(You can only view comments here. If you want to write a comment please download the app.)
Jayashree karunakar,Bangalore
10:14 PM, 04/04/2022
ಎಲ್ಲಾ ಜೀವರಾಶಿಗಳನ್ನು ರಕ್ಷಣೆ ಮಾಡುವ ಭಗವಂತ, ವೈವಸ್ವತ ಮನುವಿನನಲ್ಲಿ ರಕ್ಷಣೆ ಮಾಡು... ಅಂತ ಬೇಡಿದ ಪರಿ ಪರಮಾದ್ಭುತ..
ಪ್ರವಚನ ಕೇಳುತ್ತಾ ಭಾವಪರವಶವಾಗುತ್ತದೆ ಮನಸ್ಸು...
ಆ ಮತ್ಸ್ತ್ಯ ಬೆಳೆಯುವ ಪರಿ ಓಹ್...
ನಿಮ್ಮ ಪ್ರವಚನದ ಪರಿಯೇ ಪರಮಾದ್ಭುತ ಗುರುಗಳೇ...
Vishnudasa Nagendracharya
ಭೀಷ್ಮಾಚಾರ್ಯರ ನಿರೂಪಣೆಯ ಸೊಬಗದು.
Sanjeeva Kumar,Bangalore
1:09 PM , 04/04/2022
ಸಕಾಲದಲ್ಲಿ ಭಗವಂತನ ಕಥೆಯನ್ನು ತಿಳಿಸುತ್ತಾ ಧರ್ಮದಿಂದ ಜೀವನ ನಡೆಸಲು ಪ್ರೇರಣೆಯನ್ನು ಮಾಡಿ ನಮ್ಮಿಂದ ಕರ್ಮಗಳನ್ನು ಮಾಡಿಸುತ್ತಿರುವ ತಮ್ಮ ಪಾದ ಪದ್ಮಗಳಿಗೆ ಹಣೆ ಘಟ್ಟಿಸಿ ನಮಸ್ಕರಿಸುತ್ತೇನೆ
Vishnudasa Nagendracharya
ದೇವರು ಗುರುಗಳು ಪೂರ್ಣಾನುಗ್ರಹ ಮಾಡಲಿ.
Chandrika prasad,Bangalore
10:51 AM, 04/04/2022
ಗುರು ಗಳಿಗೆ ನಮಸ್ಕಾರ ಗಳು 🙏🏻 ಚಿಕ್ಕ ಮಕ್ಕಳಿಗೂ ಸಹಾ ಅರ್ಥವಾಗುವಂತೆ ಮತ್ಸ್ಯ ಅವತಾರದ ಕಥೆ ತಿಳಿಸಿ ಕೊಟ್ಟಿರುವಿರಿ ಯಾವುದೇ ಸಂಶಯ ಗಳು ಬರುವುದಿಲ್ಲ ಅಷ್ಟು ನಿಖರ, ದಿಟ್ಟ ಸ್ಪಷ್ಟ ನಿಮ್ಮ ಪ್ರವಚನ 🙏🏻ಮೈ ನವೀರೇಳಿಸುವಂತಿತ್ತು. ಕೋಟಿ ನಮನಗಳು 🙏🏻
Vishnudasa Nagendracharya
ಮತ್ಸ್ಯರೂಪಿಯ ಮಹಿಮೆ, ಭೀಷ್ಮಾಚಾರ್ಯರ ನಿರೂಪಣೆಯದು. ನನ್ನದು ಕೇವಲ ನಿರೂಪಣೆಯಷ್ಟೆ.
Shravan prabhu,Kumta near Gokarna
12:14 PM, 04/04/2022
ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು, ಶ್ರೀ ಮತ್ಸ್ಯನಾಮಕ ಭಗವಂತನ ಅವತಾರದ ಕಥೆಯನ್ನು ಪರಮ ಅದ್ಭುತವಾಗಿ ಮನಸ್ಸಿಗೆ ಅಂತುವಂತೆ ತಿಳಿಸಿದ್ದೀರಿ.🙏
ಒಂದು ಪ್ರಶ್ನೆ, ಪ್ರಳಯ ಕಾಲದಲ್ಲಿ ಭಗವಂತ ವೈವಸ್ವತ ಮನು ಮತ್ತು ಸಪ್ತರ್ಷಿಗಳನ್ನು ಮಾತ್ರ ತನ್ನ ಜೊತೆ ಕರೆದುಕೊಂಡು ಹೋದನು ಎಂದು ತಿಳಿಸಿದ್ದೀರ, ಹಾಗಾದರೆ ಆ ಸಮಯದಲ್ಲಿ ಭೂಮಿಯಲ್ಲಿ ಯಾವ ಮನುಷ್ಯರು ,ಯಾವ ಜೀವರಾಶಿಗಳು ಇರಲಿಲ್ಲವೇ, ಒಂದು ವೇಳೆ ಇದ್ದಿದ್ದರೆ ಅವರು ಆ ಮಹಾ ಪ್ರಳಯದಲ್ಲಿ ಸತ್ತುಹೋದರೇ?
ಶ್ರೀ ಮತ್ಸ್ಯಅವತಾರ ಆಗಿದ್ದು ಕೃತಾಯುಗದ ಅದಿಯಲ್ಲೋ ಅಥವಾ ಮಧ್ಯದಲ್ಲಿ?
೧೮ ಲಕ್ಷ ವರ್ಷಗಳ ಕಾಲ ಮಹಾಪ್ರಳಯ ನಡೆದಿತ್ತು ಎಂದು ಹೇಳಿದ್ದೀರಿ, ಕೃತಯುಗದ ಆಯಸ್ಸು ೧೭ ಲಕ್ಷದ ೨೮ ಸಾವಿರ ವರ್ಷಗಳು, ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
ದಯವಿಟ್ಟು ತಿಳಿಸಿ ಕೊಡಿ🙏🙏🙏
Vishnudasa Nagendracharya
ಒಂದು ಮನ್ವಂತರ ಮುಗಿದು ಮತ್ತೊಂದು ಮನ್ವಂತರ ಆರಂಭವಾಗುವಾಗ ಹಿಂದಿನ ಮನ್ವಂತರದ ಜನರು ಸಾಯಲೇಬೇಕು. ಅವರ ಆಯುಷ್ಯ ಅಷ್ಟೇ. ಇಡಿಯ ದಿನಕಲ್ಪದಲ್ಲಿ ಬದುಕುವ ಸಾಮರ್ಥ್ಯ ಇರುವ (ಉದಾಹರಣೆಗೆ ನಮ್ಮ ವೈವಸ್ವತ ಮನ್ವಂತರದಲ್ಲಿ ಹುಟ್ಟಿರುವ ಅವತರಿಸಿರುವ ವಾಯದೇವರು ಹನುಮದ್ರೂಪ, ರುದ್ರದೇವರ ಅಶ್ವತ್ಥಾಮರೂಪ, ಪ್ರಹ್ಲಾದರಾಜರು ಮುಂತಾದವರು ಮುಂದಾಗಲಿರುವ ಯಾವ ಮನ್ವಂತರದ ಪ್ರಳಯದಲ್ಲಿಯೂ ನಾಶ ಹೊಂದುವದಿಲ್ಲ. ಹಾಗೆಯೇ ಪಾಂಡವರ ಆಚಾರ್ಯರಾದ ಕೃಪಾಚಾರ್ಯರು ಸಹ ಈ ವೈವಸ್ವತ ಮನ್ವಂತರ ಮುಗಿದಾದ ಉಂಟಾಗುವ ಪ್ರಳಯದಲ್ಲಿ ನಾಶ ಹೊಂದುವದಿಲ್ಲ. ಮುಂದಿನ ಮನ್ವಂತರದಲ್ಲಿ ಅವರು ಸಪ್ತರ್ಷಿಗಳಲ್ಲಿ ಒಬ್ಬರಾಗುತ್ತಾರೆ.
ಹೀಗೆ ಯಾವ ಮಹಾನುಭಾವರು ಒಂದಕ್ಕಿಂತ ಹೆಚ್ಚು ಮನ್ವಂತರಗಳಲ್ಲಿ ಬದುಕುವ ಸಾಮರ್ಥ್ಯ ಪಡೆದಿದ್ದಾರೆಯೋ ಅವರು ನಾಶ ಹೊಂದುವದಿಲ್ಲ. ಉಳಿದ ಜೀವರಾಶಿಗಳು ನಾಶ ಹೊಂದುತ್ತಾರೆ.
ಇನ್ನು ಪ್ರತೀ ಮನ್ವಂತರದ ಪ್ರಳಯದ ಅವಧಿ (ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದರ ಕುರಿತು ಶ್ರೀಮದಾಚಾರ್ಯರ ನಿರ್ಣಯವಿದೆ, ಮುಂದೆ ಭಾಗವತದಲ್ಲಿ ಕೇಳುತ್ತೀರಿ. ಎರಡೂ ಸರಿ. ಬೇರೆಬೇರೆ ವಿವಕ್ಷೆಯಿಂದ ಬೇರೆಬೇರೆ ಲೆಕ್ಕಗಳಿವೆ) ಒಂದು ಕೃತಯುಗದ ಪ್ರಮಾಣದಷ್ಟಿರುತ್ತದೆ. ಹೀಗಾಗಿ 17 ಲಕ್ಷದ 28 ಸಾವಿರ ವರ್ಷಗಳು ಮನ್ವಂತರ ಸಂಧಿಕಾಲ ಅಥವಾ ಪ್ರಳಯಕಾಲ ಇದ್ದೇ ಇರುತ್ತದೆ. ಸಾಮಾನ್ಯಲೆಕ್ಕದಿಂದ ಹದಿನೆಂಟು ಲಕ್ಷವರ್ಷಗಳು.
savitri,Auckland
8:11 AM , 04/04/2022
Pranamagalu Sri Acharyaji ji,very nicely rendered.
ದಿನಪ್ರಲಯಗಳ ರಾತ್ರಿಯಲ್ಲಿ ಬ್ರಹ್ಮದೇವರು ದೇವರ ಧ್ಯಾನವನ್ನು ಮಾಡುತ್ತಿರುತ್ತಾರೆ. ಮತ್ತು ಮಹರಾದಿಲೋಕಗಳ ಪಾಲನೆಯನ್ನೂ ಮಾಡುತ್ತಿರುತ್ತಾರೆ. ಭೂಮಿ, ಅಂತರಿಕ್ಷ, ಸ್ವರ್ಗ ಎಂಬ ಮೂರು ಲೋಕಗಳು ಮಾತ್ರ ದಿನಪ್ರಲಯದಲ್ಲಿ ಮುಳುಗಿರುತ್ತವೆ.