Upanyasa - VNU1004

ಸೀತೆಗೆ ರಾಮನಿಂದ ಅಲಂಕಾರ

ಶ್ರೀಮದ್ ರಾಮಾಯಣಮ್ — 117

ಕಷ್ಟದ ಕಾಲದಲ್ಲಿ ಕಳೆದುಕೊಂಡ ಸಂಪತ್ತನ್ನು ನೆನೆದು ದುಃಖಪಡುವದಲ್ಲ, ಇರುವ ವಸ್ತುಗಳೊಂದಿಗೆ ಹೇಗೆ ಸಂತಸದಿಂದಿರಬೇಕು ಎಂದು ನಮ್ಮ ಸ್ವಾಮಿ ಇಲ್ಲಿ ಆಚರಿಸಿ ತೋರಿಸುತ್ತಾನೆ. 

ರಾಮದೇವರು ಸೀತಾದೇವಿಯರಿಗೆ ಕಾಡಿನ ಮರಗಿಡಗಳನ್ನು ಪರಿಚಯಿಸುತ್ತ, ಒಂದು ಮನಃಶಿಲೆಯ ಬಂಡೆಯ ಮೇಲೆ ಅವರನ್ನು ಕೂಡಿಸಿ ಅವರಿಗೆ ತಿಲಕ ಹಚ್ಚಿ ತಲೆಗೆ ಹೂವಿನ ಹಾರ ಮುಡಿಸಿ ಅಲಂಕಾರ ಮಾಡಿದ ಘಟನೆಯ ಚಿತ್ರಣ. 

ಮನಃಶಿಲೆ ಅಥವಾ ಮಣಿಶಿಲೆ (Realgar) ಯ ಪರಿಚಯ ಮತ್ತು ಆಯುರ್ವೇದದಲ್ಲಿ ಅದಕ್ಕಿರುವ ಮಹತ್ತ್ವದ ಕುರಿತ ವಿವರಣೆ ಇಲ್ಲಿದೆ. 

Play Time: 39:58

Size: 3.84 MB


Download Upanyasa Share to facebook View Comments
6419 Views

Comments

(You can only view comments here. If you want to write a comment please download the app.)
 • Padmini Acharya,Mysuru

  1:17 PM , 20/11/2022

  🙇‍♀️🙇‍♀️🙇‍♀️🙇‍♀️🙏🙏🙏🙏
 • Venkatesh. Rajendra . Chikkodikar.,Mudhol

  7:04 AM , 12/07/2022

  Shri Rama Jai Rama Jai Jai Rama 🙏🙏🙏
 • Sowmya,Bangalore

  11:08 AM, 10/07/2022

  🙏🙏🙏
 • Jayashree karunakar,Bangalore

  10:31 PM, 28/06/2022

  ಭಾಗವತದಲ್ಲಿ ಕೇಳಿದ್ದೆವು ಸಕಲ ಶಬ್ದವೂ ಪರಮಾತ್ಮನನ್ನೇ ತಿಳಿಸುತ್ತದೆ ಅಂತ... 
  
  ಇಲ್ಲಿ ಮತ್ತೊಮ್ಮೆ ಮನನ ಮಾಡುವಂತಾಯಿತು.. ಭಗವಂತ ಆ ರೂಪದಲ್ಲಿ ಅಲ್ಲಿದ್ದಾನೆ... ಅದಕ್ಕಾಗಿ ಆ ದೇವತೆ ಅಲ್ಲಿ ಆ ರೂಪದಲ್ಲಿದ್ದಾರೆ.... ಆ ರೂಪದಲ್ಲಿ ದೇವತೆ ಅಲ್ಲಿದ್ದಾರೆ ಅದಕ್ಕಾಗಿ ಆ ವಸ್ತುವಿನ ಅಸ್ತಿತ್ವ ಅಲ್ಲಿದೆ... ಅಬ್ಬಾ.. !!!ಕಂಡ ಕಂಡದ್ದು ಪದುಮನಾಭನ ಮೂರ್ತಿ " ಎಷ್ಟು ಚೆನ್ನಾಗಿದೆ .... ಎಲ್ಲವನ್ನೂ ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ಚೆನ್ನಾಗಿದೆ.... ಆ ಕಾಲದಲ್ಲಿದ್ದ ಸಕಲ ವಸ್ತುಗಳೂ ಅದೆಷ್ಟು ಮಾಡಿದ್ದವು.... ಅದೆಷ್ಟು ತಪಸ್ಸು ಮಾಡಿದ್ದವೂ... ಮದ್ಯ ಮದ್ಯದಲ್ಲಿ  ಇದು ಭಗವಂತ ಮಾಡುವ ವಿಡಂಬನೆ ಅನ್ನುವ ... ನಾವು ಎಚ್ಚರ ತಪ್ಪದಂತೆ ಮಾಡುವ ನಿಮ್ಮ ಎಚ್ಚರಿಕೆಯ ಮಾತುಗಳು... ಇದೇ ರಾಮಾಯಣದಲ್ಲಿ ಕೊಡಲಿ ರಾಮನ ಅಬ್ಬರದ ಪ್ರತಾಪವನ್ನು ಕಣ್ಣೆದುರಲಿ ಕಂಡಂತೆ ಕೇಳಿದ್ದೆವು... ಇಲ್ಲಿ ಅದೇ ಭಗವಂತನ ಇಂತಹ ವಿಡಂಬನೆ... ಅಬ್ಬಾ !!! ಹೇಳಲು ಬರೆಯಲು ಏನೂ ಪದಗಳೇ ತೋಚುತ್ತಿಲ್ಲ ಗುರುಗಳೇ... 
  ಮನಸ್ಸೆಲ್ಲ ರಾಮನ ಕಥೆಯಲ್ಲಿ ಮುಳುಗುತಿದೆ... ನಾವೇ ಧನ್ಯರು... ನಿಮಗೆ ಭಕ್ತಿಯ ನಮಸ್ಕಾರಗಳು....
 • Nalini Premkumar,Mysore

  7:14 PM , 28/06/2022

  🙏🙏🙏
 • Niranjan Kamath,Koteshwar

  9:56 AM , 28/06/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಆಹಾ!!! ಏನೊಂದು ಮಧುರ ಪ್ರಸಂಗ ಗುರುಗಳೇ. ಶ್ರೀ ಸೀತಾರಾಮರು ಕುಳಿತ  ಆ ಪರಿಸರದ ಒಂದೊಂದು ಮರ ಗಿಡ,. ಮಣ್ಣು, ಹಕ್ಕಿ , ಗಾಳಿ, ಕೀಟಗಳು, ಮೃಗಗಳು ಈ ಪ್ರಸಂಗಗಳನ್ನು ನೋಡಲು ಅದೆಷ್ಟು ಜನ್ಮದ ಪುಣ್ಯ ಮಾಡಿದ್ದಾರೋ !! ಶ್ರೀ ವಾಲ್ಮೀಕಿ ಋಷಿಗಳು ಎಷ್ಟೊಂದು ಪಾವನರೋ ಈ ಎಲ್ಲ ದಶ್ಯ ಅನುಭವಿಸಲು !! 
  
  ಶ್ರೀ ರಾಮ ದೇವರ ಪ್ರೀತಿಯ ಮಾತು , ಅಮ್ಮನ ಸ್ಮರಣೆ, ತಿಲಕ ಇಡುವ ಪ್ರಸಂಗ, ಅಪ್ಪುಗೆ, ಪರಮ ಪರಮ ಪಾವನ, ಪರಮ ಪ್ರೇಮ ಪ್ರಸಂಗ. ಕಣ್ಮುಂದೆಯೇ ನಡೆಯುತ್ತಿದೆ. ಮಾಲಾರ್ಪಣೆ , ವನದಲ್ಲಿ ವಿಹಾರ, ಎಲ್ಲಕ್ಕೂ ಕೈಕೇಯಿ ದೇವಿ ಈ ಎಲ್ಲ ಪ್ರಸಂಗಕ್ಕೆ ಮೂಲ ಕಾರಣರಾಗಿ ದೇವರು ಆರಿಸಿದ್ದಕ್ಕೆ ಭಾಗ್ಯವಂತರು.
  
   ನಿಮ್ಮ ಈ ಉಪನ್ಯಾಸ ಯಾವಾಗಲೂ ಮೆಲುಕು ಹಾಕುತ್ತಾ ಶ್ರೀ ರಾಮ ಸೀತೆಯರ ಈ ಪ್ರೇಮ ಪ್ರಸಂಗ ಧನ್ಯರನ್ನಾಗಿ ಮಾಡಿಸುತ್ತಲೇ ಇರಲಿ. ಧನ್ಯೋಸ್ಮಿ.