌. ಮತ್ತು
   *दशम्यादितिथीनां तु आर्येणैव विनिर्णयः* ಎಂಬ ಸ್ಮೃತಿಮುಕ್ತವಲೀಕಾರರ ಮಾತಿನಂತೆ ವಿಜಯೀಂದ್ರ ಮಠದವರು ದಶಮ್ಯಾದಿ ಮೂರುದಿನಗಳಲ್ಲಿ ಆರ್ಯಗಣನೆಯನ್ನು ಮಾಡಬೇಕು ಎಂದು ಹೇಳಿದ್ದಾರೆ. "ಕರಣಪ್ರಕಾಶ" ಎಂಬ ಗಣಿತ ಗ್ರಂಥದ ಅನುಸಾರವಾಗಿ ಆರ್ಯಗಣನೆ ಎಂದರೆ, ಈ ಸಂದರ್ಭದಲ್ಲಿ, ಪ್ರಕೃತ ಇರುವ ಘಳಿಗೆಗೆ 5 ಘಳಿಗೆ 45 ಫಳಗಳನ್ನು ಸೇರಿಸುವುದು. ಪ್ರಕೃತ 51 ಗಳಿಗೆಗೆ 35 ಫಳಗಳಿವೆ. ಒಟ್ಟುಗೂಡಿಸಿದಾಗ 55 ಘಳಿಗೆ ನವನಾಡಿ ಮೇಲೆಯೇ ಬರುತ್ತದೆ. ತಾವು ಕೂಡ "ಅಂದರೆ ಕರಣಪ್ರಕಾಶದ ಲೆಕ್ಕದಲ್ಲಿ......" ಇತ್ಯಾದಿ ವಾಕ್ಯದಿಂದ ವೇಧ ಉಂಟಾಗುತ್ತದೆ, ಆದರೆ ಅದನ್ನು ಪಂಚಾಂಗದಲ್ಲಿ ಉಲ್ಲೇಖಿಸಿಲ್ಲ ಎಂಬುದಾಗಿ ಹೇಳಿದ್ದೀರಿ. ಒಂದು ವೇಳೆ ಪಂಚಾಂಗದಲ್ಲಿ ಉಲ್ಲೇಖಿಸಿದ್ದರೆ ದಶಮಿ ವೇಧವನ್ನು ರಾಯರ ಮಠದವರು ಮಾಡಬಹುದಲ್ಲವೇ?
  ಗಣಿತದ ಲೆಕ್ಕಾಚಾರವನ್ನು ಪಂಚಾಂಗದಲ್ಲಿ ಹಾಕದೆ,ಅದರ ಅಭಿಪ್ರಾಯವನ್ನು ಬರೆದಿರುವುದರಿಂದಲೇ ವೇಧ ಇದೆ ಎಂಬುದಾಗಿ ತಿಳಿಯುತ್ತದೆ ಅಲ್ಲವೇ?
  ಯದ್ಯಪಿ ತಾವು 7 minute, 25 second ಸಂದರ್ಭದಲ್ಲಿ ಅತಿಕ್ಷಯ ಅತಿವೃದ್ಧಿ ಪಕ್ಷಗಳನ್ನು ಮಾತನಾಡಿದ್ದರು,6 minute 45 second ನಲ್ಲಿ ಮಾತನಾಡುವಾಗ ಕ್ಷಯ ಪಕ್ಷದಲ್ಲಿ 53 ಇರಬೇಕೆಂದು ಹೇಳಿದ್ದೀರಿ, ಆದರೆ ಅಲ್ಲಿ ಹೇಳಿದ್ದು ಅತಿಕ್ಷಯ ಪಕ್ಷದಲ್ಲಿ. ಕೇವಲ ಕರಣಪ್ರಕಾಶದಲ್ಲಿ ಆರ್ಯಗಣನೆಯನ್ನು ಆಚರಿಸಬೇಕು ಎಂಬುದಾಗಿ ಹೇಳಿದ್ದಾರೆ ಆದ್ದರಿಂದ ಅದನ್ನು ಅನುಸರಣೆ ಮಾಡುತ್ತಿಲ್ಲ,ಕಿಂತು ಸ್ಮೃತಿ ಮುಕ್ತವಲಿಯಲ್ಲೂ ಕೂಡ ಆರ್ಯಭಟೇನ ಎಂಬುದಾಗಿ ಹೇಳಿದ್ದರಿಂದ ಅದಕ್ಕೆ ಅನುಗುಣವಾಗಿ ದಶಮಿ ಬರುತ್ತದೆಯಲ್ಲವೇ?

  Vishnudasa Nagendracharya

  ಪ್ರಶ್ನೆ 1 - ಇರುವ ಘಳಿಗೆ 5 ಘಳಿಗೆ 45 ಪಲ ಸೇರಿಸಬೇಕು ಎಂದಿರಿ. ಆ 5:45 ಪಳಗಳನ್ನು ಎಲ್ಲಿಂದ ತಂದಿರಿ? 
   
  ಪ್ರಶ್ನೆ 2 - ಕರಣಪ್ರಕಾಶದ ಕುರಿತು. ಕರಣಪ್ರಕಾಶದ ರೀತಿಯಲ್ಲಿ ರಾಯರ ಮಠದವರು ವೇಧ ನಿರ್ಣಯ ಮಾಡುತ್ತಾರೆ ಎಂದು ಕೇಳಿದ್ದೇವೆ. ರಾಯರ ಮಠದವರು ಪಂಚಾಂಗದಲ್ಲಿಯೂ ಮುದ್ರಿಸಿಲ್ಲ. ಅಂದ ಮೇಲೆ ಹೇಗೆ ತಿಳಿಯುವದು? 
  
  ಸೂರ್ಯಸಿದ್ಧಾಂತವನ್ನು ಮುದ್ರಣ ಮಾಡಲು ಬರುತ್ತದೆ, ಕರಣಪ್ರಕಾಶದ ಲೆಕ್ಕವನ್ನು, ಕನಿಷ್ಠ ದಿನತ್ರಯಕ್ಕಾದರೂ ಏಕೆ ಮುದ್ರಣ ಮಾಡುವದಿಲ್ಲ. ಶುದ್ಧವಾದ ಲೆಕ್ಕಾಚಾರವನ್ನು ಸಮಾಜದ ಮುಂದೆ ಪ್ರಸ್ತುತ ಪಡಿಸಬೇಕಲ್ಲವೇ?
  
  ಪ್ರಶ್ನೆ 3 ಆರ್ಯಭಟೀಯದ ಪ್ರಕಾರ ದಶಮೀವೇಧ ಬರುತ್ತಿದೆಯಲ್ಲವೇ ಎಂದು ನೀವು ಪ್ರಶ್ನೆ ಕೇಳುತ್ತಿದ್ದೀರಿ. ಆರ್ಯಭಟೀಯದ ಪ್ರಕಾರ ದಶಮೀವೇಧ ಬರುತ್ತಿದೆ ಎಂದು ಪ್ರತಿಪಾದಿಸುವ, Prove ಮಾಡುವ ಹೊಣೆ ನಿಮ್ಮದೇ (ರಾಯರ ಮಠದ್ದೇ) ಆಗಿದೆ, ಅಲ್ಲವೇ?
  
  ಪ್ರಶ್ನೆ 4 ಶ್ರೀಕೃಷ್ಣಾಚಾರ್ಯರ ಸ್ಪಷ್ಟವಾದ ನುಡಿಗಳ ಪ್ರಕಾರ, ಅತಿವೃದ್ಧಿ ಪಕ್ಷದಲ್ಲಿ ಸೂರ್ಯಸಿದ್ಧಾಂತದಲ್ಲಿ 52:30 ಗಳಿಗೆ, ಅದು ಆರ್ಯಮಾನದ ಪ್ರಕಾರ 55:09 ಆಗುತ್ತದೆ ಆದ್ದರಿಂದ ವೇಧ. ಅತಿಕ್ಷಯ ಪಕ್ಷದಲ್ಲಿ 53 ಘಳಿಗೆ ಇದ್ದರೆ ಆರ್ಯಮಾನದ ಪ್ರಕಾರ 55:09 ಆಗುತ್ತದೆ ಆದ್ದರಿಂದ ವೇಧ. 
  
  ಈಗ ರಾಯರ ಮಠದ ಪ್ರಕಾರವೇ ಸೂರ್ಯಸಿದ್ಧಾಂತ ದಶಮಿ ಇರುದು 51:35 ಗಳಿಗೆಗಳು. ಅಂದ ಮೇಲೆ ವೇಧ ಹೇಗೆ ಉಂಟಾಗುತ್ತದೆ ಹೇಳಿ. 
  
  
 • Vijendran,Chennai

  11:24 AM, 08/06/2022

  🙏🙏🙏
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:17 AM, 08/06/2022

  🙏🙏🙏
 • Nagarahalli Vageeshachar,Mantralaya

  11:02 PM, 07/06/2022

  ನಮಸ್ಕಾರ ಆಚಾರ್ಯರೇ, ಸುಮಾರು 6 ನಿಮಿಷ,50ನೇ second ನಲ್ಲಿ ತಾವು ಮಾತನಾಡುವಾಗ "ಕ್ಷಯ ಪಕ್ಷದಲ್ಲಿ 53 ಘಳಿಗೆ ಇರಬೇಕೆಂದು ಸ್ಮೃತಿಮುಕ್ತಾವಲೀಕಾರರು ಹೇಳಿದ್ದಾರೆ" ಎಂದು ಹೇಳಿದ್ದೀರಿ.ಆದರೇ ಅಲ್ಲಿ ಹೇಳಿದ್ದು ಅತಿಕ್ಷಯ ಪಕ್ಷದಲ್ಲಿ 53 ಘಳಿಗೆ ಇರಬೇಕೆಂದು.ಪ್ರಕೃತ ಕ್ಷಯ ಪಕ್ಷವನ್ನು ಇಟ್ಟುಕೊಂಡು ವೇಧ ಮಾಡಬಹುದಲ್ಲಾ?
  ಅಷ್ಟೇ ಅಲ್ಲ " ರಾಯರ ಮಠದವರು "ಕರ್ಣಪ್ರಕಾಶ" ಎಂಬ ಗ್ರಂಥವನ್ನು ಆದರಿಸಿ ಹೀಗೆ ಹೇಳಿದ್ದಾರೆ " ಎಂದು ಹೇಳಿದ್ದೀರಿ, ಅದನ್ನು ಯಾಕೆ ಆದರಿಸಿ ಬಾರದು?

  Vishnudasa Nagendracharya

  ನಮಸ್ಕಾರ ಆಚಾರ್ಯರೇ. 
  
  ಅತಿಕ್ಷಯಪಕ್ಷದಲ್ಲಿಯೇ ಸೂರ್ಯಸಿದ್ಧಾಂತದ ಪ್ರಕಾರ 53 ಇರಬೇಕು ಎಂದಾಗ, ಕ್ಷಯಪಕ್ಷದಲ್ಲಿ 54 ಇರಬೇಕಾಗುತ್ತದೆ. "ಮಹಾಹ್ರಾಸೇsಧಿಕಾ ಶುದ್ಧಿಃ". ಆಗ ರಾಯರ ಮಠದ ನಿರ್ಣಯಕ್ಕೆ ಇನ್ನೂ ಸಮಸ್ಯೆಯಾಗುತ್ತದೆ. ಸೂರ್ಯಸಿದ್ಧಾಂತದ ಪ್ರಕಾರ ದಶಮಿ ಇರುವದು 51:35. 53 ಗಳಿಗೆ ದೊರೆಯಲು ಸಾಧ್ಯವಿಲ್ಲದಿದ್ದಾಗ 54 ಹೇಗೆ ಸಾಧ್ಯ. 
  
  ಇನ್ನು ಸ್ಮೃತಿಮುಕ್ತಾವಲಿಯ ಶ್ರೀ ಕೃಷ್ಣಾಚಾರ್ಯರು ಹೇಳಿದ ಅತಿಕ್ಷಯ ಪಕ್ಷವನ್ನು ಒಟ್ಟಾರೆ ಕ್ಷಯ ಪಕ್ಷ ಎಂದು ಗ್ರಹಿಸಿದಾಗಲೂ (ಅದಕ್ಕೇ ಕ್ಷಯಪಕ್ಷದಲ್ಲಿ, ಅತಿಕ್ಷಯಪಕ್ಷದಲ್ಲಿ ಎಂದು ಎರಡು ರೀತಿಯಲ್ಲಿಯೂ ನಾನು ಉಲ್ಲೇಖಿಸಿದ್ದೇನೆ) ಸೂರ್ಯಸಿದ್ಧಾಂತದ ಪ್ರಕಾರ 53 ಗಳಿಗೆ ಇರಲೇಬೇಕು. ಇಲ್ಲ ಎನ್ನುವದು ಮಠದ ಪಂಚಾಂಗದಿಂದಲೇ ಸ್ಪಷ್ಟ. 
  
  ಇನ್ನು "ಕರಣಪ್ರಕಾಶ" ವನ್ನು ಆಧರಿಸಿ ರಾಯರ ಮಠದವರು ವೇಧನಿರ್ಣಯ ಮಾಡುತ್ತಾರೆ ಎಂದು ಕೃಷ್ಣಾಮೃತಮಹಾರ್ಣವದ ಉಮರ್ಜೀ ವ್ಯಾಖ್ಯಾನದಲ್ಲಿದೆ. "विजयीन्द्रस्वामिनां सम्प्रादायस्तु - षट्-पञ्चाशद्-घटिकायां वृद्धिक्षयसाधारण्येनादिभागे नवनाडिका यदा करणप्रकाशेन दृश्यते तदा वेध इति" ಎಂದು. ಅಂದರೆ ಕರಣಪ್ರಕಾಶದ ಲೆಕ್ಕದಲ್ಲಿ 55-09 ದೊರೆತಾಗ ವೇಧವುಂಟಾಗುತ್ತದೆ ಎಂದು. ರಾಯರ ಮಠದವರು ಅದನ್ನು ಅನುಸರಿಸುತ್ತಿದ್ದಾರೆ ಎಂದರೆ ಅದರ ಗಣಿತವನ್ನೂ ಪ್ರಸ್ತುತ ಪಡಿಸಬೇಕಲ್ಲವೇ. 
  
  ಇನ್ನು "ಕರಣಪ್ರಕಾಶ" ದ ರೀತಿಯಲ್ಲಿ ಲೆಕ್ಕ ಹಾಕಿದರೂ 55 ದೊರೆಯುತ್ತಿಲ್ಲ. 
  
  ಅಂದ ಮೇಲೆ ವೇಧ ಹೇಗೆ ಉಂಟಾಗಲು ಸಾಧ್ಯ?
 • savitri,Auckland

  11:52 PM, 07/06/2022

  Wow, what an excellent explanation of details of ekadashi with all mathematical calculations 🙏
 • Pattabiraman Cheyur,Bengaluru

  10:00 PM, 07/06/2022

  Gurugalege namaskara
  Wonderful explanation about ekadasi and dawadasi with latest technology. 
  Once again Pranams
 • Nalini Premkumar,Mysore

  9:49 PM , 07/06/2022

  🙏🙏🙏
 • N.H. Kulkarni,Bangalore

  8:16 PM , 07/06/2022

  A tight slap for all the people who were spreading the rumour that Sri Nagendra Acharya has been receiving money from Sri Mantralaya Mutta to talk against Sri Uttaradi Mutta.
 • G S KRISHNA,Bellary

  8:11 PM , 07/06/2022

  🙏🙏🙏
 • Trivikrama,Bangalore

  8:06 PM , 07/06/2022

  Paramadbhutavada vivsrane 
  🙏🙏🙏
 • Rajendra Koushik,Delhi

  6:44 PM , 07/06/2022

  ತುಂಬಾ ಚೆನ್ನಾಗಿ ವಿವರಿಸಿದ್ದೀರಿ 🙏🙏 ಮತ್ತೊಮ್ಮೆ ಕೇಳಿ ಅರ್ಥ ಮಾಡಿಕೊಳ್ಳುತ್ತೇವೆ, ಹಾಗಾದರೆ ದಶಮಿ 52-53 ಗಳಿಗೆ ಯ ಒಳಗೆ ಬಂದರೆ ಸೂರ್ಯೋದಯಕ್ಕೆ ಮತ್ತು ಏಕಾದಶಿ ತಿಥಿಗೆ ಸಂಬಂಧ ಇಲ್ಲ, ಅಂತ ನಾ 🙏🙏

  Vishnudasa Nagendracharya

  ಎಲ್ಲ ಸಂದರ್ಭಗಳಲ್ಲಿಯೂ 52, 53 ಅಲ್ಲ. 
  
  ಕೆಲವು ಬಾರಿ 54 ಇದ್ದರೂ ವೇಧ ಇರುವದಿಲ್ಲ. 
  
  ತಿಥಿಯ ಸ್ವರೂಪದ ಮೇಲೆ ಅದು ಅವಲಂಬಿತವಾಗಿರುತ್ತದೆ.