28/06/2022
ಶ್ರೀಮದ್ ರಾಮಾಯಣಮ್ — 118 ರುದ್ರದೇವರಿಂದ ವರ ಪಡೆದ ಕುರಂಗ ಎಂಬ ಅಸುರನಿಗೆ ಕಾಗೆಗಳು ತಮ್ಮ ಕಣ್ಣಿನಲ್ಲಿ ಸ್ಥಳ ಕೊಟ್ಟು ಸಿಂಹ ಹುಲಿಗಳನ್ನೂ ಹಿಂಸಿಸುವಷ್ಟು ಬಲಿಷ್ಠ ಪಕ್ಷಿಗಳಾಗಿರುತ್ತವೆ. ಕಾಲನೇಮಿಯ ಆವೇಶಕ್ಕೊಳಗಾದ ಜಯಂತನೂ ಸಹ ಕಾಗೆಯ ರೂಪ ತೆಗೆದುಕೊಂಡು ಬಂದು ಸೀತಾದೇವಿಯರನ್ನು ಹೆದರಿಸಿ ಅವರ ಎದೆಯನ್ನು ಚುಚ್ಚುತ್ತಾನೆ. ಸಿಟ್ಟಿಗೆ ಬಂದ ರಾಮದೇವರು ಹುಲ್ಲಿನಲ್ಲಿ ಬ್ರಹ್ಮಾಸ್ತ್ರವನ್ನು ಕಾಗೆಯ ಮೇಲೆ ಪ್ರಯೋಗಿಸುತ್ತಾನೆ. ಅದರಿಂದ ಪಾರಾಗಲು ದಿಕ್ಪಾಲಕರನ್ನು, ರುದ್ರ, ಬ್ರಹ್ಮರನ್ನು ಶರಣು ಹೋಗುತ್ತದೆ, ಆ ಕಾಗೆ. ಆದರೆ ರಾಮನ ಮೇಲಿನ ಭಕ್ತಿಯಿಂದ, ರಾಮನನ್ನು ವಿರೋಧಿಸುವ ಶಕ್ತಿಯಿಲ್ಲವಾದ್ದರಿಂದ, ಅತ್ಯಂತ ಹೀನಾಯವಾದ ಕುಕರ್ಮವನ್ನು ಈ ಜಯಂತ ಮಾಡಿದ್ದರಿಂದ ಅವನನ್ನು ಎಲ್ಲರೂ ಹೊರ ಹಾಕುತ್ತಾರೆ. ಆ ನಂತರ ರಾಮ ಸೀತೆಯರ ಕಾಲಿಗೆ ಬಿದ್ದು ಜಯಂತ ಉಳಿದುಕೊಳ್ಳುತ್ತಾನೆ, ಆದರೆ ಕುರಂಗನ ಸಂಹಾರವಾಗುತ್ತದೆ. ಕಾಗೆಗಳಿಗೆ ಎಲ್ಲಿಯವರೆಗೆ ಎರಡು ಕಣ್ಣುಗಳಿರುತ್ತವೆಯೋ ಅಲ್ಲಿಯವರೆಗೆ ನಾನು ಕಾಗೆಗಳಲ್ಲಿರುವಂತಾಗಬೇಕು ಎಂದು ವರ ಪಡೆದಿರುತ್ತಾನೆ ಕುರಂಗ. ಹೀಗಾಗಿ ಮುಂದೆ ಹುಟ್ಟುವ ಎಲ್ಲ ಕಾಗೆಗಳಿಗೂ ಒಂದೇ ಕಣ್ಣಿರುವಂತೆ ಮಾಡುತ್ತಾನೆ, ಸ್ವಾಮಿ. ಇದರ ಕುರಿತು ಮೂಡುವ ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ. ಕಾಕಾಸುರನ ಕಥೆ ಪ್ರಕ್ಷಿಪ್ತವಲ್ಲ ಅನೇಕ ವ್ಯಾಖ್ಯಾನಕಾರರು ಕಾಕಾಸುರನ ಘಟನೆಯನ್ನು ಅರ್ಥ ಮಾಡಿಕೊಳ್ಳಲಿಕ್ಕಾಗದೇ ಇದನ್ನು ಪ್ರಕ್ಷಿಪ್ತ ಸರ್ಗ ಎಂದು ಕರೆಯುತ್ತಾರೆ. ಆದರೆ ಮುಂದೆ ಅಶೋಕವನದಲ್ಲಿ ಹನುಮಂತದೇವರು ಸೀತಾದೇವಿಯರ ಬಳಿ “ನಾನು ತಮ್ಮನ್ನು ಕಂಡಿದ್ದೇನೆ ಎಂದು ರಾಮದೇವರ ಮುಂದೆ ಹೇಳಲು ಕುರುಹು ಬೇಕು” ಎಂದಾಗ ಚೂಡಾಮಣಿಯನ್ನು ನೀಡುವದಕ್ಕಿಂತ ಮುಂಚೆ ಕಾಕಾಸುರನ ಕಥೆಯನ್ನು ಹೇಳಿ ಇದನ್ನು ಸ್ವಾಮಿಗೆ ತಿಳಿಸು. ಅವರಿಗೆ ನೀನು ನನ್ನನ್ನು ಕಂಡಿದ್ದಿ ಎಂದು ನಿರ್ಣಯವಾಗುತ್ತದೆ ಎನ್ನುತ್ತಾರೆ. ಶ್ರೀಮದಾಚಾರ್ಯರು ಯುಕ್ತಿಯುಕ್ತವಾಗಿ ಮತ್ತು ಪ್ರಮಾಣಬದ್ಧವಾಗಿ ಈ ಘಟನೆಯನ್ನು ನಿರೂಪಿಸಿ ಬರುವ ಪ್ರಶ್ನೆಗಳಿಗೆಲ್ಲ ಉತ್ತರವನ್ನು ನೀಡಿ ಈ ಘಟನೆಯ ಪ್ರಕ್ಷಿಪ್ತವಲ್ಲ ಎಂದು ನಿರ್ಣಯಿಸಿದ್ದಾರೆ. ಅದರ ವಿವರ ಇಲ್ಲಿದೆ.
Play Time: 49:04
Size: 3.84 MB