Prashnottara - VNP265

ಶ್ರೀ ರಂಗಾಚಾರ್ಯರ ಪರಮ ಬಾಲಿಶ ಲೇಖನ


					 	

“ಮಿಥ್ಯಾಯಾಃ” ಎನ್ನುವಲ್ಲಿ ಇರುವದು ಶಬ್ದಸಾಧುತ್ವಸಮರ್ಥನೆಯಲ್ಲವಂತೆ, ವಾಕ್ಯಸಾಧುತ್ವಸಮರ್ಥನೆಯಂತೆ ಎಂಬ ಶ್ರೀ ಗಣಾಚಾರಿ ರಂಗಾಚಾರ್ಯರ ಪರಮ ಬಾಲಿಶ ವಾದದ ಖಂಡನೆ. ಶ್ರೀ ಗಣಚಾರಿ ರಂಗಾಚಾರ್ಯರ ಲೇಖನದ ಎರಡನೆಯ ಖಂಡನೆ 01:52 ಶಬ್ದಪ್ರಯೋಗಸಾಧುತ್ವಸಮರ್ಥನೆಯಲ್ಲವಂತೆ, ವಾಕ್ಯಪ್ರಯೋಗಸಾಧುತ್ವಸಮರ್ಥನೆಯಂತೆ 04:09 “ಶಬ್ದಸಾಧುತ್ವಸಮರ್ಥಕ ಪದಗಳಿಲ್ಲ ಆದ್ದರಿಂದ ಇದು ವಾಕ್ಯಸಾಧುತ್ವಸಮರ್ಥಕವಲ್ಲ” ರಂಗಾಚಾರ್ಯರ ದಿವ್ಯ ನುಡಿಗಳು! 09:43 ಇದು ಸತ್ಯಾತ್ಮರ ಅಭಿಪ್ರಾಯವಂತೆ! ಸತ್ಯಾತ್ಮರು ಒಪ್ಪಲಿ ನೋಡೋಣ! 11:18 “ಶಬ್ದಸಾಧುತ್ವಸಮರ್ಥನೆ”,“ವಾಕ್ಯಸಾಧುತ್ವಸಮರ್ಥನೆ” ಗಳ ವ್ಯತ್ಯಾಸ 23:35 ಶ್ರೀಮನ್ ಮಂತ್ರಾಲಯಪ್ರಭುಗಳ ವಚನದಿಂದ ರಂಗಾಚಾರ್ಯರ ಖಂಡನೆ 25:23 ಪೂಜ್ಯ ಶ್ರೀ ಮಾಹುಲೀ ಆಚಾರ್ಯರಿಂದಲೇ ಶ್ರೀ ರಂಗಚಾರ್ಯರ ಖಂಡನೆ 26:33 ಸತ್ಯಾತ್ಮರಿಂದಲೇ ಶ್ರೀ ರಂಗಾಚಾರ್ಯರ ಖಂಡನೆ PDF ರಂಗಾಚಾರ್ಯರ ಲೇಖನ Audio ರಂಗಾಚಾರ್ಯರ ಲೇಖನದ ವಿಮರ್ಶೆ


Play Time: 32:35, Size: 3.84 MB


Download Article Download Upanyasa Share to facebook View Comments
23935 Views

Comments

(You can only view comments here. If you want to write a comment please download the app.)
 • Tara Dwarakanath,Punganur

  12:32 PM, 17/10/2022

  Acharyare 
  Please send narasimha Suladi with arthanusandana
 • Tara Dwarakanath,Punganur

  12:30 PM, 17/10/2022

  Please send lyrics of Venkatesha Stavaraja 1 - 19 Arathanusandana
 • Satish Chandran,Bangalore

  10:36 PM, 16/10/2022

  ಸಿದ್ಧಾಂತ ಸ್ಪಷ್ಟತೆಗಾಗಿ ವಿಮರ್ಶೆ ಸರಿ. ಆದರೆ ಅದು ಶುದ್ಧ ವಾದಕ್ಕೆ ಸೀಮಿತವಾದರೆ ಚೆಂದ. ವಿತಂಡ ಅಥವಾ ಜಲ್ಪದ ಕಡೆಗೆ ತಿರುಗಿದರೆ ಅಸಹ್ಯ. ವೈಯುಕ್ತಿಕ ಹೊಗಳಿಕೆ - ಹೀಯಾಳಿಕೆಗಳನ್ನು ಬದಿಗಿರಿಸಿ ನೋಡಿದರೆ, ಈ ಚರ್ಚೆಯ ಸಾರಾಂಶ ಹೀಗಿದೆ:
  1. ಮಿತ್ಯಾ ಎನ್ನುವುದು ಅವ್ಯಯ. ಆದ್ದರಿಂದ ಮಿಥ್ಯಾಯಾಹ ಅನ್ನುವ ಶಬ್ದ ಸರಿಯಲ್ಲ.
  2. ಮಿತ್ಯಾ ಮತ್ತು ಯಾಹ ಎಂದು ಒಡೆದು ಅರ್ಥೈಸಿದರೆ ( ಯಾವ ಶೃತಿ ವಾಕ್ಯಗಳು ಮಿಥ್ಯಾ ಇರುವವೋ ಅವುಗಳಿಗೆ ಸಾಧಕತ್ವ ಇಲ್ಲವೆಂಬ ಅರ್ಥದಲ್ಲಿ) ಯಾವ ಸಮಸ್ಯೆಯೂ ಇರುವುದಿಲ್ಲ. ಶಬ್ದ ಸಾಧುತ್ವ , ವಾಕ್ಯ ಸಾಧುತ್ತ್ವವನ್ನು ಸಮರ್ಥಿಸಿಬೇಕಾದ ಅವಶ್ಯಕತೆಯೇ ಏಳುವುದಿಲ್ಲ. ಇದು ಶ್ರೀ ಟೀಕಾಚಾರ್ಯರು ಮತ್ತು ಶ್ರೀ ರಾಯರಿಗೂ ಸಮ್ಮತವಾದ ವಿಭಜನೆಯೇ.
  3. ಮಿತ್ಯಾಯಾಹ ಎಂಬುದನ್ನು ಒಡೆಯದೆ ಹಾಗೇ ಉಳಿಸಬೇಕೆಂದರೆ ಸಮರ್ಥನೆ ಬೇಕಾಗುತ್ತದೆ - ವಿಭಕ್ತಿ ಪ್ರತಿರೂಪಕ ಅಥವಾ ಸುಳ್ಳು ಮಾತನಾಡುವ ಸ್ತ್ರೀ ಇತ್ಯಾದಿ. ವೈಯುಕ್ತಿಕವಾಗಿ
   ನನಗೆ ಇದು ಅಷ್ಟಾಗಿ ರುಚಿಸಲಿಲ್ಲ. Anyway, ಅವರವರ ವಿವೇಚನೆಗೆ ಬಿಟ್ಟಿದ್ದು.

  Vishnudasa Nagendracharya

  ನಿಮಗೆ ಯಾವುದು ರುಚಿಸುತ್ತದೆ, ಸತ್ಯಾತ್ಮರಿಗೆ ಯಾವುದು ಇಷ್ಟ, ನನಗೆ ಯಾವುದು ಪ್ರಿಯ ಎನ್ನುವದರ ಬಗ್ಗೆ ಇಲ್ಲಿ ಚರ್ಚೆ ನಡೆದಿಲ್ಲ. 
  
  ಪ್ರಮಾಣಾನುಸಾರಿಯಾದ ತತ್ವ ಯಾವುದು ಎನ್ನುವದರ ಬಗ್ಗೆ ಚರ್ಚೆ ಇರುವದು. 
  
  ಶ್ರೀಮಟ್ಟೀಕಾಕೃತ್ಪಾದರು ವಿಭಾಗ ಮಾಡಿ ಅರ್ಥ ಹೇಳಿದ್ದಾರೆ ಎನ್ನುವದರಲ್ಲಿ ಸತ್ಯಾತ್ಮರದೂ, ಸತ್ಯಾತ್ಮರ ಸಮರ್ಥಕರದೂ ವಿವಾದವಿಲ್ಲ, ನನಗೂ ವಿವಾದವಿಲ್ಲ. ಕಾರಣ ವಿಭಜನೆ ಮಾಡಿರುವದೇ ಶ್ರೀಮಟ್ಟೀಕಾಕೃತ್ಪಾದರು. 
  
  ನಿಮಗೆ ವಿಷಯ ದೂರ ಉಳಿಯಿತು ಶಬ್ದಗಳೇ ನಿಮಗೆ ಗೊತ್ತಿಲ್ಲ. ಅಲ್ಲಿರುವದು ಮಿತ್ಯಾ ಶಬ್ದವಲ್ಲ ಮಿಥ್ಯಾ ಶಬ್ದ. ಯಾಹ ಅಲ್ಲ. ಯಾಃ. 
  
  ದಯವಿಟ್ಟು, ತಿಳಿಯದೇ ಮಾತನಾಡಬೇಡಿ. 
  
  
 • C R RAGHUNATHA RAO,Bangalore

  7:35 PM , 16/10/2022

  ಕನ್ನಡ ಅನುವಾದ ಲೇಖನ ಓದಲು ಅನುಕೂಲ

  Vishnudasa Nagendracharya

  ಉಪನ್ಯಾಸ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ. ಹೀಗಾಗಿ ಈಗ ಉಪನ್ಯಾಸ ಮಾಲಿಕೆ. 
 • Satish Chandran,Bangalore

  12:19 PM, 16/10/2022

  ಆದ್ದರಿಂದ ಇಲ್ಲಿ ಮೊದಲು ಮಾಡಬೇಕಾದ ಕೆಲಸ, ಮಿತ್ಯಾಯಾಹ ಎನ್ನುವ ಪ್ರಯೋಗ ಸರಿ ಅಂತ prove ಮಾಡಬೇಕು ಅಥವಾ ಅದನ್ನು ವಡೆದು ಹೊಂದಿಸಿಕೊಳ್ಳಬೇಕು. ಆಮೇಲೆ ಅದರ ಸಾಧುತ್ವದ ಬಗ್ಗೆ ಚರ್ಚೆ ಮಾಡಬಹುದು. ಒಡೆಯುವ ಮಾರ್ಗವೇ ಹೆಚ್ಚು ಸೂಕ್ತ ಅನ್ನಿಸುತ್ತದೆ. ಯಾಕೆಂದರೆ ಆ ಕಾಲದಲ್ಲಿ ಪ್ರಚುರದಲ್ಲಿರದ ಮತ್ತು ಕ್ಷೋಬೆಯನ್ನುಂಟುಮಾಡುವ ಶಬ್ದಗಳನ್ನು ಬಳಸಿ ಆಮೇಲೆ ಅಂಥಹ ಪ್ರಯೋಗ ಯಾವುದೋ ಪ್ರಾಚೀನದಲ್ಲಿತ್ತು ಅಂಥ prove ಮಾಡುವುದು ಅಷ್ಟು ರೋಚಕವೆನಿಸುವುದಿಲ್ಲ. As they say, you may be able to prove a point but lose the argument.

  Vishnudasa Nagendracharya

  ತಮಗೆ ವಿಷಯವೇ ಅರ್ಥವಾಗಿಲ್ಲ. ದಯವಿಟ್ಟು ಮೊದಲಿಂದ ಎಲ್ಲವನ್ನೂ ಆಲಿಸಿ, ಓದಿ. 
  
  ಶ್ರೀಮಟ್ಟೀಕಾಕೃತ್ಪಾದರು ಪ್ರಥಮ ಪಕ್ಷದಲ್ಲಿ ಮಿಥ್ಯಾ ಮತ್ತು ಯಾಃ ಎಂದು ವಿಭಾಗ ಮಾಡಿದ್ದಾರೆ. ಸಾಧುತ್ವಸಮರ್ಥನೆ ಮಾಡಿಲ್ಲ. ಇದು ನಾನು ಹೇಳುತ್ತಿರುವದು. ಸಾಧುತ್ವಸಮರ್ಥನೆಯಾಗಿದೆ ಎಂದು ಸತ್ಯಾತ್ಮರು ಹೇಳುತ್ತಿರುವದು. 
  
  ಎರಡನೆಯ ಪಕ್ಷದಲ್ಲಿ ಸಾಧುತ್ವಸಮರ್ಥನೆಯಾಗಿದೆ ಎಂದು ಸತ್ಯಾತ್ಮರೂ ಒಪ್ಪಿದ್ದಾರೆ, ನಾನೂ ಒಪ್ಪಿದ್ದೇನೆ. ಅಲ್ಲಿ ವಿವಾದವೇ ಇಲ್ಲ. 
 • Satish Chandran,Bangalore

  11:50 AM, 16/10/2022

  ಸೋದಾಹರಣೆಯೊಂದಿಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವಿದೆ. ಒಂದು ಶಬ್ದ ಅಸ್ತಿತ್ವದಲ್ಲಿ ಇದ್ದರೆ, ವಾಕ್ಯದಲ್ಲಿ ಅದರ ಪ್ರಯೋಗ ಸಾಧುವೋ - ಅಸಾಧುವೋ ಎಂಬ ಜಿಜ್ಞಾಸೆ ಹುಟ್ಟಬಹುದು. ಉದಾಹರಣೆಗೆ ರಾಮನನ್ನು ಕಾಡಿಗೆ ಹೋದನು ಎಂಬಲ್ಲಿ ರಾಮನನ್ನು ಎಂಬುದು ಅಸಾಧು ಶಬ್ದ ಪ್ರಯೋಗ. ಆದರೆ ರಾಮಕು ಕಾಡಿಗೆ ಹೋದನು ಎಂಬಲ್ಲಿ ರಾಮಕು ಎನ್ನುವ ಶಬ್ದವೇ ಇಲ್ಲದಿರುವುದರಿಂದ, ಆ ಶಬ್ದದ ಸಾದುತ್ವ - ಅಸಾಧುತ್ವವದ ಬಗ್ಗೆ ಚರ್ಚೆಯೇ ಅಸಂಗತವಲ್ಲವೆ? ರಾಮಕು ಅನ್ನುವುದನ್ನ ರಾಮ ಮತ್ತು ಕು ಎಂದು ಬಿಡಿಸಿ, ರಾಮ (ಕು) ಕಾಡಿಗೆ ಅಂದರೆ ಘೋರವಾದ (ದುರ್ಗಮವಾದ) ಕಾಡಿಗೆ ಎಂದು ಕೂಡಿಸಬಹುದೇನೋ? ಅಥವಾ ಹೇಗಾದರೂ ಮಾಡಿ, ಪ್ರಾಚೀನ ಕಾಲದಲ್ಲಿ, ರಾಮಕು ಎಂಬ ಪ್ರಯೋಗ ಇತ್ತು ಎಂದು ಸಮರ್ಥನೆ ಮಾಡಬೇಕಾಗುತ್ತದೆ. ಅದೇ ರೀತಿಯ ಶಬ್ದವೇ ಇಲ್ಲಿ ಚರ್ಚೆಗೊಳಗಾಗಿರುವ ಮಿಥ್ಯಾಯಾಹ ಎಂಬ ಪ್ರಯೋಗ. ಅದೆಲ್ಲ ಸರಿ, ಒಂದು ಇಲ್ಲದಿರುವ ಶಬ್ದವನ್ನು (ಸಾಧುವೋ - ಅಸಾಧುವೋ ) ವಾಕ್ಯದಲ್ಲಿ ಪ್ರಯೋಗಿಸಿದಾಗ ಇಡೀ ವಾಕ್ಯವೂ ಕೂಡ simultaneous ಆಗಿ ಅಸಾಧುವಾಗುತ್ತದೆಯಲ್ಲವೆ?? ತಮ್ಮ ಅಭಿಪ್ರಾಯ ತಿಳಿಸಿ.

  Vishnudasa Nagendracharya

  ಮೊದಲನೆಯದು ಅದು ಶ್ರೀರಾಮಕು ಅಲ್ಲ, ಶ್ರೀರಾಮಖು ಎಂದು. ಕುಕಾಡಿಗೆ ಎಂಬ ಅರ್ಥವೂ ಇಲ್ಲ. 
  
  ಶ್ರೀರಾಮಖು ಎಂದು "ಪ್ರಯೋಗಿಸಿದಾಗ" ಶ್ರೀರಾಮಖು  ಎನ್ನುವದು ಅಸಾಧು ಶಬ್ದ ಎಂದೇ ನಿರ್ಣಯ. 
  
  ಅಸಾಧು ಎಂದರೆ ಆ ಭಾಷೆಯಲ್ಲಿ ಪ್ರಯೋಗದೊಳಗೆ ಇಲ್ಲದಿರುವ ಶಬ್ದ ಎಂದೇ ಅರ್ಥ. ಯಾವ ಭಾಷೆಯಲ್ಲಿ ಪ್ರಯೋಗ ಮಾಡುತ್ತಿದ್ದೇವೆಯೋ ಆ ಭಾಷೆಯ ಪ್ರಕಾರ ಅಸಾಧು ಎಂದರೆ ಆ ಭಾಷೆಯಲ್ಲಿ ಅದು ಅಸ್ತಿತ್ವದಲ್ಲಿ ಇಲ್ಲ ಎಂದೇ ಅರ್ಥ. 
  
  ಮಿಥ್ಯಾಯಾಃ ಎನ್ನುವಲ್ಲಿ, ಮಿಥ್ಯಾಯಾಃ ಎನ್ನುವದು ಅಸಾಧು ಶಬ್ದ ಎಂದೇ ಪೂರ್ವಪಕ್ಷಿಯ ವಾದ. ಹಾಗೆಯೇ ಶ್ರೀರಾಮಖು ಕೂಡ. ಕನ್ನಡದಲ್ಲಿ ಪ್ರಯೋಗವಿಲ್ಲದ, ಶಬ್ದ, ಅದಕ್ಕಾಗಿಯೇ ಅಸಾಧು ಶಬ್ದ. 
  
  ಮಿಥ್ಯಾಯಾಃ ಎಂದು ಪ್ರಯೋಗವಿಲ್ಲ, ಅಸಾಧು, ಸಂಸ್ಕೃತ ವ್ಯಾಕರಣದ ದೃಷ್ಟಿಯಿಂದ ಅಸ್ತಿತ್ವದಲ್ಲಿರದ ಶಬ್ದ ಎಂದು ಆಕ್ಷೇಪ ಮಾಡಿದಾಗ, ಶ್ರೀಮಟ್ಟೀಕಾಕೃತ್ಪಾದರು ಮೊದಲನೆಯ ಪಕ್ಷದಲ್ಲಿ, ಅಸ್ತಿತ್ವದಲ್ಲಿರುವ ಸಾಧುವಾದ ಮಿಥ್ಯಾ ಮತ್ತು ಯಾಃ ಶಬ್ದಗಳವು ಎಂದು ತೋರಿಸಿಕೊಟ್ಟರು. ಎರಡನೆಯ ಪಕ್ಷದಲ್ಲಿ ಅದು ವ್ಯಾಕರಣದ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ಶಬ್ದ ಎಂದೇ ಪ್ರತಿಪಾದಿಸಿದರು.