10/06/2022
ಶ್ರೀಮದ್ ರಾಮಾಯಣಮ್ — 113 “ಧರ್ಮ, ಸತ್ಯ ಎನ್ನುವದೆಲ್ಲ ಸುಳ್ಳು, ನೀ ಬಂದು ರಾಜ್ಯವಾಳು” ಎಂಬ ಜಾಬಾಲಿಗಳ ಮಾತಿಗೆ ಉತ್ತರವಾಗಿ ನಮ್ಮ ಸ್ವಾಮಿ ಧರ್ಮಕ್ಕೆ ಅನುಭವವೇ ಪ್ರಮಾಣ ಎನ್ನುವದನ್ನು ತೋರಿಸಿಕೊಟ್ಟು ವಚನಭ್ರಷ್ಟತೆಯನ್ನು ಖಂಡಿಸುವ ದಿವ್ಯ ಭಾಗವಿದು. ಏನಾದರೂ ಮಾಡಿ ಶ್ರೀರಾಮನನ್ನು ಹಿಂದಕ್ಕೆ ಕರೆದೊಯ್ಯಬೇಕೆಂಬ ಅಪೇಕ್ಷೆಯಿಂದ ಜಾಬಾಲಿಋಷಿಗಳು ನಾಸ್ತಿಕ್ಯವಾದವನ್ನು ಪ್ರತಿಪಾದಿಸಿ, ಧರ್ಮ ಸತ್ಯಕ್ಕೆ ಪ್ರಮಾಣವಿಲ್ಲ ಹಿಂದಕ್ಕೆ ಬಂದು ರಾಜ್ಯಭೋಗವನ್ನನುಭವಿಸು ಎಂದು ಕರೆಯುತ್ತಾರೆ. ಆಗ ಶ್ರೀರಾಮದೇವರು, ಧರ್ಮಕ್ಕೆ ಪ್ರತಿಯೊಬ್ಬರ ಅನುಭವವೇ ಪ್ರಮಾಣ ಎನ್ನುವದನ್ನು ಅದ್ಭುತವಾಗಿ ಪ್ರತಿಪಾದಿಸುತ್ತಾರೆ. ವಚನಭ್ರಷ್ಟತೆ ಎನ್ನುವದು ಅತ್ಯಂತ ಹೀನಾಯವಾದ ದೋಷ. ಅದನ್ನು ನಾನು ಪಡೆಯುವದಿಲ್ಲ ಎಂದು ವಚನಭ್ರಷ್ಟತೆಯ ದೋಷಗಳನ್ನು ವಿವರವಾಗಿ ಸ್ವಾಮಿ ಪ್ರತಿಪಾದಿಸುತ್ತಾನೆ. ವಸ್ತುಸ್ಥಿತಿಯಲ್ಲಿ ಜಾಬಾಲಿಗಳು ನಾಸ್ತಿಕರಲ್ಲ. ಅವರ ಮಾತಿನ ಅಂತರಾರ್ಥದಲ್ಲಿ ದೇವರ ಸ್ವಾತಂತ್ರ್ಯದ ಚಿಂತನೆಯಿದೆ ಎಂದು ವಾಲ್ಮೀಕಿಗಳು ಮತ್ತು ಶ್ರೀಮನ್ನಾರಾಯಣ ಪಂಡಿತಾಚಾರ್ಯರು ತೋರಿಸಿಕೊಡುತ್ತಾರೆ. ಆ ಪರಮಂಗಲಚಿಂತನೆಯೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ.
Play Time: 71:58
Size: 3.84 MB