Upanyasa - VNU029

01/02 ತುಳಸೀಮಾಹಾತ್ಮ್ಯ

ಶ್ರೀ ತುಳಸಿಯಾ ಸೇವಿಸಿ 


ಸುಧೆಗಡಲ ಮಧಿಸುವ ಸಮಯದಲಿ ವೈದ್ಯನಾಗಿ
ಪದುಮನಾಭನು ತಾನು ಉದುಭವಿಸಿ ಬರಲ೦ದು
ಉದುರಿದವು ಕಣ್ಣಿಂದ ಉದಕ ಉತ್ಸಾಹದಿಂದಲದೆ
ತುಳಸಿನಾಮವಾಗೇ |
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು
ಒದಗಿ ಸುಜನರು ತಮ್ಮ ಸದನದಲಿ ನಿತ್ಯ ಸ
ತ್ಪದವಿಗೆ ಸಿದ್ದವೆಂದು ಮುದದಿಂದ ತಿಳಿದು
ವೃಂದಾವನ ರಚಿಸಿದರಯ್ಯಾ ||


ಮೂಲದಲಿ ಸರ್ವತೀರ್ಥಗಳುಂಟು ತನ್ಮಧ್ಯೆ
ಕಾಲ ಮೀರದೆ ಸರ್ವನದನದಿಗಳಮರಗಣ
ಮೇಲೆ ದಳ ಒಂದರಲಿ ಒಂದೊಂದು ಮೂರುತಿಯು
ಆಲಯವಾಗಿಪ್ಪುದು 
ಮೂರ್ಲೋಕಗಳ ಧರ್ಮವ್ರತಕೆ ಮಿಗಿಲೆನಿಸುವುದು |
ನೀಲೆಮೇಘಶ್ಯಾಮ ಗರ್ಪಿಸಿದ ತುಳಸಿ ನಿ
ರ್ಮಾಲ್ಯವನು ಸತತ ಕರ್ಣದಲಿ ಧರಿಸಿದ ಮನುಜ
ಕಾಲನಾಳಿಗೆ ಶೂಲನೋ ||

ಉದಯದೊಳಗೆದ್ದು ನೀರೆರೆದು ಮಜ್ಜನಗೈದು
ತುದಿಬೆರಳಿನಿಂದ ಮೃತ್ತಿಕೆಯ ಫಣೆಯೊಳಗಿಟ್ಟು
ಮುದದಿಂದಲೊಂದು ಪ್ರದಕ್ಷಿಣೆ ನಮಸ್ಕಾರ
ತದನಂತರದಲಿ ಭಜನೇ |
ವದನದೊಳುಗೈಯೆ ಧರೆಯೊಳಗಿದ್ದ ಸರ್ವ
ನದನದಿಗಳಿಗೆ ನೂರ್ಮಡಿಯಾತ್ರೆ ಮಾಡಿದ ಫಲ
ಒದಗುವುದು ಹಿಂದಣಾನಂತ ಜನ್ಮಗಳಘವ
ತುದಿಮೊದಲು ದಹಿಪುದಯ್ಯಾ ||


ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ
ಆವವನ ಮನೆಯಲ್ಲಿ ಹರಿದಾಸರಾ ಕೂಟ
ಆವವನ ಭುಜದಲ್ಲಿ ತಪ್ತಮುದ್ರಾಂಕಿತವು
ಪಾವಮಾನಿಯ ಮತದೊಳು |
ಆವವನು ಕಾಲತ್ರಯವ ಕಳೆವನಾವಲ್ಲಿ
ಶ್ರೀ ವಾಸುದೇವ ಮುನಿದೇವಾದಿಗಣಸಹಿತ
ಕಾವುತ್ತಲಿಪ್ಪ ಬಲಿಗೊಲಿದಂತೆ ತೊಲಗದೆಲೆ
ಭಾವಿಸಿರಿ ಭಾವಜ್ಜ್ನರು || 


ಕಂಡರೆ ದುರಿತಕ್ಕೆ ಕೆಂಡವನು ಬೀರುವುದು
ಕೊಂಡಾಡಿದರೆ ಪುಣ್ಯವಪರಿಮಿತವುಂಟು ಮೈ-
ದಿಂಡುಗೆಡಹಿದರೆ ಪುನರಪಿ ಜನನವಿಲ್ಲಸಲೆ
ದಂಡವಿಟ್ಟವ ಮುಕ್ತನೋ |
ಚಂಡಾಲಕೇರಿಯೊಳು ಇರಲು ಹೀನಯವಲ್ಲ
ಪಾಂಡುರಂಗಕ್ಷೇತ್ರ ಸರಿಮಿಗಿಲು ಎನಿಸುವುದು
ತಂಡತಂಡದ ಕುಲಕೆ ಅವರವರ ಯೋಗ್ಯಫಲ
ಕಂಡವರಿಗುಂಟೆ ಅಯ್ಯಾ ||

ಚಿತ್ತಶುದ್ದನ ಆಗಿ ಮುಂಝಾನೆಯೊಳು ತುಳಸಿ
ಸ್ತೋತ್ರವನು ಮಾಡುತ್ತ ದಿವ್ಯವಾಗಿಹ ತ್ರಿದಳ
ಪ್ರತ್ಯೇಕ ಪಾತ್ರೆಯಲಿ ತೆಗೆದು ಶೋಧಿಸಿ ತುಂಬಿ
ವಿತ್ತಾದಿಯಲಿತಾರದೆ | 
ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕಏರಂಡ
ಪತ್ರದಲಿ ತಾರದೆಲೆ ಭೂಮಿಯೊಳಗಿಡದೆ ಪೂ
ರ್ವೋತ್ತರಭಿಮುಖನಾಗಿ ಭಕ್ತಿಯಿಂ ತರಬೇಕು
ಹೊತ್ತು ಮೀರಿಸಲಾಗದು ||

ಕವಿ ಮಂಗಳವಾರ ವೈಧೃತಿ ವ್ಯತೀಪಾತ
ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಟಉಪರಾಗ ಪಿತೃಶ್ರಾದ್ದ
ಇವುಗಳಲಿ ತೆಗೆಯಾದಿರಿ | 
ನವವಸನಪೊದ್ದು ಊಟವ ಮಾಡಿ ತಾಂಬೂಲ
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ-
ಸುವುದುಚಿತವಲ್ಲೆಂದು ತಿಳಿದು ಕೊಂಡಾಡುತಿರಿ
ದಿವಸ ದಿವಸಗೊಳೊಳಯ್ಯಾ ||


ದಳವಿದ್ದರೇ ಒಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಸಿ ನಿರ್ಮಾಲ್ಯವಾದರೂ ತ್ರಿವಾರದಲಿ ತೊಳೆತೊಳೆದು
ಏರಿಸಲಿ ಬಹುದು |
ತುಳಸಿ ಒಣಗಿದ್ದರೂ ಲೇಶದೋಷಗಳಿಲ್ಲ
ತುಳಸಿ ವಿರಹಿತ ಪೂಜೆಯದು ಸಲ್ಲದು
ತುಳಸೀ ತುಳಸೀ ಎಂದು ಸ್ಮರಣೆಯಾದರೂ ಮಾಡಿ
ಜಲಜಾಕ್ಷನರ್ಚಿಸಿರಯ್ಯಾ ||

ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳೆಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಿಗಿದ್ದರೂ ವ್ಯರ್ಥ
ತುಳಸಿ ಬಲು ಪ್ರಾಧಾನ್ಯವೋ |
ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾಧ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವೈಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾಗಾಣೆನಯ್ಯ ||

ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣರು
ಧ್ರುವ ಅಂಬರೀಶ ಶಶಿಬಿಂದು ರುಕ್ಮಾಂಗದರು
ಇವರೆ ಮೊದಲಾದವರು ಭಕುತಿ ಪೂರ್ವಕದಲೀ
ವಿವರವನು ತಿಳಿದರ್ಚಿಸಿ |
ತವಕದಿಂ ತಂತಮ್ಮ ಘನಪದವನೈದಿದರು
ಭುವನದೊಳಗುಳ್ಳ ನಿರ್ಮಲಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು ನೀಗಿ
ಭವ ದೂರರಾದರಯ್ಯಾ ||

ಉದಯಕಾಲದೊಳೆದ್ದು ಆವನಾದರೂ ತನ್ನ
ಹೃದಯನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರಮಾಡಿದ ಕ್ಷಣಕೆ
ಮದಗರ್ವ ಪರಿಹಾರವೋ |
ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲೊಬ್ಬ ಭೂಸುರ ಪದಕೆ ಪೋದ
ಪದೆಪದೆಗೆ ಸಿರಿ ವಿಜಯ ವಿಠ್ಠಲಗೆ ಪ್ರಿಯಳಾದ
ಮದನತೇಜಳ ಭಜಿಸಿರಯ್ಯಾ ||

Play Time: 41 Minuts 56 Seconds

Size: 7.60 MB


Download Upanyasa Share to facebook View Comments
8771 Views

Comments

(You can only view comments here. If you want to write a comment please download the app.)
 • Lakshmi,Pune

  2:24 PM , 16/11/2021

  Sadhan margakke karedoyyuttiruv gurugalige anant koti namaskar galu
 • Nuthan,UDUPI

  6:22 AM , 12/04/2021

  Acharyare 🙏 tulasi katteyallina tulasi gida sampoornavagi vanagi hodare Adaralli Lakshmi naryanara nithya sannidana hogibidutta acharyare dhayamadi tilisi 🙏
 • Vikram Shenoy,Doha

  1:27 PM , 27/11/2020

  ತುಳಸಿ ದೇವಿಯು ವೈಷ್ಣವರಿಗೆ ದೇವರು ಕೊಟ್ಟ ಬಹು ದೊಡ್ಡ ಸಂಪತ್ತು. ಕೋಟಿ ಧನ್ಯವಾದಗಳು ಆಚಾರ್ಯರಿಗೆ.🙏🙏🙏
 • Vinaykumar,Bellary

  9:43 AM , 20/05/2020

  ಹೂಬಿಟ್ಟಿರುವ ತುಳಸಿ,  ಬೀಜಸಹತವಾಗಿರುವ ತುಲಸಿಯನ್ನು ದೇವರಿಗೆ ಸಮರ್ಪಣೆ ಮಾಡಬಹುದೇ ಗುರುಗಳೇ

  Vishnudasa Nagendracharya

  ಅವಶ್ಯವಾಗಿ. 
  
  ತುಳಸಿಗೆ ಸಂಬಂಧಿಸಿದ ಯಾವುದನ್ನೇ ಆದರೂ ದೇವರಿಗೆ ಸಮರ್ಪಿಸಬಹುದು. 
  
  ತುಳಸಿ ಇಲ್ಲದಿದ್ದರೆ ತುಳಸಿ ಕಾಷ್ಠ, ಕಾಷ್ಠವಿಲ್ಲದಿದ್ದರೆ ತುಳಸಿಗಿಡದ ಕೆಳಗಿನ ಮಣ್ಣನ್ನಾದರೂ ದೇವರಿಗೆ ಸಮರ್ಪಿಸಬಹುದು. 
 • Mohan,Bangalore

  5:21 PM , 04/11/2017

  Developers
 • prema raghavendra,coimbatore

  11:10 AM, 03/11/2017

  Anantha namaskara! Danyavada!
 • Mrs laxmi laxman padaki,Pune

  9:26 AM , 01/11/2017

  Aacharyarige namaskaragslu.Thulsigidada bagge thumba chennagi heliddiri.👏👏
 • Balaji,Anantapuramu

  11:28 AM, 15/07/2017

  Acharyarige pranamagalu.maneyalli ondu Tulasi gida poorthe vonigogeede.aa gidavannu akhanda hacchalikkagi tegadukollabahuda?

  Vishnudasa Nagendracharya

  ಅವಶ್ಯವಾಗಿ.