Upanyasa - VNU1002

ಪಾದುಕೆ ಪಡೆದ ಭರತರು

17/06/2022

ಶ್ರೀಮದ್ ರಾಮಾಯಣಮ್ — 115

“ಅಣ್ಣ ಹಿಂತಿರುಗುವದಿಲ್ಲವಾದರೆ ನಾನಿಲ್ಲೇ ಪ್ರಾಯೋಪವೇಶ ಸ್ವೀಕರಿಸುತ್ತೇನೆ” ಎಂದು ರಾಮದೇವರ ಅಗ್ನಿಶಾಲೆಯಿಂದ ದರ್ಭೆ ತಂದು, ಪರ್ಣಶಾಲೆಯ ಮುಂದೆ ಹಾಸಿ, ಭರತರು ಮಲಗಿಯೇ ಬಿಡುತ್ತಾರೆ. ರಾಮದೇವರು ಆ ಭರತರನ್ನು ಪ್ರಾಯೋಪವೇಶದಿಂದ ಎದ್ದೇಳುವಂತೆ ಮಾಡುವ ಪರಿಯೇ ಅದ್ಭುತ. ಕೇಳಿಯೇ ಆಸ್ವಾದಿಸಬೇಕಾದ ಭಾಗ. 

ಇಷ್ಟೆಲ್ಲ ಘಟನೆಯ ನಂತರವೂ ಭರತರು ಒಪ್ಪದೇ ಇದ್ದಾಗ ಶತಕೋಟಿ ಋಷಿಗಳು, ಗಂಧರ್ವರು, ಸಕಲ ಚಕ್ರವರ್ತಿಗಳು ಅದೃಶ್ಯರಾಗಿ ಈ ಎಲ್ಲ ಘಟನೆಗಳನ್ನು ನೋಡುತ್ತಿದ್ದವರು, ಎಲ್ಲರ ಕಣ್ಣಿಗೆ ಕಾಣಿಸಿಕೊಂಡು “ಕೈಕಯಿಯ ವಚನವನ್ನು ಪಾಲಿಸಿದ್ದಕ್ಕಾಗಿಯೇ ದಶರಥರು ಋಣಮುಕ್ತರಾಗಿ ಸ್ವರ್ಗದಲ್ಲಿದ್ದಾರೆ, ರಾಮ ಮಾಡಬೇಕಾದ ಮಹತ್ಕಾರ್ಯವಿದೆ, ರಾಮನ ಮಾತನ್ನು ಕೇಳು” ಎಂದು ಆದೇಶಿಸುತ್ತಾರೆ. 

ಆ ಬಳಿಕವೂ ರಾಮನ ಕಡೆಗೆ ನೋಡಿ ಕೈ ಜೋಡಿಸಿ, ರಾಮನನ್ನು ಬಿಟ್ಟಿರಲಿಕ್ಕಾಗದೆ “ಬಾ ಅಣ್ಣ” ಎಂದು ಕರೆಯುತ್ತಾರೆ, ಭರತರು. ಆಗ ಭರತರನ್ನು ಹತ್ತಿರಕ್ಕೆ ಕರೆದು ರಾಮದೇವರು ತೊಡೆಯ ಮೇಲೆ ಕೂಡಿಸಿಕೊಂಡು “ಹದಿನಾಲ್ಕು ವರ್ಷಗಳ ನಂತರ ಹಿಂತಿರುಗುತ್ತೇನೆ, ಅಲ್ಲಿಯವರೆಗೆ ರಾಜ್ಯವಾಳು” ಎನ್ನುತ್ತಾರೆ. 

“ಅಣ್ಣಾ, ನನ್ನದಲ್ಲದ ರಾಜ್ಯವನ್ನು ನಾನು ಪಾಲನೆ ಮಾಡಲು ಸಾಧ್ಯವಿಲ್ಲ” ಎನ್ನುತ್ತಾರೆ ಭರತರು. ಆಗ ವಸಿಷ್ಠರು ರಾಮದೇವರಿಗೆ “ರಾಮ, ನಿನ್ನ ಪಾದುಕೆಗಳನ್ನು ಭರತನಿಗೆ ನೀಡು. ಅವನ್ನೇ ಸಿಂಹಾಸನದಲ್ಲಿಟ್ಟು ಭರತ ರಾಜ್ಯವಾಳಲಿ” ಎಂದಾಗ ಭರತರಿಗೆ ಅತ್ಯಂತ ಸಂತಸವಾಗುತ್ತದೆ. ನಾನು ನನ್ನದಲ್ಲದ ಸಿಂಹಾಸದನಲ್ಲಿ ಕೂಡಬೇಕಾಗಿಲ್ಲ. ರಾಮನ ಪಾದುಕೆಯೇ ರಾಜ್ಯವಾಳುತ್ತದೆ ಎಂದು. 

ರಾಮದೇವರಿಂದ ಭರತರು ಪಾದುಕೆಯನ್ನು ಪಡೆಯುವ ಪವಿತ್ರಘಟನೆಯನ್ನು ಕೇಳಿಯೇ ಆನಂದಿಸಬೇಕು. 


Play Time: 44:00

Size: 3.84 MB


Download Upanyasa Share to facebook View Comments
6388 Views

Comments

(You can only view comments here. If you want to write a comment please download the app.)
  • Sanjeeva Kumar,Bangalore

    1:38 PM , 19/07/2022

    ಎಷ್ಟು ಸುಂದರವಾದ ವಿವರಣೆ ಗುರುಗಳೆ ಕೋಟಿ ಕೋಟಿ ಪ್ರಣಾಮಗಳು,🙏
  • Sanjeeva Kumar,Bangalore

    1:38 PM , 19/07/2022

    ಎಷ್ಟು ಸುಂದರವಾದ ವಿವರಣೆ ಗುರುಗಳೆ ಕೋಟಿ ಕೋಟಿ ಪ್ರಣಾಮಗಳು,🙏
  • Sowmya,Bangalore

    2:13 PM , 09/07/2022

    🙏🙏🙏
  • Venkatesh. Rajendra . Chikkodikar.,Mudhol

    2:14 PM , 03/07/2022

    Shri Rama Jai Rama Jai Jai Rama 🙏🙏🙏
  • PavanKumār DH,Bangalore

    7:58 AM , 02/07/2022

    ಧನ್ಯವಾದಗಳು ಆಚಾರ್ಯರೆ. ಕಣ್ಣಿನ ಮುಂದೆ ನಡೆಯುತ್ತಿರುವ ಹಾಗೆ ಬಣ್ಣಿಸಿದಿರಿ.
  • H.Suvarna kulkarni,Bangalore

    11:13 AM, 27/06/2022

    ಗುರುಗಳಿಗೆ ಅನಂತ ಪ್ರಣಾಮಗಳು
    
    ಅಣ್ಣ ತಮ್ಮಂದಿರ ಪರಸ್ಪರ  ಗೌರವ ಪ್ರೀತಿ ಅದಮ್ಯವಾಗಿದೆ..ಇಡೀ ಸನ್ನಿವೇಶ ವನ್ನ ಕಣ್ಣಾರೆ ಕಾಣುತ್ತಿರುವಂತೆ ಅದರಲ್ಲಿ ನಾವು ಒಬ್ಬ ಪ್ರಜೆಯಾಗಿ ನಿಂತು ಅನುಭವಿಸಿ ಬಿಟ್ಟೆವು.
    
    ಧನ್ಯವಾದಗಳು
  • Nalini Premkumar,Mysore

    9:24 AM , 26/06/2022

    🙏🙏🙏ಧನ್ಯೋಸ್ಮಿ
  • Lakshmi,Pune

    4:09 PM , 25/06/2022

    Gurugalige anant koti namaskargalu.  Keluttiddanteye bhakti tumbi tuukuttade ,ellavu namm kannu munde ndita irohage anisuttade. Sita pati shri ram devarige jayvagali. Ram devaru hakikott dariyalli nadeyuv hage anugrah vagali namage
  • Niranjan Kamath,Koteshwar

    10:17 AM, 24/06/2022

    ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಬರೆಯಲು ಶಬ್ದಗಳೇ ಇಲ್ಲ...ವರ್ಣಿಸಲು ಮಾತೇ ಬರುತ್ತಿಲ್ಲ...ಮೂಕ ವಿಸ್ಮಿತರಾಗಿದ್ದೇವೆ...ಧನ್ಯೋಸ್ಮಿ ಧನ್ಯೋಸ್ಮಿ ಧನ್ಯೋಸ್ಮಿ