Upanyasa - VNU1003

ಪಾದುಕಾ ಪಟ್ಟಾಭಿಷೇಕ

ಶ್ರೀಮದ್ ರಾಮಾಯಣಮ್ — 116

ನಾರುಬಟ್ಟೆಯನ್ನುಟ್ಟು ಅಯೋಧ್ಯೆಯಿಂದ ಹೊರಟ ರಾಮದೇವರು ಬಂಗಾರದ ಪಾದುಕೆಗಳನ್ನು ಹೇಗೆ ಹಾಕಿಕೊಂಡಿರಲು ಸಾಧ್ಯ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. 

 ಪರಮಸಂತೋಷದಿಂದ ಮತ್ತು ಮಹಾವೈಭವದಿಂದ ರಾಮರ ಪಾದುಕೆಗಳನ್ನು ತರುವ ಭರತರು ಅಯೋಧ್ಯೆಯ ಒಳಗೆ ಪ್ರವೇಶ ಮಾಡದೇ, ಅಣ್ಣ ತಿರುಗಿ ಬರುವವರೆಗೆ ನಾನು ನಂದಿಗ್ರಾಮದಲ್ಲಿಯೇ ಅಣ್ಣನಂತೆಯೇ ಗೆಡ್ಡೆ ಗೆಣಸುಗಳನ್ನು ಮಾತ್ರ ಸ್ವೀಕರಿಸುತ್ತ ಜಟಾಧಾರಿಯಾಗಿ ಇರುತ್ತೇನೆ. ಅಯೋಧ್ಯೆಯ ಒಳಗಿನ ಸಿಂಹಾಸನ ಅದು ರಾಮದೇವರಿಗೇ ಮೀಸಲು. ನಂದಿಗ್ರಾಮದಲ್ಲಿ ಪಾದುಕೆಗಳಿಗೆ ಪಟ್ಟಾಭಿಷೇಕ ಮಾಡಿ ಅಲ್ಲಿಂದಲೇ ರಾಜ್ಯವಾಳುತ್ತೇನೆ ಎಂದು. ಭರತರ ರಾಮಭಕ್ತಿಯನ್ನು ಕಂಡು ಎಲ್ಲ ಹಿರಿಯರೂ ಸಂತೋಷದಿಂದ ಹರಸುತ್ತಾರೆ. 

ಕೈಕಯಿ ಚಿತ್ರಕೂಟದಲ್ಲಿ ರಾಮದೇವರ ಕ್ಷಮೆ ಕೇಳಿದ ಪ್ರಸಂಗದ ಚಿತ್ರಣವೂ ಇಲ್ಲಿದೆ. 


Play Time: 32:34

Size: 3.84 MB


Download Upanyasa Share to facebook View Comments
6128 Views

Comments

(You can only view comments here. If you want to write a comment please download the app.)
 • Mahesh,Bangalore

  7:28 PM , 23/07/2022

  ಗುರುಗಳಿಗೆ ಪ್ರಣಾಮಗಳು,
  
  VNU885 ರಾಮಾಯಣದ ರಚನೆ - ಯಲ್ಲಿ ಭರತರು ತಾವೇ ಬಂಗಾರದ ಪಾದುಕೆಗಳನ್ನು ತಂದಿದ್ದರು ಎಂದು ಹೇಳಿದ್ದೀರಿ.. (೧೩-೧೪ ನಿಮಿಷಗಳಲ್ಲಿ), ಇಲ್ಲಿ (VNU 1003) ಶ್ರೀರಾಮರು ತಾವೇ ಬಂಗಾರದ ಪಾದುಕೆಗಳನ್ನು ಧರಿಸಿ ಬಂದಿದ್ದರು ಎಂದು ವಿವರಿಸಿದ್ದೀರಿ.. ಗೊಂದಲ ಪರಿಹಾರಕ್ಕಾಗಿ ಭಕ್ತಿಪೂರ್ವಕವಾಗಿ ಕೇಳುತ್ತಿದ್ದೇನೆ, ದಯವಿಟ್ಟು ತಿಳಿಸಿಕೊಡಿ..

  Vishnudasa Nagendracharya

  ಎರಡೂ ರೀತಿಯ ಸಾಧ್ಯತೆಗಳಿವೆ. ಸ್ಪಷ್ಟವಾದ ಉಲ್ಲೇಖ ದೊರೆಯುವವರೆಗೆ ಈ ಎರಡರಲ್ಲೊಂದು ಕ್ರಮ ಜರುಗಿತ್ತು ಎಂದು ತಿಳಿಯಬೇಕು. 
 • Sanjeeva Kumar,Bangalore

  1:50 PM , 22/07/2022

  ಅನಂತ ಪ್ರಣಾಮಗಳು ಗುರುಗಳೆ 🙏 ಧನ್ಯೋಸ್ಮಿ
 • Sowmya,Bangalore

  10:25 AM, 10/07/2022

  🙏🙏🙏
 • Venkatesh. Rajendra . Chikkodikar.,Mudhol

  8:31 PM , 03/07/2022

  Shri Rama Jai Rama Jai Jai Rama 🙏🙏🙏
 • Jayashree karunakar,Bangalore

  10:21 PM, 30/06/2022

  ಗುರುಗಳೇ ಭರತರು ತಮ್ಮದಲ್ಲದ ರಾಜ್ಯವನ್ನು ಶ್ರೀರಾಮಚಂದ್ರನಿಗೆ ಒಪ್ಪಿಸಿದರೆ ಪಿತೃಋಣ ದಿಂದ ಮುಕ್ತರಾದದ್ದು ಹೇಗೆ ಅರ್ಥವಾಗಲಿಲ್ಲ..
 • Nalini Premkumar,Mysore

  1:36 PM , 27/06/2022

  ಹರೇ ಶ್ರೀ ನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಬಹಳ ಅಧ್ಭುತ ವಾದ ಪ್ರವಚನ ರಾಮ ದೇವರು ಚಿನ್ನದ ಪಾದುಕೆ ಗಳನ್ನು ಹಾಕಿದ್ದಾರೆ ಅಂದಾಗ ನಾರು ಮಡಿಗಳ ಜೊತೆ ಚಿನ್ನದ ಪಾದುಕೆ ಗಳ ಅಂದು ಕೊಳ್ಳು ತ್ತಿದ್ದ ಹಾಗೆ ಅದಕ್ಕೆ ಉತ್ತರವು ದೊರಕಿತು      ಭರತ ರಿಗೆ ಅಣ್ಣಂದಿ ರ ಮೇಲಿನ ಪ್ರೀತಿ....
  ಭಕ್ತಿಭರತ ರ ಸಂತೋಷ..... 
  ಶ್ರೀ ರಾಮನ ಪಾದುಕೆಗಳೆ ರಾಜ್ಯ ವಾಳುತ್ತದೆ..... ರಾಮ ನಿಲ್ಲದ ಅಯೋಧ್ಯೆ ನನಗೆ ಬೇಡ....... ಎಂತ ಅಣ್ಣ ತಮ್ಮಂದಿರ ಪ್ರೀತಿ.... 
  
  ಕೈಕೇಯಿಯು ಏಕಾಂತದಲ್ಲಿ ಕ್ಷಮೆ ಕೇಳುವುದು.. ...ನಮ್ಮ ಭರತ ಭೂಮಿ ಪುಣ್ಯ ಭೂಮಿ... ಅಧ್ಭುತ ಗುರುಗಳೇ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಹೇಳಲು ಪದಗಳಿಲ್ಲ... ಕೋಟಿ ಕೋಟಿ ಪ್ರಣಾಮಗಳು ಗುರುಗಳೇ ಅನಂತ ಧನ್ಯವಾದಗಳು ಗುರುಗಳೇ 🙏🙏🙏
  
  .
 • Niranjan Kamath,Koteshwar

  10:23 AM, 26/06/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಧರ್ಮಮೂರ್ತಿವಂತ, ಸತ್ಯಮೂರ್ತಿವಂತ, ನ್ಯಾಯಮೂರ್ತಿವಂತ, ಬ್ರಹ್ಮಮೂರ್ತಿವಂತ, ಶ್ರೀ ಭರತರ ಧರ್ಮನಿಷ್ಠೆ, ಶ್ರೀರಾಮನ ಮೇಲೆ ಶ್ರೀ ರಾಮ ಪಾದುಕೆಗಳ ಮೇಲಿನ ಪ್ರೀತಿ, ಭಕ್ತಿಯ ಈ ನಿಮ್ಮ ವರ್ಣನೆಯನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ಧನ್ಯೋಸ್ಮಿ.