Prashnottara - VNP267

ಚಂದಿಯವರ ದುರ್ವಾದವನ್ನು ಧೂಳೀಪಟ ಮಾಡಿದ ಶೇಷವಾಕ್ಯಾರ್ಥಚಂದ್ರಿಕಾ


					 	

ಚಂದಿಯವರ ದುರ್ವಾದವನ್ನು ಧೂಳೀಪಟ ಮಾಡಿದ ಶೇಷವಾಕ್ಯಾರ್ಥಚಂದ್ರಿಕಾ ಯಾವುದನ್ನು ಆಶ್ರಯಿಸಿಕೊಂಡು ಚಂದಿಯವರು ಪುಸ್ತಕ ಬರೆಯಲು ಹೊರಟಿದ್ದಾರೆಯೋ, ಆ ಯಥಾತ್ಮಶಕ್ತ್ಯಾ ಎನ್ನುವದರ ಚರ್ಚೆ ಇಲ್ಲಿದೆ. ಪದಚ್ಛೇದದಿಂದ ಸಾಧುತ್ವಸಮರ್ಥನೆಯಾಗಿದೆ ಎಂಬ ಅವರ ದುರ್ವಾದವನ್ನು ಶ್ರೀ ಶೇಷವಾಕ್ಯಾರ್ಥಚಂದ್ರಿಕೆಯ ವಚನವೇ ಸುಟ್ಟು ಹಾಕಿರುವದನ್ನು ಪರಿಸ್ಪಷ್ಟವಾಗಿ ತೋರಿಕೊಡಲಾಗಿದೆ. ನಾನು ಹೇಳದೇ ಇರುವದನ್ನು ಕಲ್ಪಿಸಿಕೊಂಡು ಖಂಡನೆಗೆ ಮುಂದಾಗಿರುವ ಅವರ ವಿಚಿತ್ರ ಪ್ರವೃತ್ತಿಯನ್ನು ಬಯಲು ಮಾಡುವದರೊಂದಿಗೆ. ಶ್ರೀ ಚಂದಿ ರಘುವೀರಾಚಾರ್ಯರು ರಾಯರ ವ್ಯಾಖ್ಯಾನವನ್ನು ಅವಲಂಬಿಸಿದ್ದಾರೆ. ಅದರ ಖಂಡನೆ ಈಗಾಗಲೇ ಪರಿಮಳ ವಾಕ್ಯದ ಅರ್ಥ ಎನ್ನುವಲ್ಲಿ ಬಂದಿದೆ. ನಾನು ಹೇಳದೇ ಇರುವದನ್ನು ಕಲ್ಪಿಸಿಕೊಂಡು ಖಂಡನೆಗೆ ಮುಂದಾಗಿರುವ ಅವರ ಅವಿವೇಕ ಮತ್ತು ಅವರು ಆರಿಸಿಕೊಂಡಿರುವ “ಯಥಾತ್ಮಶಕ್ತ್ಯಾ” ಎನ್ನುವ ಉದಾಹರಣೆ, ಯಾವ ರೀತಿಯಲ್ಲಿ ಸತ್ಯಾತ್ಮರನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವದನ್ನು ಉತ್ತರಾದಿಮಠದ ಅಧಿಕೃತವ್ಯಾಖ್ಯಾನಗಳಲ್ಲಿ ಒಂದಾದ, ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ತಮ್ಮ-ಶಿಷ್ಯ ಶ್ರೀ ಕೇಶವಾಚಾರ್ಯರು ರಚಿಸಿರುವ ಶ್ರೀ ಶೇಷವಾಕ್ಯಾರ್ಥಚಂದ್ರಿಕೆಯಿಂದಲೇ ಪ್ರತಿಪಾದಿಸಲಾಗಿದೆ. 03:17 ನಾನೇ ಹೇಳದೇ ಇದ್ದದ್ದನ್ನು ಸ್ವಕಪೋಲ ಕಲ್ಪಿಸಿಕೊಂಡು ಖಂಡನೆಗೆ ಮುಂದಾದ ಚಂದಿ 06:11 ಖಂಡನೆ ಮಾಡುವದು ಹೇಗೆ ಎನ್ನುವ ಪಾಠ ಮೊದಲು ಶಿಷ್ಯರಿಗೆ ಹೇಳಿ, ಸತ್ಯಾತ್ಮರೇ! 10:16 ಗುಣವನ್ನು ಗ್ರಹಿಸಿ, ದೋಷವನ್ನು ಖಂಡಿಸುವದು ವಿರುದ್ಧಭಾಷಿತ್ವವಂತೆ ಯಥಾತ್ಮಶಕ್ತ್ಯಾ ಎನ್ನುವದರ ಚರ್ಚೆ 13:06 ಸತ್ಯಾತ್ಮರ ಸಮರ್ಥಕರ ದುರ್ವಾದವನ್ನು ಧೂಳೀಪಟ ಮಾಡಿದ ಶೇಷವಾಕ್ಯಾರ್ಥಚಂದ್ರಿಕಾ 20:37 ನಿಮ್ಮ ನೀಚ ಶಿಷ್ಯರ ನೀಚ ಭಾಷೆಯ ನೀಚ ಲೇಖನಗಳನ್ನು ಓದಿದ್ದೀರಾ, ಸತ್ಯಾತ್ಮರೇ?


Play Time: 25:25, Size: 3.84 MB


Download Article Download Upanyasa Share to facebook View Comments
24866 Views

Comments

(You can only view comments here. If you want to write a comment please download the app.)
 • Abc,Rnr

  7:46 PM , 20/10/2022

  ನಿಮಗೂ ರಘುವೀರಾಚಾರ್ಯರ ವ್ಯಾಖ್ಯಾನಕ್ಕೂ ಇದೇ ವ್ಯತ್ಯಾಸ ಅನಿಸತ್ತೆ.
  ರಘುವೀರಾಚಾರ್ಯರು ನಿಮ್ಮ ವಾದವನ್ನು ವಿಮರ್ಶೆ ಮಾಡಿದ್ದಾರೆ.(ಎಲ್ಲಿಯೂ ನಿಮ್ಮ ಗುರುಗಳ ಹೆಸರು ತೆಗೆದುಕೊಂಡಿಲ್ಲ) ನೀವು ಅವರ ವಾದವನ್ನು ವಿಮರ್ಶೆ ಮಾಡಿದ್ದರೆ ಸಾಕಾಗಿತ್ತು. ಆದರೆ ಅನವಶ್ಯಕವಾಗಿ ಅವರ ಗುರುಗಳನ್ನು ಮಾತು ಮಾತಿಗೆ ಸಂಬೋಧಿಸಿ ಹೇಳುವ ನಿಮ್ಮ ಮಾತಿನ ಧಾಟಿ ನೋಡಿದರೆ ನಿಮ್ಮ ನಿಲುವು ಶಾಸ್ತ್ರ ರಕ್ಷಣೆ ಅಲ್ಲ, ಶಾಸ್ತ್ರ ರಕ್ಷಣೆಯ ಸೋಗಿನಲ್ಲಿ ಬೇರೆ ಇನ್ನೇನೋ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.
  
  ಇದಕ್ಕೆ reply ಮಾಡೋದೊದ್ರೆ to the point ಇರಲಿ. ಮತ್ತದೇ ವ್ಯಾಸರಾಜರಿಗೆ ಅವಮಾನ ಮಾಡಿದ್ದಾರೆ, ವಿಜಯಧ್ವಜರಿಗೆ ಅವಮಾನ ಮಾಡಿದ್ದಾರೆ ಅಂತೆಲ್ಲಾ ಅಂತಾ ದಾರಿ ತಪ್ಪಿಸಬೇಡಿ.
  
  ಇಂತಹ ಅವಮಾನದ ಪ್ರಸಂಗಗಳು ಎಲ್ಲ ಮಠಗಳಲ್ಲಿಯೂ ನಡೆದಿದೆ. ಒಬ್ಬರನ್ನು ಹೊಗಳುವ ಭರದಲ್ಲಿ ಮತ್ತೊಬ್ಬರನ್ನು ತೆಗಳಿದಂತೆ ಕಂಡದ್ದೂ ಇದೆ.

  Vishnudasa Nagendracharya

  ತಂದೆ ತಾಯಿಗಳು ಕೊಟ್ಟ ಹೆಸರನ್ನೂ ಹೇಳಿಕೊಳ್ಳುವಷ್ಟು ಆತ್ಮ ಗೌರವವಿಲ್ಲದ ಓ ವ್ಯಕ್ತಿಯೆ, ಕೇಳುವಂತವರಾಗಿ. 
  
  ಉತ್ತರಾದಿಮಠದ ಕಾಲದಿಂದ ಅನುಸರಿಸುತ್ತಿರುವ ಮಾರ್ಗ ಏನು ಗೊತ್ತೇನು, ಮತ್ತೊಬ್ಬರ ಕೈಯಿಂದ ಕಾರ್ಯ ಮಾಡಿಸಿ, ಅದರಲ್ಲಿ ತಪ್ಪಾದರೆ ತಮ್ಮದಲ್ಲ ಎಂದು ಜಾರಿಕೊಳ್ಳುವದು. 
  
  ನಾನು ಸತ್ಯಾತ್ಮರನ್ನೇನು 2014 ರಲ್ಲಿಯೇ ವಿಮರ್ಶೆ ಮಾಡಿದ್ದೆ, ಅದಕ್ಕೆ ರಘುವೀರಾಚಾರ್ಯರೊಬ್ಬರೇ ಉತ್ತರ ನೀಡಿದ್ದಲ್ಲ. ಫೇಸ್ಬುಕ್ಕಿನ ತುಂಬ ನನ್ನ ಕುರಿತ ಬಯ್ಗುಳದ ಲೇಖನಗಳನ್ನೇ ಸತ್ಯಾತ್ಮರು ತಮ್ಮ ನೀಚಶಿಷ್ಯರಿಂದ ಬರೆಯಿಸಿದ್ದಾರೆ. ನೇರವಾಗಿಯೂ ಆಡಿಯೋದಲ್ಲೂ ನಿಂದಿಸಿಸಿದ್ದಾರೆ. ನಾನು 2014 ರಲ್ಲಿ ವಿಮರ್ಶೆ ಮಾಡಿದ ರೀತಿಯಲ್ಲಿಯೇ ಉತ್ತರಿಸಿದ್ದರೆ, ಅವರಿಗೂ ಹಾಗೆಯೇ ಉತ್ತರ ದೊರೆಯುತ್ತಿತ್ತು. ಅದೇನು ಬೈಗುಳ, ಅದೇನು ನಿಂದೆ. ಉತ್ತರಾದಿಮಠಕ್ಕೆ, ಸತ್ಯಾತ್ಮರಿಗೆ ಶೋಭೆ ತರುವ ಭಾಷೆಯಾ ಆ ಪರಮನೀಚ ಭಾಷೆ. ಆ ಎಲ್ಲ ನಿಂದೆಗಳಿಗೆ ಈ ಉತ್ತರ. 
  
  ಸತ್ಯಾತ್ಮರಿಗೆ ಇದು ಮುಳುಗಿಹೋದ ವಾದ ಎಂದು ಎಂದೋ ಮನವರಿಕೆ ಆಗಿದೆ. ಹೀಗಾಗಿ ಶಿಷ್ಯರ ಕಡೆಯಿಂದ ಬರೆಯಿಸುವ ವೃಥಾ ಪ್ರಯತ್ನ ಮಾಡಿದ್ದಾರೆ. ಅವರಿಗೆ ತಾವು ಹೇಳಿದ್ದು ಸರಿ ಎಂದು ಗೊತ್ತಿದ್ದರೆ ಈ ವಿಷಯದ ಕುರಿತು ತಿಂಗಳಿಗೊಂದು ವಿಡಿಯೋ ಮಾಡಿ ಬಿಡುತ್ತಿದ್ದರು. ಈಗ ಮಿಥ್ಯಾಯಾಃ ಸಾಧಕತ್ವಂ ಎಂದು ಜೋರಾಗಿ ಸಹ ಹೇಳುವದಿಲ್ಲ.  ಹೀಗಾಗಿ ಶಿಷ್ಯರಿಂದ ಪುಸ್ತಕ ಬರೆಯಿಸಿ ಶಿಷ್ಯ ಗೆದ್ದರೆ ತಾವು ಗೆದ್ದೆವು ಎಂದು ಹೇಳಿಕೊಳ್ಳುವ ಬಯಕೆ. ಶಿಷ್ಯ ಸೋತರೆ ಶಿಷ್ಯನ ಸೋಲು ಎಂಬ ನೀತಿ ಅನುಸರಿಸುತ್ತಿದ್ದಾರೆ. 
  
  ಇನ್ನು ಈ ಚಂದಿ ರಘುವೀರಾಚಾರ್ಯರು, ಉತ್ತರದ ಪುಸ್ತಕ ತುಂಬಿಸಲಿಕ್ಕೆ ತಾವೇ ಹೇತುಗಳನ್ನು ಕಲ್ಪಿಸಿಕೊಂಡು, ನಾನೇ ಹೇಳದೇ ಇರುವದನ್ನು ಖಂಡಿಸಿದ್ದಾರೆ. ಇದನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಅನುಕ್ತೋಪಾಲಂಭ ಎನ್ನುತ್ತಾರೆ. ವಾಕ್ಯಾರ್ಥದಲ್ಲಿ ಇದು ತುಂಬ ಬಲವಾದ ನಿಗ್ರಹಸ್ಥಾನ. ಈ ರೀತಿಯಾಗಿ ವಾಕ್ಯಾರ್ಥದಲ್ಲಿ ಸೋಲಬೇಕಾಗುತ್ತದೆ ಎಂದೇ ಅವರ ಕಡೆಯ ವಿದ್ವಾಂಸರನ್ನೇ ನಾನು ಮಧ್ಯಸ್ಥರನ್ನಾಗಿ ಒಪ್ಪಿದರೂ ವಾಕ್ಯಾರ್ಥಕ್ಕೆ ಬಾರದೆ ಜಾರಿಕೊಂಡವರು, ಚಂದಿಯವರು. 
  
  ಅಸಾಧುತ್ವ ಶಂಕೆಯನ್ನೇ ಅನುಪಪನ್ನ ಎಂದು ಮಾಡುವದು ಬೇರೆ, ಶಂಕೆಯನ್ನು ಒಪ್ಪಿ ಸಾಧುತ್ವಸಮರ್ಥನೆ ಮಾಡುವದು ಬೇರೆ ಎಂಬ ವಿವೇಕವೇ ಸತ್ಯಾತ್ಮರ ಯಾವ ಸಮರ್ಥಕರಿಗೂ ಅರ್ಥವಾಗಿಲ್ಲ. ಶಿಷ್ಯನಿಂದ ಗ್ರಂಥ ಬರೆಸಿರುವದು, ಅದನ್ನು ನೋಡಿ ಪ್ರಶಂಸಿಸಿರುವದು ಸತ್ಯಾತ್ಮರೇ ತಾನೇ? ಅಂದಮೇಲೆ ಸತ್ತ್ವವಿಲ್ಲದ ಈ ನಿಸ್ಸಾರ ಪುಸ್ತಕದ ಬುನಾದಿ ಯಾರು?
  
  ಮಿಥ್ಯಾಯಾಃ ವಾಕ್ಯಾರ್ಥ ಎಷ್ಟು ಪರಮಪವಿತ್ರವೋ, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀಮದ್ ವಿಜಯಧ್ವಜತೀರ್ಥಗುರುಸಾರ್ವಭೌಮರು ಮುಂತಾದ ಮಹಾನುಭಾವರನ್ನು ನಿಂದೆ ಮಾಡಿದ ಪರಮನೀಚಕೃತಿಗಳನ್ನು ಖಂಡಿಸುವದೂ ಅಷ್ಟೇ ಕರ್ತವ್ಯ. ಮತ್ತು ಸೋಗು ಹಾಕಿ ಮಾತನಾಡುವದು ನನಗೆ ತಿಳಿದಿಲ್ಲ. ನೇರವಾದ ಮಾತಿರಬೇಕು ಎನ್ನುವದು ಮಧ್ವಸಿದ್ಧಾಂತ ಕಲಿಸುವ ಪ್ರಾಥಮಿಕ ಪಾಠಗಳಲ್ಲಿ ಒಂದು. 
  
  ಸತ್ಯಾತ್ಮರು ಪಂಡಿತಶಿಷ್ಯರಿಂದ, ಪಾಖಂಡಿಶಿಷ್ಯರಿಂದ ಏನು ಮಾಡಿಸಿದ್ದಾರೆಯೋ ಅದನ್ನೇ ಪಡೆಯುತ್ತಾರೆ. ಶ್ರೀ ವ್ಯಾಸರಾಜಗುರುಸಾರ್ವಭೌಮರ ಶಿಷ್ಯರ ಕುರಿತ ಅಪಹಾಸದ ನಗೆ ನಕ್ಕಿದ್ದರು, ಸತ್ಯಾತ್ಮರು. ಇವತ್ತು ತಮ್ಮ ಶಿಷ್ಯರ ಪುಸ್ತಕ, ಲೇಖನ, ಆಡಿಯೋಗಳಿಂದ ಸ್ವಯಂ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಅಷ್ಟೆ. 
  
  ಅಂದಹಾಗೆ, ತಂದೆ ತಾಯಿಗಳು ಕೊಟ್ಟ ಹೆಸರನ್ನೂ ಹೇಳಿಕೊಳ್ಳುವಷ್ಟು ಧೈರ್ಯವಿಲ್ಲದ, ಆತ್ಮಗೌರವಹೀನರಾದ ನಿಮ್ಮಂತಹವರೊಂದಿಗೆ ಕಾಲ ವ್ಯರ್ಥ ಮಾಡಲು ನನ್ನ ಬಳಿ ಸಮಯ ಇಲ್ಲ. ಪ್ರಶ್ನೆ ಮಾಡಿದ್ದೀರಿ ಉತ್ತರಿಸಿಯಾಗಿದೆ, Fake ID ಆದ ಕಾರಣಕ್ಕೆ Block ಮಾಡುತ್ತಿದ್ದೇನೆ. 
 • Raghunath KR,Bengaluru

  11:47 AM, 20/10/2022

  6 k baad mm to
 • Krishna,Bengaluru

  10:39 AM, 20/10/2022

  Namma sanatanadhrma ke jayavagali
  Dwesha da kicchu hatti uriyali
  Nimma maatannu keli eega maadhwaru Andre Bari jagala gantaru anta ansta ide
  Dharma ve beda endu ansta ide 😓😓
 • Vasudhendra,Vijayapura

  10:14 AM, 20/10/2022

  🙏🙏🙏