Prashnottara - VNP264

ಶ್ರೀ ರಂಗಾಚಾರ್ಯರ ಲೇಖನದ ವಿಮರ್ಶೆ ಆರಂಭ


					 	

ಮುಂದಿನ ಎರಡು ಉಪನ್ಯಾಸಗಳಲ್ಲಿ ಶ್ರೀ ಗಣಾಚಾರಿ ರಂಗಾಚಾರ್ಯರ ಲೇಖನದ ಕುರಿತ ತೀಕ್ಷ್ಣ ವಿಮರ್ಶೆ ಬರುವದಿದೆ. ಅವರ ಕುರಿತು ನನಗಿರುವ ಅಭಿಪ್ರಾಯವನ್ನು ಪರಿಸ್ಪಷ್ಟವಾಗಿ ಇಲ್ಲಿ ನಿರೂಪಿಸಲಾಗಿದೆ. ಸುಳ್ಳು ಹೇಳುವದು ಉತ್ತರಾದಿಮಠದ ಪಾಖಂಡಿಗಳ ರಕ್ತಗತ ಗುಣ ಎನ್ನುವದನ್ನು ಮನಗಾಣಿಸುವದರೊಂದಿಗೆ. 01:40 ಶ್ರೀ ಗಣಾಚಾರಿ ರಂಗಾಚಾರ್ಯರ ಕುರಿತು ನನ್ನ ಮನಃಪೂರ್ವಕ ನುಡಿಗಳು 04:39 ಶ್ರೀ ಗಣಾಚಾರಿ ರಂಗಾಚಾರ್ಯರ ಜಾಳುಜಾಳು ಲೇಖನ 06:55 ಮೊದಲ ಸುಳ್ಳು. 2013 ರಲ್ಲಿಯೇ ಲೇಖನ ಬರೆದಿದ್ದಾರಂತೆ, 08:52 ಎರಡನೆಯ ಸುಳ್ಳು. PDF ನಲ್ಲಿ ವೆಬ್ಸೈಟಿನವರು ತಪ್ಪು ಮಾಡಿದ್ದಾರಂತೆ. 11:21 ಮೂರನೆಯ ಸುಳ್ಳು. ಆ ವೆಬ್ಸೈಟಿನಲ್ಲಿ ಇದು ಪ್ರಕಟವಾಗಿಯೇ ಇಲ್ಲ! 13:42 ಸುಳ್ಳು ಹೇಳುವದೇ "ಉತ್ತರಾದಿಮಠದ ಪಾಖಂಡಿಗಳ" ಸಂಪ್ರದಾಯ 17:39 ಮುದ್ರಣದೋಷ ಯಾಕಾಗಿರಬಾರದು?


Play Time: 21:50, Size: 3.84 MB


Download Article Download Upanyasa Share to facebook View Comments
19124 Views

Comments

(You can only view comments here. If you want to write a comment please download the app.)
 • Satish Chandran,Bangalore

  10:46 PM, 16/10/2022

  ಶ್ರೀ ಮಧ್ವಾಚಾರ್ಯರ ಶಬ್ದ ಪ್ರಯೋಗವನ್ನು ಒಡೆದು ಕೂಡಿಸುವುದು ಕೆಲವರಿಗೆ ಇಷ್ಟವಾಗುವುದಿಲ್ಲವೇನೋ, ಹೀಗಾಗಿ ಶತಪ್ರಯತ್ನ ಮಾಡಿಯಾದರೂ ಅದನ್ನು ಸಮರ್ಥನೆ ಮಾಡುತ್ತಾರೆ. ಇರಲಿ, ಅವರವರ ವಿವೇಚನೆಗೆ ಬಿಟ್ಟಿದ್ದು. ಮೂಲತಃ ಆಚಾರ್ಯರೇ ಮಿಥ್ಯಾ ಯಾಹ ಎಂದು ಹೇಳಿದ್ದು ಕಾಲಕ್ರಮೇಣ one word ಆಗಿರಬಹುದಲ್ಲವೆ??

  Vishnudasa Nagendracharya

  ಸತೀಶ ಚಂದ್ರರೇ, ಶ್ರೀಮಟ್ಟೀಕಾಕೃತ್ಪಾದರೇ ಪ್ರಥಮ ಪಕ್ಷದಲ್ಲಿ ಮಿಥ್ಯಾ ಮತ್ತು ಯಾಃ ಎಂದು ವಿಭಾಗ ಮಾಡಿಬಿಟ್ಟಿದ್ದಾರೆ. ಅದರ ಕುರಿತು ವಿವಾದವೇ ಇಲ್ಲ. ದಯವಿಟ್ಟು ತಿಳಿದು ಮಾತನಾಡಿ. ಇದು ನಿಮಗೆ ಮೂರನೆಯ ಬಾರಿ ನೀಡುತ್ತಿರುವ ಎಚ್ಚರ. 
 • ಶ್ರಾವಣ,ಬೆಂಗಳೂರು

  6:43 AM , 15/10/2022

  ಅವರು ಮಾಡಿದರು ನಾನು ಅದನ್ನೇ ಮಾಡೋದು ಈ ಧೋರಣೆ ಯಾರಿಗೂ ಶೋಭೆಯಲ್ಲ.. ಆಚಾರ್ಯರು ಯಾರ ಹೆಸರನ್ನೂ ತೆಗೆದು ಅದೂ ಪಾಯಿಂಟ್ ಮಾಡಿ ಅವರು ಹೀಗೆ ಎಂದು ಹೇಳಿದ್ದೂ ನಾನು ನೋಡಿಲ್ಲ... ಸುಯೋಧನ ಅನ್ನುವ ಶಬ್ದ ಪ್ರಯೋಗ ದುರ್ಯೋಧನನಿಗೆ ಆಚಾರ್ಯರು ಮಾಡಿದ್ದಾರೆ...ನಿಮ್ಮ ರೀತಿ ತೀರ್ಥರಿಗೆ ನೀವು ಶಬ್ದ ಅವರಿಗೇ ಬಳಿಸೊಳ್ಳ ಅಂತ ಲೇಖನ ಬರೆದಿಲ್ಲ..... ಮತ್ತೇ ಆಚಾರ್ಯರು face ಮಾಡಿದ ಸಾಮಾಜಿಕ ತೊಂದರೆಯ ಅಲ್ಪ ಭಾಗವು ನಿಮಗೇ ಆಗಿಲ್ಲ ಬಿಡಿ... ನಿಮ್ಮ ನಿಲವನ್ನು ಅವರನ್ನೂ ತೋರಿಸಿ ಸಮರ್ಥಿಸುವುದು ಆವರಿಗೆ ನಿಮ್ಮಿಂದ ಆಗುವ ಅವಮಾನ ಅಂತ ನನ್ನ ಭಾವನೆ...

  Vishnudasa Nagendracharya

  ಸಮಾಜದ ಮಧ್ಯದಲ್ಲಿ ಮಾತನಾಡುವ ಮುನ್ನ, ಬರೆಯುವ ಮುನ್ನ ನೂರು ಬಾರಿ ಯೋಚಿಸಬೇಕು, ಶ್ರವಣರೇ. 
  
  ಅವರು ಮಾಡಿದರು ನಾನು ಅದನ್ನೇ ಮಾಡೋದು ಈ ಧೋರಣೆ ಯಾರಿಗೂ ಶೋಭೆಯಲ್ಲ ಇದಕ್ಕೆ ಶ್ರೀಮದಾಚಾರ್ಯರ ವಾಕ್ಯಗಳಿಂದಲೇ ಉತ್ತರ ನೀಡುತ್ತೇನೆ, ಓದಿ. 
  
  ಪಾಪಿ ದುರ್ಯೋಧನನ ತಮ್ಮ, ದುಃಶಾಸನ, ಪಾಂಡವರು ದ್ಯೂತದಲ್ಲಿ ಸೋತಾಗ ಭಯಂಕರ ಅವಮಾನ ಮಾಡುತ್ತಾನೆ. ಭೀಮಸೇನದೇವರನ್ನು ಪೌರುಷವಿಲ್ಲದ ಹಸು ಎಂದು ಅಪಹಾಸ ಮಾಡಿ, ಅವರ ನಡೆಯನ್ನು ಅನುಸರಿಸಿ ತೋರಿಸುತ್ತ ಕುಣಿಯುತ್ತಾನೆ. ಗಾಣಕ್ಕೆ ಹಾಕಿ ತಿರುವಿದರೂ ಎಣ್ಣೆ ಸುರಿಸದ ಷಂಡ ಎಳ್ಳುಕಾಳಿನಂತೆ ನೀವು ಪಾಂಡವರು ಎಂದು ಅಪಹಾಸ ಮಾಡುತ್ತಾನೆ. ನೋಡಿ ಆಚಾರ್ಯರ ವಾಕ್ಯ - "
  
   तदा ननर्त पापकृत् सुयोधनानुजो हसन् ।
वदंश्च मारुतात्मजं पुनः पुनश्च गौरिति ॥३८१॥
  
  उवाच च पुनः कृष्णां नृत्यन्नेव सभातळे ।
अपतिर्ह्यसि कल्याणि गच्छ दुर्योधनालयम् ॥३८२॥
  
  एतेऽखिलाः षण्ढतिलास्तमोऽन्धमाप्ता नचैषां पुनरुत्थितिः स्यात् ।
इति ब्रुवाणोऽनुचकार भीमं तदाऽहसन् धार्तराष्ट्राश्च सर्वे ॥३८३॥
  
  ಸುಯೋಧನನ ತಮ್ಮ ದುಃಶಾಸನ, ಭೀಮನನ್ನು ಹಸು ಹಸು ಎಂದು ಮತ್ತೆಮತ್ತೆ ಕರೆಯುತ್ತ ಕುಣಿದ. ದ್ರೌಪದಿಗೆ ಹೇಳಿದ, ನಿನಗೆ ಗಂಡಂದಿರಿಲ್ಲ, ಹೆಂಗಸೇ, ದುರ್ಯೋಧನನ ಮನೆಗೆ ಹೋಗು. ಇವರು ಷಂಢತಿಲಗಳು, (ಗಾಣಕ್ಕೆ ಹಾಕಿ ತಿರುವಿದರೂ ಎಣ್ಣೆ ಬಾರದ ಬೀಜಗಳು ಎಂದರ್ಥ) ಅಂಧಂತಮಸ್ಸಿಗೆ ಬಿದ್ದುಬಿಟ್ಟಿದ್ದಾರೆ, ಪಾಂಡವರು ಎಂದು. 
  
  ಇದಾದ ಹದಿನಾಲ್ಕು ವರ್ಷಗಳ ನಂತರ ಯುದ್ಧವಾಗುತ್ತದೆ. ಆ ಸಂಗ್ರಾಮದಲ್ಲಿ ದುಃಶಾಸನನ ಎದೆ ಬಗೆದು ಕೊಂದು ಭೀಮಸೇನದೇವರು ಹುಲಿಹೆಜ್ಜೆ ಹಾಕಿ ನರ್ತನ ಮಾಡುತ್ತಾರೆ. ಅವನು ಮಾಡಿದ್ದಕ್ಕೆ ನಾನು ತಿರುಗಿ ಮಾಡುತ್ತಿದ್ದೇನೆ ಎನ್ನುತ್ತಾರೆ. ಓದಿ ಆಚಾರ್ಯರ ನಿರ್ಣಯದ ವಾಕ್ಯಗಳನ್ನು
  
  याः सपतयस्ता अपतयो हि जाता यासाऽपतिः सा सपतिश्च जाता ॥१४२॥
पश्यन्तु चित्रां परमस्य शक्तिं ये वै तिलाः षण्ढतिला बभूवुः ।
एनं गृहीतं च मया यदीह कश्चित् पुमान् मोचयतु स्ववीर्यात् ॥१४३॥
  इति ब्रुवाणः पुनरेव रक्तं पपौ सुधां देववरो यथा दिवि ।
पुनश्च सप्राणममुं विसृज्य नदन् ननर्तारिबले निरायुधः ॥१४४॥
  प्रत्यनृत्यन् येऽस्मान् पुनर्गौरिति गौरिति ।
तान् वयं प्रतिनृत्यामः पुनर्गौरिति गौरिति ॥१४५॥
  इति ब्रुवन् नृत्यमानोऽरिमध्य आस्फोटयञ्छत्रुगणानजोहवीत् ।
शशाक च द्रष्टुममुं न कश्चिद् वैकर्तनद्रौणिसुयोधनादिषु ॥१४६॥
  
  ಯಾರಿಗೆ ಗಂಡಂದಿರಿದ್ದಾರೆ ಎಂದು ಇವನು ಬೀಗುತ್ತಿದ್ದನೋ, ಅವರೆಲ್ಲರೂ ಇಂದು ಆ ಗಂಡನನ್ನೇ ಕಳೆದುಕೊಂಡಿದ್ದಾರೆ. ಯಾರಿಗೆ ಗಂಡ ಇಲ್ಲ ಎಂದು ಅಪಹಾಸ ಮಾಡಿದ್ದಾನೋ, ಅವನ ಗಂಡ ನಾನು, ಈ ದಿವಸ ಇವನನ್ನು ನೆಲಕ್ಕೆ ಕೆಡವಿ ಕುಣಿಯುತ್ತಿದ್ದೇನೆ. ನನ್ನ ಶಕ್ತಿ ನೋಡಿ, ನನ್ನನ್ನು ಷಂಡತಿಲ ಎಂದು ಕರೆದವರುನ್ನೇ ಷಂಢತಿಲರನ್ನಾಗಿ ಮಾಡಿದ್ದೇನೆ. 
  
  ನನ್ನನ್ನು ಹಸು ಹಸು ಎಂದು ಕರೆದು ಕುಣಿದೆಯಲ್ಲ, ದುಃಶಾಸನ, ಈ ದಿವಸ ನಿನ್ನನ್ನು ಕೊಲ್ಲುತ್ತ, ನಿನ್ನನ್ನು ನೆಲಕ್ಕೆ ಕೆಡವಿ, ನಿನ್ನ ಕಣ್ಣ ಮುಂದೆಯೇ ಪ್ರತಿನರ್ತನ ಮಾಡುತ್ತಿದ್ದೇನೆ, 
  
  ಹೀಗೆ ಹೇಳುತ್ತೆ ಹುಲಿಹೆಜ್ಜೆಗಳಿಂದ ಭೀಮಸೇನದೇವರು ಭಯಂಕರ ನರ್ತನ ಮಾಡಿದರು. 
  
  ಶ್ರವಣರೇ, ಈಗ ಭೀಮಸೇನದೇವರಿಗೂ ಹೇಳುತ್ತೀರೇನು, ದುಃಶಾಸನ ಮಾಡಿದ ಎಂದು ನೀನು ಮಾಡಿದ್ದೂ ತಪ್ಪು ಅಂತ. 
  
  ನಿಕೃತ್ಯಾ ನಿಕೃತಿಂ ಹನ್ಯಾತ್, ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು, ಶಠಂ ಪ್ರತಿ ಶಾಠ್ಯಂ, ಅಹಂಕಾರದ ವ್ಯಕ್ತಿಗಳಿಗೆ ಅಭಿಮಾನದಿಂದಲೇ ಉತ್ತರಿಸಬೇಕು. 
  
  ಇದು ಕೇವಲ ಪ್ರಾಚೀನ ಕಾಲದ ಪದ್ಧತಿಯಲ್ಲ, ಪಾಕೀಸ್ತಾನ ಯಾವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುತ್ತೋ ಆ ಭಾಷೆಯಲ್ಲಿಯೇ ಉತ್ತರಿಸಬೇಕು ಎಂದು ಗಂಡೆದೆಯಿಂದ ಹೇಳಿದ ಮೋದಿಗೆ ಎರಡು ಬಾರಿ ಪ್ರಧಾನಿ ಸ್ಥಾನ ಕೊಟ್ಟ ನಾಡಿದು. ಶ್ರವಣರೇ. 
  
  ಹಾಗೆಯೇ ಯಾವ ಭಾಷೆಯಲ್ಲಿ ಹೇಳಿದರೆ ಉತ್ತರಾದಿಮಠ ಅರ್ಥ ಮಾಡಿಕೊಳ್ಳುತ್ತದೆಯೋ ಅದೇ ಭಾಷೆಯಲ್ಲಿಯೇ ಉತ್ತರ ನೀಡಬೇಕು. 
  
  ಅವರ ಭಾಷೆ ಏನು ಎಂದು ಕೇಳುತ್ತೀರ? ಒಂದು ಉದಾಹರಣೆ ನೀಡುತ್ತೇನೆ ನೋಡಿ -
  
  ಉತ್ತರಾದಿಮಠದ ಪರಮನೀಚಕೃತಿ, ಕಥಾಕಲ್ಪತರುವಿನ ವಾಕ್ಯ
  
  ತತ್ರ ಕಂಬಾಲೂರರಾಮಚಂದ್ರತೀರ್ಥಾ ಮದೋದ್ಧತಾಃ
  ತೇಷಾಂ ದರ್ಪೋಪಹಂತವ್ಯಃ ಕೃಷ್ಣದ್ವೈಪಾಯನೇಷ್ವಥ
  
  ಅಲ್ಲಿ ಕಂಬಾಲೂರು ರಾಮಚಂದ್ರತೀರ್ಥರು ಮದೋದ್ಧತರಾಗಿದ್ದಾರೆ, ಅವರ ದರ್ಪವನ್ನು ಕತ್ತರಿಸಬೇಕು. ಇದು ಯಾರು ಯಾರಿಗೆ ಹೇಳಿದ್ದು ಗೊತ್ತೇನು, ವಿದ್ಯಾಧೀಶರು ತಮ್ಮ ಶಿಷ್ಯರಾದ ವೇದನಿಧಿತೀರ್ಥರಿಗೆ ಬರೆದ ಗೌಪ್ಯರಾಯಸದ ಒಕ್ಕಣೆ. 
  
  ಉತ್ತರಾದಿಮಠದ ಮತ್ತೊಂದು ಪರಮನೀಚಕೃತಿ ಗುರುಚರ್ಯಾದಲ್ಲಿಯೂ ಈ ನೀಚ ಭಾಷೆಯ ವಿಷಯ ಬಂದಿದೆ. 
  
  ಕರ್ಣಾಟೇ ಕಿಲ ಭಿಕ್ಷುಕಃ। ಕಂಬಾಲೂರಪದೋ ರಾಮಚಂದ್ರತೀರ್ಥಸ್ತ್ವನೇಕಧಾ। 
  ದುರ್ಮಾರ್ಗಂ ಸಂಚರಂತ್ಯದ್ಧಾ ತದ್ದರ್ಪಶಮನಂ ಕುರು।
  
  ಕರ್ನಾಟಕದಲ್ಲಿ ಕಂಬಾಲೂರು ರಾಮಚಂದ್ರತೀರ್ಥರು ಅನೇಕ ರೀತಿಯಲ್ಲಿ ದುರ್ಮಾರ್ಗ ನಡೆಸುತ್ತಿದ್ದಾರೆ. ಅವರ ದರ್ಪಶಮನ ಮಾಡು. 
  
  ಇದನ್ನು ನಿಮ್ಮ ಸತ್ಯಾತ್ಮರೂ ತಮ್ಮ ಉಪನ್ಯಾಸದಲ್ಲಿ ಹೇಳಿದ್ದಾರೆ. 
  
  ಈಗ ಹೇಳಿ, ಶ್ರೀಮದ್ ರಾಮಂಚದ್ರತೀರ್ಥಗುರುಸಾರ್ವಭೌಮರನ್ನು ಈ ಪರಿ ಅವಮಾನ ಮಾಡಿದ ಉತ್ತರಾದಿಮಠಕ್ಕೆ ಯಾವ ರೀತಿ ಉತ್ತರ ನೀಡಬೇಕು ಎಂದು. ಇದರ ಕುರಿತು ನಾನಿನ್ನೂ ಉತ್ತರ ನೀಡಿಲ್ಲ. ನೀಡುತ್ತೇನೆ. ಇತಿಹಾಸದಲ್ಲಿ ಉತ್ತರಾದಿಮಠ ಎಂದೆಂದಿಗೂ ಮರೆಯದಂತೆ ಉತ್ತರ ನೀಡಿ ದಾಖಲಿಸುತ್ತೇನೆ. ಕಾಯುತ್ತಿರಿ. 
  
  ನಿಮ್ಮ ಮೊದಲ ವಾಕ್ಕಕ್ಕೆ ಉತ್ತರ ನೀಡಿದ್ದೇನೆ. ಉಳಿದ ಒಂದೊಂದು ವಾಕ್ಯಕ್ಕೂ ಉತ್ತರ ನೀಡುತ್ತೇನೆ. ಮಕ್ಕಳಿಗೆ ಪಾಠ ಮುಗಿಸಿ ಬರುತ್ತೇನೆ. ನೀವು ಇದನ್ನು ಓದಿ ಜೀರ್ಣಿಸಿಕೊಳ್ಳಿ. ಅವರು ಮಾಡಿದರು ನಾನು ಅದನ್ನೇ ಮಾಡೋದು ಈ ಧೋರಣೆ ಯಾರಿಗೂ ಶೋಭೆಯಲ್ಲ 
   ಎಂದಿರಲ್ಲ, ಭೀಮಸೇನದೇವರು ಮಾಡಿದ್ದಾರೆ, ಶ್ರೀಮದಾಚಾರ್ಯರು ನಿರ್ಣಯಿಸಿದ್ದಾರೆ. ಅವರಿಗೆ ಹೇಗೆ ಉತ್ತರ ನೀಡಬೇಕು ಆಲೋಚಿಸುತ್ತಿರಿ. 
  
  ಶ್ರಾವಣರೇ, ನಿಮ್ಮ ಮುಂದಿನ ಆಕ್ಷೇಪ 
  
  ಆಚಾರ್ಯರು ಯಾರ ಹೆಸರನ್ನೂ ತೆಗೆದು ಅದೂ ಪಾಯಿಂಟ್ ಮಾಡಿ ಅವರು ಹೀಗೆ ಎಂದು ಹೇಳಿದ್ದೂ ನಾನು ನೋಡಿಲ್ಲ... ಸುಯೋಧನ ಅನ್ನುವ ಶಬ್ದ ಪ್ರಯೋಗ ದುರ್ಯೋಧನನಿಗೆ ಆಚಾರ್ಯರು ಮಾಡಿದ್ದಾರೆ...ನಿಮ್ಮ ರೀತಿ ತೀರ್ಥರಿಗೆ ನೀವು ಶಬ್ದ ಅವರಿಗೇ ಬಳಿಸೊಳ್ಳ ಅಂತ ಲೇಖನ ಬರೆದಿಲ್ಲ..... 
  
  ಎಲ್ಲವನ್ನೂ ಶ್ರೀಮದಾಚಾರ್ಯರೇ ನಮಗೆ ತೋರಬೇಕಾಗಿಲ್ಲ. ನಮ್ಮ ಪರಂಪರೆಯಲ್ಲಿ ಶ್ರೀಮಟ್ಟೀಕಾಕೃತ್ಪಾದರು, ಶ್ರೀ ಪಂಡಿತಾಚಾರ್ಯರು, ಶ್ರೀ ಚಂದ್ರಿಕಾಚಾರ್ಯರು, ಶ್ರೀ ಭಾವಿಸಮೀರರು, ಶ್ರೀ ಮಂತ್ರಾಲಯಪ್ರಭುಗಳು, ದಾಸವರೇಣ್ಯರು ಮುಂತಾದ ಸಕಲ ಮಹಾನುಭಾವರು ತೋರಿದ ಮಾರ್ಗವೂ ನಮಗೆ ಅನುಸರಣೀಯ, ಶ್ರಾವಣರೆ. 
  
  ಶ್ರೀಮಟ್ಟೀಕಾಕೃತ್ಪಾದರು ಆಚಾರ್ಯರ ಗೀತಾಭಾಷ್ಯಕ್ಕೆ ವ್ಯಾಖ್ಯಾನ ಮಾಡುವಾಗ, ಶಂಕರಾಚಾರ್ಯ-ಭಾಸ್ಕರಾಚಾರ್ಯ ಮುಂತಾದವರನ್ನು ಹೆಸರು ಹಿಡಿದು ಉಲ್ಲೇಖಿಸಿ ಖಂಡನೆ ಮಾಡಿದ್ದಾರೆ. ಅಂಧಾನುಗತಾಂಧ ಇವ, ಕುರುಡನನ್ನು ಅನುಸರಿಸಿದ ಕುರುಡ ಇತ್ಯಾದಿಯಾಗಿ ಪರಿಸ್ಪಷ್ಟವಾಗಿ ಖಂಡನೆ ಮಾಡಿದ್ದಾರೆ. ಅದು ನಿಮಗೆ ತಿಳಿದಿಲ್ಲ, ಹೀಗಾಗಿ ನಿಮ್ಮ ಮೂಗಿನ ನೇರಕ್ಕೆ ನೀವು ಮಾತನಾಡುತ್ತಿದ್ದೀರಿ. ಖಂಡನೆಯ ಕುರಿತಾಗಿ ತಿಳಯಿಬೇಕಾದ ವಿಷಯಗಳು ಹಿಮಾಲಯಕ್ಕಿಂತ ಎತ್ತರ ಇವೆ, ಸಮುದ್ರಕ್ಕಿಂತ ಗಂಭೀರ ಇವೆ. 
  
  ಇನ್ನು ದುರ್ಯೋಧನ, ಸುಯೋಧನ ಎಂಬ ಪ್ರಯೋಗಗಳ ಕುರಿತ ನಿಮ್ಮ ಭ್ರಾಂತಿಗೆ ಉತ್ತರ. 
  
  ಸುಜನ, ದುರ್ಜನ ಎಂಬಲ್ಲಿ ಸು ಮತ್ತು ದುರ್ ಗಳಿಗೆ ಒಳ್ಳೆಯದು ಕೆಟ್ಟದು ಎಂದು ಅರ್ಥವಿದೆ. ಆ ಅರ್ಥದಲ್ಲಿ ಆಚಾರ್ಯರು ಸುಯೋಧನ, ದುರ್ಯೋಧನ ಶಬ್ದಗಳನ್ನು ಬಳಸಿಲ್ಲ ಶ್ರಾವಣರೆ, ಸುಖವಾಗಿ ದೊರೆಯುವದು ಸುಲಭ ಮತ್ತು ಕಷ್ಟದಿಂದ ದೊರೆಯುವದು ದುರ್ಲಭ ಎನ್ನುವಲ್ಲಿ ಸು ಮತ್ತು ದುರ್ ಗಳಿಗೆ ಅರ್ಥವಿದೆಯಲ್ಲ, ಸುಖವಾಗಿ ಮತ್ತು ಕಷ್ಟದಿಂದ ಎಂದು ಆ ಅರ್ಥದಲ್ಲಿ ಬಳಸಿದ್ದಾರೆ. 
  
  ದುರ್ಯೋಧನ ಎಂದರೆ ಮತ್ತೊಬ್ಬರಿಗೆ ಅವನೊಡನೆ ಯುದ್ಧ ಮಾಡುವದು ಕಷ್ಟ ಎಂದರ್ಥ. ಪರೈಃ ದುಃಖೇನ ಯುದ್ಧ್ಯತೇ ಇತಿ ದುರ್ಯೋಧನಃ। 
  
  ಸುಯೋಧನ ಎಂದರೆ ತಾನು ಸುಖವಾಗಿ ಆರಾಮಾಗಿ ಯುದ್ಧ ಮಾಡುವವನು ಎಂದರ್ಥ. ಸುಖೇನ ಯುದ್ಧ್ಯತೇ ಸ್ವಯಮಿತಿ ಸುಯೋಧನಃ। 
  
  ಹೀಗೆ ಸುಖವಾಗಿ ಯುದ್ಧ ಮಾಡುತ್ತಾನೆ ಆದ್ದರಿಂದ ಸುಯೋಧನ, ಮತ್ತೊಬ್ಬರು ಇವನೊಂದಿಗೆ ಯುದ್ಧ ಮಾಡಲು ಹೆಣಗಾಡಬೇಕು ಅದಕ್ಕಾಗಿ ದುರ್ಯೋಧನ ಎಂದು 
  
  ಅಷ್ಟೇ ಅಲ್ಲ, ಅನೇಕ ಕಡೆ ಈ ಸುಯೋಧನ ಶಬ್ಗವನ್ನು ಆಚಾರ್ಯರು ಮತ್ತು ಮಹಾಭಾರತ ಅಪಹಾಸಕ್ಕಾಗಿಯೂ ಬಳಸಿದ್ದಾರೆ. 
  
  ಮತ್ತೆ ಕಡೆಯಲ್ಲಿ ಶ್ರೀಮದಾಚಾರ್ಯರಿಗೆ ತೊಂದರೆ ಉಂಟಾದಷ್ಟು ನನಗೆ ತೊಂದರೆ ಆಗಿಲ್ಲ ಎಂದು ವ್ಯಥೆ ವ್ಯಕ್ತಪಡಿಸಿದ್ದೀರಿ. ಪಾಪ. ಉತ್ತರಿಸುತ್ತೇನೆ. ಈ ಉತ್ತರಗಳನ್ನು ಜೀರ್ಣಿಸಿಕೊಳ್ಳಿ. 
 • Abhijit,Mumbai

  8:50 AM , 16/10/2022

  .mnv.
 • ಶ್ರಾವಣ,ಬೆಂಗಳೂರು

  7:38 PM , 14/10/2022

  ನಿಮ್ಮ ಸ್ಪಷ್ಟನೆಗೆ ನಮನಗಳು. ಆದರೂ ಮಠದ ಕೆಲವು ಪಾಖಂಡಿಗಳು ಅನ್ನುವ ಶಬ್ದ ಪ್ರಯೋಗ ಸಾಧು ಆಗ್ತಾ ಇತ್ತೆ ವಿನಹ ಈ ತರಹ ಶಬ್ದ ಪ್ರಯೋಗಗಳು ನಮ್ಮಲ್ಲಿ ವೈಮನಸ್ಯ ತರುತ್ತದೆ.. ಈ ಶಬ್ದ ಪ್ರಯೋಗಗಳು ಕೆಲವರಿಗೆ ಆನಂದ ತರುತ್ತೋ ಏನೋ ಗೊತ್ತಿಲ್ಲಾ...

  Vishnudasa Nagendracharya

  ನೋಡಿ ಇಲ್ಲಿ, ನೇರವಾಗಿ ಉತ್ತರಾದಿಮಠದೊಂದಿಗೆ ವಾಗ್ಯುದ್ಧ ನಡೆದಿದೆ. 
  
  ಖಂಡನೆ ಮಾಡುತ್ತಿರುವದು ಉತ್ತರಾದಿಮಠದ ಪಾಖಂಡಿಗಳನ್ನು. ಇತರರ ಕುರಿತು ಇಲ್ಲಿ ಪ್ರಸಕ್ತಿ ಇಲ್ಲ. ಪ್ರಸಕ್ತಿ ತರುವ ಆವಶ್ಯಕೆತಯೂ ಇಲ್ಲ. 
  
  ಮೊದಲೇ ತಿಳಿಸಿದಂತೆ ವೈಷ್ಣವರಲ್ಲಿಯೇ ವಿಷ್ಣುಪಾಖಂಡಿಗಳಿದ್ದಾರೆ, ಎಂದು ಶಾಸ್ತ್ರವೇ ನಿರೂಪಿಸಿದಾಗ, ಮಹಾಭಾರತದಲ್ಲಿ ಶಲ್ಯಮಹಾರಾಜರು ಉತ್ತಮ ಮಧ್ಯಮ ಅಧಮ ಜನರು ಎಲ್ಲರಲ್ಲಿಯೂ ಇದ್ದಾರೆ ಎಂದು ಹೇಳಿರುವಾಗ, ಭಯೋತ್ಪಾದಕ ಮುಸಲ್ಮಾನರನ್ನು ಖಂಡಿಸುವ ನಾವೇ ಕಲಾಂರಂತಹ ಸಜ್ಜನರನ್ನು ಮನಃಪೂರ್ವಕವಾಗಿ ಗೌರವಿಸುವಾಗ, (ಸಾಮಾನ್ಯವಾಗಿ ಯಾರ ಜೊತೆಯಲ್ಲಿಯೂ ಕುರ್ಚಿ ಹಂಚಿಕೊಳ್ಳದ ಸತ್ಯಾತ್ಮರೇ, ಶ್ರೀ ಕಲಾಂರೊಂದಿಗೆ ಸಮಾನ ಕುರ್ಚಿ ಹಂಚಿಕೊಂಡಿದ್ದಾರೆ, ಪಾಖಂಡಿಗಳು ಇದರ ಕುರಿತು ವಾದ ಮಾಡುವದು ಬೇಡ) ಉತ್ತರಾದಿಮಠದಲ್ಲಿಯೂ ಸಜ್ಜನರು, ಮಧ್ಯಮರು ಮತ್ತು ಪಾಖಂಡಿಗಳಿದ್ದಾರೆ ಎನ್ನುವದು ನಿರ್ಣೀತವಾಗುವ ವಿಷಯವಾಗುತ್ತದೆ. 
  
  ಮತ್ತು ನಾನು ಖಂಡಿಸುತ್ತಿರುವದೂ ಸಹ ಸತ್ಯಾತ್ಮರ ಈ ಮಿಥ್ಯಾಯಾಃ ಕುರಿತ ಮಾತನ್ನಷ್ಟೇ ಹೊರತು, ಅವರ ಮಾತನ್ನೆಲ್ಲ ಖಂಡಿಸುತ್ತಿಲ್ಲ. 
  
  ನನ್ನ ಅಂತರ್ಯಾಮಿಯ ಸಾಕ್ಷಿಯಾಗಿ ಹೇಳುತ್ತೇನೆ, ಅವರು ಮಾಡುತ್ತಿರುವ ಸತ್ಕಾರ್ಯಗಳಿಗೆ, ಅವರ ಸದ್ವಿಚಾರಗಳಿಗೆ ನನ್ನ ಪರಿಪೂರ್ಣ ಗೌರವ ಸಲ್ಲುತ್ತವೆ. 
  
  ಈಗ ಮಿಥ್ಯಾಯಾಃ ಕುರಿತ ಚರ್ಚೆ. ಇದು ನೇರವಾಗಿ ಉತ್ತರಾದಿಮಠದ ಸತ್ಯಾತ್ಮರೊಂದಿಗೆ ಇದ್ದದ್ದು. ಆರಂಭದಲ್ಲಿ ನಾನು ಪರಿಪೂರ್ಣ ಗೌರವದಿಂದಲೇ ಅದನ್ನು ವಿಮರ್ಶಿಸಿದ್ದೇನೆ. ಸತ್ಯಾತ್ಮರು ಲೇಖನ, ಉಪನ್ಯಾಸಗಳ ರೂಪದಲ್ಲಿ ವಿದ್ವಾಂಸರಿಗೆ ಶೋಭೆ ತರುವಂತೆ ಉತ್ತರಿಸಿದ್ದರೆ, ಅವರು ಅವರ ಮಠದ ಪಂಡಿತರು ನನ್ನ ಈ ವಾಗ್ದಾಳಿಯನ್ನು ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. 
  
  ಸತ್ಯಾತ್ಮರ ನೀಚ ಪಾಖಂಡಿ ಶಿಷ್ಯರ, ನೀಚಭಾಷೆಯ ನೀಚಲೇಖನಗಳನ್ನು ನೀಚಬೈಗುಳಗಳನ್ನು ಇಡಿಯ ಸಮಾಜ ಕಾಣುತ್ತಿದೆ. ಹೀಗಾಗಿ ಆ ಪಾಖಂಡಿಗಳನ್ನು ಹೇಗೆ ಖಂಡಿಸಬೇಕೋ ಹಾಗೆಯೇ ಖಂಡಿಸುತ್ತಿದ್ದೇನೆ. 
  
  ಶ್ರೀ ಗಣಾಚಾರಿ ರಂಗಾಚಾರ್ಯರು, ಶ್ರೀ ಚಂದಿ ರಘುವಿರಾಚಾರ್ಯರು, ಇವರೆಲ್ಲರ ಕುರಿತು ಗೌರವಪೂರ್ವಕ ವಾದ ಆದರೆ ತೀಕ್ಷ್ಣ ವಿಮರ್ಶೆಯೇ ಬರುತ್ತಿದೆ. 
  
  ಶ್ರೀಮದಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ಭಾವಿಸಮೀರರು ಪಾಖಂಡಿಗಳಿಗೆ ಹೇಗೆ ಉತ್ತರಿಸಿದ್ದಾರೆಯೋ ಅವರ ಚರಣಾನುಗ್ರಹದಿಂದ ಅದೇ ಕ್ರಮವನ್ನು ಅನುಸಿರಿಸಿ ಉತ್ತರಾದಿಮಠದ ಪಾಖಂಡಿಗಳಿಗೆ ಉತ್ತರಿಸುತ್ತೇನೆ. 
  
  ಶ್ರೀಮದಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ಭಾವಿಸಮೀರರು ವಾದಗಳಿಗೆ ಹೇಗೆ ಉತ್ತರಿಸಿದ್ದಾರೆಯೋ ಅವರ ಚರಣಾನುಗ್ರಹದಿಂದ ಅದೇ ಕ್ರಮವನ್ನು ಅನುಸರಿಸಿ ಉತ್ತರಾದಿಮಠದ ಪಂಡಿತರಿಗೆ ಉತ್ತರಿಸುತ್ತೇನೆ.
  
  ಆಚಾರ್ಯರು ಪರಮತವನ್ನು ಅನುಸರಿಸುತ್ತಿದ್ದ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಎಷ್ಟು ಪ್ರೀತಿ ವಾತ್ಸಲ್ಯದಿಂದ ಕಂಡರೋ, ಹಾಗೆಯೇ ಉತ್ತರಾದಿಮಠದಲ್ಲಿರುವ ಹಿರಿಯ ಸಜ್ಜನರನ್ನು ಗೌರವದಿಂದ, ಕಿರಿಯ ಸಜ್ಜನರನ್ನು ಪ್ರೀತಿಯಿಂದಲೇ ಕಾಣುತ್ತೇನೆ. ಇವತ್ತಿಗೂ ಸಹ ಉತ್ತರಾದಿಮಠದ ಸಜ್ಜನರು ನನ್ನನ್ನು ಗೌರವದಿಂದಲೇ ಕಾಣುತ್ತಾರೆ, ನನ್ನ ಮನೆಗೆ ಬಂದು ಆತಿಥ್ಯವನ್ನೂ ಸ್ವೀಕರಿಸುತ್ತಾರೆ, ತುಂಬ ಪ್ರೀತಿಯಿಂದ ಕಾಣುತ್ತಾರೆ. 
  
  ನನ್ನ ಮಾರ್ಗ, ನಿಲುವು ನನಗೆ ಸ್ಪಷ್ಟವಿದೆ. 
  
  ಮತ್ತು "ಈ ತರಹ ಶಬ್ದ ಪ್ರಯೋಗಗಳು ನಮ್ಮಲ್ಲಿ ವೈಮನಸ್ಯ ತರುತ್ತದೆ" ಎಂಬ ನಿಮ್ಮ ಮಾತಿಗೆ ಉತ್ತರ -
  
  ಶ್ರೀಮಚ್ಚಂದ್ರಿಕಾಚಾರ್ಯರ ವಿದ್ಯೆಯನ್ನು ಸೂಳೆಯ ವಿದ್ಯೆಗೆ ಉತ್ತರಾದಿಮಠದ ಪಾಖಂಡಿಗಳು ಹೋಲಿಸಿ ಗ್ರಂಥ ಬರೆದಾಗ ವೈಮನಸ್ಯದ ಅರಿವು ಅವರಿಗಿರಲಿಲ್ಲವೇ?
  
  ಶ್ರೀಮಚ್ಚಂದ್ರಿಕಾಚಾರ್ಯರ ಶಿಷ್ಯರ ಕುರಿತು ಅಪಹಾಸದ ನಗು ಸತ್ಯಾತ್ಮರ ಮುಖದಲ್ಲಿ ಮೂಡಿದಾಗ ಸರ್ವಜ್ಞರಾದ ಅವರಿಗೆ ವೈಮನಸ್ಯದ ಅರಿವು ಇರಲಿಲ್ಲವೇ?
  
  ಶ್ರೀ ವಿಬುಧೇಂದ್ರತೀರ್ಥ ಗುರುಸಾರ್ವಭೌಮರ ಕುರಿತ ಕಥೆಯನ್ನು ತಮಗೆ ಬೇಕಾದ ಹಾಗೆ ತಿರುಚಿ, ಅವಮಾನಕರವಾಗಿ ಚಿತ್ರಿಸುವಾಗ ಸತ್ಯಾತ್ಮರಿಗೆ ವೈಮನಸ್ಯದ ಅರಿವು ಇರಲಿಲ್ಲವೇ?
  
  ಯಾರ ಹೆಸರು ಹೇಳಿದರೆ ನೂರಾರು ಜನ್ಮದ ಪಾಪ ಪರಿಹಾರವಾಗುತ್ತದೆಯೋ, ಅಂತದ ಭಾಗವತೋತ್ತಮರಾದ ಶ್ರೀಮದ್ ವಿಜಯಧ್ವಜತೀರ್ಥ ಗುರುಸಾರ್ವಭೌಮರು, ವಿಜಯನಗರದ ಬೀದಿಯಲ್ಲಿ ಮೂರು ಕಲ್ಲಿಟ್ಟುಕೊಂಡು ಅನ್ನ ಬೇಯಿಸಿಕೊಳ್ಳುತ್ತಿದ್ದರು ಎಂಬ ಹಸಿಹಸಿ ಸುಳ್ಳನ್ನು ಉತ್ತರಾದಿಮಠದ ಪಾಖಂಡಿ ಗ್ರಂಥಗಳು ಬರೆದುಕೊಂಡಾಗ ವೈಮನಸ್ಯದ ಅರಿವು ಇರಲಿಲ್ಲವೇ?
  
  ಇದು ಹೇಗಿದೆ ಎಂದರೆ, ಮುಸಲ್ಮಾನರು ಬಾಂಬ್ ದಾಳಿ ನಡೆಸಿದಾಗ ಹಿಂದೂಗಳಿಗೆ ವೈಮನಸ್ಯ ಬರಬಾರದು, ಹಿಂದೂಗಳು ತಮ್ಮ ದೇವತೆಗಳ ಉತ್ಸವ ಜಾತ್ರೆಗಳಲ್ಲಿ, ಎಂಜಲುಗುಳಿ ಹಾಲು ಹಣ್ಣು ಹೂ ಮಾರುವ ಮುಸಲ್ಮಾನರಿಗೆ ಅವಕಾಶ ನೀಡುವದು ಬೇಡ ಎಂದಾಗ,  ಮುಸಲ್ಮಾನರಲ್ಲಿ ವೈಮನಸ್ಯ ಉಂಟಾಗುತ್ತದೆ, ಕೋಮು ಸೌಹಾರ್ದ ಹಾಳಾಗುತ್ತದೆ ಎಂದು ರಾಜಕಾರಣಿಗಳು ಸಮಾಜಕ್ಕೆ ಉಪದೇಶ ಮಾಡಿದಂತಿದೆ. 
  
  ಇಲ್ಲಿನ ಶಬ್ದಪ್ರಯೋಗಳು ಆನಂದಕ್ಕಾಗಿ ಮೂಡಿಬಂದಿರುವದಲ್ಲ. ಮಹಾನುಭಾವರ ಕುರಿತು ಉತ್ತರಾದಿಮಠದ ಪಾಖಂಡಿಗಳು ಮಾಡಿರುವ ಅವಹೇಳನಗಳನ್ನು ಓದಿ ಕೇಳಿ ನೋಡಿ, ಹೃದಯದಲ್ಲಿ ಮಡುಗಟ್ಟಿ ನಿಂತ ನೋವು ಶಬ್ದಗಳಾಗಿ ಮೂಡಿ ಬರುತ್ತಿವೆ. 
  
 • ಶ್ರಾವಣ,ಬೆಂಗಳೂರು

  7:05 PM , 14/10/2022

  ನಮ್ಮಲ್ಲೂ ತಪ್ಪು ಮಾಡುವವರು ಇದ್ದಾರೆ.. ಆದರೇ ಒಂದು ಮಠದ ಹೆಸರು ಹಿಡಿದು ಬೈದರೆ ಎಲ್ಲರಿಗೂ ಬರುತ್ತೆ ಅಲ್ಲವೇ... ನಿಮ್ಮ ಪ್ರಕಾರ ಎಲ್ಲಾ ಉತ್ತರಾದಿ ಮಠದ ಪಂಡಿತರು ಪಾಖಂಡಿಗಳೆ?.. ಆಚಾರ್ಯರಎ ನಿಮ್ಮ ಈ ಧೋರಣೆಗೆ ಧಿಕ್ಕಾರವಿರಲಿ ನನ್ನಿಂದ...

  Vishnudasa Nagendracharya

  ಹೇಳಿರುವ ಶಬ್ದಗಳನ್ನು ಸರಿಯಾಗಿ ಗ್ರಹಿಸಿ. ಚಂದಿ ರಘುವೀರಾಚಾರ್ಯರಂತೆ ನಾನು ಹೇಳದೇ ಇರುವದನ್ನು ಕಲ್ಪಿಸಿಕೊಂಡು ಪ್ರಶ್ನಿಸಬೇಡಿ. 
  
  ಉತ್ತರಾದಿಮಠದ ಎಲ್ಲ ಪಂಡಿತರೂ ಪಾಖಂಡಿಗಳು ಎಂದು ಎಲ್ಲಿಯೂ ಹೇಳಿಲ್ಲ, ಹೇಳುವದೂ ಇಲ್ಲ. ಕಾರಣ ಅಲ್ಲಿರುವ ಸಜ್ಜನರ ಕುರಿತು ನನಗೆ ಅತ್ಯಂತ ಪ್ರೀತಿಯ ಒಡನಾಟವಿದೆ. 
  
  ಉತ್ತರಾದಿಮಠದ ಪಾಖಂಡಿಗಳನ್ನು ನಾನು ಖಂಡಿಸುತ್ತಿರುವದು. 
  
  ರುದ್ರದೇವರು, ಸುಬ್ರಹ್ಮಣ್ಯರು ಮುಂತಾದವರನ್ನು ಆರಾಧಿಸದ ಪಾಖಂಡಿಗಳು ವೈಷ್ಣವರಲ್ಲಿಯೂ ಇದ್ದಾರೆ. ಅವರನ್ನು ವಿಷ್ಣುಪಾಖಂಡಿಗಳು ಎಂದು ಕರೆಯುತ್ತಾರೆ. ಅವರನ್ನು ಖಂಡಿಸಿದರೆ ವೈಷ್ಣವರನ್ನು ಖಂಡಿಸದಂತಾಗುತ್ತದೆಯೇನು?
  
  ಹಾಗೆಯೇ ಎಲ್ಲೆಡೆ ಇರುವಂತೆ ಉತ್ತರಾದಿಮಠದಲ್ಲಿ ಪಾಖಂಡಿಗಳೂ ಇದ್ದಾರೆ, ಸಜ್ಜನರೂ ಇದ್ದಾರೆ. ಮಧ್ಯಮರೂ ಇದ್ದಾರೆ.
  
  ಇದು ಉತ್ತರಾದಿಮಠದ ಪಾಖಂಡಿಗಳನ್ನು ಉಲ್ಲೇಖಿಸಿ ನಿರಾಕರಿಸುವ ಪ್ರಸಂಗ. ಹೀಗಾಗಿ ಅವರ ಉಲ್ಲೇಖ ಬರುತ್ತಿದೆ. 
  
  2014 ರ ದೀಪಾವಳಿಯ ನಂತರ ಪ್ರಕಟವಾದರೂ, 2013 ರಲ್ಲಿಯೇ ಪ್ರಕಟವಾಯಿತು ಎಂದು ಕಾಮೆಂಟುಗಳಲ್ಲಿ, ಲೇಖನಗಳಲ್ಲಿ ವಾದಿಸಿದ, ಆ ನಂತರ ಆ ತಪ್ಪನ್ನು ಒಪ್ಪದೇ ವೆಬ್ಸೈಟಿನವರ ಮೇಲೆ ಹಾಕಿ ಜಾರಿಕೊಂಡವರು ಇಲ್ಲಿ ಉಲ್ಲೇಖಿಸಲ್ಟಟ್ಟ ಪಾಖಂಡಿಗಳು. 
  
 • Vijaykrishna V,Hubballi

  6:53 PM , 14/10/2022

  Sri Vyasarayara bagge, Raghuttamara bagge, aurangazeb Jayateertha gurusarvabhoumara bagge iruva pravachana Elli sigtave anta nanna prashne gurugale..

  Vishnudasa Nagendracharya

  ವಿಶ್ವನಂದಿನಿಯ "ಚರ್ಚಾಸುರಭಿ" ಯ ಲೇಖನ ಉಪನ್ಯಾಸಗಳ ವಿಭಾಗಗಳನ್ನು ಗಮನಿಸಿ. 
 • Vaishnavi,Raichur

  6:55 PM , 14/10/2022

  ಸುಳ್ಳೇ ನಮ್ಮನೆ *ದೇವರು*
 • Padmanabha,Bangalore

  6:44 PM , 14/10/2022

  Common people are misusing your valuable thoughts sacred things should be maintained in global way
 • Vijaykrishna V,Hubballi

  6:39 PM , 14/10/2022

  Gurugale ee khandanegalella elli sigbahudu? link enadru sigbahuda?

  Vishnudasa Nagendracharya

  ಎಲ್ಲವೂ ವಿಶ್ವನಂದಿನಿಯ "ಉತ್ತರಾದಿಮಠದ ವಿಮರ್ಶೆ" ಎಂಬ ವಿಭಾಗದಲ್ಲಿಯೇ (ಇಲ್ಲಿಯೇ) ಉಪಲಬ್ಧ ಇವೆ. 
  
  ಇದರ ಮುಂದಿನ ಉಪನ್ಯಾಸಗಳೂ ಸಹ ಇಲ್ಲಿಯೇ ಪ್ರಕಟವಾಗುತ್ತವೆ.